Back
Home » ಇತ್ತೀಚಿನ
Fujifilm XT-200: ಫ್ಯೂಜಿಫಿಲಂನಿಂದ XT-200 ಮಿರರ್‌ಲೆಸ್‌ ಕ್ಯಾಮೆರಾ ಲಾಂಚ್‌!
Gizbot | 24th Jan, 2020 02:27 PM
 • ಹೌದು

  ಹೌದು, ಕ್ಯಾಮೆರಾ ಪ್ರಪಂಚದಲ್ಲಿ ತನ್ನದೇ ಆದ ವಿಭಿನ್ನ ಫೀಚರ್ಸ್‌ಗಳಿಂದ ಸೈ ಎನಿಸಿಕೊಂಡಿರುವ ಫ್ಯೂಜಿಫಿಲ್ಮ್‌ ಕಂಪೆನಿ ತನ್ನ ಹೊಸ ಆವೃತ್ತಿಯ ಫ್ಯೂಜಿಫಿಲ್ಮ್ XT200 ಮಿರರ್‌ಲೆಸ್‌ ಕ್ಯಾಮೆರಾವನ್ನ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದು XT-100 ಮಿರರ್‌ಲೆಸ್ ಕ್ಯಾಮೆರಾ ಸರಣಿಯ ಮುಂದುವರಿದ ಆವೃತ್ತಿಯಾಗಿದ್ದು, ಮಾರುಕಟ್ಟೆಯಲ್ಲಿ ಸೌಂಡ್‌ ಮಾಡೋ ಸೂಚನೆ ನೀಡಿದೆ. ಇನ್ನು ಮಿರರ್‌ಲೆಸ್ ಕ್ಯಾಮೆರಾಗಳಲ್ಲಿ ಹೊಸತನ ನೀಡುವ ಫ್ಯೂಜಿಫಿಲ್ಮ್ ಕಂಪೆನಿಯ ಈ ಹೊಸ ಕ್ಯಾಮೆರಾ ಕೇವಲ 370 ಗ್ರಾಂ ತೂಕವನ್ನ ಹೊಂದಿದೆ.


 • ಈ ಕ್ಯಾಮೆರಾದಲ್ಲಿ ಹೊಸತೇನಿದೆ.

  ಹೌದು ಫ್ಯೂಜಿಫಿಲ್ಮ್‌ XT-200 ಮಿರರ್‌ಲೆಸ್‌ ಡಿಜಿಟಲ್‌ ಕ್ಯಾಮೆರಾ ಈ ಹಿಂದೆ ಬಿಡುಗಡೆ ಮಾಡಿದ್ದ XT100 ಮಿರರ್‌ ಲೆಸ್‌ ಕ್ಯಾಮೆರಾದ ಆಪ್‌ಡೇಟ್‌ ಆವೃತ್ತಿಯಾಗಿದ್ದು, ಈ ಕ್ಯಾಮೆರಾದಲ್ಲಿ ಹೊಸ ಸೆನ್ಸಾರ್‌ಗಳನ್ನ ಅಳವಡಿಸಲಾಗಿದ್ದು, ಕ್ಯಾಮೆರಾವನ್ನು ಅಪ್‌ಗ್ರೇಡ್ ಆಗಿ ಪಿಚ್ ಮಾಡಲಾಗಿದೆ. ಅಲ್ಲದೆ ಈ ಕ್ಯಾಮೆರಾದಲ್ಲಿ ಒಂದೇ ರೆಸಲ್ಯೂಶನ್‌ನಲ್ಲಿ 24.2-ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನ ಅಳವಡಿಸಲಾಗಿದೆ. ಜೊತೆಗೆ ಸೆನ್ಸಾರ್‌ನಲ್ಲಿಯೇ ಪೇಸ್‌ ಡಿಟೆಕ್ಷನ್‌ ಆಟೋಫೋಕಸ್ ಪಾಯಿಂಟ್‌ಗಳನ್ನು ನೀಡಿರೊದ್ರಿಂದ ವೇಗವಾಗಿ ಆಟೋಫೋಕಸ್ ಮಾಡಲು ಅವಕಾಶ ನೀಡಲಾಗಿದೆ.


 • ಕ್ಯಾಮೆರಾ ವಿನ್ಯಾಸ ಹೇಗಿದೆ.?

  ಇನ್ನು ಫ್ಯೂಜಿಫಿಲ್ಮ್ XT -200 24.2 APS-C ಪ್ರೊಸೆಸರ್ ಹೊಂದಿದ್ದು, ಮೂರೂವರೆ ಪಟ್ಟು ವೇಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಫುಲ್‌ ರೆಸಲ್ಯೂಶನ್‌ನಲ್ಲಿ ಪಪ್ರೈಮ್‌ ಟು ಸೆಕೆಂಡ್‌ 8 ಪ್ರೈಮ್‌ ಬರ್ಸ್ಟ್ ಶೂಟಿಂಗ್ ಮಾಡಬಹುದಾಗಿದೆ. ಇದಲ್ಲದೆ ಈ ಕ್ಯಾಮೆರಾವ 3.5-ಇಂಚಿನ ವೇರಿ-ಆಂಗಲ್ ಟಚ್‌ಸ್ಕ್ರೀನ್, ಆಟೋಫೋಕಸ್, ಮತ್ತು 4ಕೆ ವಿಡಿಯೋ ಶೂಟಿಂಗ್ ಹೊಂದಿದ್ದು 30fps ಗರಿಷ್ಟ ವೇಗದಲ್ಲಿ ಶೂಟ್‌ ಮಾಡಲಿದೆ.


 • ಕಾರ್ಯವೈಖರಿ ಹೇಗೆ

  ಫ್ಯೂಜಿಫಿಲ್ಮ್ ಎಕ್ಸ್‌ಟಿ -200 ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ 4 ಕೆ ವಿಡಿಯೋ ರೆಕಾರ್ಡಿಂಗ್ ಮಾಡುವ ಸಾಮರ್ಥ್ಯವನ್ನ ಹೊಂದಿದ್ದು, ಫಾಸ್ಟ್‌ ಮೂವಿಂಗ್‌ ಸಬ್ಜೆಕ್ಟ್‌ ಅನ್ನ ಸುಲಭವಾಗಿ ಕ್ಯಾಪ್ಚರ್‌ ಮಾಡಬಹುದಾಗಿದೆ. ಅಲ್ಲದೆ ಈ ಕ್ಯಾಮೆರಾವನ್ನ ಅಗತ್ಯಕ್ಕೆ ತಕ್ಕಂತೆ 90 ರಿಂದ 180 ಡಿಗ್ರಿಗಳ ನಡುವೆ ತಿರುಗಿಸಬಹುದು. ಇದರಲ್ಲಿ ಸ್ವಿವೆಲಿಂಗ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಇರೊದ್ರಿಂದ ಒವರ್‌ಹೆಡ್‌ ಚಿತ್ರಗಳನ್ನ ಸಹ ಚಿತ್ರಿಕರಿಸಲು ಸಾಧ್ಯವಾಗಲಿದೆ.


 • ಬೆಲೆ ಮತ್ತು ಲಭ್ಯತೆ

  ಇನ್ನು ಈ ಕ್ಯಾಮೆರಾ ಹೈಲಿ ಆಕ್ಯುರೆಟ್‌ ಫೇಸ್‌ ಆಂಡ್‌ ಹೈ ಡಿಟೆಕ್ಷನ್‌ ಆಲ್ಗಾರಿಧಮ್‌ ಒಳಗೊಂಡಿದ್ದು, ಗ್ರೇಟ್‌ ಲೋ ಲೈಟ್‌ ಪರ್ಫಾಮೆನ್ಸ್‌ ನೀಡಲಿದೆ. ಸದ್ಯ ಈ ಹೊಸ ಕ್ಯಾಮೆರಾದ ಬೆಲೆ £749 (70,112.ರೂ,)ಆಗಿದ್ದು, ಸಿಲ್ವರ್‌, ಡಾರ್ಕ್‌ ಸಿಲ್ವರ್‌, ಮತ್ತು ಷಾಂಪೇನ್ ಕಲರ್ ಫಿನಿಶ್‌ನಲ್ಲಿ ಲಭ್ಯವಿರಲಿದ್ದು, ಈ ಕ್ಯಾಮೆರಾ ಭಾರತದಲ್ಲಿ ಫೆಬ್ರವರಿ 27, 2020 ರಿಂದ ಮಾರಾಟವಾಗಲಿದೆ.
ಇದು ಕ್ಯಾಮೆರಾ ಪ್ರಂಪಚ, ಕ್ಷಣಾರ್ಧದಲ್ಲಿ ಫೋಟೊ ಕ್ಲಿಕ್ಕಿಸಿ ಕೊಡುವಂತಹ ಅದೆಷ್ಟೋ ಕ್ಯಾಮೆರಾಗಳು ಇಂದು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಅದರಲ್ಲೂ ಕ್ಯಾಮೆರಾಲೋಕವಂತೂ ಸಿಕ್ಕಾಪಟ್ಟೆ ಕಲರ್‌ಫುಲ್‌ ಆಗಿದೆ. ಕ್ಯಾಮೆರಾ ಅಂದ್ರೆನೇ ಹಾಗೇ ಎಲ್ಲವೂ ಕಲರ್‌ಫುಲ್‌. ಸದ್ಯ ತಂತ್ರಜ್ಞಾನದಲ್ಲಿ ಸಾಕಷ್ಟು ಮೈಲುಗಲ್ಲುಗಳಿಗೆ ಸಾಕ್ಷಿಯಾಗಿರುವ ಕ್ಯಾಮೆರಾ ಪ್ರಪಂಚದಲ್ಲಿ ಹಲವಾರು ಕಂಪೆನಿಗಳಿದ್ದು ಅದರಲ್ಲಿ ಪ್ರಸಿದ್ಧ 'ಫ್ಯೂಜಿಫಿಲ್ಮ' ಕಂಪೆನಿಯು ಸಹ ಒಂದಾಗಿದೆ. ಇದೀಗ ಇದೇ ಕಂಪೆನಿ ಹೊಸ ಆವೃತ್ತಿಯ ಕ್ಯಾಮೆರಾವನ್ನ ಭಾರತದಲ್ಲಿ ಲಾಂಚ್‌ ಮಾಡಿದ್ದು ತನ್ನ ಫೀಚರ್ಸ್‌ಗಳಿಂದಲೇ ಗಮನಸೆಳೆಯುತ್ತಿದೆ.

   
 
ಹೆಲ್ತ್