Back
Home » ಆರೋಗ್ಯ
ಈ ಗಿಡಮೂಲಿಕೆಗಳನ್ನು ತಿಂದರೆ ವ್ಯಾಯಾಮ ಇಲ್ಲದೆಯೂ ತೂಕ ಇಳಿಸಬಹುದು
Boldsky | 20th Jan, 2020 12:12 PM
 • ಗುಗ್ಗುಲ್

  ಮುಳ್ಳಿನ ಕೊಂಬೆಗಳನ್ನು ಹೊಂದಿರುವ ಸಣ್ಣ ಪೊದೆಯಂತಹ ಸಸ್ಯವಾಗಿರುವ ಇದು ಭಾರತೀಯ ಗಿಡಮೂಲಿಕೆಗಳಲ್ಲಿ ಪ್ರಮುಖವಾದದ್ದಾಗಿದೆ. ಕೊಬ್ಬಿನಾಂಶವನ್ನು ಕರಗಿಸುವುದಕ್ಕೆ ಇದು ನೆರವು ನೀಡುತ್ತದೆ ಮತ್ತು ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ಈ ಗಿಡಮೂಲಿಕೆ ತಡೆಯುತ್ತದೆ. ದಿನಕ್ಕೆ ಮೂರು ಬಾರಿ 25 ಗ್ರಾಂನಷ್ಟು ಸೇವಿಸುವುದಕ್ಕೆ ಹೇಳಲಾಗುತ್ತದೆ.ಆ ಮೂಲಕ ನೀವು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಸೊಂಟ, ಹೊಟ್ಟೆಯ ಕೆಳಭಾಗ ಮತ್ತು ತೊಡೆಯಲ್ಲಿ ಸೇರಿಕೊಂಡಿರುವ ಕೊಬ್ಬಿನಾಂಶವನ್ನು ಕರಗಿಸುವುದಕ್ಕೆ ಇದು ನೆರವು ನೀಡುತ್ತದೆ. ಅಷ್ಟೇ ಅಲ್ಲ ಇದು ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಅಧಿಕಗೊಳಿಸುತ್ತದೆ.


 • ಕಲ್ಮೆಘ್‌ (KALMEGH)

  ಶತಮಾನಗಳಿಂದ ಹಲವು ಕಾಯಿಲೆಗಳನ್ನು ನಿವಾರಿಸುವುದಕ್ಕಾಗಿ ಇದನ್ನು ಬಳಕೆ ಮಾಡಲಾಗುತ್ತಿದೆ. ಕಲ್ಮೇಗ ಕೊಬ್ಬು ಕರಗಿಸುವ ಗಿಡಮೂಲಿಕೆಯಾಗಿದ್ದು ರಕ್ತವನ್ನು ಶುದ್ಧೀಕರಿಸುವುದಕ್ಕೆ ನೆರವು ನೀಡುತ್ತದೆ.ಇದನ್ನು ಇಮ್ಯುನೋಸ್ಟಿಮ್ಯುಲೆಂಟ್ ಆಗಿ ಬಳಸಲಾಗುತ್ತದೆ ಮತ್ತು ದೇಹದ ತೂಕವನ್ನು ಬಹಳ ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ ಇದು ಜ್ವರ, ಅಲರ್ಜಿ, ಡಯಾಬಿಟೀಸ್ ಮತ್ತು ಇತರೆ ಹಲವು ಕಾಯಿಲೆಗಳು ಉದಾಹರಣೆ ಕ್ಯಾನ್ಸರ್ ಕಾಯಿಲೆಯ ನಿವಾರಣೆಗೂ ಕೂಡ ಸಹಕಾರಿ. ಆದರೆ ಇದು ಗರ್ಭಿಣಿ ಸ್ತ್ರೀಯರು ಸೇವಿಸಬಾರದು.


 • ತ್ರಿಫಲ

  ಇದು ಹೊಸತೆಂದು ನಿಮಗೆ ಅನ್ನಿಸಬಹುದು ಆದರೆ ಕಳೆದ ಹಲವು ವರ್ಷಗಳಿಂದ ಪ್ರಸಿದ್ಧಿಯಾಗಿರುವ ಔಷಧಿ ಇದಾಗಿದೆ. ತ್ರಿಫಲ ಹೆಸರೇ ಸೂಚಿಸುವಂತೆ ಮೂರು ಹಣ್ಣುಗಳ ಶಕ್ತಿಯ ಮಿಶ್ರಣ. ಅದುವೇ ಅಮಲಾಕಿ,ಬಿಭಿತಾಕಿ ಮತ್ತು ಹರಿಟಾಕಿ. ಹಣ್ಣುಗಳ ಮೂರು ಶಕ್ತಿಗಳು ದೇಹಕ್ಕೆ ಎಲ್ಲಾ ರೀತಿಯಿಂದಲೂ ಉತ್ತಮ ಆರೋಗ್ಯವನ್ನು ನೀಡುತ್ತದೆ. ಜೀರ್ಣಕ್ರಿಯೆ ಮತ್ತು ದೇಹದ ಟಾಕ್ಸಿಕ್ ಅಂಶವನ್ನು ಹೊರಹಾಕುವುದಕ್ಕೆ ಇದು ನೆರವು ನೀಡುತ್ತದೆ. ಬ್ಲೋಟಿಂಗ್ ಸಮಸ್ಯೆಯ ನಿವಾರಣೆಗೆ ಇದು ಸಹಕರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವುದಕ್ಕೆ ಕೂಡ ಇದು ನೆರವು ನೀಡುತ್ತದೆ. ಇದು ತೂಕ ನಷ್ಟಕ್ಕೆ ಸಹಕರಿಸುವ ಕೊಲೋನ್ ಟೋನರ್ ಎಂದು ತಿಳಿದು ಬಂದಿದೆ.


 • ವೃಕ್ಷಾಮ್ಲಾ

  ಕೊಬ್ಬಿನಾಂಶ ನಿಮ್ಮ ದೇಹದಲ್ಲಿ ಶೇಖರಣೆಯಾಗುವುದನ್ನು ಇದು ತಡೆಯುತ್ತದೆ ಮತ್ತು ಮೆದುಳಿನಲ್ಲಿ ಸಿರೋಟೊನಿನ್ ಲಭ್ಯತೆಯನ್ನು ಹೆಚ್ಚಿಸುವುದಕ್ಕೆ ಇದು ಸಹಕರಿಸುತ್ತದೆ. ನಿಯಮಿತವಾಗಿ ಇದನ್ನು ಸೇವನೆ ಮಾಡುವ ಮೂಲಕ ಕಡಿಮೆ ಅವಧಿಯಲ್ಲಿ ತೂಕ ಇಳಿಸುವುದಕ್ಕೆ ಇದು ಜನರಿಗೆ ನೆರವು ನೀಡುತ್ತದೆ ಮತ್ತು ಇದು ಜನರಿಗೆ ಬಹಳ ಇಷ್ಟವಾಗುತ್ತದೆ. ಬೇಗನೆ ತೂಕ ಇಳಿಸುವುದಕ್ಕೆ ಇದು ಸಹಕರಿಸುವುದಕ್ಕೆ ಕಾರಣ ಇದರಲ್ಲಿ ಲಭ್ಯವಿರುವ ಹೈಡ್ರಾಕ್ಸಿಲ್ ಸಿಟ್ರಿಕ್ ಆಸಿಡ್.


 • ಚಿತ್ರಕ್

  ಇದು ಭಾರತದ ಉಷ್ಣವಲಯ ಮತ್ತು ಉಪೋಷ್ಣವಲಯದ ಭಾಗಗಳಲ್ಲಿ ಕಂಡು ಬರುತ್ತದೆ. ಚಿತ್ರಕ್ ದೇಹದ ಕೊಲೆಸ್ಟ್ರಾಲ್ ಗೆ ವೈರಿಯೆಂದು ತಿಳಿದುಬಂದಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ನೆರವು ನೀಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಅಧಿಕಗೊಳಿಸುತ್ತದೆ.ಇದು ದೇಹವನ್ನು ಸಂಪೂರ್ಣವಾಗಿ ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆಮತ್ತು ಗ್ಯಾಸ್ಟ್ರಿಕ್ ರಸವನ್ನು ಪುನಃಸ್ಥಾಪನೆಗೆ ಸಹಕಾರಿ. ಅಜೀರ್ಣ, ವಾಕರಿಕೆ,ಕಿಬ್ಬೊಟ್ಟೆಯ ಸೆಳೆತ, ಅತಿಸಾರ,ಹುಣ್ಣು,ಚರ್ಮ ರೋಗಗಳ ಚಿಕಿತ್ಸೆಯಲ್ಲಿ ಉಪಯುಕ್ತವಾಗಿದೆ.
ದಪ್ಪವಾದ ದೇಹವನ್ನು ಯಾರು ತಾನೇ ಇಷ್ಟ ಪಡ್ತಾರೆ ಹೇಳಿ? ಎಲ್ಲರಿಗೂ ಸ್ಲಿಮ್ ಆಗಿರಬೇಕು. ಬಳುಕುವ ಬಳ್ಳಿಯಂತಿರಬೇಕು, ಜೀನ್ಸ್, ಚೂಡಿದಾರ್, ಸೀರೆ ಯಾವುದೇ ಡ್ರೆಸ್ ನಲ್ಲಾದ್ರೂ ಸರಿ ಚೆಂದ ಕಾಣುವಂತ ಮೈಕಟ್ಟಿರಬೇಕು ಎಂದು ಬಯಸುತ್ತಾರೆ. ಹಾಗಂತ ಈ ಸುಂದರ ಮೈಕಟ್ಟಿನ ಆಸೆ ಕೇವಲ ಮಹಿಳೆಯರಿಗಷ್ಟೇ ಅಲ್ಲ. ಪುರುಷರಿಗೂ ಕೂಡ ತಮ್ಮ ದೇಹದಲ್ಲಿ ಹೆಚ್ಚುವರಿ ತೂಕ ಸೇರುವುದು ಇಷ್ಟವಿಲ್ಲ. ಫಿಟ್ ಆಗಿರಬೇಕು ಎಂದು ಅವರೂ ಕೂಡ ಬಯಸುತ್ತಾರೆ. ಹಾಗಾದ್ರೆ ನಿಮ್ಮ ದೇಹ ತೂಕವನ್ನು ಇಳಿಸಿಕೊಳ್ಳುವುದಕ್ಕೆ ಏನು ಮಾಡಬೇಕು?.

ಯಾವಾಗಲೂ ಕುಳಿತೇ ಇರುವ ಈಗಿನ ಕೆಲಸದ ಶೈಲಿ ಓಬೆಸಿಟಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ದಿನನಿತ್ಯದ ವ್ಯಾಯಾಮ ಮಾಡುವುದಕ್ಕೆ ಕೆಲವರಿಗೆ ಸಮಯವೇ ಸಾಕಾಗುವುದಿಲ್ಲ. ಹಾಗಿರುವಾಗ ಆರೋಗ್ಯಯುತವಾದ ಜೀವನವನ್ನು ಕಳೆಯುವುದಕ್ಕೆ ಹೇಗೆ ತಾನೇ ಸಾಧ್ಯವಾಗುತ್ತದೆ ಅಲ್ಲವೇ? ಯಾರು ಸರಿಯಾಗಿ ವರ್ಕ್ ಔಟ್ ಮಾಡುವುದಿಲ್ಲವೋ ಅವರಿಗೆ ದೇಹದ ತೂಕ ಹೆಚ್ಚಳವಾಗಿ ಆರೋಗ್ಯ ಸಮಸ್ಯೆ ಕಾಡುವುದು ಸರ್ವೇ ಸಾಮಾನ್ಯ. ಈಗಿನ ಇಂಗ್ಲೀಷ್ ಮೆಡಿಸಿನ್ ಗಳಿಗಿಂದ ಆಗುವ ಅಡ್ಡಪರಿಣಾಮದ ಪರಿಣಾಮವಾಗಿ ಅನಾದಿ ಕಾಲದ ಆಯುರ್ವೇದ ಔಷಧಿಗಳನ್ನು ಎಲ್ಲರೂ ನೆಚ್ಚಿಕೊಂಡಿದ್ದಾರೆ. ನಾವಿಲ್ಲಿ ಕೆಲವು ಆಯುರ್ವೇದೀಯ ಗಿಡಮೂಲಿಕೆಗಳ ಬಗ್ಗೆ ತಿಳಿಸುತ್ತಿದ್ದು ಇವುಗಳು ನಿಮ್ಮ ದೇಹ ತೂಕವನ್ನು ಇಳಿಸುವುದಕ್ಕೆ ನೆರವು ನೀಡಲಿದೆ.

   
 
ಹೆಲ್ತ್