Back
Home » ಇತ್ತೀಚಿನ
ಆಂಡ್ರಾಯ್ಡ್‌ನಲ್ಲಿ ಮತ್ತೆ ಕಾಲ್‌ ರೆಕಾರ್ಡಿಂಗ್‌ ವೈಶಿಷ್ಟ್ಯ..? ಅಪಾಯಕಾರಿ ಫೀಚರ್‌..!
Gizbot | 18th Jan, 2020 03:00 PM
 • ಎಕ್ಸ್‌ಡಿಎ

  ಎಕ್ಸ್‌ಡಿಎ ಡೆವಲಪರ್‌ಗಳ ವರದಿಯಂತೆ, ಗೂಗಲ್‌ನ ಡಯಲರ್ ಅಪ್ಲಿಕೇಶನ್ ಶೀಘ್ರದಲ್ಲಿಯೇ ಕಾಲ್ ರೆಕಾರ್ಡಿಂಗ್‌ಗೆ ಸ್ಥಳೀಯ ಬೆಂಬಲ ಪಡೆಯಲಿದೆ ಎಂದು ಹೇಳಲಾಗಿದೆ. ಪಿಕ್ಸೆಲ್‌ 4ನಲ್ಲಿ ಅಪ್ಲಿಕೇಶನ್‌ ಸ್ಥಾನ ಪಡೆದಿದ್ದು, ಆಂಡ್ರಾಯ್ಡ್ ಫೋನ್‌ಗಳ ಡಯಲರ್‌ನಲ್ಲಿ ಹೊಸ ವಿನ್ಯಾಸ, ಐಕಾನ್‌ಗಳು ಮತ್ತು ಪ್ರಮುಖವಾಗಿ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯ ಬಹಿರಂಗವಾಗಿದೆ. ಬಹುಶಃ ಇನ್-ಕಾಲ್ ಬಟನ್ ಕಾಲ್‌ ರೆಕಾರ್ಡಿಂಗ್‌ಗಳನ್ನು ಪ್ರಾರಂಭಿಸುತ್ತದೆ.


 • ಕುತೂಹಲಕಾರಿ

  ಕುತೂಹಲಕಾರಿ ಅಂಶ ಏನೆಂದರೆ, ಆಂಡ್ರಾಯ್ಡ್ 7 ನೌಗಾಟ್ ಆವೃತ್ತಿವರೆಗೂ ಕಾಲ್‌ ರೆಕಾರ್ಡಿಂಗ್‌ ವೈಶಿಷ್ಟ್ಯವನ್ನು ಗೂಗಲ್‌ ನೀಡಿತ್ತು. ಆದರೆ, ಗೌಪ್ಯತೆ ಮತ್ತು ಸುರಕ್ಷತಾ ಕಾರಣಗಳಿಂದ ಆಂಡ್ರಾಯ್ಡ್ 8 ಓರಿಯೊ ಆವೃತ್ತಿಯಿಂದ ಕಾಲ್‌ ರೆಕಾರ್ಡಿಂಗ್‌ ಫೀಚರ್‌ನ್ನು ಗೂಗಲ್‌ ಸ್ಥಗಿತಗೊಳಿಸಿದೆ. ಈ ಫೀಚರ್‌ನ್ನು ಎಪಿಕೆ ಟಿಯರ್‌ಡೌನ್‌ನಲ್ಲಿ ಗುರುತಿಸಲಾಗಿದ್ದು, ಅಂತಿಮವಾಗಿ ಬಿಡುಗಡೆಯಾಗಿಲ್ಲ ಎಂಬುದನ್ನು ಓದುಗರು ಗಮನಿಸಬೇಕು. ಆದರೆ, ಖಂಡಿತವಾಗಿಯೂ ಕರೆ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಗೂಗಲ್ ಪರೀಕ್ಷಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ.


 • ಒನ್‌ಪ್ಲಸ್

  ಒನ್‌ಪ್ಲಸ್, ಸ್ಯಾಮ್‌ಸಂಗ್, ಶಿಯೋಮಿ ಸಾಧನಗಳಲ್ಲಿ ಕಾರ್ಯನಿರ್ವಹಿಸುವಂತಹ ಕಸ್ಟಮ್ ಆಧಾರಿತ ಯುಐಗಳು ಈ ವೈಶಿಷ್ಟ್ಯವನ್ನು ಹೊಂದಿವೆ. ಆದಾಗ್ಯೂ, ಸ್ಟಾಕ್ ಆಂಡ್ರಾಯ್ಡ್‌ನಲ್ಲಿ ಈ ಫೀಚರ್‌ ಸ್ವಲ್ಪ ಸಮಯದಿಂದ ಇಲ್ಲ. ಈ ಫೀಚರ್‌ ಹೊರಬಂದರೆ, ಆಂಡ್ರಾಯ್ಡ್ ಫೋನ್ ಹೊಂದಿರುವ ಯಾರು ಬೇಕಾದರೂ ನಿಮ್ಮ ಅರಿವಿಲ್ಲದೆ ಸಂಭಾಷಣೆಗಳನ್ನು ರೆಕಾರ್ಡ್ ಮಾಡಬಹುದು. ಇದು ಸ್ವಲ್ಪ ಅಪಾಯಕಾರಿ ಎಂದರೂ ತಪ್ಪಲ್ಲ.


 • ಆಪಲ್

  ಮತ್ತೊಂದೆಡೆ, ಆಪಲ್ ಯಾವುದೇ ಥರ್ಡ್‌ ಪಾರ್ಟಿ ಆಪ್‌ ಮತ್ತು ಡೆವಲಪರ್‌ಗಳನ್ನು ಅಂತರ್ನಿರ್ಮಿತ ಅಪ್ಲಿಕೇಶನ್ ಐಫೋನ್ ಡಯಲರ್‌ನೊಂದಿಗೆ ಟಿಂಕರ್ ಮಾಡಲು ಅನುಮತಿಸುವುದಿಲ್ಲ. ಆಪಲ್ ಯಾವಾಗಲೂ ಗೌಪ್ಯತೆ ಮತ್ತು ನೈತಿಕತೆಯಲ್ಲಿ ಮುಂದೆ ಇದ್ದು, ಸರಿಯಾದ ಒಪ್ಪಿಗೆಯಿಲ್ಲದೆ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲು ಯಾರಿಗೂ ಅನುಮತಿಸುವುದಿಲ್ಲ.


 • ಅಪ್ಲಿಕೇಶನ್

  ಅಲ್ಲದೆ, ಆಪಲ್ ತನ್ನ ಅಪ್ಲಿಕೇಶನ್ ಮಾರ್ಗಸೂಚಿಗಳೊಂದಿಗೆ ತುಂಬಾ ಕಟ್ಟುನಿಟ್ಟಾಗಿರುತ್ತದೆ ಮತ್ತು ಸಿಸ್ಟಮ್ ಸೆಟ್ಟಿಂಗ್ಸ್‌ ಮೇಲೆ ನಿಯಂತ್ರಣ ಪಡೆಯಲು ಯಾವುದೇ ಡೆವಲಪರ್‌ಗೆ ಅವಕಾಶ ನೀಡುವುದಿಲ್ಲ. ಕಾಲ್‌ ರೆಕಾರ್ಡ್ ಮಾಡಲು ಮತ್ತು ಸಂಗ್ರಹಿಸಲು ಸಿಸ್ಟಮ್ ಸೆಟ್ಟಿಂಗ್ಸ್‌ಗೆ ಪ್ರವೇಶಿಸಬೇಕಾಗುತ್ತದೆ, ಆದರೆ ಇದಕ್ಕೆ ಆಪಲ್ ಅನುಮತಿಸುವುದಿಲ್ಲ.
ನೀವು ಬೇರೆಯವರೊಂದಿಗೆ ಮಾತನಾಡುವುದದನ್ನು ನಿಮಗೆ ಅರಿವಿಲ್ಲದೆ ರೆಕಾರ್ಡ್ ಮಾಡಿದರೆ ಹೇಗೆ..? ಇದು ಗೌಪ್ಯತೆಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಇದು ಅಪಾಯಕಾರಿಯೂ ಕೂಡ ಆಗಿರಲಿದೆ. ಇದರ ಬಗ್ಗೆಯೇ ಒಂದು ಆನ್‌ಲೈನ್‌ ವರದಿ ಬಂದಿದ್ದು, ಕಾಲ್‌ ರೆಕಾರ್ಡಿಂಗ್ ಫೀಚರ್‌ ಶೀಘ್ರದಲ್ಲಿಯೇ ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯವಾಗಲಿದೆ.

   
 
ಹೆಲ್ತ್