Back
Home » ಆರೋಗ್ಯ
ಅತೀ ಬೇಗನೆ ತೂಕ ಇಳಿಕೆಗೆ ಸಹಕಾರಿ ಈ ಸರ್ಟ್‌ಡಯಟ್
Boldsky | 9th Jan, 2020 11:22 AM

ಆಧುನಿಕ ಜಗತ್ತಿನಲ್ಲಿ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಾರಣ ವಾಯು ಮಾಲಿನ್ಯ, ಕೆಮಿಕಲ್‌ಯುಕ್ತ ಆಹಾರ ಪದಾರ್ಥಗಳು, ಜಂಕ್ ಫುಡ್ ಸೇರಿದಂತೆ ದಿನನಿತ್ಯದ ಜೀವನ ಪದ್ದತಿಯಿಂದ ಆರೋಗ್ಯ ಕ್ಷೀಣಿಸುತ್ತಿದೆ. ಹೀಗಾಗಿ ಆಹಾರ ಕ್ರಮಗಳು (ಡಯಟ್) ಹೆಚ್ಚು ಪ್ರಚಲಿತದಲ್ಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಹಲವು ಡಯಟ್‌ಗಳು(ಆಹಾರ ಕ್ರಮ) ಜನಪ್ರಿಯವಾಗಿದೆ. ಇದರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಸರ್ಟ್‌ಫುಡ್ ಡಯಟ್‌ಗೆ(Sirtfoof diet) ಜನರು ಮಾರು ಹೋಗುತ್ತಿದ್ದಾರೆ. ಇದೆ ಸರ್ಟ್‌ಫುಡ್ ಡಯಟ್ ಅನುಸರಿಸೋ ಮೂಲಕ ಯುಕೆ(ಲಂಡನ್) ಮೂಲದ ಖ್ಯಾತ ಸಿಂಗರ್ ಆಡೆಲೆ ಲೌರಿ(31) ಬರೋಬ್ಬರಿ 22 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಜಗತ್ತನ್ನೇ ಚಕಿತಗೊಳಿಸಿರುವ ಸರ್ಟ್‌ಫುಡ್ ಡಯಟ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ಓದಿ:

ಸರ್ಟ್‌ಫುಡ್ ಡಯಟ್:

ಪ್ರತಿಯೊಂದು ಡಯಟ್ ಫುಡ್‌ ಹಿಂದೆ ಜೀವನ ಪದ್ಧತಿ, ಪ್ರಯೋಗಾತ್ಮಕ ಚಿಂತನೆಗಳಿರುತ್ತದೆ. ಈ ಸರ್ಟ್‌ಫುಡ್ ಡಯಟ್ ಮೂಲ ಪ್ರೋಟೀನ್ ಆಧಾರಿತ ಆಹಾರ ಕ್ರಮ. ಪ್ರೊಟೀನ್ ಆಹಾರಗಳಲ್ಲಿ ಸರ್ಟಿಯುನ್ಸ್ ದೇಹದಲ್ಲಿ ಪಚನಕ್ರಿಯೆ ಹಾಗೂ ಜೀರ್ಣಕ್ರಿಯೆಯನ್ನು ಉತ್ತಮ ಪಡಿಸಿ, ಕೊಲೆಸ್ಟ್ರಾಲ್ ಹಾಗೂ ಕೊಬ್ಬನ್ನು ನಿಯಂತ್ರಣದಲ್ಲಿಡುತ್ತಿದೆ.

ಸರ್ಟ್‌ಫುಡ್ ಆಹಾರ ಕ್ರಮದಲ್ಲಿ ಸೇವಿಸಬೇಕಾದ ಆಹಾರಗಳು:

ರೆಡ್ ವೈನ್

ಡಾರ್ಕ್ ಚಾಕೋಲೆಟ್

ಪಾರ್ಸ್ಲೆ

ಸಿಟ್ರಸ್ ಹಣ್ಣುಗಳು

ಗ್ರೀನ್ ಟಿ

ಬೆರ್ರಿ ಹಣ್ಣುಗಳು

ಈರುಳ್ಳಿ

ಅರಶಿನ

ಸೇಬು

ಕಳೆ

ಸೋಯ

ವಾಲ್ನಟ್

ಹುರುಳಿ ಕಾಳು

ಗಾಂಧಾರಿ ಮೆಣಸು

ಆಲೀವ್ ಎಣ್ಣೆ

ಕೆಂಪು ಚಿಕೋರಿ

ಸರ್ಟ್‌ಫುಡ್ ಆಹಾರ ಕ್ರಮ ಪಾಲಿಸುವುದು ಹೇಗೆ?

ಸರ್ಟ್‌ಫುಡ್ ಆಹಾರ ಕ್ರಮವನ್ನು ಎರಡು ಹಂತದಲ್ಲಿ ಪಾಲಿಸಬೇಕು. ಮೊದಲ ಹಂತದಲ್ಲಿ ಪ್ರತಿ ದಿನ 1000 ಕ್ಯಾಲೋರಿ ಒಳಗಿರುವ ಆಹಾರವನ್ನು 3 ದಿನದ ವರೆಗೆ ಸೇವಿಸಬೇಕು. ತೆಗೆದುಕೊಳ್ಳುವ ಆಹಾರದಲ್ಲಿ ಹಸಿರು ಜ್ಯೂಸ್(ಪಾಲಾಕ್ ಮುಂತಾದ ಸೊಪ್ಪುಗಳು) ಇರುವಂತೆ ನೋಡಿಕೊಳ್ಳಿ. ಮೊದಲ 3 ದಿನ ನಿಮಗೆ ಹೊಟ್ಟೆ ತುಂಬದ ಅನುಭವ ಆಗಲಿದೆ. ಆದರೆ ಹಸಿವು ಎಂದು ಹೆಚ್ಚಿನ ಕ್ಯಾಲೋರಿ ಆಹಾರಗಳನ್ನು ಸೇವಿಸಬೇಡಿ. 4 ದಿನದಿಂದ ನೀವು ತೆಗೆದುಕೊಳ್ಳುವ ಆಹಾರದಲ್ಲಿ ಕ್ಯಾಲೋರಿ ಪ್ರಮಾಣವನ್ನು 1000 ದಿಂದ1500 ಕ್ಯಾಲೋರಿಗೆ ಹೆಚ್ಚಿಸಿಕೊಳ್ಳಿ. ಇದರಲ್ಲಿ ಎರಡು ಹೊತ್ತು ಹಸಿರು ಜ್ಯೂಸ್ ಹಾಗೂ ಎರಡು ಹೊತ್ತು ಸರ್ಟ್‍‌ಫುಡ್ ಆಹಾರ್ ತೆಗೆದುಕೊಳ್ಳಿ. ಈ ಆಹಾರ ಕ್ರಮದಲ್ಲಿ ಮೊದಲಿಗೆ ತುಂಬಾ ಹಸಿವು ಅನಿಸಿದರೂ 4 ನೇ ದಿನದಿಂದ ಹಸಿವಿನ ಅನುಭವ ಕಡಿಮೆಯಾಗುವುದು. ಈ ಆಹಾರ ಕ್ರಮದಲ್ಲಿ ಸೆಲರಿ, ಕಳೆ, ಚಿಕನ್, ಸೀಗಡಿ ಫ್ರೈ, ಪಾರ್ಸ್ಲೆ, ಟರ್ಕಿ ಕೋಳಿ ಮಾಂಸ, ಹುರಳಿ ಕಾಳು ಬಳಸಿ.

ಎರಡನೇ ಹಂತದ ಆಹಾರ ಕ್ರಮ

ಈ ಹಂತದಲ್ಲಿ ನಿಮ್ಮ ತೂಕ ಇಳಿಕೆ ಆರಂಭವಾಗಲಿದೆ. ಈ ಹಂತದಲ್ಲಿ 14 ದಿನಗಳ ವರೆಗೆ 3 ಸರ್ಟ್‌ಫುಡ್ ಆಹಾರ ಹಾಗೂ ಗ್ರೀನ್ ಜ್ಯೂಸ್ ಸೇವಿಸಬೇಕು. ಇದರಿಂದ 7 ದಿನದಲ್ಲಿ 7 ಪೌಂಡ್ ತೂಕ ಇಳಿಯಲಿದೆ. ಸರ್ಟ್‌ಫುಡ್ ಆಹಾರ ಕ್ರಮದ 2 ಹಂತದಲ್ಲೂ ನೈಸರ್ಗಿಕವಾದ ಹಾಗೂ ನ್ಯೂಟ್ರಿಶಿಯನ್ ಆಹಾರಗಳನ್ನು ಸೇವಿಸಬೇಕು.

ಸರ್ಟ್‌ಫುಟ್ ಆಹಾರ ಕ್ರಮ ಹೇಗೆ ಕೆಲಸ ಮಾಡುತ್ತದೆ?

ಸರ್ಟ್‌ಫುಟ್ ಆಹಾರ ಕ್ರಮದಲ್ಲಿ ಮುಖ್ಯವಾಗಿ ದೇಹದಲ್ಲಿನ ಕೊಬ್ಬಿನ ಆಂಶ ಕರಗುತ್ತದೆ. ಇಷ್ಟೇ ಅಲ್ಲ ದೇಹದ ಮಾಂಸ ಖಂಡದ ಬೆಳವಣಿಗೆ ಸಹಕಾರಿಯಾಗಲಿದೆ. ಆರಂಭಿಕ 2 ಹಂತದ ಆಹಾರ ಪದ್ಧತಿ ಬಳಿಕ 3ನೇ ಹಂತದ ಕುತೂಹಲ ಮೂಡುವುದು ಸಹಜ. ಸರ್ಟ್‌ಫುಟ್ ಸೇರಿದಂತೆ ಯಾವುದೇ ಆಹಾರ ಕ್ರಮ ಒಂದೆರಡು ವಾರಕ್ಕೆ ಅಥವಾ ಒಂದೆರೆಡು ಹಂತಕ್ಕೆ ಸೀಮಿತವಾದದ್ದಲ್ಲ. ಇದು ಜೀವನ ಪದ್ಧತಿಯಾಗಿ ಬದಲಾದರೆ ಮಾತ್ರ ಉತ್ತಮ ಆರೋಗ್ಯ ನಿಮ್ಮದಾಗಲಿದೆ.

ಸರ್ಟ್‌ಫುಟ್ ಆಹಾರ ಕ್ರಮ ಹಾಗೂ ಇದರ ಪರಿಣಾಮದ ಕುರಿತು ನ್ಯುಟ್ರೀಶಿಯನ್ ಮೆಡಿಸಿನ್ ಫಾರ್ಮಸಿ ಪರಿಣಿತರಾದ ಆ್ಯಡಿನ್ ಹಾಗೂ ಗ್ಲೆನ್ ನಡೆಸಿದ ಪೈಲೆಟ್ ಸ್ಟಡಿಯಲ್ಲಿ ಕೆಲ ಮಹತ್ವದ ಅಂಶಗಳು ಬಹಿರಂಗವಾಗಿದೆ. ಸರ್ಟ್‌ಫುಟ್ ಆಹಾರ ಪದ್ಧತಿ ಪಾಲಿಸಿದವರು 7 ದಿನದಲ್ಲಿ 7ibs ತೂಕ ಇಳಿಸಿಕೊಂಡಿದ್ದಾರೆ. ಆದರೆ ಮಾಂಸಖಂಡದಲ್ಲಿ ಯಾವುದೇ ಇಳಿಕೆಯಾಗಿಲ್ಲ. ಜೊತೆಗೆ ಸರಿಯಾದ ನಿದ್ದೆ, ಉತ್ಸಾಹ ಹಾಗೂ ಶಕ್ತಿ ಕೂಡ ವೃದ್ಧಿಸಿದೆ. ಹೀಗಾಗಿ ಸರ್ಟ್‌ಫುಟ್ ಆಹಾರ ಪದ್ಧತಿ ಆರೋಗ್ಯಕರ ಎಂಬುದು ಸಾಬೀತಾಗಿದೆ.

ಸರ್ಟ್‌ಫುಟ್ ಆಹಾರ ಪದ್ಧತಿಯ ಲಾಭವೇನು?

ಸರ್ಟ್‌ಫುಟ್ ಆಹಾರ ಪದ್ಧತಿಯಿಂದ ಹೃದಯಾಘಾತ, ಒಬೆಸಿಟಿ, ಡಯಾಬಿಟಿಸ್ ಹಾಗೂ ಆಕಾಲಿಕ ಮರಣ, ಆರೋಗ್ಯ ಸಂಬಂಧಿತ ಕಾಯಿಲೆಗಳಿಂದ ಮುಕ್ತರಾಗಬಹುದು. ಸರ್ಟ್‌ಫುಟ್ ಆಹಾರ ಕ್ರಮದಿಂದ ನೆನಪಿನ ಶಕ್ತಿ ವೃದ್ಧಿಯಾದರೆ, ರಕ್ತದೊತ್ತಡ ಸಮಸ್ಯೆ ಕಡಿಮೆಯಾಗಲಿದೆ.

 
ಹೆಲ್ತ್