Back
Home » ಇತ್ತೀಚಿನ
ISRO NavIC: ಲಕ್ಷಾಂತರ ಸ್ಮಾರ್ಟ್‌ಫೋನ್‌ಗಳಲ್ಲಿ ಸೇರಲಿದೆ ಇಸ್ರೋದ 'ದೇಶಿ' ಟೆಕ್ನಾಲಜಿ!
Gizbot | 22nd Jan, 2020 06:03 PM
 • ಕ್ವಾಲ್ಕಮ್ ಚಿಪ್‌ಸೆಟ್

  ಹೌದು, ಕ್ವಾಲ್ಕಮ್ ಚಿಪ್‌ಸೆಟ್ ಆಧಾರಿತ ಮುಂಬರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಇಸ್ರೋ ಸಂಸ್ಥೆಯು ನ್ಯಾವಿಕ್ ನ್ಯಾವಿಗೇಶ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿವೆ. ನ್ಯಾವಿಕ್ ತಂತ್ರಜ್ಞಾನವು ಪ್ರಸ್ತುತ ಬಳಕೆಯಲ್ಲಿರುವ ಜಿಪಿಎಸ್‌ಗೆ (GPS-Global Positioning System) ಪರ್ಯಾಯ ಆಯ್ಕೆ ಆಗಿರಲಿದೆ. ಈ ತಂತ್ರಜ್ಞಾನವು ನಿಖರ ನ್ಯಾವಿಗೇಶನ್ ಮಾಹಿತಿ ಒದಗಿಸುವ ಸೌಲಭ್ಯಗಳನ್ನು ಪಡೆದಿದೆ.


 • ಏನಿದು ನ್ಯಾವಿಕ್‌ NavIC ಟೆಕ್ನಾಲಜಿ?

  ನ್ಯಾವಿಕ್-NavIC ದೇಶಿ ನ್ಯಾವಿಗೇಶನ್ ತಂತ್ರಜ್ಞಾನವಾಗಿದ್ದು, ಇದನ್ನು ಇಸ್ರೋ ಸಂಸ್ಥೆಯು ಅಭಿವೃದ್ಧಿ ಪಡೆಸಿದೆ. ಸದ್ಯ ಬಳಕೆಯಲ್ಲಿರುವ ಜಿಪಿಎಸ್‌ ಟೆಕ್ನಾಲಜಿಯಂತೆ ಈ ನ್ಯಾವಿಕ್ ತಂತ್ರಜ್ಞಾನವು ಕಾರ್ಯನಿರ್ವಹಿಸಲಿದೆ. ನಿಖರವಾಗಿ ರಿಯಲ್‌ಟೈಮ್ ಹಾಗೂ ಟೈಮಿಂಗ್ ಬಗ್ಗೆ ಮಾಹಿತಿ ಒದಗಿಸಲಿದೆ. ಇದೀಗ ಈ ತಂತ್ರಜ್ಞಾನವನ್ನು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ಅಳವಡಿಕೆಯಕೆ ಮಾಡಲಾಗುತ್ತಿದೆ.


 • ಶಿಯೋಮಿ ಫೋನಗಳಲ್ಲಿಯೂ ಈ ಟೆಕ್ನಾಲಜಿ

  ಜನಪ್ರಿಯ ಶಿಯೋಮಿ ಮತ್ತು ರಿಯಲ್‌ ಮಿ ಕಂಪನಿಗಳು ನ್ಯಾವಿಕ್ ನ್ಯಾವಿಗೇಶನ್ ತಂತ್ರಜ್ಞಾನವನ್ನು ವ್ಯವಸ್ಥೆಯನ್ನು ಮೊದಲು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಈ ಎರಡು ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಮ್ ಚಿಪ್‌ಸೆಟ್‌ ಸಾಮರ್ಥ್ಯವನ್ನು ಪಡೆದಿವೆ. ಮುಂಬರುವ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಅಧಿಕ ಸಾಮರ್ಥ್ಯದ ಕ್ವಾಲ್ಕಮ್ ಚಿಪ್‌ಸೆಟ್‌ ಅಳವಡಿಸುವ ಸಾಧ್ಯತೆಗಳು ಹೆಚ್ಚಿವೆ.


 • ಕ್ವಾಲ್ಕಮ್ ಪ್ರಯತ್ನ ತೃಪ್ತಿ ತಂದಿದೆ

  ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ನ್ಯಾವಿಕ್ ನ್ಯಾವಿಗೇಶ್ ತಂತ್ರಜ್ಞಾನವನ್ನು ಸಂಯೋಜಿಸಲಿರುವ ಕ್ವಾಲ್ಕಾಮ್ ಟೆಕ್ನಾಲಜೀಸ್ ಪ್ರಯತ್ನವು ಇಸ್ರೋಗೆ ತೃಪ್ತಿ ತಂದಿದೆ. ಮತ್ತು ಭಾರತದಲ್ಲಿ ಭವಿಷ್ಯದ ಹ್ಯಾಂಡ್ಸೆಟ್ ಉಡಾವಣೆಗಳಿಗಾಗಿ ಅದನ್ನು ಹತೋಟಿಗೆ ತರಲು ನಾವು (OEMs ) ಒಇಎಂಗಳನ್ನು ಒತ್ತಾಯಿಸುತ್ತೇವೆ" ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದ್ದಾರೆ.


 • ಜಿಪಿಎಸ್‌ ಬಳಕೆ ಕಡಿಮೆ ಆಗಲಿದೆ

  ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ನ್ಯಾವಿಕ್ ನ್ಯಾವಿಗೇಶ್ ತಂತ್ರಜ್ಞಾನವನ್ನು ಅಳವಡಿಕೆಯ ನಂತರ ಅಮೆರಿಕಾದ ಜಿಪಿಎಸ್‌ ಟೆಕ್ನಾಲಜಿ ಬಳಕೆ ಕಡಿಮೆ ಆಗಲಿದ ಎನ್ನಲಾಗಿದೆ. ನ್ಯಾವಿಕ್ ಅತ್ಯುತ್ತಮ ಮತ್ತು ನಿಖರ ಮ್ಯಾಪಿಂಗ್ ಸೌಲಭ್ಯಗಳನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಲೊಕೇಶನ್ ಆಯ್ಕೆಯಲ್ಲಿ ಈ ನ್ಯಾವಿಕ ಬಳಕೆ ಹೆಚ್ಚಾಗಲಿದೆ.


 • ಏಲ್ಲೆಲ್ಲಿ ಬಳಕೆ ಸಾಧ್ಯತೆ

  ಈ ತಂತ್ರಜ್ಞಾನವನ್ನು ವೇಹಿಕಲ್ ಟ್ರಾಕಿಂಗ್ ಮತ್ತು ಫ್ಲೀಟ್ ನಿರ್ವಹಣೆ, ನಿಖರವಾದ ಸಮಯ, ಪಾದಯಾತ್ರಿಕರಿಗೆ ಮತ್ತು ಪ್ರಯಾಣಿಕರಿಗೆ ಭೂಮಿಯ ನ್ಯಾವಿಗೇಷನ್ ಸಹಾಯಕವಾಗಿ ಬಳಕೆ ಆಗಲಿದೆ. ಚಾಲಕರಿಗೆ ದೃಶ್ಯ ಮತ್ತು ಧ್ವನಿ ನ್ಯಾವಿಗೇಶನ್ ಆಗಿ ಸಹಾಯಕವಾಗಲಿದೆ. ಇನ್ನು ವೈಮಾನಿಕ ಮತ್ತು ಸಮುದ್ರದ/ಜಲಮಾರ್ಗದ ನ್ಯಾವಿಗೇಶನ್ ಆಗಿಯೂ ಸಹ ಸಹಾಯಕವಾಗಲಿದೆ.
ಸದ್ಯದಲ್ಲಿಯೇ ಭಾರತದ ಲಕ್ಷಾಂತರ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಇಸ್ರೋದ ನ್ಯಾವಿಕ್-NavIC ಟೆಕ್ನಾಲಜಿ ಸೇರಿಕೊಳ್ಳಲಿದೆ. ಇಸ್ರೋದ NavIC ಟೆಕ್ನಾಲಜಿ, ಜಿಪಿಎಸ್‌ ನ್ಯಾವಿಗೇಶನ್‌ಗೆ ಪರ್ಯಾಯವಾಗಿದ್ದು, ವಿಶ್ವದ ಅತೀ ದೊಡ್ಡ ಚಿಪ್‌ಸೆಟ್ ತಯಾರಿಕಾ ಸಂಸ್ಥೆಯಾಗಿರುವ ಕ್ವಾಲ್ಕಮ್, ಇದೀಗ ಈ ಹೊಸ ನ್ಯಾವಿಗೇಶನ್ ಟೆಕ್ನಾಲಜಿ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ.

   
 
ಹೆಲ್ತ್