Back
Home » ಆರೋಗ್ಯ
ಹಗಲಿನಲ್ಲಿ ತೂಕಡಿಕೆ, ಆಲಸ್ಯ ಉಂಟಾಗುತ್ತಿದೆಯೇ? ಈ ಕಾರಣಗಳಿರಬಹುದು ನೋಡಿ
Boldsky | 22nd Jan, 2020 10:54 AM
 • ಸರಿಯಾದ ನಿದ್ರೆಯ ವೇಳಾಪಟ್ಟಿ ಇಲ್ಲದಿರುವುದು

  ಹಗಲಿನಲ್ಲಿ ನಿದ್ರೆ ಬಂದಂತೆ ಆಗಲು ಪ್ರಮುಖ ಕಾರಣವೆಂದರೆ ಸರಿಯಾದ ನಿದ್ರೆಯ ವೇಳಾಪಟ್ಟಿ ಇಲ್ಲದೆ ಇರುವುದು. ರಾತ್ರಿ ವೇಳೆ ಕನಿಷ್ಠ 6-7 ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು. ಮಲಗುವ ಮೂರು ಅಥವಾ ನಾಲ್ಕು ಗಂಟೆಗೆ ಮೊದಲು ಚಾ ಅಥವಾ ಕಾಫಿ ಸೇವನೆ ಮಾಡುವುದನ್ನು ಕಡೆಗಣಿಸಬೇಕು. ಇದರಿಂದ ಮರುದಿನ ಬೆಳಗ್ಗೆ ನೀವು ತುಂಬಾ ಉಲ್ಲಾಸಿತರಾಗಿ ಕಂಡುಬರಲಿದ್ದೀರಿ.


 • ಒತ್ತಡ

  ಒತ್ತಡ, ಖಿನ್ನತೆ ಅಥವಾ ಕೋಪವು ನಿದ್ರೆಯ ಮೇಲೆ ಪರಿಣಾಮ ಬೀರುವುದು. ಇದು ನಿಮ್ಮನ್ನು ತುಂಬಾ ಕಳೆಗುಂದಿದಂತೆ ಮತ್ತು ಆಲಸಿಯಂತೆ ಮಾಡುವುದು. ಇದರಿಂದ ದಿನ ಹಾಗೂ ರಾತ್ರಿಯಿಡಿ ನಿದ್ರೆ ಇಲ್ಲದಂತೆ ಆಗಬಹುದು. ಒತ್ತಡದಿಂದ ಆದಷ್ಟು ದೂರವಿದ್ದರೆ ಆಗ ನಿಮಗೆ ನಿದ್ರೆ ಬರುವುದು. ನೀವು ಧನಾತ್ಮಕ ವಿಚಾರಗಳ ಕಡೆ ಗಮನಹರಿಸಿ. ಸಂಬಂಧ ಅಥವಾ ವೃತ್ತಿಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಆಗ ನೀವು ಇದನ್ನು ಬಗೆಹರಿಸಲು ಪ್ರಯತ್ನಿಸಿ. ಇದು ಬಗೆಹರಿಯದೆ ಇದ್ದರೆ ಆಗ ಕುಟುಂಬ ಸದಸ್ಯರು ಅಥವಾ ಸ್ನೇಹಿತರ ಜತೆಗೆ ನೀವು ಇದರ ಬಗ್ಗೆ ಮುಕ್ತವಾಗಿ ಮಾತನಾಡಿ. ವೃತ್ತಿಪರ ಸಲಹೆಗಾರರ ನೆರವು ಪಡೆಯಬಹುದು. ಇದರಿಂದ ಭಾವನಾತ್ಮಕ ಸಮಸ್ಯೆಗಳನ್ನು ತುಂಬಾ ಸರಾಗವಾಗಿ ನಿಭಾಯಿಸಲು ಸಾಧ್ಯವಾಗುವುದು.


 • ಹೊಟ್ಟೆ ತುಂಬ ಊಟ

  ರಾತ್ರಿ ವೇಳೆ ಲಘು ಆಹಾರ ಸೇವಿಸಬೇಕು ಎಂದು ನಮಗೆ ತಿಳಿದಿದ್ದರೂ ಕೆಲವರು ಮಾತ್ರ ಹೊಟ್ಟೆ ಬಿರಿಯುವಂತೆ ತಿನ್ನುವರು. ಇದರಿಂದಾಗಿ ಸರಿಯಾಗಿ ನಿದ್ರೆ ಬರುವುದು ಎನ್ನುವ ಭಾವನೆ ಅವರಲ್ಲಿ ಇರುವುದು. ಆದರೆ ರಾತ್ರಿ ವೇಳೆ ತುಂಬಾ ಲಘುವಾಗಿ ತಿನ್ನಬೇಕು. ಸರಿಯಾದ ಮಾರ್ಗದರ್ಶನಕ್ಕಾಗಿ ಆಹಾರ ತಜ್ಞರ ನೆರವು ಪಡೆಯಿರಿ.


 • ದೇಹದ ಋಣಾತ್ಮಕ ಅಂಶ(ತಮಸ)

  ಕೆಲವು ಜನರಿಗೆ ಜೀವನದ ಬಗ್ಗೆ ಧನಾತ್ಮಕ ಚಿಂತನೆಯೇ ಇರುವುದಿಲ್ಲ. ಇವರು ಯಾವಾಗಲೂ ಆಲಸಿಗಳಾಗಿ ಇರುವರು. ಇಂತಹ ಜನರು ಯೋಗ, ಪ್ರಾರ್ಥನೆ ಮತ್ತು ಜೀವನದಲ್ಲಿ ಧನಾತ್ಮಕತೆ ಉಂಟು ಮಾಡುವಂತಹ ಕೆಲಸಗಳನ್ನು ಮಾಡಬೇಕು.


 • ಅಡಗಿರುವಂತಹ ಕಾಯಿಲೆಗಳು

  ಮಧುಮೇಹದಂತಹ ಕೆಲವೊಂದು ಕಾಯಿಲೆಗಳು ದೇಹವನ್ನು ತುಂಬಾ ದುರ್ಬಲವಾಗಿಸುವುದು ಮತ್ತು ದಿನವಿಡಿ ನಿದ್ರೆಯ ಭಾವನೆ ಉಂಟು ಮಾಡುವುದು. ಇದರಿಂದ ಆಗಾಗ ಆರೋಗ್ಯದ ಪರೀಕ್ಷೆ ಮಾಡಿಕೊಳ್ಳಿ. ಸರಿಯಾದ ಚಿಕಿತ್ಸೆ ಮತ್ತು ಔಷಧಿ ಸೇವಿಸಿ.


 • ದೇಹ ಪ್ರಕೃತಿ

  ಆಯುರ್ವೇದ ಪ್ರಕಾರ ನಮ್ಮ ದೇಹದಲ್ಲಿ ಮೂರು ವಿಧವಿದೆ. ವಾತ, ಪಿತ್ತ ಮತ್ತು ಕಫ. ಇದರಲ್ಲಿ ಕಫ ದೇಹ ಪ್ರಕೃತಿ ಹೊಂದಿರುವವರಿಗೆ ಹೆಚ್ಚಿನ ನಿದ್ರೆ ಬೇಕಾಗುತ್ತದೆ ಎಂದು ಆಯುರ್ವೇದವು ಹೇಳಿದೆ. ನೀವು ಈ ವಿಧದ ದೇಹ ಪ್ರಕೃತಿ ಹೊಂದಿದ್ದರೆ ಆಗ ನೀವು ನಿದ್ರೆಯ ಅವಧಿ ಹೆಚ್ಚಿಸಲು ಪ್ರಯತ್ನಿಸಿ. ಇದರಿಂದ ಮರುದಿನ ನಿಮ್ಮ ದೇಹವು ಉಲ್ಲಾಸಿತವಾಗಿ ಇರುವುದು.


 • ದಿನವಿಡೀ ಉಲ್ಲಾಸದಿಂದ ಇರಲು ಹೀಗೆ ಮಾಡಿ

  ದಿನವಿಡಿ ತುಂಬಾ ಉಲ್ಲಾಸಿತ ಹಾಗೂ ಚಟುವಟಿಕೆಯಿಂದ ಇರಲು ಮತ್ತು ರಾತ್ರಿ ಒಳ್ಳೆಯ ನಿದ್ರೆ ಕೆಲವು ಸಲಹೆಗಳು.

  • ಹಗಲಿನಲ್ಲಿ ತುಂಬಾ ನಿದ್ರೆ ಬರುತ್ತಲಿದ್ದರೆ ಆಗ ನೀವು ಒಂದು ಅರ್ಧ ಗಂಟೆ ಮಲಗಿ. ಆದರೆ ಅತಿಯಾದ ನಿದ್ರೆಯು ಒಳ್ಳೆಯದಲ್ಲ ಎನ್ನುವುದನ್ನು ನೆನಪಿರಲಿ. 15-30 ನಿಮಿಷ ಕಾಲ ನಿಮ್ಮ ನಿದ್ರೆಯು ಇರಲಿ.

  • ಅಜೀರ್ಣದಿಂಧಾಗಿ ತುಂಬಾ ನಿದ್ರೆ ಬರುವಂತೆ ಮತ್ತು ಆಲಸಿತನ ಉಂಟಾಗಬಹುದು. ಇಂತಹ ಪರಿಸ್ಥಿತಿ ತಪ್ಪಿಸಲು ಶುಂಠಿ ಅಥವಾ ಕರಿಮೆಣಸನ್ನು ಸೇವಿಸಿ. ಇದು ಜೀರ್ಣಕ್ರಿಯೆಗೆ ನೆರವಾಗುವುದು. ಹಾಲು ಹಾಕದೆ ಶುಂಠಿ ಚಾ ಕುಡಿದರೆ ಒಳ್ಳೆಯದು.

  • ಸರಿಯಾದ ವ್ಯಾಯಾಮವಿಲ್ಲದೆ ಇರುವುದು ಕೂಡ ಉದಾಸೀನತೆಗೆ ಕಾರಣ ಮತ್ತು ಹಲವಾರು ಅನಾರೋಗ್ಯಗಳು ಕಾಡಬಹುದು. ನಿಯಮಿತವಾಗಿ ಕೆಲವು ಸರಳ ವ್ಯಾಯಾಮ ಮಾಡಿ. ಇದರಿಂದ ದೇಹವು ಎಲ್ಲಾ ಭಾಗಗಳಿಗೆ ಆಮ್ಲಜನಕ ಸಿಗುವುದು. ಇದರಿಂದ ನೀವು ತುಂಬಾ ಉಲ್ಲಾಸಿತರಾಗಿ ಇರಬಹುದು.

  • ನೀವು ವಾಸಿಸುವ ಕೊಠಡಿಗೆ ಸರಿಯಾಗಿ ಗಾಳಿ ಬರುವಂತೆ ನೋಡಿಕೊಳ್ಳಿ. ತಾಜಾ ಗಾಳಿ ಬಂದರೆ ತುಂಬಾ ಒಳ್ಳೆಯದು. ಇದು ಶಕ್ತಿಯನ್ನು ಅದಾಗಿಯೇ ತುಂಬುತ್ತದೆ. ಕೋಣೆಯು ಯಾವಾಗಲೂ ಬೆಳಕಿನಿಂದ ಕೂಡಿರಲಿ. ಕತ್ತಲೆ ಕೋಣೆಯಲ್ಲಿ ದೀರ್ಘಕಾಲ ಇದ್ದರೆ ಆಗ ಮೆಲಟೊನಿನ್ ಹೀರುವಿಕೆ ಉಂಟಾಗುವುದು. ಇದರಿಂದ ನಿದ್ರೆ ಬರುವ ಭಾವನೆ ಬರಬಹುದು.

  • ಕುಳಿತುಕೊಳ್ಳುವ ಭಂಗಿಯು ಸರಿಯಾಗಿ ಇಲ್ಲದೆ ಇದ್ದರೆ ಆಗ ನಿದ್ರೆ ಮತ್ತು ಆಲಸ್ಯವು ಉಂಟಾಗಬಹುದು. ನೇರ ಹಾಗೂ ಎಚ್ಚರದಿಂದ ಇರುವ ಭಂಗಿಯಲ್ಲಿ ಕುಳಿತುಕೊಳ್ಳಿ.

  • ಪ್ರಾಣಾಯಾಮದಂತಹ ಕೆಲವೊಂದು ಉಸಿರಾಟದ ವ್ಯಾಯಾಮ ಮಾಡಿ. ಯೋಗಾಭ್ಯಾಸ ಮಾಡಿ. ಇದರಿಂದ ಶಕ್ತಿ ಬರುವುದು ಮತ್ತು ದೇಹವು ಉಲ್ಲಾಸಿತವಾಗಿರಲು ನೆರವಾಗುವುದು.

  • ದೇಹಕ್ಕೆ ಅನ್ನದಂತಹ ಆಹಾರ ನೀಡಿ ಸರಿಯಾದ ಪೋಷಣೆ ಹಾಗೂ ತೇವಾಂಶ ನೀಡಿ. ಹಣ್ಣುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

  • ಕೊನೆಯದಾಗಿ ಧೂಮಪಾನ ಮತ್ತು ಮದ್ಯಪಾನವನ್ನು ಕಡೆಗಣಿಸಿ.

  ಹಗಲಿನಲ್ಲಿ ಕೂಡ ನಿದ್ರೆ ಬರುವುದು ಮತ್ತು ಆಲಸ್ಯವು ನಿದ್ರಾಹೀನತೆಯಿಂದ ಉಂಟಾಗುವುದಿಲ್ಲವೆಂದು ನೀವು ಈಗಾಗಲೇ ತಿಳಿದುಕೊಂಡಿರುವಿರಿ. ಹೀಗಾಗಿ ನೀವು ಸರಿಯಾದ ಕಾರಣ ತಿಳಿದುಕೊಂಡ ಬಳಿಕ ಈ ಪರಿಸ್ಥಿತಿಯಿಂದ ಮೇಲೆ ಬರಲು ಪರಿಹಾರ ಕಂಡುಕೊಳ್ಳಿ.
ನಿದ್ರೆ ಎನ್ನುವುದು ಮನುಷ್ಯನಿಗೆ ಅತೀ ಅಗತ್ಯ. ಯಾಕೆಂದರೆ ನಿದ್ರೆಯಿಲ್ಲದೆ ಇದ್ದರೆ ಹಲವಾರು ರೀತಿಯ ಅನಾರೋಗ್ಯಗಳು ಕಾಡುವುದು ಇದೆ. ನಿದ್ರಾಹೀನತೆ ಕಂಡುಬಂದರೆ ದೇಹದ ಆರೋಗ್ಯದ ಮೇಲೆ ಇದು ನೇರವಾಗಿ ಪರಿಣಾಮ ಬೀರುವುದು. ಹೀಗಾಗಿ ಪ್ರತಿಯೊಬ್ಬರು ದಿನಕ್ಕೆ 7-8 ಗಂಟೆ ಕಾಲ ನಿದ್ರೆ ಮಾಡಬೇಕು ಎಂದು ವೈದ್ಯಕೀಯವಾಗಿ ಹೇಳಲಾಗುತ್ತದೆ. ನಿದ್ರೆಯ ಕೊರತೆ ಕಂಡುಬಂದರೆ ದಿನದ ಚಟುವಟಿಕೆಗಳ ಮೇಲೆ ಇದು ಪರಿಣಾಮ ಬೀರುವುದು.

ಆದರೆ ಸರಿಯಾಗಿ ನಿದ್ರೆ ಮಾಡಿದರೂ ಕೆಲವರಿಗೆ ಮರುದಿನ ಬೆಳಗ್ಗೆ ಎದ್ದೇಳಲು ಆಗಲ್ಲ ಮತ್ತು ದಿನಿವಿಡಿ ನಿಶ್ಯಕ್ತಿ, ಬಳಲಿಕೆ, ದಿನವಿಡಿ ನಿದ್ರೆ ಬಂದಂತೆ ಆಗುವುದು. ಇದಕ್ಕೆ ಕಾರಣಗಳು ಏನು ಎಂದು ಆಯುರ್ವೇದವು ಹೇಳಿದೆ. ಈ ಸಮಸ್ಯೆ ಬಗೆಹರಿಸದೆ ಇದ್ದರೆ ಆಗ ಅದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು.

ಇಂತಹ ಸಮಸ್ಯೆಗಳು ಇರುವವರು ತಕ್ಷಣವೇ ಇದರ ಬಗ್ಗೆ ಗಮನಹರಿಸಬೇಕು ಮತ್ತು ನಿಶ್ಯಕ್ತಿಯು ಇನ್ನೂ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಇವುಗಳೆಂದರೆ ತಲೆನೋವು, ದೇಹವಿಡಿ ನೋವು, ರಾತ್ರಿಯಿಡಿ ನಿದ್ರೆಯ ಕೊರತೆ, ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು, ಉದ್ಯೋಗ ಅಥವಾ ಶಿಕ್ಷಣದ ಕಡೆ ಏಕಾಗ್ರತೆ ವಹಿಸಲು ಸಾಧ್ಯವಾಗದೆ ಇರುವುದು, ಒತ್ತಡ ಅಥವಾ ಖಿನ್ನತೆ, ದೈನಂದಿನ ಚಟುವಟಿಕೆ ನಿಭಾಯಿಸಲು ಕಷ್ಟಪಡುವುದು, ಅಜೀರ್ಣ ಮತ್ತು ಬೇಸರ.

ನಿದ್ರಾ ಹೀನತೆಗೆ ಆಯುರ್ವೇದದಲ್ಲಿ ಪರಿಹಾರ

ಕೆಲವರನ್ನು ನೀವು ನೋಡಿದರೆ ಅವರು ರಾತ್ರಿಯಿಡಿ ನಿದ್ರೆ ಕೆಟ್ಟಂತೆ ಕಂಡು ಬರುವರು. ಆದರೆ ಅವರು ರಾತ್ರಿ ಸರಿಯಾಗಿ ನಿದ್ರೆ ಮಾಡಿದರೂ ಮರುದಿನವೂ ನಿದ್ರೆಯ ಗುಂಗಿನಲ್ಲೇ ಇರುವರು. ಇದಕ್ಕೆ ದೈಹಿಕ ಬದಲಾವಣೆ ಅಥವಾ ಮಾನಸಿಕ ಒತ್ತಡ ಕಾರಣ ಎಂದು ಆಯುರ್ವೇದವು ಹೇಳಿದೆ. ಆಯುರ್ವೇದವು ಇದಕ್ಕೆ ಒಂದು ಪರಿಹಾರವನ್ನು ಕೂಡ ಹೇಳಿದ್ದು, ಅದು ಇದರ ಲಕ್ಷಣದಲ್ಲೇ ಇದೆ.

ದಿನವಿಡಿ ನಿದ್ರೆ ಬಂದಂತೆ ಆಗುವ ಮತ್ತು ಆಲಸ್ಯದಿಂದ ಇರುವ ಬಗ್ಗೆ ಕಾರಣಗಳನ್ನು ತಿಳಿದುಕೊಳ್ಳುವ ಮತ್ತು ಇದಕ್ಕೆ ಪರಿಹಾರ ಏನು ಎಂದು ತಿಳಿಯುವ:
   
 
ಹೆಲ್ತ್