Back
Home » ಇತ್ತೀಚಿನ
ಟಾಟಾಸ್ಕೈ DTH ಬೆಲೆ ಇಳಿಕೆ: ಅತೀ ಕಡಿಮೆ ಬೆಲೆಗೆ HD ಸೆಟ್‌ಅಪ್‌ ಬಾಕ್ಸ್‌ ಲಭ್ಯ!
Gizbot | 24th Jan, 2020 10:47 AM
 • ಟಾಟಾಸ್ಕೈ ಸಂಸ್ಥೆ

  ಹೌದು, ಟಾಟಾಸ್ಕೈ ಸಂಸ್ಥೆಯು ಪ್ರಸ್ತುತ ಎಸ್‌ಡಿ ಸೆಟ್‌ಅಪ್‌ ಬಾಕ್ಸ್‌ ಮತ್ತು ಹೆಚ್‌ಡಿ ಸೆಟ್‌ಅಪ್ ಬಾಕ್ಸ್ ಎರಡು ಮಾದರಿಗಳನ್ನು ಹೊಂದಿದೆ. ಈಗ ಈ ಎರಡು ಮಾದರಿಯ DTH ಸೆಟ್‌ಅಪ್‌ಗಳ ಬೆಲೆಯಲ್ಲಿ ಭರ್ಜರಿ ಬೆಲೆ ಇಳಿಕೆ ಮಾಡಿದೆ. ಗ್ರಾಹಕರು ಸ್ಪೆಷಲ್ ಆಫರ್‌ ಕೊಡುಗೆಯಲ್ಲಿ ಎಸ್‌ಡಿ ಸೆಟ್‌ಅಪ್‌ ಅಥವಾ ಹೆಚ್‌ಡಿ ಡಿಟಿಎಚ್‌ ಸೆಟ್‌ಅಪ್‌ ಬಾಕ್ಸ್‌ ಅನ್ನು ಕೇವಲ 1399ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.


 • ಸೆಟ್‌ಟಾಪ್‌ ಬಾಕ್ಸ್ ಬೆಲೆ 1,399ರೂ

  ಈಗಾಗಲೇ ನಾಲ್ಕೈದು ಬಾರಿ ಬೆಲೆ ಇಳಿಕೆ ಕಂಡಿರುವ ಟಾಟಾಸ್ಕೈ ಸೆಟ್‌ಅಪ್‌ ಬಾಕ್ಸ್‌ ಈಗ ಮತ್ತೆ ಬೆಲೆ ಕಡಿತ ಆಗಿವೆ. ಎಸ್‌ಡಿ ಸೆಟ್‌ಅಪ್‌ ಬಾಕ್ಸ್‌ ಮತ್ತು ಹೆಚ್‌ಡಿ ಸೆಟ್‌ಅಪ್ ಬಾಕ್ಸ್ ಬೆಲೆಯು ಇದೀಗ 1,399ರೂ. ಆಗಿದೆ. ಸಂಸ್ಥೆಯು ಈ ಸ್ಪೆಷಲ್ ಆಫರ್ ಕೊಡುಗೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಈ ಮೊದಲು ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ನ ಆರಂಭಿಕ ಬೆಲೆಯು 1,499ರೂ.ಗಳಾತ್ತು.


 • ಹೆಡ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಉತ್ತಮ

  ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್ ಡಿವಿಡಿ ಕ್ವಾಲಿಟಿಯ ವಿಡಿಯೊ ಗುಣಮಟ್ಟ ಪಡೆದಿರುತ್ತದೆ. ಆಡಿಯೊ ಗುಣಮಟ್ಟವು ಸಿಡಿ ಕ್ವಾಲಿಟಿಯಲ್ಲಿರುತ್ತದೆ. ಹಾಗೆಯೇ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ 1080i ವಿಡಿಯೊ ಕ್ವಾಲಿಟಿ ಹೊಂದಿರುವುದರೊಂದಿಗೆ, 16:9 ಅನುಪಾತ ರಚನೆ ಇರುತ್ತದೆ. ಜೊತೆಗೆ ಡಾಲ್ಬಿ ಸರೌಂಡ್‌ ಸೌಂಡ್‌ ಸೌಲಭ್ಯವನ್ನು ಹೊಂದಿರುತ್ತದೆ. ಹೊಸ ಮಾದರಿಯ ಸ್ಮಾರ್ಟ್‌ಟಿವಿ ಇದ್ದರೇ ಹೆಚ್‌ಡಿ ಸೆಟ್‌ಟಾಪ್‌ ಆಯ್ಕೆಯೇ ಉತ್ತಮ.


 • ಕನ್ನಡ ಭಾಷೆಯ ಚಾನೆಲ್ಸ್‌ಗಳು

  ಕನ್ನಡ ಭಾಷೆಯ ಚಾನೆಲ್ಸ್‌ಗಳು ಮತ್ತು FTA ಚಾನೆಲ್ಸ್‌ಗಳ ಗುಚ್ಛದ ಕನ್ನಡ ಸ್ಮಾರ್ಟ್‌ ಪ್ಲ್ಯಾನ್‌ ಬೆಲೆಯು 249ರೂ.ಗಳಾಗಿದ್ದು, ಅದೇ ರೀತಿ ತೆಲಗು ಚಾನೆಲ್ಸ್‌ಗಳನ್ನು ಒಳಗೊಂಡಿರುವ ತೆಲಗು ಸ್ಮಾರ್ಟ್‌ ಪ್ಲ್ಯಾನ್‌ ಬೆಲೆಯು ಸಹ 249ರೂ.ಗಳೆಂದು ನಿಗದಿ ಮಾಡಲಾಗಿದೆ. ಗುಜರಾತಿ ಸ್ಮಾರ್ಟ್‌ ಪ್ಲ್ಯಾನ್‌ ಸಹ 249ರೂ ಆಗಿದೆ. ತಮಿಳ ಸ್ಮಾರ್ಟ್‌ ಪ್ಲ್ಯಾನ್‌ ದರವು 249ರೂ. ಆಗಿದ್ದು, ಈ ಪ್ಲ್ಯಾನಿನಲ್ಲಿ ತಮಿಳ ಪ್ರಾದೇಶಿಕ ಚಾನೆಲ್‌ಗಳು ಲಭ್ಯವಾಗಲಿವೆ.


 • ಹಿಂದಿ ಸ್ಮಾರ್ಟ್ ಪ್ಲ್ಯಾನ್‌ ದರ

  ಹಿಂದಿ ಪ್ರಾದೇಶಿಕ ಚಾನೆಲ್ಸ್‌ಗಳನ್ನೊಳಗೊಂಡ 'ಹಿಂದಿ ಸ್ಮಾರ್ಟ್ ಪ್ಲ್ಯಾನ್‌' 249ರೂ. ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಹಾಗೆಯೇ ಪಂಜಾಬಿ ಪ್ರಾದೇಶಿಕ ಚಾನೆಲ್ಸ್‌ಗಳನ್ನೊಳಗೊಂಡ 'ಪಂಜಾಬಿ ಸ್ಮಾರ್ಟ್ ಪ್ಲ್ಯಾನ್‌' ಸಹ 249ರೂ. ಬೆಲೆಯನ್ನು ಹೊಂದಿದೆ. ಇನ್ನು ಬಂಗಾಳಿ ಭಾಷೆಯ ಚಾನೆಲ್ಸ್‌ಗಳನ್ನು ಹೊಂದಿರುವ ಬಂಗಾಳಿ ಸ್ಮಾರ್ಟ್‌ ಪ್ಲ್ಯಾನ್ 220ರೂ.ಗಳಾಗಿದ್ದು, ಇವುಗಳೊಂದಿಗೆ FTA ಚಾನೆಲ್ಸ್ಗಳು ಸೇರಿಸಲಿವೆ.


 • ಸ್ಮಾರ್ಟ್‌ ಪ್ಲ್ಯಾನ್

  ಇನ್ನು ಓಡಿಸಾ ಸ್ಮಾರ್ಟ್‌ ಪ್ಲ್ಯಾನ್ ಬೆಲೆಯು 211ರೂ.ಗಳಾಗಿದ್ದು, ಮರಾಠಿ ಸ್ಮಾರ್ಟ್‌ ಪ್ಲ್ಯಾನ್‌ ಶುಲ್ಕವು 206ರೂ.ಗಳಾಗಿದೆ. ಹಾಗೆಯೇ ಮಲಿಯಾಳಂ ಸ್ಮಾರ್ಟ್‌ ಪ್ಲ್ಯಾನ್‌ ಬೆಲೆಯು ಸಹ 249ರೂ.ಗಳಾಗಿದೆ. ಈ ಎಲ್ಲ ಹೊಸ ಸ್ಮಾರ್ಟ್‌ ಪ್ಲ್ಯಾನ್‌ಗಳು DRP ಮತ್ತು NCF ಶುಲ್ಕವನ್ನು ಒಳಗೊಂಡಿರುತ್ತವೆ. ಗ್ರಾಹಕರು ಈ ಪ್ಲ್ಯಾನ್‌ಗಳ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಆಡ್‌ ಆನ್ ಚಾನೆಲ್ಸ್‌ಗಳ ಆಯ್ಕೆಯು ಗ್ರಾಹಕರಿಗೆ ಲಭ್ಯ ಇರಲಿದೆ. ಹೆಚ್ಚುವರಿಯಾಗಿ ಚಾನೆಲ್ಸ್‌ಗಳಿಗೆ ಸಬ್‌ಸ್ಕ್ರೈಬ್ ಆಗಬಹುದಾಗಿದೆ.
ಪ್ರತಿಷ್ಠಿತ ಟಾಟಾಸ್ಕೈ ಕಂಪನಿಯು ಡಿಟಿಎಚ್ ಸೆಟ್‌ಅಪ್‌ ಬಾಕ್ಸ್ ವಲಯದಲ್ಲಿ ಸದ್ಯ ಭಾರಿ ಮುಂಚೂಚಿಯಲ್ಲಿ ಕಾಣಿಸಿಕೊಂಡಿದೆ. ಸಂಸ್ಥೆಯು ಇತ್ತೀಚಿಗೆ ತನ್ನ ಡಿಟಿಎಚ್ ಸೆಟ್‌ಅಪ್ ಬಾಕ್ಸ್‌ ದರದಲ್ಲಿ ಇಳಿಕೆ ಮಾಡಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡಿತ್ತು. ಆದ್ರೆ ಇದೀಗ ಮತ್ತೆ ಸೆಟ್‌ಅಪ್ ಬಾಕ್ಸ್ ಬೆಲೆಯಲ್ಲಿ ಕಡಿತ ಘೋಷಿಸಿದ್ದು, ಇತರೆ ಕಂಪನಿಗಳ ಡಿಟಿಎಚ್‌ ಸೆಟ್‌ಅಪ್‌ ಬಾಕ್ಸ್‌ಗಳಿಗಿಂತ ಕಡಿಮೆ ಕಡಿಮೆ ಬೆಲೆಗೆ ಟಾಟಾಸ್ಕೈ ಸೆಟ್‌ಅಪ್ ಬಾಕ್ಸ್‌ ಲಭ್ಯವಾಗಲಿದೆ.

   
 
ಹೆಲ್ತ್