Back
Home » ಆರೋಗ್ಯ
ಭವಿಷ್ಯದ ಸೂಪರ್‌ಫುಡ್: ಜಿರಳೆ ಹಾಲು
Boldsky | 4th Jan, 2020 02:16 PM
 • ಜಿರಳೆ ಹಾಲು ಎಂದರೇನು? ಇದರ ವಿಶೇಷವೇನು?

  ಈ ಜಿರಳೆ ಹಾಲನ್ನು ಡಿಪ್ಲೋಪ್ಟೆರಾ ಪಂಕ್ಟಾಟಾ ಎಂಬ ಜಾತಿಯ ಜಿರಳೆಯಿಂದ ತಯಾರಿಸಲಾಗುವುದು, ಇದನ್ನು ಪೆಸಿಫಿಕ್ ಬೀಟ್ಲೆ ಕೋಕ್ರೆಚ್ ಎಂದು ಕೂಡ ಕರೆಯಲಾಗುವುದು. ಇತರ ಜಿರಳೆಗಳು ಮೊಟ್ಟೆಯಿಟ್ಟು ಮರಿ ಮಾಡಿದರೆ, ಈ ಜಿರಳೆ ಮರಿಗಳಿಗೆ ಜನ್ಮ ನೀಡುತ್ತವೆ. ಮರಿಗಳಿಗೆ ಜನ್ಮ ನೀಡಿದ ಬಳಿಕ ಇತರ ಸಸ್ತನಿಗಳಂತೆ ಇವುಗಲಲ್ಲಿ ಹಾಲು ಉತ್ಪತ್ತಿಯಾಗುತ್ತವೆ. ಈ ಹಾಲಿನಲ್ಲಿ ಪ್ರೊಟೀನ್ ಅಂಶ ಅಧಿಕವಿರುತ್ತದೆ ಎಂದು ಲೋವಾದಲ್ಲಿರುವ ಯೂನಿವರ್ಸಿಟಿ ಹೇಳಿದೆ. ಇದರಲ್ಲಿ ಪ್ರೊಟೀನ್, ಕೊಬ್ಬಿನಂಶ ಹಾಗೂ ಸಕ್ಕರೆ, ಅಮೈನೋಆಮ್ಲ ಅಧಿಕವಿದ್ದು, ಇತರ ಹಾಲುಗಳಿಗೆ ಹೋಲಿಸಿದರೆ ಈ ಹಾಲಿನಲ್ಲಿ ಪೋಷಕಾಂಶ ಅಧಿಕವಿದೆ. ಈ ಹಾಲಿನಲ್ಲಿ ಎಮ್ಮೆ ಹಾಲಿನಲ್ಲಿ ಇರುವುದಕ್ಕಿಂತ 3 ಪಟ್ಟು ಅಧಿಕ ಪೋಷಕಾಂಶವಿದೆ.

  ಜಿರಳೆಯ ಹಾಲನ್ನು ಸಕ್ಕರೆ ಹರಳಿನ ರೀತಿಯಲ್ಲಿ ಮಾಡಲಾಗುವುದು. ಇದು ಜೀರ್ಣಕ್ರಿಯೆಗೂ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಮಕ್ಕಳ ಬೆಳವಣಿಗೆಗೆ ಸಹಕಾರಿ.


 • ಜಿರಳೆ ಹಾಲಿನಲ್ಲಿರುವ ಪೋಷಕಾಂಶಗಳು

  ಇದರಲ್ಲಿ ಶೇ. 45ರಷ್ಟು ಪ್ರೊಟೀನ್,ಸೇ. 25ರಷ್ಟು ಕಾರ್ಬೋಹೈಡ್ರೇಟ್ಸ್, ಅಮೈನೋ ಆಮ್ಲ, ಶೇ. 16-22ರಷ್ಟು ಲಿಪಿಡ್ ಅಂಶವಿದೆ. ಇವುಗಳ ಜತೆಗೆ ಓಲಿಕ್ ಆಮ್ಲ, ಒಮೆಗಾ 3 ಕೊಬ್ಬಿನಾಮ್ಲ, ಲಿನೋಲಿಕ್ ಆಮ್ಲ, ಗ್ಲಿಸರಾಲ್, ವಿಟಮಿನ್ಸ್ ಅಂಶವಿದೆ.


 • ಈ ಹಾಲನ್ನು ತೆಗೆಯುವುದು ಹೇಗೆ?

  ಈ ರೀತಿಯ ಜಿರಳೆಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿ ಸಾಕಲಾಗುವುದು. ಜಿರಳೆಯಲ್ಲಿ ಭ್ರೂಣಗಳಾದ ಹಾಲು ಉತ್ಪತ್ತಿಯಾಗುತ್ತದೆ. ಈ ಹಾಲನ್ನು ಭ್ರೂಣಗಳು ಹೀರಿಕೊಂಡು ಬೆಳೆಯುತ್ತವೆ. ಕುಡಿದ ಹಾಲು ಭ್ರೂಣಗಳ ಹೊಟ್ಟೆಯಲ್ಲಿರುತ್ತದೆ. ಈ ಭ್ರೂಣಗಳನ್ನು ನಿಧಾನಕ್ಕೆ ಹೊರ ತೆಗೆದು ಅದರ ತಲೆ ಹಾಗೂ ಹಿಂಭಾಗವನ್ನು ಕತ್ತರಿಸಿ, ಹೊಟ್ಟೆಯ ಭಾಗವನ್ನು ಸಂಗ್ರಹಿಸಲಾಗುವುದು.

  ಆದರೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಸುಲಭದ ಕೆಲಸವಲ್ಲ. ಏಕೆಂದರೆ 100ಗ್ರಾಂ ಹಾಲು ತೆಗೆಯಲು ಸಾವಿರಕ್ಕೂ ಅಧಿಕ ಜಿರಳೆಗಳು ಬೇಕಾಗುವುದು.


 • ಭವಿಷ್ಯದಲ್ಲಿ ಜಿರಳೆ ಹಾಲು

  ಈ ಹಾಲಿಗೆ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟುವ ಶಕ್ತಿ ಇರುವುದರಿಂದ ಮುಂದಿನ ದಿನಗಳಲ್ಲಿ ಜಿರಳೆ ಹಾಲು ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಬಹುದು. ಇನ್ನು ಲ್ಯಾಕ್ಟೋಸ್ ಅಸಮತೋಲನ ಇರುವವರಿಗೆ ಇದು ಅತ್ಯುತ್ತಮವಾದ ಹಾಲಾಗಿದೆ. ಇದನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ದೇಹಕ್ಕೆ ಅಗ್ಯತವಾದ ಪೋಷಕಾಂಶ ದೊರೆಯುತ್ತದೆ.

  ಇನ್ನು ಈ ಹಾಲಿನಲ್ಲಿ ಹಸುವಿನ ಹಾಲಿನಲ್ಲಿ ಇರುವುದಕ್ಕಿಂತ ಮೂರು ಪಟ್ಟು ಅಧಿಕ ಕ್ಯಾಲೋರಿ ಅಂಶ ಇರುವುದರಿಂದ ಮೈ ತೂಕ ಹೆಚ್ಚುವ ಸಾಧ್ಯತೆ ಇದೆ.

  ಸೂಚನೆ: ಸದ್ಯಕ್ಕೆ ಈ ಹಾಲು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದರೆ ಇದರ ಕುರಿತು ಹೆಚ್ಚಿನ ಸಂಶೋಧನೆ ನಡೆಯುತ್ತಿದ್ದು ಭವಿಷ್ಯದ ದಿನಗಳಲ್ಲಿ ಬರಬಹುದು.
ಈ ಶೀರ್ಷಿಕೆ ನೋಡುತ್ತಿದ್ದಂತೆ ಇದೇನಪ್ಪಾ! ಎಂದು ಅಚ್ಚರಿಗೆ ಒಳಗಾಗುವುದು ಖಂಡಿತ. ಜಿರಳೆ ಕಂಡರೆ ಭಯಬಿದ್ದು ಜಿಗಿದಾಡುವವರಿಗೆ ಈ ಸುದ್ದಿ ಕೇಳುತ್ತಿದ್ದಂತೆ ವಾಕರಿಕೆ ಬರುವುದಂತು ಖಂಡಿತ. ಛೀ... ಜಿರಳೆ ಹಾಲು ಕುಡಿಯಲು ಸಾಧ್ಯವೇ ಎಂದು ನೀವು ಮೂಗು ಮುರಿದರೂ ಕೂಡ ಜಿರಳೆ ಹಾಲು ಅತ್ಯಂತ ಪೋಷಕಾಂಶವಿರುವ ಆಹಾರ ಎಂಬುವುದು ಸಾಬೀತಾಗಿದೆ ಗೊತ್ತೇ?

ಜಿರಳೆಯಿಂದ ತಯಾರಿಸಿದ ಹಾಲು ಅತ್ಯಂತ ಪೋಷಕಾಂಶವಿರುವ ಹಾಲು ಎಂಬುವುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು EXCLI ಜರ್ನಲ್ ಹೇಳಿದೆ.

ಜಿರಳೆ ಹಾಲು ಒಳ್ಳೆಯದೆಂದು ನಾಳೆ ನಮ್ಮ ಮನೆಯಲ್ಲಿರುವ ಜಿರಳೆಯಿಂದ ಬ್ಯುಸಿನೆಸ್‌ ಪ್ರಾರಂಭಿಸಬಹುದು ಎಂದು ಯೋಚಿಸಬೇಡಿ. ಏಕೆಂದರೆ ಈ ಹಾಲು ತಯಾರಿಸಲು ಬಳಸುವ ಜಿರಳೆಯೇ ಬೇರೆ. ಈ ಜಿರಳೆಯಲ್ಲಿ ಅಮೈನೋ ಆಮ್ಲ ಅಧಿಕವಿದ್ದು, ಮಾಂಸಾಹಾರದಲ್ಲಿ ಇಲ್ಲದಿರುವ 9 ಪೋಷಕಾಂಶಗಳು ಈ ಹಾಲಿನಲ್ಲಿರುವುದರಿಂದ ಇದನ್ನು ಪೌಷ್ಠಿಕ ಆಹಾರ ಎಂದು ಹೇಳಲಾಗಿದೆ.

 
ಹೆಲ್ತ್