Back
Home » ಇತ್ತೀಚಿನ
ಐಫೋನ್‌ನಲ್ಲಿ ಕಾಣಿಸದ ಈ 5 ಫೀಚರ್ಸ್‌ಗಳು ಆಂಡ್ರಾಯ್ಡ್‌ನಲ್ಲಿವೆ!
Gizbot | 19th Jan, 2020 12:00 PM
 • ಹೌದು

  ಹೌದು, ಸ್ಮಾರ್ಟ್‌ಫೋನ್‌ಗಳ ವಿಚಾರಕ್ಕೆ ಬಂದಾಗ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗಿಂತ ಐಫೋನ್‌ ತುಸು ಹೆಚ್ಚಿನ ಸ್ಥಾನವನ್ನ ಪಡೆದುಕೊಂಡಿದೆ. ಅದರಲ್ಲೂ ಉತ್ತಮ ತಂತ್ರಜ್ಞಾನ, ಕಾರ್ಯವೈಖರಿಯ ಮುಂದೆ ಇತರೆ ಮಾದರಿಯ ಸ್ಮಾರ್ಟ್‌ಫೋನ್‌ಗಳು ಐಫೋನ್‌ಗೆ ಸಮವಲ್ಲ, ಆದರೂ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಸಿಗುವ ಕೆಲ ಫೀಚರ್ಸ್‌ ಐಫೋನ್‌ನಲ್ಲಿ ಸಿಗೋದಿಲ್ಲ ಅನ್ನೊದೇ ವೆರಿ ಇಂಟ್ರೆಸ್ಟಿಂಗ್‌ ವಿಚಾರ. ಅಷ್ಟಕ್ಕೂ ಐಫೋನ್‌ ಸಿಗದೆ ಇರುವ ಹಾಗೂ ಆಂಡ್ರಾಯ್ಡ್‌ನಲ್ಲಿ ಮಾತ್ರ ದೊರೆಯುವ ಕೆಲ ಫೀಚರ್ಸ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಈ ಲೇಖನವನ್ನ ಮಿಸ್‌ ಮಾಡ್ದೆ ಓದಿ.


 • ಡಿಫಾಲ್ಟ್‌ ಆಪ್ಲಿಕೇಶನ್‌

  ಸ್ಮಾರ್ಟ್‌ಫೋನ್‌ ಬಳಕೆದಾರರು ತಾವು ಬಳಸುವ ಹಾಗೂ ಬಯಸುವ ಆಪ್ಲಿಕೇಶನ್‌ಗಳನ್ನ ಮಾತ್ರ ಹೊಂದಿಸಿಕೊಳ್ಳಲು ಇಷ್ಟ ಪಡುತ್ತಾರೆ. ಅಲ್ಲದೆ ಇತರೆ ಆಪ್ಲಿಕೇಶನ್‌ಗಳನ್ನ ಡಿಫಾಲ್ಟ್‌ ಮಾಡುತ್ತಾರೆ. ಆದರೆ ಈ ಅವಕಾಶ ಕೇವಲ ಆಂಡ್ರಾಯ್ಡ್‌ ಆಧಾರಿತ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಿದ್ದು, ಐಫೋನ್‌ನಲ್ಲಿ ಆಪ್ಲಿಕೇಶನ್‌ಗಳನ್ನ ಡಿಫಾಲ್ಟ್‌ ಮಾಡುವ ಅವಕಾಶ ನೀಡಿಲ್ಲ. ಗೂಗಲ್‌ ಹೇಳುವ ಆಪ್ಲಿಕೇಶನ್‌ಗಳನ್ನ ಬಳಸುವುದಲ್ಲ,ನಿಮಗೆ ಇಷ್ಟವಾದ ಆಪ್ಲಿಕೇಶನ್‌ಗಳನ್ನ ಬಳಸೋದು ಉತ್ತಮ, ಇದೇ ಕಾರಣಕ್ಕೆ ಆಂಡ್ರಾಯ್ಡ್‌ ಈ ವಿಚಾರದಲ್ಲಿ ಐಫೋನ್‌ಗಿಂತ ಭಿನ್ನವಾಗಿ ನಿಲ್ಲುತ್ತೆ.


 • ಆಪಲ್‌ನ ಸಿರಿಗಿಂತ ಉತ್ತಮ ಗೂಗಲ್‌ ಆಸಿಸ್ಟೆಂಟ್‌

  ಇನ್ನು ಹ್ಯಾಡ್ಸ್‌ ಪ್ರಿ ಕೆಲಸಕ್ಕಾಗಿ ಐಫೋನ್‌ನಲ್ಲಿ ಸಿರಿ ಆಪ್ಲಿಕೇಶನ್‌ ಇರುವಂತೆ ಆಂಡ್ರಾಯ್ಡ್‌ ಬಳಕೆದಾರರಿಗೆ ಗೂಗಲ್‌ ಆಸಿಸ್ಟೆಂಟ್‌ ಆಪ್ಲಿಕೇಶನ್‌ ಲಭ್ಯವಿದೆ. ಐಫೋನ್‌ನ ಸಿರಿ ಆಪ್ಲಿಕೇಶನ್‌ಗೆ ಹೋಲಿಕೆ ಮಾಡಿದರೆ ಗೂಗಲ್‌ ಆಸಿಸ್ಟೆಂಟ್‌ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಗೂಗಲ್‌ ಆಪ್ಲಿಕೇಶನ್‌ ಡಾಟಾಬೇಸ್‌ ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಹೇ ಗೂಗಲ್‌, ಓಕೆ ಗೂಗಲ್‌ ಅನ್ನುವ ಪದಗಳ ಮೂಲಕ ನೀವು ವ್ಯವಹರಿಸಬಹುದಾಗಿದೆ ಅಲ್ಲದೆ ನೀವು ನೀಡುವ ಹೆಸರುಗಳು ಇಲ್ಲವೇ ಮಾಹಿತಿಯನ್ನ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಗೂಗಲ್‌ ಅಸಿಸ್ಟೆಂಟ್‌ಗೆ ಇದೆ. ಆದರೆ ಈ ವಿಚಾರದಲ್ಲಿ ಐಫೋನ್‌ ಸಿರಿ ತುಸು ಹಿಂದೆಯೆ ಇದೆ.


 • ಏಕಕಾಲದಲ್ಲಿ ಎರಡು ಆಪ್ಲಿಕೇಶನ್‌ ತೆರೆಯುವುದು

  ಸ್ಪ್ಲಿಟ್‌ ಸ್ಕ್ರೀನ್‌ ಮೋಡ್‌ನಲ್ಲಿ ನೀವು ಏಕಕಾಲದಲ್ಲಿ ಎರಡು ಆಪ್ಲಿಕೇಶನ್‌ಗಳ ತೆರೆಯಬೇಕು ಎಂದಾದಲ್ಲಿ ಅದು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಸಾಧ್ಯವಾಗಲಿದೆ. ಐಫೋನ್‌ನಲ್ಲಿ ಒಮ್ಮೆಲೆ ಎರಡು ಆಪ್ಲಿಕೇಶನ್‌ಗಳ ತೆರೆಯುವ ಅವಕಾಶವನ್ನ ಇನ್ನು ಕಲ್ಪಿಸಿಲ್ಲ ಅನ್ನೊದನ್ನ ಗಮನಿಸಬೇಕಿದೆ. ಉದಾಹರಣೆಗೆ ನೀವು ಯಾರಿಗಾದರೂ ಸಂದೇಶವನ್ನ ಕಳಿಸುವಾಗ ಅದಕ್ಕೆ ಸಂಬಂಧಿಸಿದ ಫೈಲ್‌ ಅನ್ನ ಇನ್ನೊಂದು ಆಪ್ಲಿಕೇಶನ್‌ನಿಂದ ತೆರೆಯುವ ಪ್ರಸಂಗ ಬಂದರೆ ಆಂಡ್ರಾಯ್ಡ್‌ನಲ್ಲಿ ಸುಲಭವಾಗಿ ತೆಗೆಯಬಹುದು. ಆದರೆ ಐಫೋನ್‌ನಲ್ಲಿ ಒಂದು ಆಪ್ಲಿಕೇಶನ್‌ ತೆರೆದಿದ್ದಾಗ ಇನ್ನೊಂದು ಆಪ್ಲಿಕೇಶನ್‌ ತೆರೆಯುವ ಅವಕಾಶ ನೀಡಿಲ್ಲ.


 • ಹೋಮ್‌ಸ್ಕ್ರೀನ್‌ ಕಸ್ಟಮೈಸ್ಡ್‌

  ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಹಾಗೂ ಐಫೋನ್‌ ನಡುವಿನ ಫೀಚರ್ಸ್‌ಗಳಲ್ಲಿ ಹೋಮ್‌ಸ್ಕ್ರೀನ್‌ ಕ್ಸಟಮೈಸ್ಡ್‌ ಮಾಡುವ ವಿಧಾನದಲ್ಲಿ ಕೂಡ ವ್ಯತ್ಯಾಸವಿದೆ. ಐಫೋನ್‌ನ ಹೋಮ್‌ಸ್ಕ್ರೀನ್‌ನಲ್ಲಿ ಎಲ್ಲಾ ಆಪ್ಲಿಕೇಶನ್‌ಗಳನ್ನ ಗ್ರೀಡ್‌ ಮಾದರಿಯಲ್ಲಿ ಮಾತ್ರ ಜೋಡಿಸಲಾಗಿರುತ್ತೆ. ಆದ್ರೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ನಿಮಗಿಷ್ಟ ಬಂದ ಹಾಗೇ ಆಪ್ಲಿಕೇಶನ್‌ಗಳನ್ನ ಜೋಡಿಸುವ ಅವಕಾಶವಿದೆ. ಅಷ್ಟೇ ಅಲ್ಲ ನಿಮಗಿಷ್ಟವಾದ ಐಕಾನ್‌ ಮಾದರಿಯಲ್ಲಿ ಫೋಲ್ಡರ್‌ಗಳನ್ನ ರಚಿಸುವ ಅವಕಾಶ ಕೇವಲ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ.


 • ವಾಲ್‌ಪೇಪರ್‌ ಬದಲಾವಣೆ

  ಆಂಡ್ರಾಯ್ಡ್‌ ನಲ್ಲಿ ಮಾತ್ರ ಕಂಡುಬರುವ ಹಾಗೂ ಐಫೋನ್‌ನಲ್ಲಿ ಸಾಧ್ಯವಿಲ್ಲದ ಮತ್ತೊಂಧು ವೈಶಿಷ್ಟ್ಯತೆ ಅಂದರೆ ವಾಲ್‌ಪೇಪರ್‌ಗಳ ಸ್ವಯಂ ಬದಲಾವಣೆ. ಹೌದು ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ನೀವು ಏನನ್ನೂ ಮಾಡದೆಯೇ ಇದ್ದರೂ ಪ್ರತಿನಿತ್ಯ ವಾಲ್‌ಪೇಪರ್ಸ್ ಅಪ್ಲಿಕೇಶನ್ ನಿಮ್ಮ ಹೋಮ್‌ಸ್ಕ್ರೀನ್ ಮತ್ತು ಲಾಕ್ ಪರದೆಯಲ್ಲಿ ವಾಲ್‌ಪೇಪರ್ ಅನ್ನು ರಿಫ್ರೆಶ್ ಮಾಡುತ್ತದೆ. ಆದರೆ ಐಫೋನ್‌ನಲ್ಲಿ ಇಂತಹ ಅವಕಶವಿಲ್ಲ ನಿಮಗೆ ಇಷ್ಟವಾದ ವಾಲ್‌ಪೇಪರ್‌ ಅನ್ನ ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತೆ.
ಇದು ಸ್ಮಾರ್ಟ್‌ಫೋನ್‌ ಜಮಾನ, ಎಲ್ಲರೂ ಕೂಡ ಸ್ಮಾರ್ಟ್‌ಫೋನ್‌ ಹೊಂದಲು ಬಯಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ ಆಧಾರಿತ ಸ್ಮಾರ್ಟ್‌ಫೋನ್‌ ಹಾಗೂ ಆಪಲ್‌ನ ಐಫೋನ್‌ಗಳು ಉತ್ತಮ ಮಾರುಕಟ್ಟೆಯನ್ನ ಹೊಂದಿವೆ. ಅಲ್ಲದೆ ಐಫೋನ್‌ ಹಾಗೂ ಆಂಡ್ರಾಯ್ಡ್‌ ಫೋನ್‌ಗಳ ನಡುವೆ ಸಾಕಷ್ಟು ಸಾಮ್ಯತೆ ಇದ್ದಾಗ್ಯೂ ಅಷ್ಟೇ ವೈವಿಧ್ಯತೆ ಕೂಡ ಇದೆ. ಅದರಲ್ಲೂ ಐಫೋನ್‌ ಹೊಂದುವುದಕ್ಕೆ ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಐಫೋನ್‌ನಲ್ಲೂ ಸಿಗದ ಕೆಲವೊಂದು ಫೀಚರ್ಸ್‌ ಆಂಡ್ರಾಯ್ಡ್‌ನಲ್ಲಿ ಮಾತ್ರ ಸಿಗಲಿದೆ.

 
ಹೆಲ್ತ್