Back
Home » ಇತ್ತೀಚಿನ
ಆನ್‌ಲೈನ್‌ ಜಾಹೀರಾತುಗಳಿಂದ ಬೇಸರವಾಗಿದ್ದೀರಾ..? ಇಲ್ಲಿದೆ ಪರಿಹಾರ..!
Gizbot | 15th Dec, 2019 05:15 PM
 • ಗೂಗಲ್‌ನಲ್ಲಿ ಜಾಹೀರಾತು ನಿಯಂತ್ರಣ

  ಹಂತ 1 : ಮೊದಲಿಗೆ, ನೀವು ಗೂಗಲ್‌ ಖಾತೆ ಹೊಂದಿರಬೇಕು, ಗೂಗಲ್‌ ಖಾತೆಗೆ ಸೈನ್ ಇನ್ ಮಾಡಿ, ನಂತರ ನೀವು ಹಲವಾರು ನಿರ್ವಹಣಾ ವಿಭಾಗಗಳನ್ನು ನೋಡುತ್ತೀರಿ. ಅದರಲ್ಲಿ ಮೊದಲನೆಯದು ಗೌಪ್ಯತೆ ಮತ್ತು ವೈಯಕ್ತೀಕರಣ. ಈ ಬ್ಲಾಕ್‌ನಲ್ಲಿ ನಿಮ್ಮ ಮಾಹಿತಿ ಮತ್ತು ವೈಯಕ್ತೀಕರಣ ನಿರ್ವಹಿಸಿ ಎಂಬ ಆಯ್ಕೆಯನ್ನು ಆರಿಸಿ.


 • ಹಂತ 2:

  ನಂತರ, ಬರುವ ಹೊಸ ವಿಂಡೋ ಗೌಪ್ಯತೆಗೆ ಸಾಕಷ್ಟು ಆಯ್ಕೆಗಳನ್ನು ನಿಮಗೆ ನೀಡುತ್ತದೆ. ಜಾಹೀರಾತುಗಳ ನಿಯಂತ್ರಣಕ್ಕಾಗಿ ಜಾಹೀರಾತು ವೈಯಕ್ತೀಕರಣ (Ad personalization)ಗೆ ತೆರಳಿ, ಅಲ್ಲಿ ಜಾಹೀರಾತು ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ.


 • ಹಂತ 3:

  ಆಡ್‌ ಪರ್ಸನಾಲೈಜೆಷನ್‌ ಆನ್ ಆಗಿದೆ ಎಂದು ಹೇಳುವ ಒಂದೇ ಸ್ವಿಚ್‌ನೊಂದಿಗೆ ದೊಡ್ಡ ಜಾಹೀರಾತು ವೈಯಕ್ತೀಕರಣ (Ad personalization) ಸೆಟ್ಟಿಂಗ್‌ನ್ನು ನೀವು ಕಾಣುತ್ತೀರಿ. ಇದನ್ನು ಸರಳವಾಗಿ ಆಫ್ ಮಾಡಿ ನಂತರ, ನಿಮ್ಮ ಜಾಹೀರಾತುಗಳನ್ನು ಟ್ರ್ಯಾಕ್ ಮಾಡುವುದನ್ನು Google ನಿಲ್ಲಿಸುತ್ತದೆ.


 • ಹಂತ 4:

  ಜಾಹೀರಾತು ವೈಯಕ್ತೀಕರಣ ಸ್ವಿಚ್‌ನ ಕೆಳಗೆ, ನಿಮ್ಮ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಸಂಗ್ರಹಿಸುತ್ತಿರುವ ಬ್ರ್ಯಾಂಡ್‌ಗಳು, ವಿಷಯಗಳು ಮತ್ತು ಕೈಗಾರಿಕೆಗಳ ದೀರ್ಘ ಪಟ್ಟಿಯನ್ನು ನೀವು ನೋಡುತ್ತೀರಿ. ಜಾಹೀರಾತು ವೈಯಕ್ತೀಕರಣವನ್ನು ಸಂಪೂರ್ಣವಾಗಿ ಆಫ್ ಮಾಡಲು ನೀವು ಬಯಸದಿದ್ದರೆ, ನಿರ್ದಿಷ್ಟ ಕಂಪನಿ / ಕ್ಷೇತ್ರದ ಜಾಹೀರಾತು ನೋಡುವುದನ್ನು ಮುಂದುವರೆಸಲು ಯಾವುದೇ ವಿಭಾಗಗಳನ್ನು ಕ್ಲಿಕ್ ಮಾಡಬಹುದು.

  ಫೇಸ್‌ಬುಕ್‌ನಲ್ಲಿ ಜಾಹೀರಾತು ನಿಯಂತ್ರಣ

  ಹಂತ 1: ನಿರ್ದಿಷ್ಟ ಜಾಹೀರಾತು ನಿಯಂತ್ರಣಗಳನ್ನು ಅನುಮತಿಸುವ ಮತ್ತೊಂದು ದೊಡ್ಡ ಕಂಪನಿಯೆಂದರೆ ಫೇಸ್‌ಬುಕ್. ಫೇಸ್‌ಬುಕ್‌ನ ಮೆನು ವಿಭಾಗದಲ್ಲಿ ಕಾಣುವ ಬಾಣದ ಗುರುತನ್ನು ಆಯ್ಕೆ ಮಾಡಿ, ನಂತರ ಡ್ರಾಪ್‌ಡೌನ್ ಮೆನುವಿನಿಂದ ಸೆಟ್ಟಿಂಗ್ಸ್‌ ಆಯ್ಕೆಮಾಡಿ.

  ಹಂತ 2: ನಂತರ, ಸೆಟ್ಟಿಂಗ್ಸ್‌ ಮೆನುವಿನಲ್ಲಿ, ಜಾಹೀರಾತುಗಳ ವಿಭಾಗ ಆರಿಸಿ, ಅದು ಮೆನುವಿನ ಕೆಳಗಿರುತ್ತದೆ.

  ಹಂತ 3: ನೀವು ಈಗ ಜಾಹೀರಾತು ಆದ್ಯತೆಗಳ ಮೆನುವಿನಲ್ಲಿರುತ್ತೀರಿ. ಇದು ನಿಮ್ಮ ಫೇಸ್‌ಬುಕ್ ಚಟುವಟಿಕೆ ಮತ್ತು ಜಾಹೀರಾತುಗಳ ಬಗ್ಗೆ ಹಲವಾರು ವಿಭಿನ್ನ ವಿಭಾಗಗಳನ್ನು ಹೊಂದಿದೆ. ಅಲ್ಲಿ ಜಾಹೀರಾತು ಸೆಟ್ಟಿಂಗ್ಸ್‌ ಆಯ್ಕೆ ಮಾಡಿ, ಅಲ್ಲಿ, "ಪಾಲುದಾರರ ಡೇಟಾ ಆಧರಿಸಿದ ಜಾಹೀರಾತುಗಳು" ಎಂಬಂತಂಹ ಹಲವು ವಿಭಿನ್ನ ಜಾಹೀರಾತು ಮಾಹಿತಿ ನಿಮಗೆ ಕಾಣುತ್ತವೆ. ಅಲ್ಲಿ ಜಾಹೀರಾತು ಡೇಟಾ ಅನುಮತಿಸಲಾಗುವುದಿಲ್ಲ ಎಂದು ಬದಲಾಯಿಸಲು ನಿಮಗೆ ಅನುಮತಿಸುವ ಡ್ರಾಪ್‌ಡೌನ್ ಮೆನು ಆಯ್ಕೆಮಾಡಿ. ನೀವು ಬಯಸಿದಂತೆ ಪ್ರತಿ ವಿಭಾಗಕ್ಕೂ ನಿಮ್ಮ ಆದ್ಯತೆಗಳನ್ನು ಬದಲಾಯಿಸಿ.

  ಹಂತ 4: ಜಾಹೀರಾತು ವಿಷಯಗಳನ್ನು ಮರೆಮಾಡುವ ವಿಭಾಗಕ್ಕೂ ನೀವು ಭೇಟಿ ನೀಡಬಹುದು. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿರ್ದಿಷ್ಟ ಸಮಯದವರೆಗೆ ಅಥವಾ ಶಾಶ್ವತವಾಗಿ ನಿರ್ದಿಷ್ಟ ಜಾಹೀರಾತುಗಳನ್ನು ಮರೆಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ಸದ್ಯಕ್ಕೆ, ನಿರ್ಬಂಧಿಸಲು ಲಭ್ಯವಿರುವ ವಿಷಯಗಳೆಂದರೆ ಆಲ್ಕೊಹಾಲ್, ಪೇರೆಂಟಿಂಗ್ ಮತ್ತು ಸಾಕುಪ್ರಾಣಿಗಳು. ಭವಿಷ್ಯದಲ್ಲಿ ಫೇಸ್‌ಬುಕ್‌ ಈ ವಿಭಾಗಕ್ಕೆ ಹೆಚ್ಚಿನ ವಿಷಯಗಳನ್ನು ಸೇರಿಸಬಹುದು.

  ಆಡ್‌ ಬ್ಲಾಕರ್‌ನೊಂದಿಗೆ ಜಾಹೀರಾತು ನಿಯಂತ್ರಣ

  ಗೂಗಲ್‌, ಫೇಸ್‌ಬುಕ್‌ ಅಲ್ಲದೇ ಇಂಟರ್‌ನೆಟ್‌ ಬ್ರೌಸ್‌ ಮಾಡುವಾಗ ಬೇರೆ ವೆಬ್‌ಸೈಟ್‌ಗಳಲ್ಲಿ ಜಾಹೀರಾತುಗಳು ಬರುತ್ತಿರುತ್ತವೆ. ಅದಕ್ಕಾಗಿ, ಬ್ರೌಸರ್‌ಗಳಲ್ಲಿ ಆಡ್‌ ಬ್ಲಾಕರ್‌ ಪ್ಲಗ್‌ಇನ್‌ನ್ನು ಇನ್‌ಸ್ಟಾಲ್‌ ಮಾಡಬೇಕು. ಅಲ್ಲಿ, ನಿಮಗೆ ಬೇಕಾದ ಸೈಟ್‌ಗಳಲ್ಲಿ ಜಾಹೀರಾತುಗಳನ್ನು ನೋಡುವುದನ್ನು ಮುಂದುವರೆಸಬಹುದು. ಅಥವಾ ಬ್ಲಾಕ್‌ ಮಾಡಬಹುದಾಗಿದೆ.
ಆನ್‌ಲೈನ್‌ ಜಾಹೀರಾತುಗಳಿಂದ ನೀವು ಬೇಸರಗೊಂಡಿದ್ದೀರಾ..? ಗೌಪ್ಯತೆ ಕಾರಣಗಳನ್ನು ಹೊರತುಪಡಿಸಿ ಆನ್‌ಲೈನ್‌ ಜಾಹೀರಾತುಗಳು ನಿಮ್ಮ ಬ್ರೌಸಿಂಗ್‌ ಹವ್ಯಾಸವನ್ನು ಇತರರ ಮುಂದೆ ತೆರೆದಿಡುತ್ತವೆ. ಹೌದು, ನೀವು ಊಹಿಸಿದಂತೆ ಅನೇಕ ಜನರು ಆನ್‌ಲೈನ್‌ನಲ್ಲಿ ಯಾವ ಜಾಹೀರಾತುಗಳನ್ನು ನೋಡಬೇಕು ಎಂಬುದರ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿರುತ್ತಾರೆ. ಸಾಧ್ಯವಾದರೆ ನಿರ್ದಿಷ್ಟ ರೀತಿಯ ಜಾಹೀರಾತುಗಳನ್ನು ಬ್ಲಾಕ್‌ ಮಾಡಬಹುದಾಗಿದೆ.

ಒಟ್ಟಾರೆಯಾಗಿ ಗೂಗಲ್, ಫೇಸ್‌ಬುಕ್ ಮತ್ತು ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್ ಜಾಹೀರಾತುಗಳನ್ನು ನಿರ್ಬಂಧಿಸುವುದು ಹೇಗೆ ಅಂತೀರಾ ಮುಂದೆ ನೋಡಿ.

 
ಹೆಲ್ತ್