Back
Home » ಇತ್ತೀಚಿನ
Amazon Great Indian Sale 2020: ಡಿಸ್ಕೌಂಟ್‌ನಲ್ಲಿ 'ಒನ್‌ಪ್ಲಸ್‌ 7 ಪ್ರೊ' ಫೋನ್‌ ಖರೀದಿಗೆ ಇಂದೇ ಕಡೆಯ ದಿನ!
Gizbot | 22nd Jan, 2020 12:33 PM
 • ಒನ್‌ಪ್ಲಸ್‌ 7 ಪ್ರೊ

  ಹೌದು, ಇದೇ ಜನೆವರಿ 19ರಿಂದ ಆರಂಭವಾಗಿರುವ 'ಅಮೆಜಾನ್ ಗ್ರೇಟ್‌ ಇಂಡಿಯನ್ ಸೇಲ್' ಮೇಳವು ಇಂದು(ಜ.22) ಮುಕ್ತಾಯವಾಗಲಿದೆ. ಈ ಸೇಲ್‌ನಲ್ಲಿ ಒನ್‌ಪ್ಲಸ್‌ ಸಂಸ್ಥೆಯ ಒನ್‌ಪ್ಲಸ್‌ 7 , ಒನ್‌ಪ್ಲಸ್‌ 7 ಪ್ರೊ, ಒನ್‌ಪ್ಲಸ್‌ 7 ಮತ್ತು ಒನ್‌ಪ್ಲಸ್‌ 7T ಸ್ಮಾರ್ಟ್‌ಫೋನ್‌ಗಳು ಅಧಿಕ ಡಿಸ್ಕೌಂಟ್ ಕಾಣಿಸಿಕೊಂಡಿವೆ. ಹೀಗಾಗಿ ಡಿಸ್ಕೌಂಟ್‌ನಲ್ಲಿ ಒನ್‌ಪ್ಲಸ್‌ 7 ಸರಣಿಯ ಫೋನ್‌ ಖರೀದಿಗೆ ಇಂದೇ ಕಡೆಯ ದಿನವಾಗಿದೆ.


 • ಒನ್‌ಪ್ಲಸ್‌ 7 ಪ್ರೊ

  ಒನ್‌ಪ್ಲಸ್‌ 7 ಪ್ರೊ 6.6 ಇಂಚಿನ HD+ ಡಿಸ್‌ಪ್ಲೇ ಹೊಂದಿದ್ದು, 48ಎಂಪಿ ಕ್ಯಾಮೆರಾ ಜೊತೆಗೆ 4000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿದೆ. ಈ ಫೋನ್ ಅಮೆಜಾನ್ ಇ-ಕಾಮರ್ಸ್‌ ತಾಣದಲ್ಲಿ ಇದೀಗ 10,000ರೂ ಡಿಸ್ಕೌಂಟ್ ಪಡೆದಿದ್ದು, ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ. 6 GB RAM+128GB ವೇರಿಯಂಟ್ ಬೆಲೆಯು 39,999ರೂ. ಆಗಿದೆ. 8 GB RAM+256 GB ವೇರಿಯಂಟ್ ಬೆಲೆಯು 42,999ರೂ. ಪ್ರೈಸ್‌ಟ್ಯಾಗ್ ಪಡೆದಿದೆ.


 • ಒನ್‌ಪ್ಲಸ್‌ 7T

  ಒನ್‌ಪ್ಲಸ್‌ 7T ಸ್ಮಾರ್ಟ್‌ಫೋನ್ 6.5 ಇಂಚಿನ AMOLED ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಪಡೆದಿದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಅಮೆಜಾನ್ ಗ್ರೇಟ್‌ ಇಂಡಿಯನ್ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ಈ ಫೋನ್ ಖರೀದಿಸಬಹುದಾಗಿದೆ. 128GB ಸ್ಟೋರೇಜ್ ವೇರಿಯಂಟ್ 34,999ರೂ.ಗಳಿದೆ ಲಭ್ಯ.ಹಾಗೂ 256GB ಸ್ಟೋರೇಜ್ ವೇರಿಯಂಟ್ 37,999ರೂ.ಗಳಿಗೆ ಲಭ್ಯ.


 • ಒನ್‌ಪ್ಲಸ್ 7

  ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ 6.41 ಇಂಚಿನ ಆಪ್ಟಿಕ್ AMOLED ಕೆಪ್ಯಾಸಿಟಿವ್ ಟಚ್ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್‌ ಕೂಡಾ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಒಳಗೊಂಡಿದೆ. ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಇದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಈ ಫೋನಿಗೂ ಅಮೆಜಾನ್ ಸೇಲ್‌ ಮೇಳದಲ್ಲಿ ಭಾರಿ ಡಿಸ್ಕೌಂಟ್ ನೀಡಲಾಗಿದೆ. ರೆಡ್‌ ಬಣ್ಣದ 8GB+256GB ವೇರಿಯಂಟ್‌ ಫೋನ್ 34,999ರೂ. ಬೆಲೆಗೆ ಲಭ್ಯ ಇದೆ.
ಜನಪ್ರಿಯ ಅಮೆಜಾನ್ ಇ-ಕಾಮರ್ಸ್‌ ತಾಣವು ಆಯೋಜಿಸಿರುವ 'ಗ್ರೇಟ್ ಇಂಡಿಯನ್ ಸೇಲ್' ಮೇಳದಲ್ಲಿ ಇತ್ತೀಚಿಗಿನ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ದೊರೆಯುತ್ತಿವೆ. ಈ ಮೇಳದಲ್ಲಿ ಒನ್‌ಪ್ಲಸ್‌, ಸ್ಯಾಮ್‌ಸಂಗ್, ಆಪಲ್, ಹುವಾವೆ, ಶಿಯೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೂ ರಿಯಾಯಿತಿ ಭಾರಿ ರಿಯಾಯಿತಿ ಲಭ್ಯ ಆಗಿದೆ. ಆದ್ರೆ, ಒನ್‌ಪ್ಲಸ್‌ ಸಂಸ್ಥೆಯ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ನೀಡಿರುವ ಆಫರ್ ನೋಡಿದ್ರೆ, ಕೂಡಲೇ ಫೋನ್ ಖರೀದಿಸಲು ಮುಂದಾಗುತ್ತಿರಿ.

   
 
ಹೆಲ್ತ್