Back
Home » ಆರೋಗ್ಯ
ಕ್ಯಾನ್ಸರ್ ಮತ್ತು ಸಕ್ಕರೆಗೆ ಸಂಬಂಧವಿದೆಯೇ?
Boldsky | 19th Dec, 2019 05:22 PM
 • ಯಾವೆಲ್ಲಾ ಆಹಾರಗಳಲ್ಲಿ ಗ್ಲೂಕೋಸ್‌ ಅಂಶವಿದೆ

  ದೇಹಕ್ಕೆ ಸಕ್ಕರೆಯಂಶ ಅವಶ್ಯಕ. ಅದು ತಿನ್ನುವ ಆಹಾರದಿಂದ ಸಿಕ್ಕರೆ ಸಾಕು, ಆದರೆ ಅದಕ್ಕಾಗಿ ಸಿಹಿ ಪದಾರ್ಥಗಳು, ಡೆಸರ್ಟ್, ಚಾಕಲೇಟ್ ತಿನ್ನಬೇಕಾಗಿಲ್ಲ. ಇವುಗಳನ್ನು ತಿಂದರೆ ದೇಹಕ್ಕೆ ಅಗ್ಯತವಾದ ಸಕ್ಕರೆಯಂಶ ದೊರೆಯುತ್ತದೆ.
  * ಹಣ್ಣುಗಳು(ಫ್ರೂಕ್ಟೋಸ್)
  * ತರಕಾರಿಗಳು (ಗ್ಲೂಕೋಸ್)
  * ಹಾಲಿನ ಉತ್ಪನ್ನಗಳು (ಲ್ಯಾಕ್ಟೋಸ್)
  * ಕಾರ್ಬೋಹೈಡ್ರೇಟ್ ಆಹಾರಗಳು (ಪಾಸ್ತಾ, ಅನ್ನ)
  ಈ ಆಹಾರಗಳನ್ನು ತಿನ್ನದಿದ್ದರೆ ಕ್ಯಾನ್ಸರ್ ತಡೆಗಟ್ಬಹುದೇ?

  ಕಾರ್ಬೋಹೈಡ್ರೇಟ್‌ ಆಹಾರಗಳನ್ನು ತಿನ್ನದಿದ್ದರೆ ಕ್ಯಾನ್ಸರ್ ಕಡಿಮೆಯಾಗುತ್ತದೆ ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಇತ್ತೀಚೆಗೆ ನಡೆಸಿದ ಅಧ್ಯಯನ ಸಿಹಿ ಪಾನೀಯಗಳು ಹಾಗೂ ಕೃತಕ ಸಿಹಿಯ ಆಹಾರಗಳು ಕ್ಯಾನ್ಸರ್‌ ಸಮಸ್ಯೆ ಶೇ.70ರಷ್ಟು ಹೆಚ್ಚಾಗಲು ಕಾರಣ ಎಂದು ಹೇಳಿದೆ.


 • ಕ್ಯಾನ್ಸರ್‌ಗೆ ಒಬೆಸಿಟಿ ಕಾರಣ?

  ಅಮೆರಿಕನ್ ಕ್ಯಾನ್ಸರ್ ಸೊಸೈಟಿ, ನ್ಯಾಷನಲ್ ಕ್ಯಾನ್ಸರ್ ಇನ್ಸಿಟ್ಯೂಟ್ ಹಾಗೂ ಅನೇಕ ಪರಿಣಿತರ ಪ್ರಕಾರ ಕ್ಯಾನ್ಸರ್ ಸಮಸ್ಯೆಗೆ ಒಬೆಸಿಟಿ ಪ್ರಮುಖ ಕಾರಣವಂತೆ. ಕೊಬ್ಬಿನಂಶ ಹೆಚ್ಚಾದರೆ ಅಡಿಪೊಕಿನಸ್ ಎಂಬ ಉರಿಯೂತದ ಪ್ರೊಟೀನ್ ಬಿಡುಗಡೆ ಮಾಡುತ್ತದೆ. ಅವುಗಳು ಡಿಎನ್‌ಎಯನ್ನು ಹಾನಿ ಮಾಡಿ ಕ್ಯಾನ್ಸರ್ ಗಡ್ಡೆಗಳು ಬೆಳೆಯುವಂತೆ ಮಾಡುತ್ತವೆ. ಒಬೆಸಿಟಿ ಇರುವವರಲ್ಲಿ ಸ್ತನ, ಲಿವರ್, ಕರಳು ಕ್ಯಾನ್ಸರ್ ಸೇರಿ 13 ಬಗೆಯ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ.


 • ಸಕ್ಕರೆ ಕ್ಯಾನ್ಸರ್ ಹೆಚ್ಚಿಸುತ್ತದೆ?

  ಸಕ್ಕರೆ ತಿನ್ನುವುದರಿಂದ ಕ್ಯಾನ್ಸರ್ ಕಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕ್ಯಾನ್ಸರ್ ರೋಗ ತಜ್ಞರು ಹೇಳುತ್ತಾರೆ. ನ್ಯೂಯಾರ್ಕ್‌ನ ಮೆಯರ್ ಕ್ಯಾನ್ಸರ್‌ ಸೆಂಟರ್‌ನಲ್ಲಿರುವ ಕ್ಯಾನ್ಸರ್‌ ರೋಗ ತಜ್ಞ ಲಿವಿಸ್‌ ಕ್ಯಾಂಟ್ಲಿ ಕೆಲವೊಂದು ಕ್ಯಾನ್ಸರ್ ದೇಹದಲ್ಲಿ ಇನ್ಸುಲಿನ್‌ ಪ್ರಮಾಣ ಹೆಚ್ಚಾದಾಗ ಉಂಟಾಗುತ್ತದೆ ಎಂದು ಹೇಳಿದ್ದಾರೆ.


 • ಸಕ್ಕರೆ ತಿನ್ನಲೇ ಬಾರದ?

  ಸಕ್ಕರೆಯನ್ನು ಮಿತಿಯಾಗಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅಧ್ಯನದ ಪ್ರಕಾರ ನೀವು ಪುರುಷರಾಗಿದ್ದರೆ 6 ಟೀ ಸ್ಪೂನ್ ಸಕ್ಕರೆ, ಮಹಿಳೆಯಾಗಿದ್ದರೆ 9 ಟೀ ಸ್ಪೂನ್ ಸಕ್ಕರೆ ತಿನ್ನಬಹುದು. ಅದಕ್ಕಿಂತ ಅಧಿಕ ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

  ಕ್ಯಾನ್ಸರ್ ಕಣಗಳು ಹೆಚ್ಚಾಗದಿರಲು ಸಕ್ಕರೆಯನ್ನು ಮಿತವಾಗಿ ಬಳಸಿ. ಮಿತವಾದ ಸಕ್ಕರೆ ಬಳಕೆಯಿಂದ ದೇಹದಲ್ಲಿ ಕ್ಯಾಲೋರಿ ಹೆಚ್ಚಾಗುವುದಿಲ್ಲ, ಆರೋಗ್ಯವೂ ಚೆನ್ನಾಗಿರುತ್ತದೆ.
ಇತ್ತೀಚೆಗೆ ಕ್ಯಾನ್ಸರ್ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಕ್ಯಾನ್ಸರ್ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಆಹಾರಶೈಲಿ ಹಾಗೂ ಜೀವನಶೈಲಿಯಾಗಿದೆ. ಇಂದು ನಾವು ತಿನ್ನುವ ಎಷ್ಟೋ ಆಹಾರ ವಸ್ತುಗಳಲ್ಲಿ ವಿಷಯುಕ್ತ ರಾಸಾಯನಿಕಗಳನ್ನು ಬಳಸಿರುತ್ತಾರೆ. ಬೆಳೆ ಚೆನ್ನಾಗಿ ಬೆಳೆಯಬೇಕು, ಆಹಾರ ವಸ್ತುಗಳು ಬೇಗನೆ ಹಾಳಾಗಬಾರದೆಂದು ಅನೇಕ ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ ಈ ರಾಸಾಯನಿಕಗಳೇ ದೇಹವನ್ನು ಸೇರಿ ಕ್ಯಾನ್ಸರ್‌ ಕಣಗಳ ಬೆಳೆಯುವಂತೆ ಮಾಡುತ್ತವೆ.

ಕ್ಯಾನ್ಸರ್‌ ಸಮಸ್ಯೆ ತಡೆಗಟ್ಟಲು ಮೊದಲು ಸಕ್ಕರೆ ತಿನ್ನುವುದನ್ನು ಬಿಡಬೇಕು, ಸಕ್ಕರೆ ದೇಹವನ್ನು ಸೇರಿದರೆ ಕ್ಯಾನ್ಸರ್ ಕಣಗಳು ಬೇಗನೆ ಬೆಳೆಯುತ್ತವೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ನಮ್ಮ ದೇಹದ ಪ್ರತಿಯೊಂದು ಕಣಗಳು ಶಕ್ತಿಗಾಗಿ ಗ್ಲೂಕೋಸ್‌ ಬಳಸುತ್ತವೆ. ಆದರೆ ಕ್ಯಾನ್ಸರ್‌ ಕಣಗಳು ಇತರ ಕಣಗಳಿಗಿಂತ 200 ಪಟ್ಟು ಅಧಿಕ ಗ್ಲೂಕೋಸ್‌ ಬಳಸಿಕೊಂಡು ಬೆಳೆಯುತ್ತವೆ. ಸಕ್ಕರೆ ತಿನ್ನುವುದರಿಂದ ಕ್ಯಾನ್ಸರ್‌ ಕಣಗಳಿಗೆ ಇಂಧನ ದೊರೆತಂತಾಗುವುದು.

   
 
ಹೆಲ್ತ್