Back
Home » ಇತ್ತೀಚಿನ
noise shot neo ವಾಯರ್‌ಲೆಸ್‌ ಇಯರ್‌ಬಡ್ಸ್‌ ಬಿಡುಗಡೆ!
Gizbot | 21st Jan, 2020 08:00 AM
 • ಹೌದು

  ಹೌದು ನಾಯಿಸ್‌ ಕಂಪೆನಿ ನಾಯಿಸ್‌ ಶಾಟ್‌ ನಿಯೋ ವಾಯರ್‌ಲೆಸ್‌ ಇಯರ್‌ಬಡ್ಸ್‌ ಅನ್ನ ಭಾರತದಲ್ಲಿ ಲಾಂಚ್‌ ಮಾಡಿದ್ದು, ಗ್ರಾಹಕರು ಇ-ಕಾಮರ್ಸ್‌ ದೈತ್ಯ ಅಮೆಜಾನ್ ಇಂಡಿಯಾ ಮೂಲಕ ಖರೀದಿಸಬಹುದಾಗಿದೆ. ಸದ್ಯ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ ಮೇಳ ನಡೆಯುತ್ತಿರುವುದರಿಂದ ಈ ಇಯರ್‌ಬಡ್‌ಗಳನ್ನು ರಿಯಾಯಿತಿ ದರದಲ್ಲಿ ಕೇವಲ 2,199 ರೂ.ಗಳಿಗೆ ಲಭ್ಯವಿದೆ.


 • ಇನ್ನು

  ಇನ್ನು ಈ ಶಾಟ್‌ ನಿಯೋ ವಾಯರ್‌ ಲೆಸ್‌ ಇಯರ್‌ ಬಡ್ಸ್‌ ಸ್ಮಾರ್ಟ್ ಟಚ್ ಕಂಟ್ರೋಲ್‌ ಅನ್ನು ಬೆಂಬಲಿಸಲಿದ್ದು, ಪ್ಲೇ ಬ್ಯಾಕ್‌ ಮ್ಯೂಸಿಕ್‌ ಅನ್ನು ಪ್ಲೇ ಮಾಡಲು ಇಲ್ಲವೇ ಸ್ಟಾಪ್‌ ಮಾಡಲು, ಸೌಂಡ್‌ ಕಡಿಮೆ ಮಾಡಲು, ಟ್ರ್ಯಾಕ್‌ ಬದಲಾಯಿಸಲು, ಅಲ್ಲದೆ ಕರೆಗಳಿಗೆ ಉತ್ತರಿಸುವ ಹಾಗೂ ಕರೆಗಳನ್ನು ಕಡಿತಗೊಳಿಸಲು ಈ ಸ್ಮಾರ್ಟ್‌ ಟಾಚ್‌ ಉಪಯುಕ್ತವಾಗಿದೆ.
  ಅಲ್ಲದೆ ಈ ಇಯರ್‌ಬಡ್‌ಗಳನ್ನು 9 ಎಂಎಂ ಡ್ರೈವರ್‌ಗಳೊಂದಿಗೆ ಲೋಡ್ ಮಾಡಲಾಗಿದ್ದು, ಉತ್ತಮ ಗುಣಮಟ್ದ ಔಟ್‌ಪುಟ್‌ ಸೌಂಡ್‌ ಅನ್ನ ನೀಡಲಿದೆ.


 • ಇಯರ್‌ಬಡ್‌

  ಈ ಇಯರ್‌ಬಡ್‌ TWS ಐಪಿಎಕ್ಸ್ 5 ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನ ಹೊಂದಿದೆ. ಇದಲ್ಲದೆ ಈ ವಾಯರ್‌ಲೆಸ್‌ ಇಯರ್‌ ಬಡ್ಸ್‌ ಬ್ಲೂಟೂತ್ 5.0 ಸಂಪರ್ಕವನ್ನು ಬೆಂಬಲಿಸಲಿದೆ. ಇನ್ನು ಈ ಇಯರ್‌ಬಡ್‌ಗಳು 6 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತವೆ ಅಲ್ಲದೆ 400mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, ಹೆಚ್ಚುವರಿ 12 ಗಂಟೆಗಳ ಬ್ಯಾಕಪ್ ನೀಡುತ್ತದೆ. ಇದರಿಂದಾಗಿ ಬಳಕೆದಾರ ವೈರ್‌ಲೆಸ್ ಇಯರ್‌ಬಡ್‌ಗಳೊಂದಿಗೆ 18 ಗಂಟೆಗಳ ಬ್ಯಾಟರಿ ಬ್ಯಾಕಪ್ ಪಡೆಯಬಹುದಾಗಿದೆ.


 • ಶಾಟ್

  ನಾಯ್ಸ್ ಶಾಟ್ ನಿಯೋ ಇಯರ್‌ಬಡ್‌ಗಳು ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ಸೇರಿದಂತೆ ಧ್ವನಿ ಸಹಾಯಕರಿಗೆ ಬೆಂಬಲವನ್ನು ನೀಡುತ್ತವೆ. ಇದಲ್ಲದೆ ಇದು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಈ ಇಯರ್‌ಬಡ್‌ಗಳು ಉತ್ತಮ ಗುಣಮಟ್ಟದ ಆಡಿಯೋ ಧ್ವನಿ ನೀಡಲಿದ್ದು, ರಿಯಲ್‌ಮಿಯ ಇಯರ್‌ ಬಡ್‌ಗಳಿಗೆ ಪೈಪೋಟಿ ನೀಡಲಿದೆ ಎಂದು ಹೇಳಲಾಗ್ತಿದೆ.
ನಿಮಗೆಲ್ಲಾ ಗೊತ್ತಿರುವಂತೆ ಟೆಕ್‌ ಮಾರುಕಟ್ಟೆಯಲ್ಲಿ ಹಲವು ಬಗೆಯ ಇಯರ್‌ಬಡ್ಸ್‌ಗಳು ಲಭ್ಯ ಇವೆ. ಸ್ಮಾರ್ಟ್‌ಫೋನ್‌ ಆಯ್ಕೆ ಮಾಡಿಕೊಂಡಂತೆ ನಿಮಗಿಷ್ಟವಾದ ಇಯರ್‌ಬಡ್ಸ್‌ಗಳನ್ನ ಆಯ್ಕೆ ಮಾಡಿಕೊಳ್ಳುವ ಆಯ್ಕಯಂತೂ ಇದ್ದೆ ಇದೆ. ಸದ್ಯ ಈಗಾಗ್ಲೆ ಹಲವು ಬಗೆಯ ಇಯರ್‌ ಬಡ್ಸ್‌ಗಳನ್ನ ಲಾಂಚ್‌ ಮಾಡಿರೋ ನಾಯಿಸ್‌ ಕಂಪೆನಿ ಇದೀಗ ಶಾಟ್‌ ನಿಯೋ ವಾಯರ್‌ಲೆಸ್‌ ಇಯರ್‌ಬಡ್ಸ್‌ ಅನ್ನ ಭಾರತದಲ್ಲಿ ಲಾಂಚ್‌ ಮಾಡಿದೆ.

 
ಹೆಲ್ತ್