Back
Home » ಆರೋಗ್ಯ
ಇದೇ ಕಾರಣಕ್ಕೆ ನೋಡಿ ನಾವು ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಳ್ಳುವುದು
Boldsky | 7th Jan, 2020 04:00 PM
 • ವಾಸನೆ ಮತ್ತು ರುಚಿಯು ಹೇಗೆ ಕೆಲಸ ಮಾಡುವುದು?

  ವಾಸನೆ ಮತ್ತು ರುಚಿಯ ಇಂದ್ರಿಯಗಳು ಒಂದಕ್ಕೊಂದು ಸಂಪರ್ಕ ಹೊಂದಿದೆ. ವಯಸ್ಸಾಗುತ್ತಾ ಹೋದಂತೆ ಇದು ಬದಲಾಗಬಹುದು. ಇದರಿಂದಾಗಿ ರುಚಿ ಮತ್ತು ವಾಸನೆಯಲ್ಲಿ ಬದಲಾವಣೆ ಅಥವಾ ತಿಳಿಯದೆ ಇರುವ ಅನುಭವ ಆಗಬಹುದು.
  ವಾಸನೆ ಮತ್ತು ರುಚಿಯ ಇಂದ್ರಿಯವು ಕೀಮೋಸೆನ್ಸರಿ ವ್ಯವಸ್ಥೆಯ ಒಂದು ಭಾಗವಾಗಿದೆ. ನಿಮ್ಮ ಸುತ್ತಲು ಇರುವ ವಸ್ತುಗಳ ವಾಸನೆ ಹಿಡಿಯುವ ಸಾಮರ್ಥ್ಯವು ಘ್ರಾಣ ಸಂವೇದನಾ ನರಕೋಶಗಳು ಎನ್ನುವ ವಿಶೇಷ ಸಂವೇದನಾ ಕೋಶಗಳಿಂದ ಬಂದಿರುವುದು. ಮೂಗಿನೊಳಗಿನ ಘ್ರಾಣ ಬಲ್ಪ್ ನಲ್ಲಿ ಇದೆಲ್ಲವೂ ಕಂಡುಬರುವುದು. ಘ್ರಾಣ ನರಕೋಶಗಳಲ್ಲಿ ವಾಸನೆ ಗ್ರಾಹಕ ಹೊಂದಿದೆ. ಇದು ನಮ್ಮ ಸುತ್ತಲು ಇರುವ ವಸ್ತುಗಳು ಬಿಡುಗಡೆ ಮಾಡುವ ಸೂಕ್ಷ್ಮ ಅಣುಗಳಿಂದ ಪ್ರಚೋದಿಸಲ್ಪಡುತ್ತದೆ.


 • ನಮ್ಮಲ್ಲಿ 2000ದಿಂದ 5000 ರುಚಿ ಮೊಗ್ಗುಗಳಿವೆ

  ವಾಸನೆಯು ಎರಡು ವಿಧಗಳಿಂದ ವಾಸನೆಯ ಗ್ರಾಹಕವನ್ನು ತಲುಪುವುದು. ಮೊದಲನೇಯದಾಗಿ ಮೂಗಿನ ಹೊಳ್ಳೆಗಳ ಮೂಲಕ ಮತ್ತು ಎರಡನೇಯದ್ದು ಗಂಟಲಿನಿಂದ ಮೂಗಿಗೆ ಬರುವ ಕಾಲುವೆಯ ಮೇಲ್ಛಾಣಿ ಮೂಲಕ ಬರುವುದು. ಆಹಾರದಿಂದ ಬಂದಿರುವಂತಹ ಸುವಾಸನೆಯು ಎರಡನೇ ದಾರಿಯಾಗಿ ತಲುಪುವುದು.
  ರುಚಿ ಹಿಡಿಯುವ ಸಾಮರ್ಥ್ಯವನ್ನು ರುಚಿ ಗ್ರಹಿಕೆ ಎಂದು ಕೂಡ ಹೇಳುವರು. ನಾಲಗೆಯ ಮೇಲ್ಭಾಗದಲ್ಲಿ ಸುಮಾರು 2000ದಿಂದ 5000 ತನಕ ಗ್ರಹಿಕೆ ರಾಸಾಯನಿಕಗಳೂ ಇವೆ. ಇದನ್ನು ಹೆಚ್ಚಾಗಿ ರುಚಿ ಮೊಗ್ಗುಗಳು ಎಂದು ಹೇಳಲಾಗುತ್ತದೆ.
  ರುಚಿ ಮೊಗ್ಗುಗಳು ಗುರುತಿಸುವಂತಹ ಐದು ಸಾಮಾನ್ಯ ರುಚಿಗಳೆಂದರೆ ಸಿಹಿ, ಕಹಿ, ಹುಳಿ, ಉಪ್ಪು ಮತ್ತು ಉಮಾಮಿ. ರುಚಿಯ ಮೊಗ್ಗುಗಳ ಜತೆಗೆ ನೀರಿನಲ್ಲಿ ಕರಗಬಲ್ಲ ರಾಸಾಯನಿಕವು ಸಂಪರ್ಕಕ್ಕೆ ಬಂದ ವೇಳೆ ರುಚಿಯು ತಿಳಿದುಬರುವುದು.
  ನಾಲಗೆಯಿಂದ ಸಂಕೇತವನ್ನು ಪಡೆಯುವ ಮೆದುಳು ಬಳಿಕ ಇದನ್ನು ಒಂದು ವಿಶಿಷ್ಟ ರುಚಿಯಾಗಿ ಸಂಸ್ಕರಿಸುವುದು. ರುಚಿಯ ಇಂದ್ರಿಯವು ಇನ್ನು ಕೆಲವು ಇಂದ್ರಿಗಳಾದ ಮುಖ್ಯವಾಗಿ ಮೂಗು ಮತ್ತು ಮೆದುಳಿನ ಕಾರ್ಯಗಳು ಸಂಪರ್ಕ ಹೊಂದಿರುವುದು.
  ಮುಂದಿನ ವಿಭಾಗದಲ್ಲಿ ನಾವು ರುಚಿ ಹಾಗೂ ವಾಸನೆ ಕಳೆದುಕೊಳ್ಳಲು ಪ್ರಮುಖ ಕಾರಣಗಳು ಏನು ಎಂದು ನಾವು ತಿಳಿದುಕೊಳ್ಳುವ...


 • ರುಚಿ ಮತ್ತು ವಾಸನೆ ಕಳೆದುಕೊಳ್ಳಲು ಕಾರಣಗಳು ಏನು?

  ರುಚಿ ಹಾಗೂ ವಾಸನೆಯು ಒಂದಕ್ಕೊಂದು ಸಂಪರ್ಕ ಹೊಂದಿದೆ ಎಂದು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ನಿಮಗೆ ರುಚಿಯು ಕಡಿಮೆ ಆಗಿದೆ ಎಂದರೆ ಆಗ ನಿಮ್ಮ ವಾಸನೆಯ ಇಂದ್ರಿಯವು ಕೆಲಸ ಮಾಡುತ್ತಿಲ್ಲವೆಂದು ಹೇಳಬಹುದು.
  ಹೈಪೋಸ್ಮಿಯಾ, ಅನೋಸ್ಮಿಯಾ, ಪರೋಸ್ಮಿಯಾ ಮತ್ತು ಫ್ಯಾಂಟೋಸ್ಮಿಯಾ ಪರಿಸ್ಥಿತಿಯು ವಾಸನೆಯ ಇಂದ್ರಿಯವನ್ನು ದುರ್ಬಲಗೊಳಿಸುವುದು. ವಯಸ್ಸುಸಿಯಾ, ಹೈಪೊಜೆಶಿಯಾ, ಡಿಸ್ಜೂಸಿಯಾ, ಪ್ಯಾರಾಗೆಷಿಯಾ ಮತ್ತು ಹೈಪರ್ಗುಸಿಯಾ ಕೆಲವೊಂದು ಸಾಮಾನ್ಯ ರುಚಿಯ ಕಾಯಿಲೆಗಳು.
  ವಾಸನೆ ಮತ್ತು ರುಚಿಯ ಕಾಯಿಲೆಯು ಇಂತಹ ಸಾಮಾನ್ಯ ಪರಿಸ್ಥಿತಿ ಹಾಗೂ ಅಂಶದ ಫಲಿತಾಂಶವಾಗಿದೆ. ಸೈನಸ್, ಉಸಿರಾಟದ ತೊಂದರೆ, ವಯಸ್ಸಾಗುವುದು, ತಲೆಯ ಆಘಾತ, ಹಲ್ಲಿನ ಸಮಸ್ಯೆಗಳಾಗಿರುವಂತಹ ಬಾಯಿಯ ಸೋಂಕು, ದಂತ ಪಂಕ್ತಿಯ ಕೃತಕ ಜೋಡಣೆ ಇತ್ಯಾದಿಗಳು. ವಾಸನೆ ಮತ್ತು ರುಚಿಯು ದುರ್ಬಲವಾದರೆ ಆಗ ಈ ಪರಿಸ್ಥಿತಿಗೆ ಕಾರಣ ಏನು ಎಂದು ತಿಳಿಯುವುದು ಅತೀ ಮಹತ್ವದ್ದಾಗಿದೆ.


 • ರುಚಿ ಮತ್ತು ವಾಸನೆ ಕಳಕೊಳ್ಳುವುದನ್ನು ಪತ್ತೆ ಮಾಡುವುದು ಹೇಗೆ?

  ರುಚಿ ಮತ್ತು ವಾಸನೆ ಕಳೆದುಕೊಳ್ಳುವ ಸಮಸ್ಯೆಯನ್ನು ಇಎನ್ ಟಿ ತಜ್ಞರು ಅಥವಾ ಓಟೋಲರಿಂಗೋಲಜಿಸ್ಟ್ ರೋಗ ಪತ್ತೆ ಮಾಡುವರು. ವೈದ್ಯರು ರುಚಿ ಹಾಗೂ ವಾಸನೆ ಕಡಿಮೆ ಸಾಂದ್ರತೆಯನ್ನು ಪರೀಕ್ಷೆ ಮಾಡಬಹುದು.
  ನಿಮಗೆ ಹೀರಿಕೊಳ್ಳಲು, ಉಗುಳಲು, ಬಾಯಿ ಮುಕ್ಕಳಿಸಲು ಹೇಳಬಹುದು. ವೈದ್ಯರು ಕಣ್ಣು, ಮೂಗು ಮತ್ತು ಗಂಟಲಿನ ಪರೀಕ್ಷೆ ಮಾಡಬಹುದು. ಪರಿಸ್ಥಿತಿಯನ್ನು ಸರಿಯಾಗಿ ಪತ್ತೆ ಮಾಡಿದ ಬಳಿಕ ಇದಕ್ಕೆ ವೈದ್ಯರು ಸರಿಯಾದ ಚಿಕಿತ್ಸೆಯನ್ನು ಸೂಚಿಸುವರು.


 • ವೈದ್ಯಕೀಯ ಚಿಕಿತ್ಸೆಯ ಆಯ್ಕೆಗಳು

  ಸಮಸ್ಯೆಯ ತೀವ್ರತೆ, ವಯಸ್ಸು ಮತ್ತು ಸಾಮಾನ್ಯ ಆರೋಗ್ಯವನ್ನು ನೋಡಿಕೊಂಡು ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕೆ ನೀಡಲಾಗುವ ಕೆಲವೊಂದು ಚಿಕಿತ್ಸೆಗಳು ಈ ರೀತಿಯಾಗಿ ಇದೆ.
  * ಯಾವುದೇ ಔಷಧಿಯಿಂದ ಈ ರೀತಿ ಆಗುತ್ತಲಿದ್ದರೆ, ಆಗ ನೀವು ಇದನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ.
  * ಸತುವಿನ ಕೊರತೆಯು ರುಚಿ ಮತ್ತು ವಾಸನೆ ಇಂದ್ರಿಯದ ಮೇಲೆ ಪರಿಣಾಮ ಬೀರಬಹುದು. ರುಚಿಯ ಪ್ರಜ್ಞೆ ಹೆಚ್ಚಿಸುವ ಮೂಲಕವಾಗಿ ಸತು ಆಹಾರ ಸೇವನೆಯನ್ನು ಉತ್ತೇಜಿಸುವುದು.
  * ಧೂಮಪಾನ ಮಾಡದೆ ಇದ್ದರೆ ಆಗ ರುಚಿಯ ಪ್ರಜ್ಞೆಯನ್ನು ಮರಳಿ ಪಡೆಯಬಹುದು.
  * ಈ ಸಮಸ್ಯೆಗೆ ನೈಸರ್ಗಿಕ ಮದ್ದುಗಳನ್ನು ಬಳಸಬೇಕೆಂದು ಬಯಸಿದ್ದರೆ ಆಗ ನಿಮಗೆ ಕೆಲವು ಮನೆಮದ್ದುಗಳನ್ನು ಸಹ ಬಳಸಬಹುದು.
ಮನುಷ್ಯ ಪ್ರತಿನಿತ್ಯವು ದುಡಿಯುವುದು ಹಸಿವು ನೀಗಿಸುವ ಸಲುವಾಗಿ. ಹಸಿವೇ ಇಲ್ಲವೆಂದಿದ್ದರೆ ಖಂಡಿತವಾಗಿಯೂ ಯಾರೂ ದುಡಿಯುತ್ತಿರಲಿಲ್ಲ. ಹೊಟ್ಟೆಗೆ ಹಸಿವಾದರೆ ಮಾತ್ರ ಸಾಲದು, ನಾವು ತಿನ್ನುವಂತಹ ಆಹಾರವು ತುಂಬಾ ರುಚಿಯಾಗಿ, ಸುವಾಸನೆಭರಿತವಾಗಿ ಇದ್ದರೆ ಆಗ ಹೊಟ್ಟೆ ತುಂಬಿದಂತೆ ಆಗುವುದು. ನಾಲಗೆಯು ಯಾವುದೇ ಆಹಾರವಾದರೂ ಅದರ ರುಚಿ ಕಂಡುಹಿಡಿಯುವುದು. ಅದೇ ಮೂಗು ವಾಸನೆ ಘ್ರಾಣಿಸುವುದು. ಮನುಷ್ಯನಿಗೆ ಇವೆರಡು ಅತೀ ಮುಖ್ಯ. ಇವೆರಡು ಇಲ್ಲವೆಂದಾದರೆ ಆಗ ಖಂಡಿತವಾಗಿಯೂ ಮನುಷ್ಯನಿಗೆ ಜೀವನ ಸಾಗಿಸಲು ಕಷ್ಟವಾಗುವುದು.

ಆದರೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಶೀತ ಅಥವಾ ಕೆಮ್ಮಿನ ಸಮಯದಲ್ಲಿ ರುಚಿ ಹಾಗೂ ಫ್ರಾಣಿಸುವ ಶಕ್ತಿ ಕಡಿಮೆ ಆಗಬಹುದು. ಪರಿಸ್ಥಿತಿಯ ತೀವ್ರತೆಗೆ ಅನುಗುಣವಾಗಿ ಇದು ಅಂಶಿಕ ಅಥವಾ ಪೂರ್ಣ ಪ್ರಮಾಣದ್ದಾಗಿರಬಹುದು. ವಯಸ್ಸಾದವರಲ್ಲಿ ಮತ್ತು ಕ್ಯಾನ್ಸರ್ ನಂತಹ ಯಾವುದೇ ಮಾರಕ ಕಾಯಿಲೆಯಿಂದ ಚೇತರಿಕೆ ಪಡೆಯುತ್ತಿರುವವರಲ್ಲಿ ಇದು ಸಾಮಾನ್ಯ ಸಮಸ್ಯೆ ಆಗಿರುವುದು.

ಕೆಲವೊಂದು ಅನಾರೋಗ್ಯಗಳು ವಾಸನೆ ಮತ್ತು ರುಚಿ ಕಳೆದುಕೊಳ್ಳಲು ಕಾರಣವಾಗಬಹುದು. ಈ ಲೇಖನದಲ್ಲಿ ನಾವು ಇದಕ್ಕೆ ಕಾರಣವೇನೆಂದು ಚರ್ಚಿಸಲಿದ್ದೇವೆ ಮತ್ತು ಇದಕ್ಕೆ ಚಿಕಿತ್ಸೆ ಏನು, ಯಾವೆಲ್ಲಾ ಕಾರಣಕ್ಕೆ ಸಮಸ್ಯೆ ಉಂಟಾಗಲಿದೆ, ಇದಕ್ಕೆ ಇರುವ ಚಿಕಿತ್ಸೆಗಳೇನು ಎಂದು ತಿಳಿಸಲಿದ್ದೇವೆ.

   
 
ಹೆಲ್ತ್