Back
Home » ಇತ್ತೀಚಿನ
Fastag Fraud: ಫಾಸ್ಟ್‌ಟ್ಯಾಗ್ ವಾಲೆಟ್ ಸರಿಮಾಡ್ತಿವಿ ಅಂತಾ ಹಣ ಪೀಕಿದ ವಂಚಕರು!
Gizbot | 22nd Jan, 2020 12:27 PM
 • ಫಾಸ್ಟ್‌ಟ್ಯಾಗ್ ರಿಜಿಸ್ಟರ್

  ಹೌದು, ಫಾಸ್ಟ್‌ಟ್ಯಾಗ್ ರಿಜಿಸ್ಟರ್ ಮಾಡಿಸುವ ಬಗ್ಗೆ, ಫಾಸ್ಟ್‌ಟ್ಯಾಗ್ ವಾಲೆಟ್‌ ಬಗ್ಗೆ ಇನ್ನು ಬಹುತೇಕ ವಾಹನ ಮಾಲೀಕರಿಗೆ ಸರಿಯಾದ ಮಾಹಿತಿ ಇಲ್ಲ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಆನ್‌ಲೈನ್ ವಂಚಕರು ಫಾಸ್ಟ್‌ಟ್ಯಾಗ್/ಬ್ಯಾಂಕ್‌ ಕಸ್ಟಮರ್ ಕೇರ್ ಹೆಸರಿನಲ್ಲಿ ವಂಚನೆಗೆ ಇಳಿದಿದ್ದಾರೆ. ಹೀಗೆ ಕಸ್ಟಮರ್ ಕೇರ್ ಹೆಸರಿನಲ್ಲಿ ಇತ್ತೀಚಿಗೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 50,000ರೂ ಪೀಕಿದ್ದಾರೆ.


 • ಆನ್‌ಲೈನ್ ವಂಚಕ

  ಫಾಸ್ಟ್‌ಟ್ಯಾಗ್ ಹೆಸರಿನಲ್ಲಿ ಆನ್‌ಲೈನ್ ವಂಚಕರು ಇತ್ತೀಚಿಗೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 50,000ರೂ ಕಬಳಿಸಿರುವ ಘಟನೆ ಟೈಮ್ಸ್‌ ಆಫ್ ಇಂಡಿಯಾದಲ್ಲಿ ವರದಿಯಾಗಿದೆ. ಆ ವ್ಯಕ್ತಿಯು ತನ್ನ ಫಾಸ್ಟ್‌ಟ್ಯಾಗ್ ವಾಲೆಟ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕಸ್ಟಮರ್ ಕೇರ್‌ನಲ್ಲಿ ದೂರು ದಾಖಲಿಸಿದ್ದಾರೆ. ಆ ನಂತರ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಅವರಿಗೊಂದು ಕರೆ ಬರುತ್ತದೆ. ಆದರೆ ಅಸಲಿಗೆ ಅದು ಬ್ಯಾಂಕ್‌ನ ಕಸ್ಟಮರ್‌ ಕೇರ್ ಕರೆ ಆಗಿರುವುದಿಲ್ಲ.


 • ಫಾಸ್ಟ್‌ಟ್ಯಾಗ್ ವಾಲೆಟ್

  ಫಾಸ್ಟ್‌ಟ್ಯಾಗ್ ವಾಲೆಟ್ ಸರಿಪಡಿಸಲು ಆನ್‌ಲೈನ್ ಫಾರ್ಮ್ ಕಳುಹಿಸುತ್ತೆವೆ ಅದನ್ನು ತುಂಬಿ ಎಂದು ವಂಚಕರು ಹೇಳುತ್ತಾರೆ. ಅವರ ಮಾತಿನಂತೆ ಈ ವ್ಯಕ್ತಿ ಆ ಫಾರ್ಮ್‌ನಲ್ಲಿ ಬ್ಯಾಂಕ್ ಮಾಹಿತಿ ಹಾಗೂ UPI PIN ಮಾಹಿತಿಯನ್ನು ಪಡೆಯುತ್ತಾರೆ. ಆ ನಂತರ ಎಸ್‌ಎಮ್‌ಎಸ್‌ ಮೂಲಕ ಹೆಸರು, ಬ್ಯಾಂಕ್ ರಿಜಿಸ್ಟರ್ ಮೊಬೈಲ್ ನಂಬರ್ ಹಾಗೂ ಪಿನ್ ಮಾಹಿತಿ ಎಲ್ಲವನ್ನು ಪಡೆದಿದ್ದಾರೆ. ನಂತರ ಒಂದು OTP ಬರುತ್ತದೆ ಅದನ್ನು ಹೇಳಿ ಎಂದಿದ್ದಾರೆ.


 • OTP ಹೇಳಿದ

  OTP ಹೇಳಿದ ಕೆಲವೇ ಕ್ಷಣಗಳ ಬಳಿಕ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 50,000 ಡೆಬಿಟ್ ಆಗಿರುವ ಮಾಹಿತಿ ತಿಳಿಯುತ್ತದೆ. ಫಾಸ್ಟ್‌ಟ್ಯಾಗ್ ಮಾಡಿಸಲು ಬ್ಯಾಂಕ್‌ ಖಾತೆಯ ಪಾಸ್‌ವರ್ಡ್ ಅಥವಾ UPI ಪಿನ್ ಅಗತ್ಯ ಇರುವುದಿಲ್ಲ. ಯಾರಿಗೂ ನಿಮ್ಮ ಬ್ಯಾಂಕ್‌ ಎಟಿಎಮ್‌ ಪಾಸ್‌ವರ್ಡ್ ಅಥವಾ ಯುಪಿಐ ಪಿನ್ ಮಾಹಿತಿ ಹಂಚಿಕೊಳ್ಳಬೇಡಿ.
ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ಗಳಲ್ಲಿ ಕ್ಯಾಶ್‌ಲೆಸ್‌ ಸುಂಕ ಭರಿಸಲು ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಿದ್ದು, ದೇಶದಾದ್ಯಂತ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಇದೀಗ ಜಾರಿಯಲ್ಲಿದೆ. ಆದ್ರೆ ಇನ್ನು ಬಹುತೇಕರು ಫಾಸ್ಟ್‌ಟ್ಯಾಗ್ ಮಾಡಿಸಿಯೇ ಇಲ್ಲ. ಫಾಸ್ಟ್‌ಟ್ಯಾಗ್ ರಿಜಿಸ್ಟರ್ ಮಾಡಿಸುವ ಮುನ್ನ ಇರಲಿ ಎಚ್ಚರ. ಏಕೆಂದರೇ ಆನ್‌ಲೈನ್ ವಂಚಕರು ಫಾಸ್ಟ್‌ಟ್ಯಾಗ್ ವ್ಯವಸ್ಥೆಯಲ್ಲಿ ಜನರಿಗೆ ಮೋಸ ಮಾಡಲು ಹೊಸ ವಂಚನೆಯ ರಹದಾರಿಯನ್ನು ಕಂಡುಕೊಂಡಿದ್ದಾರೆ.

   
 
ಹೆಲ್ತ್