Back
Home » ಆರೋಗ್ಯ
ಮಿತವಾಗಿ ಬಿಯರ್ ಸೇವಿಸಿ ಅಚ್ಚರಿಯ ಆರೋಗ್ಯ ಲಾಭ ಪಡೆಯಿರಿ
Boldsky | 18th Jan, 2020 02:09 PM
 • ಬಿಯರ್ ನ ತಯಾರಿ ಹೇಗೆ ಮತ್ತು ಅದರಲ್ಲಿ ಯಾವ ಯಾವ ಪೋಷಕಾಂಶಗಳಿವೆ?

  ಸಾಮಾನ್ಯವಾಗಿ ಬಿಯರ್ ಅನ್ನು ನೀರು, ಬಾರ್ಲಿ, ಈಸ್ಟ್ ಮತ್ತು ಹೊಪ್ಸ್ ನಿಂದ ತಯಾರು ಮಾಡುತ್ತಾರೆ. ತಯಾರಾದ ನಂತರ ಈ ಪಾನೀಯ ಕೊಬ್ಬು ಮತ್ತು ಕೊಲೆಸ್ಟ್ರಾಲ್ ರಹಿತವಾಗಿದ್ದು ಇದರಲ್ಲಿ ಗಮನಾರ್ಹ ಪ್ರಮಾಣದ ಪೋಷಕಾಂಶಗಳು ಮತ್ತು ನಾರಿನಂಶಗಳು ಅಡಗಿರುತ್ತದೆ. ಜೊತೆಗೆ ಮೆಗ್ನೀಷಿಯಂ, ಸೆಲಿನಿಯಂ, ಪೊಟ್ಯಾಶಿಯಂ, ಫಾಸ್ಫರಸ್, ಬಯೋಟಿನ್, ಕ್ರೋಮಿಯಂ ಮತ್ತು ಬಿ ವಿಟಮಿನ್ ಗಳಾದ ವಿಟಮಿನ್ ಬಿ6, ವಿಟಮಿನ್ ಬಿ12 ಮತ್ತು ಫೋಲಿಕ್ ಆಮ್ಲ ಅಂಶಗಳು ಸಹ ಸೇರಿವೆ.

  ಮಿತವಾದ ಬಿಯರ್ ಸೇವೆನೆಯಿಂಧ ಯಾವೆಲ್ಲಾ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು ಮುಂದೆ ನೋಡೋಣ:


 • ಬಿಯರ್ ನಿಂದ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ

  ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ ಪ್ರಕಾರ ಹೃದಯದ ಸಮಸ್ಯೆ ಹೊಂದಿರುವ ಯಾವುದೇ ವ್ಯಕ್ತಿ ಒಂದು ಮಿತಿಯಲ್ಲಿ ಬಿಯರ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಆತನ ಹೃದಯ ಸಂಬಂಧಿ ಕಾಯಿಲೆಗಳ ಪ್ರಭಾವ ಅಂದಾಜು ಶೇಕಡಾ 20% ರಿಂದ 40% ರವರೆಗೂ ಕಡಿಮೆಯಾಗುತ್ತದೆ. ಅಥೆನ್ಸ್ ನಲ್ಲಿರುವ ಹಾರೊಕೊಫಿಯೊ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಬಿಯರ್ ನ ನಿಯಮಿತವಾದ ಸೇವನೆ ಹೃದಯರಕ್ತನಾಳದ ಸಮಸ್ಯೆಯನ್ನು ಸಹ ದೂರ ಮಾಡುತ್ತದೆ.


 • ಕಿಡ್ನಿ ಕಲ್ಲುಗಳು ಕರಗುತ್ತವೆ

  ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಹೊತ್ತಿಗೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾದ ಸಂದರ್ಭದಲ್ಲಿ ಮೂತ್ರಪಿಂಡಗಳಲ್ಲಿ ರಕ್ತ ಶುದ್ಧೀಕರಣ ಮಾಡುವ ಸಮಯದಲ್ಲಿ ತ್ಯಾಜ್ಯ ಆಹಾರ ಪದಾರ್ಥಗಳು ಘನ ರೂಪಕ್ಕೆ ತಿರುಗುತ್ತವೆ. ವೈದ್ಯರು ಇವುಗಳನ್ನು ಮೂತ್ರಪಿಂಡದ ಕಲ್ಲುಗಳು ಎಂದು ಕರೆಯುತ್ತಾರೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಬಿಯರ್ ಕುಡಿಯುವ ಅಭ್ಯಾಸ ಹೊಂದಿದ್ದರೆ, ಶೇಕಡ 40% ರಷ್ಟು ಕಿಡ್ನಿಗಳಲ್ಲಿ ಕಲ್ಲುಗಳು ರೂಪುಗೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಇದಕ್ಕೆ ಕಾರಣ ಬಿಯರ್ ನಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶವಿರುತ್ತದೆ (ಶೇಕಡ 93%). ಮನುಷ್ಯನ ಮೂತ್ರಪಿಂಡಗಳಿಗೆ ಇಷ್ಟು ಪ್ರಮಾಣದ ನೀರಿನ ಅಂಶ ಮೂತ್ರಪಿಂಡಗಳು ಚೆನ್ನಾಗಿ ಕೆಲಸ ಮಾಡಲು ಮತ್ತು ಬೇಡದ ತ್ಯಾಜ್ಯ ಮತ್ತು ವಿಷಕಾರಿ ಅಂಶಗಳನ್ನು ದೇಹದಿಂದ ಹೊರ ಹಾಕಲು ಸಹಾಯಕವಾಗುತ್ತದೆ.


 • ಮೆದುಳಿನ ಆರೋಗ್ಯ ವೃದ್ಧಿಗೊಳ್ಳುತ್ತದೆ

  ರಶ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ನ ಸಂಶೋಧಕರು ಹೇಳುವ ಪ್ರಕಾರ ವಯಸ್ಸಾಗುತ್ತಿದ್ದಂತೆ ಆನಂತರದಲ್ಲಿ ಪ್ರಾರಂಭವಾಗುವ ನೆನಪಿನ ಶಕ್ತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಿಯರ್ ಕುಡಿಯುವ ಅಭ್ಯಾಸದಿಂದ ಈಗಿನಿಂದಲೇ ಶೇಕಡಾ 23% ರಷ್ಟು ಕಡಿಮೆ ಮಾಡಿಕೊಳ್ಳಬಹುದು. ಬಿಯರ್ ನ ನಿಯಮಿತ ಸೇವನೆ ಆಲ್ಜೈಮರ್ ಮತ್ತು ಡೆಮೆನ್ಶಿಯಾ ರೋಗಲಕ್ಷಣಗಳನ್ನು ದೂರವಿಡುತ್ತದೆ. ಏಕೆಂದರೆ ಬಿಯರ್ ಮೆದುಳಿನ ಹೊಸ ಕೋಶಗಳ ಬೆಳವಣಿಗೆಗೆ ಉತ್ತೇಜಿಸುತ್ತದೆ.


 • ಪಾರ್ಶ್ವವಾಯುವಿನ ವಿರುದ್ಧ ರಕ್ಷಾ ಕವಚವಾಗಿ ದೇಹವನ್ನು ಕಾಪಾಡುತ್ತದೆ

  ಅಮೆರಿಕನ್ ಸ್ಟ್ರೋಕ್ ಅಸೋಸಿಯೇಷನ್ ರವರು ಪ್ರಕಟಿಸಿದ ಹಲವಾರು ಅಧ್ಯಯನಗಳಲ್ಲಿ ಬಿಯರ್ ಕುಡಿಯದೇ ಇರುವವರಿಗಿಂತ ಇದನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿರುವವರು ಪಾರ್ಶ್ವವಾಯುವಿನ ಸಮಸ್ಯೆಗೆ ಗುರಿಯಾಗುವುದನ್ನು ಶೇಕಡ 50 ರಷ್ಟು ತಪ್ಪಿಸಬಹುದು ಎಂದು ತಿಳಿಸಿದ್ದಾರೆ. ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ಸಂಶೋಧಕರ ಪ್ರಕಾರ ಪ್ರತಿನಿತ್ಯ ಬಿಯರ್ ನ ನಿಯಮಿತವಾದ ಸೇವನೆಯಿಂದ ರಕ್ತ ಹೆಪ್ಪುಗಟ್ಟಿ ಹೃದಯಕ್ಕೆ, ಕುತ್ತಿಗೆ ಭಾಗಕ್ಕೆ ಮತ್ತು ಮೆದುಳಿನ ಭಾಗಕ್ಕೆ ರಕ್ತ ಸಂಚಾರವಾಗುವುದನ್ನು ತಡೆಯುವ ಪ್ರಕ್ರಿಯೆಗೆ ವಿರಾಮ ಹಾಕುತ್ತದೆ.


 • ಮೂಳೆಗಳನ್ನು ಬಲಪಡಿಸುತ್ತದೆ

  ಬಿಯರ್ ನಲ್ಲಿ ಹೆಚ್ಚಿನ ಮಟ್ಟದ ಸಿಲಿಕಾನ್ ಅಂಶವಿದ್ದು ಇದು ಮೂಳೆಗಳ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಸಂಯುಕ್ತವೆಂದು ಸಾಬೀತಾಗಿದೆ. ಏಕೆಂದರೆ ಸಿಲಿಕಾನ್ ಅಂಶ ಮೂಳೆಗಳ ಖನಿಜ ಸಾಂದ್ರತೆಯನ್ನು ಹೆಚ್ಚಿಸಿ, ಮೂಳೆಗಳ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ. ಟಫ್ಟ್ಸ್ ಯುನಿವರ್ಸಿಟಿಯಲ್ಲಿ 2009ರಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ನಿಯಮಿತ ಪ್ರಮಾಣದಲ್ಲಿ ಪ್ರತಿನಿತ್ಯ ಬಿಯರ್ ಕುಡಿಯುವ ಅಭ್ಯಾಸ ಮಾಡಿಕೊಂಡು ಬಂದಿರುವ ವೃದ್ಧರು ತಮ್ಮಲ್ಲಿ ಹೆಚ್ಚಿನ ಮೂಳೆಯ ಸಾಂದ್ರತೆಯನ್ನು ಹೊಂದಿದ್ದ ಅಂಶ ಬೆಳಕಿಗೆ ಬಂದಿತ್ತು. ಆದರೆ ಬಿಯರ್ ನ ಮಿತಿಮೀರಿದ ಸೇವನೆ ಮೂಳೆಗಳನ್ನು ದುರ್ಬಲಗೊಳಿಸಿ ಮೂಳೆ ಮುರಿತವಾಗುವ ಸಂಭವ ಹೆಚ್ಚಿಸುತ್ತದೆ ಎಂಬ ಅಂಶ ಕೂಡ ನೆನಪಿರಲಿ.
ಇತ್ತೀಚಿನ ದೈನಂದಿನ ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆ ದಿನಾಂತ್ಯದಲ್ಲಿ ಮನಸ್ಸಿಗೆ ಸ್ವಲ್ಪ ಶಾಂತಿ ಮತ್ತು ದೇಹಕ್ಕೆ ಸ್ವಲ್ಪ ವಿಶ್ರಾಂತಿ ಬಯಸುವುದು ಮನುಷ್ಯನ ಕರ್ತವ್ಯ. ಏಕೆಂದರೆ ದಿನವಿಡೀ ದುಡಿಮೆ ಎಂಬ ಕುದುರೆ ಓಟದಲ್ಲಿ ಆಯಾಸವಾಗಿ ನಿತ್ರಾಣಗೊಂಡು ಸಂಜೆಯ ಹೊತ್ತಿಗೆ ಮನೆಗೆ ಬಂದ ದೇಹಕ್ಕೆ ಮತ್ತು ಮನಸ್ಸಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯ ಇದ್ದೇ ಇರುತ್ತದೆ.

ಕೆಲವರು ಟಿವಿ ಕಾರ್ಯಕ್ರಮಗಳನ್ನು ನೋಡುತ್ತಾ ಮನಸ್ಸಿಗೆ ಖುಷಿ ತಂದುಕೊಂಡರೆ, ಇನ್ನು ಕೆಲವರು ಕಾಫಿ ಚಹಾದಂತಹ ಪಾನೀಯಗಳ ಮೊರೆ ಹೋಗುತ್ತಾರೆ. ಈಗಿನ ಆಧುನಿಕ ಯುಗದಲ್ಲಿ ಇನ್ನು ಕೆಲವರು ತಿಳಿದೋ ತಿಳಿಯದೆಯೋ ಕೋಲ್ಡ್ ಬಿಯರ್ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಅತಿಯಾದ ಬಿಯರ್ ಸೇವನೆ ಲಿವರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಆಹ್ವಾನ ಕೊಡುತ್ತದೆ. ಜೊತೆಗೆ ಕೆಲವು ಬಗೆಯ ಕ್ಯಾನ್ಸರ್ ರೋಗಗಳಿಗೂ ಕಾರಣವಾಗುತ್ತದೆ.

ಆದರೆ ಬಿಯರ್ ಸೇವನೆಯಲ್ಲಿ ನಿಯಂತ್ರಣ ಕಾಯ್ದುಕೊಂಡರೆ ನಿಮ್ಮ ಆರೋಗ್ಯಕ್ಕೆ ಖಂಡಿತ ಒಳ್ಳೆಯದು ಎಂದು ಸಂಶೋಧನೆ ಹೇಳುತ್ತದೆ. ಹಾಗಾದರೆ ಎಷ್ಟು ಪ್ರಮಾಣದ ಬಿಯರ್ ಅನ್ನು ಒಂದು ದಿನಕ್ಕೆ ಸೇವನೆ ಮಾಡಬೇಕು? ಸಂಶೋಧಕರ ಪ್ರಕಾರ ಪುರುಷರಿಗೆ 24 ಔನ್ಸ್ ಮತ್ತು ಮಹಿಳೆಯರಿಗೆ 12 ಔನ್ಸ್ ಎಂದು ತಿಳಿಯಲ್ಪಟ್ಟಿದೆ.

 
ಹೆಲ್ತ್