Back
Home » ಇತ್ತೀಚಿನ
Oppo F15 ಫಸ್ಟ್‌ ಲುಕ್: ಮೀಡ್‌ರೇಂಜ್‌ ಬೆಲೆಯ ಸ್ಟೈಲಿಶ್‌ ಸ್ಮಾರ್ಟ್‌ಫೋನ್!
Gizbot | 20th Jan, 2020 09:00 AM
 • 'ಒಪ್ಪೊ F15' ಸ್ಮಾರ್ಟ್‌ಫೋನ್

  'ಒಪ್ಪೊ F15' ಸ್ಮಾರ್ಟ್‌ಫೋನ್ ಮೀಡ್‌ರೇಂಜ್ ಮಾದರಿಯಲ್ಲಿ ಗುರುತಿಸಿಕೊಂಡಿದ್ದು, ಆದರೆ ಕೆಲವು ಹೈ ಎಂಡ್ ಮಾದರಿಯ ಫೀಚರ್ಸ್‌ಗಳನ್ನು ಪಡೆದಿದೆ. 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ ಹೊಂದಿದ್ದು, ಚುರುಕಾದ ಕಾರ್ಯವೈಖರಿ ಕಾಣಬಹುದಾಗಿದೆ. ಜೊತೆಗೆ ಬ್ಯಾಟರಿ ಸಪೋರ್ಟ್‌ಗೆ VOOC ತಂತ್ರಜ್ಞಾನದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಇದರೊಂದಿಗೆ ಡಿವೈಸ್‌ನಿಂದಲೂ ಕಣ್ಮನಸೆಳೆದಿದೆ. ಹಾಗಾದರೆ ಒಪ್ಪೊ ಎಫ್‌15 ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಕಾರ್ಯವೈಖರಿ ಹೇಗಿವೆ ಎನ್ನುವ ಕುರಿತು ಫಸ್ಟ್‌ ಲುಕ್ ಮಾಹಿತಿ ಇಲ್ಲಿದೆ. ಮುಂದೆ ಓದಿರಿ.


 • ಡಿಸ್‌ಪ್ಲೇ ಮತ್ತು ಡಿಸೈನ್

  ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶ್‌ನ ಸಾಮರ್ಥ್ಯದೊಂದಿಗೆ 6.4 ಇಂಚಿನ AMOLED ಮಾದರಿಯ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಪಡೆದಿದೆ. ಗೇಮಿಂಗ್ ಹಾಗೂ ವಿಡಿಯೊ ವೀಕ್ಷಣೆಗೆ ಉತ್ತಮ ಎನ್ನಬಹುದು. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90.7% ಆಗಿದೆ. ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 5 ನೀಡಲಾಗಿದೆ. ಕಂಪನಿಯು ಪ್ರಸ್ತುತ ಅಗತ್ಯತೆಗೆ ಅನುಗುಣವಾಗಿ ಡಿಸ್‌ಪ್ಲೇ ಸೌಲಭ್ಯ ನೀಡಿದೆ ಎನ್ನಬಹುದು.


 • ಪ್ರೊಸೆಸರ್ ಕಾರ್ಯವೈಖರಿ ಹೇಗಿದೆ

  ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P70 ಚಿಪ್‌ಸೆಟ್ ಹೊಂದಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಹಾಗೂ ಕಲರ್ ಓಎಸ್‌ 6 ಬೆಂಬಲ್ ಇದೆ.ಜೊತೆಗೆ ARM Mali G72 GPU ಗ್ರಾಫಿಕ್ಸ್‌ ಬೆಂಬಲ ಸಹ ಪಡೆದಿದೆ. ಬಳಕೆದಾರರಿಗೆ ಸಾಕಷ್ಟು ಹೊಸ ಫೀಚರ್ಸ್‌ಗಳ ಅನುಭವ ಲಭ್ಯವಾಗಲಿದೆ. ಇನ್ನು ಈ ಫೋನ್ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 256GB ವರೆಗೂ ವಿಸ್ತರಿಸಬಹುದಾದ ಅವಕಾಶ ಇದೆ. RAM ಸಾಮರ್ಥ್ಯ ಅಧಿಕವಾಗಿರುವುದರಿಂದ ಕಾರ್ಯವೈಖರಿ ವೇಗದಲ್ಲಿರಲಿದೆ. ಗೇಮ್ ಮೋಡ್ ಆಯ್ಕೆ ಸಹ ಪಡೆದಿದೆ.


 • ಕ್ಯಾಮೆರಾ ವಿಶೇಷತೆ ಏನು

  ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು f/1.7 ಅಪರ್ಚರ್ನೊಂದಿಗೆ 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು f/2.25 ಅಪರ್ಚರ್‌ನೊಂದಿಗೆ 8ಎಂಪಿಯ ಸೆನ್ಸಾರ್ ಹೊಂದಿದ್ದು, ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು f/2.0 ಅಪರ್ಚರ್‌ ಬೆಂಬಲದೊಂದಿಗೆ 2ಎಂಪಿಯ ಸೆನ್ಸಾರ್ ಪಡೆದಿವೆ. ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್‌ನೊಂದಿಗೆ 16ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಆಟೋ ಫೋಕಸ್‌, ಸೆಲ್ಫಿ ಪೋಟ್ರೇಟ್ ಮೋಡ್ ಸೌಲಭ್ಯಗಳು ಸಹ ಇವೆ.


 • ಬ್ಯಾಟರಿ ಲೈಫ್ ಉತ್ತಮವೇ?

  ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಇದರೊಂದಿಗೆ 20W ಸಪೋರ್ಟ್‌ನೊಂದಿಗೆ VOOC 3.0 ತಂತ್ರಜ್ಞಾನದ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದಿದೆ. ಕೇವಲ 5 ನಿಮಿಷದ ಚಾರ್ಜ್ ಸುಮಾರು 2 ಗಂಟೆಗಳ ಟಾಕ್‌ಟೈಮ್ ಬ್ಯಾಕ್‌ಅಪ್ ನೀಡುವ ಸಾಮರ್ಥ್ಯ ಕಾಣಬಹುದಾಗಿದೆ. ಆದರೆ ಈ ಫೋನಿನಲ್ಲಿ ಬ್ಯಾಟರಿ ಸಾಮರ್ಥ್ಯವನ್ನು ಇನ್ನಷ್ಟು ಅಧಿಕಗೊಳಿಸಬಹುದಾಗಿತ್ತು.


 • ಬೆಲೆ ಮತ್ತು ಲಭ್ಯತೆ

  ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ 'ಒಪ್ಪೊ ಎಫ್‌15' ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯು 19,990ರೂ. ಆಗಿದೆ. ಇನ್ನು ಈ ಫೋನ್ 8GB RAM ಮತ್ತು 128GB ವೇರಿಯಂಟ್ ಫ್ರಿ-ಆರ್ಡರ್‌ಗೆ ಲಭ್ಯವಿದೆ. ಇದೇ ಜನೆವರಿ 24ರಂದು ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್ ತಾಣಗಳಲ್ಲಿ ಮಾರಾಟ ಶುರುವಾಗಲಿದೆ.


 • ಕೊನೆಯ ಮಾತು

  ಒಪ್ಪೊ F15 ಸ್ಮಾರ್ಟ್‌ಫೋನ್ ಫೀಚರ್ಸ್‌ಗಳು ಆಕರ್ಷಕವಾಗಿವೆ. ಆದರೆ 15,000ರೂ ಪ್ರೈಸ್‌ಟ್ಯಾಗ್ ಆಸುಪಾಸಿನಲ್ಲಿ ಲಾಂಚ್ ಮಾಡಿದ್ದರೇ, ರೆಡ್ಮಿ ನೋಟ್ 8 ಪ್ರೊ ಫೋನಿಗೆ ಹೆಚ್ಚಿನ ಫೈಟ್‌ ನೀಡಬಹುದಿತ್ತು. ಇನ್ನು ಬ್ಯಾಟರಿ ಸಾಮರ್ಥ್ಯವನ್ನು 4,5000mAh ಮತ್ತು ಮುಖ್ಯ ರಿಯರ್‌ ಕ್ಯಾಮೆರಾವನ್ನು 64ಎಂಪಿ ಸೆನ್ಸಾರ್‌ನಲ್ಲಿ ನೀಡಬೇಕಿತ್ತು. ಇವುಗಳನ್ನು ಹೊರತುಪಡಿಸಿದರೇ ಒಪ್ಪೊ ಎಫ್‌15 ಒಂದು ಪವರ್‌ಫುಲ್ ಸ್ಮಾರ್ಟ್‌ಫೋನ್ ಎಂದು ಹೇಳಬಹುದು.
ಒಪ್ಪೊ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಪರಿಚಯಿಸಿರುವ 'ಒಪ್ಪೊ ಎಫ್‌ 15' ಸ್ಮಾರ್ಟ್‌ಫೋನ್‌ ಈಗಾಗಲೇ ಹಲವು ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದಿನ ಅಗತ್ಯ ಫೀಚರ್ಸ್‌ಗಳನ್ನು ಹೊಂದಿದೆ. ಮುಖ್ಯವಾಗಿ 48ಎಂಪಿ ಸೆನ್ಸಾರ್ ಕ್ಯಾಮೆರಾ, RAM ಮತ್ತು ಹಿಲಿಯೊ P70 ಪ್ರೊಸೆಸರ್ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಶಿಯೋಮಿ ಮತ್ತು ರಿಯಲ್‌ ಮಿ ಫೋನ್‌ಗಳಿಗೆ ಪೈಪೋಟಿ ನೀಡುವ ಲಕ್ಷಣಗಳನ್ನು ಹೊರಹಾಕಿದೆ.

   
 
ಹೆಲ್ತ್