Back
Home » ಇತ್ತೀಚಿನ
ಬರೀ 1 ರೂಪಾಯಿಗೆ 1GB ಇಂಟರ್ನೆಟ್!...ಜಿಯೋ ಗತಿ ಏನು?
Gizbot | 24th Jan, 2020 04:07 PM
  • ವೈಫೈ ಡಬ್ಬಾ

    ಹೌದು, ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ 'ವೈಫೈ ಡಬ್ಬಾ'-WIFI Dabba ಸಂಸ್ಥೆಯು ಅತೀ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ನೀಡುವ ಯೋಜನೆ ಜಾರಿ ಮಾಡುವ ಹಂತದಲ್ಲಿದೆ. ಈ ಮೂಲಕ ಜಿಯೋ ಟೆಲಿಕಾಂಗೆ ನೇರ ಫೈಟ್ ನೀಡುವ ಸೂಚನೆ ಹೊರಹಾಕಿದೆ. ಈ ಸಂಸ್ಥೆಯು ಅತೀ ವೇಗದ ಇಂಟರ್ನೆಟ್ ಸೇವೆಯನ್ನು ಕಡಿಮೆ ಬೆಲೆಗೆ ಎಲ್ಲರಿಗೂ ತಲುಪುವಂತೆ ಮಾಡುವ ಉದ್ದೇಶ ಹೊಂದಿದೆ.


  • 1ರೂ.ಗೆ 1GB

    ವೈಫೈ ಡಬ್ಬಾ ಸಂಸ್ಥೆಯು ಕೇವಲ 1ರೂ.ಗೆ 1GB ಡಾಟಾ ಒದಗಿಸುವ ಪ್ಲ್ಯಾನ್ ಹೊಂದಿದೆ. ಈ ಸೇವೆಯನ್ನು ಮೊದಲು ಬೆಂಗಳೂರಿನಲ್ಲಿಯೇ ಆರಂಭಿಸಲಿದ್ದು, ಮುಂದಿನ ದಿನಗಳಲ್ಲಿ ಈ ಸೇವೆಯ ಅಗತ್ಯ ನೋಡಿಕೊಂಡು ಇತರೆ ನಗರಗಳಿಗೂ ವಿಸ್ತರಿಸುವ ಯೋಜನೆಗಳಿವೆ ಎಂದಿದೆ. ವೈಫೈ ಡಬ್ಬಾ ಸಂಸ್ಥೆಯ ಇನ್ನಷ್ಟು ಕುತೂಹಲಕರ ಮಾಹಿತಿಗಳನ್ನು ತಿಳಿಯಲು ಮುಂದೆ ಓದಿರಿ.


  • ಕೈಕೊಟ್ಟ ಫೈಬರ್

    ಕೊನೆಯ ಮೈಲಿ ಸಂಪರ್ಕ ಮತ್ತು ಕಡಿಮೆ ಬೆಲೆ ಮೂಲಕ ಗುರಿ ಸಾಧಿಸುಲು ಸಾಧ್ಯ ಎಂದು ಆರಂಭದಲ್ಲಿ ನಂಬಿದ್ದೆವು. ಹಾಗಾಗಿ ನಾವು ಫೈಬರ್ ಇಂಟರ್ನೆಟ್ ಜಾಲ ಹೊಂದಿರುವ ಟೆಲಿಕಾಂಗಳಿಂದ ಇಂಟರ್ನೆಟ್ ಕನೆಕ್ಷನ್ ಪಡೆದು, ISP ಅಗ್ರಿಗೇಟರ್‌ಗಳಾಗಿ ಕೆಲಸ ಮಾಡಿದ್ದೇವೆ. ಆದ್ರೆ ಈಗ ಫೈಬರ್ ಗಿಂತ supernodes-ಸೂಪರ್‌ನೊಡ್ಸ್‌ ತಂತ್ರಜ್ಞಾನ ಉತ್ತಮ ಎಂದು ಅರಿತಿದ್ದೆವೆ ಎಂದು ವೈಫೈ ಡಬ್ಬಾ CEO ಕರಮ್ ಲಕ್ಷ್ಮಣ ಹೇಳಿದ್ದಾರೆ.


  • 1GB ಡಾಟಾಗೆ 1ರೂ.

    ವೈಫೈ ಡಬ್ಬಾ ಸ್ಟಾರ್ಟ್‌ಅಪ್‌ ಸಂಸ್ಥೆಯು ಕನಿಷ್ಠ ಬೆಲೆಗೆ ಇಂಟರ್ನೆಟ್ ಪರಿಚಯಿಸುವ ಯೋಜನೆ ಮಾಡಿದೆ. ಅದಕ್ಕಾಗಿ ಬರೀ 1ರೂಪಾಯಿಗೆ 1GB ಡಾಟಾ ಒದಗಿಸಲಿದೆ ಎಂದಿದೆ. ಕನಿಷ್ಠ ದರದಲ್ಲಿ ಆಟೋ ಚಾಲಕರಿಗೆ, ವಿದ್ಯಾರ್ಥಿಗಳಿಗೆ, ಸಣ್ಣ ಪುಟ್ಟ ಅಂಗಡಿಕಾರರಿಗೆ ಸೇರಿದಂತೆ ಎಲ್ಲರಿಗೂ ಇಂಟರ್ನೆಟ್ ಬಳಕೆ ಒದಗಿಸುವ ಯೋಜನೆ ಹೊಂದಿದೆ.


  • supernodes-ತಂತ್ರಜ್ಞಾನ

    ವೈಫೈ ಸೇವೆ ಪೂರೈಸಲು ಸಂಸ್ಥೆಯು ಇತರ ಮೂಲಗಳನ್ನು ಅವಲಂಭಿಸುವುದಿಲ್ಲ. ಬದಲಿಗೆ ಈ ಸೇವೆಗೆ ಅಗತ್ಯವಿರುವ ಸ್ವಂತ ಹಾರ್ಡವೇರ್ ಮತ್ತು ಸಾಫ್ಟ್‌ವೇರ್ ತಂತ್ರಾಂಶಗಳನ್ನು ಅಭಿವೃದ್ಧಿ ಮಾಡಿಕೊಳ್ಳಲಿದೆ. ಈ ಸೇವೆಯಲ್ಲಿ ಸೂಪರ್‌ನೋಡ್ ಲೇಸರ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಿದೆ. ಇನ್ನು ಈ ಲೇಸರ್ ಕಣ್ಣುಗಳಿಗೆ ಹಾನಿ ಆಗದು ಎಂದಿದೆ. ಹಾಗೆಯೇ ಇದು ಥರ್ಡ್‌ಪಾರ್ಟಿಗಳಿಗೆ ನೀಡುವ ಹಣ ಉಳಿಕೆ ಮಾಡಲಿದೆ ಹಾಗೂ ಖರ್ಚು ಕಡಿಮೆ ಆಗಲಿದೆ.


  • ಹೇಗೆ ಕಾರ್ಯನಿರ್ವಹಿಸಲಿದೆ

    ಪ್ರತಿ ಸೂಪರ್‌ನೋಡ್‌ ಡಿವೈಸ್‌ಗಳು ಹೋಮ್ ರೋಟರ್‌ಗಳೊಂದಿಗೆ ಕನೆಕ್ಟ್ ಆಗುತ್ತವೆ. ಹೋಮ್ ರೋಟರ್ಸ್‌ಗಳು ಡ್ಯುಯಲ್ ಬ್ಯಾಂಡ್ ಕನೆಕ್ಟಿವಿಟಿ ಸಂಪರ್ಕ ಪಡೆದಿರುತ್ತವೆ. ಸೂಪರ್‌ನೋಡ್ ತಂತ್ರಜ್ಞಾನವು 2 ಕಿ.ಮೀ. ವ್ಯಾಪ್ತಿಯವರೆಗೂ ಸಂಪರ್ಕ ಸಾಧಿಸಬಲ್ಲವು ಅವರು 100 ಜಿಬಿಪಿಎಸ್ ವರೆಗೆ ಥ್ರೋಪುಟ್ ಮಾಡಬಹುದು ಎಂದು ಕಂಪನಿಯು ಹೇಳಿಕೊಂಡಿದೆ,




ಭಾರತದಲ್ಲಿ ರಿಲಾಯನ್ಸ್‌ ಜಿಯೋ ಟೆಲಿಕಾಂ ಸಂಸ್ಥೆಯು ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಸೇವೆ ಪರಿಚಯಿಸಿ ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನೆ ಮಾಡಿತು. ಅದಾದ ಬಳಿಕ ಬಹುತೇಕ ಎಲ್ಲ ಟೆಲಿಕಾಂಗಳು ತಮ್ಮ ಡಾಟಾ ದರವನ್ನು ಇಳಿಕೆ ಮಾಡಿದವು. ಸದ್ಯ ಈಗಲೂ ಜಿಯೋ ಹವಾ ಮುಂದುವರೆದಿದೆ. ಆದ್ರೆ ಲೋಕಲ್ ಸಂಸ್ಥೆಯೊಂದು ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋ ಟೆಲಿಕಾಂಗೆ ಸೆಡ್ಡು ಹೊಡಯಲು ಮುಂದಾಗಿದೆ.

   
 
ಹೆಲ್ತ್