Back
Home » ಇತ್ತೀಚಿನ
ಒಪ್ಪೊ ಎಫ್‌15 : 20,000.ರೂ ಪ್ರೈಸ್‌ಟ್ಯಾಗ್‌ನಲ್ಲಿ ಬೆಸ್ಟ್‌ ಸ್ಮಾರ್ಟ್‌ಫೋನ್!
Gizbot | 25th Jan, 2020 01:22 PM
 • ಒಪ್ಪೊ ಸಂಸ್ಥೆ

  ಒಪ್ಪೊ ಸಂಸ್ಥೆಯು ಭಾರತದಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ ತನ್ನ ವಿಶೇಷ ಫೀಚರ್ಸ್‌ಗಳಿಂದಲೇ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುತ್ತಿದೆ. ಈ ಫೋನ್ ಫೀಚರ್ಸ್‌ಗಳು ಹೈ ಎಂಡ್ ಮಾದರಿಯಲ್ಲಿದ್ದು, ಇದರ ಡಿಸೈನ್ ಮೊದಲ ನೋಟ್ದಲ್ಲಿಯೇ ಗ್ರಾಹಕರನ್ನು ಆಕರ್ಷಿಸಿ ಬಿಡುತ್ತದೆ. ಜೊತೆಗೆ ವೇಗದ VOOC ಚಾರ್ಜಿಂಗ್ ಸಫೋರ್ಟ್, ಅತ್ಯುತ್ತಮ ಪ್ರೊಸೆಸರ್, 48ಎಂಪಿ ಸಾಮರ್ಥ್ಯ ಕ್ಯಾಮೆರಾ ಸೇರಿದಂತೆ ಸ್ಪೆಷಲ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಈ ಫೋನಿನ ಬೆಲೆಯು ಗ್ರಾಹಕ ಸ್ನೇಹಿಯಾಗಿದೆ. ಒಪ್ಪೊ ಎಫ್‌15 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಕಂಪ್ಲೀಟ್ ಮಾಹಿತಿಗಾಗಿ ಮುಂದೆ ಓದಿರಿ.


 • ತೆಳುವಾದ ಡಿಸೈನ್ ಮತ್ತು ರಚನೆ

  ಒಪ್ಪೊ ಎಫ್15 ಸ್ಮಾರ್ಟ್‌ಫೋನ್ ಡಿಸೈನ್ ಆಕರ್ಷಕವಾಗಿದ್ದು, 7.9mm ನಷ್ಟು ತೆಳ್ಳನೆಯ ರಚನೆಯನ್ನು ಪಡೆದಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.90.7% ಆಗಿದೆ. ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 5 ನೀಡಲಾಗಿದೆ. ಕಂಪನಿಯು ಪ್ರಸ್ತುತ ಅಗತ್ಯತೆಗೆ ಅನುಗುಣವಾಗಿ ಡಿಸ್‌ಪ್ಲೇ ಸೌಲಭ್ಯ ನೀಡಿದೆ ಎನ್ನಬಹುದು. ಹಾಗೆಯೇ 1080 x 2400 ಪಿಕ್ಸಲ್ ರೆಸಲ್ಯೂಶ್‌ನ ಸಾಮರ್ಥ್ಯದೊಂದಿಗೆ 6.4 ಇಂಚಿನ AMOLED ಮಾದರಿಯ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಪಡೆದಿದೆ. ಗೇಮಿಂಗ್ ಹಾಗೂ ವಿಡಿಯೊ ವೀಕ್ಷಣೆಗೆ ಉತ್ತಮ ಎನ್ನಬಹುದು. ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಈ ಫೋನ್ ಎರಡು ಬಣ್ಣಗಳ ಆಯ್ಕೆ ಹೊಂದಿದ್ದು, ಅವುಗಳುಕ್ರಮವಾಗಿ ಲೈಟಿಂಗ್ ಬ್ಲ್ಯಾಕ್ ಮತ್ತು ಯುನಿಕಾರ್ನ್ ವೈಟ್ ಬಣ್ಣಗಳಾಗಿವೆ.


 • 48ಎಂಪಿ ಕ್ಯಾಮೆರಾ ವಿಶೇಷತೆ

  ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು f/1.7 ಅಪರ್ಚರ್ನೊಂದಿಗೆ 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು f/2.25 ಅಪರ್ಚರ್‌ನೊಂದಿಗೆ 8ಎಂಪಿಯ ಸೆನ್ಸಾರ್ ಹೊಂದಿದ್ದು, ಇದು ವೈಲ್ಡ್‌ ಆಂಗಲ್ ಲೆನ್ಸ್‌ ಒಳಗೊಂಡಿದೆ. ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು f/2.0 ಅಪರ್ಚರ್‌ ಬೆಂಬಲದೊಂದಿಗೆ 2ಎಂಪಿಯ ಸೆನ್ಸಾರ್ ಪಡೆದಿವೆ. ಸೆಲ್ಫಿ ಕ್ಯಾಮೆರಾವು f/2.0 ಅಪರ್ಚರ್‌ನೊಂದಿಗೆ 16ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಆಟೋ ಫೋಕಸ್‌, ಸೆಲ್ಫಿ ಪೋಟ್ರೇಟ್ ಮೋಡ್ ಸೌಲಭ್ಯಗಳು ಸಹ ಇವೆ.

  ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಕ್ಯಾಮೆರಾವು 119 ಡಿಗ್ರಿ ಫೀಲ್ಡ್‌ ವ್ಯೂವ್ ಸಾಮರ್ಥ್ಯದಲ್ಲಿ ಕವರೇಜ್ ಸೌಲಭ್ಯ ಪಡೆದಿದೆ. ಪನೋರಮಾ ಮೋಡ್ ಆಯ್ಕೆ ಬಳಸದೆ ವೈಲ್ಡ್‌ ಆಗಿ ಫೋಟೊ ಕ್ಲಿಕ್ಕಿಸಬಹುದಾಗಿದೆ. ಮೈಕ್ರೋ ಮೋಡ್ ಫೀಚರ್, ಸ್ಟನ್ನಿಂಗ್ ಮೈಕ್ರೋ ಶಾಟ್ಸ್‌ ಸೆರೆಹಿಡಿಯಲು ನೆರವಾಗಲಿದೆ. ಕನಿಷ್ಠ 3ಸೆಂಟಿ ಮೀಟರ್ ಅಂತರದಲ್ಲಿ ಮೈಕ್ರೋ ಫೋಟೊ ಸೆರೆಹಿಡಿಯಬಹುದಾಗಿದೆ. ಫ್ಲಾವರ್, ಟೆಕ್ಸ್ಟ್‌, ಫುಡ್‌, ಸೇರಿದಂತೆ ಇತರೆ ವಸ್ತುಗಳ ಫೋಟೊ ಸೆರೆಹಿಡಿಯಲು ಮೈಕ್ರೋ ಲೆನ್ಸ್‌ ಸಹಕಾರಿ ಅನಿಸಲಿದೆ.


 • AI ಸ್ಮಾರ್ಟ್‌ ಬ್ಯುಟಿಫಿಕೇಶನ್

  ಒಪ್ಪೊ ಮೊದಲಿನಿಂದಲೂ ಕ್ಯಾಮೆರಾ ಫೀಚರ್ ಗೆ ವಿಶೇಷ ಗಮನ ನೀಡುತ್ತಾ ಬಂದಿದೆ. ಅದೇ ರೀತಿ ಈ ಫೋನಿನ ಕ್ಯಾಮೆರಾದಲ್ಲಿಯೂ AI ಸ್ಮಾರ್ಟ್‌ ಬ್ಯುಟಿಫಿಕೇಶನ್ ಫೀಚರ್‌ ಅಳವಡಿಸಲಾಗಿದೆ. ಹಿಂಬದಿಯ ಮತ್ತು ಮುಂಬದಿಯ ಕ್ಯಾಮೆರಾಗಳೆರಡು ಈ ಫೀಚರ್ಸ್ ಒಳಗೊಂಡಿದ್ದು, ಫೋಟೊ ಗುಣಮಟ್ಟವನ್ನು ಅತ್ಯುತ್ತಮ ಮಾಡಲು ಸಹಕರಿಸಲಿದೆ. ಇದರಲ್ಲಿ ಮಲ್ಟಿಪರ್ಸನ್ ಬ್ಯುಟಿಫಿಕೇಶನ್ ಆಯ್ಕೆ ಇದ್ದು, ಫೋಟೊ ಸೆರೆಹಿಡಿಯುವಾಗ ಬ್ಯುಟಿಫಿಕೇಶನ್ ಆಯ್ಕೆಯು ನಾಲ್ಕು ಫೇಸ್‌ಗಳನ್ನು ಗ್ರಹಿಸುವ ಸಾಮರ್ಥ್ಯ ಪಡೆದಿದೆ.

  ಹಾಗೆಯೇ ನೈಟ್ ಪೋರ್ಟರೇಟ ಮೋಡ್ ಮಂದಬೆಳಕಿನಲ್ಲಿಯೂ ಉತ್ತಮ ಫೋಟೊ ಸೆರೆ ಹಿಡಿಯುವುದಕ್ಕೆ ನೆರವಾಗಲಿದೆ. Bokeh Mode ಫೋಟೊ ಬಾಕ್‌ಗ್ರೌಂಡ್ ಬ್ಲರ್ ಮಾಡಲು ಸಹಕಾರಿಯಾಗಿದೆ. ಮತ್ತೊಂದು ವಿಶೇಷ ಅಂದರೇ ಆಯಂಟಿ ಶೇಕ್ ತಂತ್ರಜ್ಞಾನ ಇದ್ದು, ಫೋಟೊ ಮತ್ತು ವಿಡಿಯೊ ಸೆರೆಹಿಡಿಯುವಾಗ ಹ್ಯಾಂಡ್ ಶೇಕ್ ಆದರು ಚಿತ್ರಗಳು ಬ್ಲರ್ ಆಗದಂತೆ ನೋಡಿಕೊಳ್ಳುವ ಸೌಲಭ್ಯ ಇದೆ.


 • ಪವರ್‌ಫುಲ್ ಬ್ಯಾಟರಿ ಲೈಫ್ ಮತ್ತು ಸೆನ್ಸಾರ್

  ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯಲ್ಲಿ 3.0 ಸಾಮರ್ಥ್ಯದ ಸೆನ್ಸಾರ್ ಒಳಗೊಂಡಿದ್ದು, ಕೇವಲ 0.32 ಸೆಕೆಂಡ್‌ಗಳಲ್ಲಿಯೇ ಸ್ಕ್ರೀನ್ ಲಾಕ್ ತೆರೆಯುತ್ತದೆ. ಹಾಗೆಯೇ ಆಯಂಟಿ-ಫೋರ್ಸಿಂಗ್ ತಂತ್ರಜ್ಞಾನ ಪಡೆದಿದೆ. ಜೊತೆಗೆ VOOC 3.0 ಸಾಮರ್ಥ್ಯದ ಫ್ಲಾಶ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ವೇಗವಾಗಿ ಫೋನ್ ಚಾರ್ಜ್ ಮಾಡಲು ಇದು ನೆರವಾಗಲಿದೆ. ಈ ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ.

  ಇದರೊಂದಿಗೆ 20W ಸಪೋರ್ಟ್‌ನ VOOC 3.0 ತಂತ್ರಜ್ಞಾನದ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದಿದೆ ನೀಡಲಾಗಿದೆ. ಕೇವಲ 5 ನಿಮಿಷದ ಚಾರ್ಜ್ ಸುಮಾರು 2 ಗಂಟೆಗಳ ಟಾಕ್‌ಟೈಮ್ ಬ್ಯಾಕ್‌ಅಪ್ ನೀಡುವ ಸಾಮರ್ಥ್ಯ ಕಾಣಬಹುದಾಗಿದೆ. 8GB RAM ಮತ್ತು 128GB ಆಂತರಿಕ ಸ್ಟೋರೇಜ್ ಸ್ಥಳಾವಕಾಶವನ್ನು ಒಳಗೊಂಡಿದೆ.


 • ಗೇಮ್ ಬೂಸ್ಟರ್ ಆಯ್ಕೆ

  ಒಪ್ಪೊ ಎಫ್15 ಸ್ಮಾರ್ಟ್‌ಫೋನ್ ಗೇಮಿಂಗ್‌ಗೂ ಅತ್ಯುತ್ತಮ ಪ್ಲಾಟ್‌ಫಾರ್ಮ್‌ ಆಗಿದ್ದು, ಗೇಮ್ ಬೂಸ್ಟ್ 2.0 ಸೌಲಭ್ಯವನ್ನು ಪಡೆದುಕೊಂಡಿದೆ. ಇದು ಗೇಮಿಂಗ್ ಆಡುವಾಗ ಆಗುವ ಅಡಚಣೆಗಳನ್ನು ಸರಿಪಡಿಸುವಲ್ಲಿ ಸಹಕಾರಿ ಅನಿಸಲಿದೆ. ಆ ಮೂಲಕ ಗೇಮಿಂಗ್ ವೇಗವನ್ನು, ಕಾರ್ಯದಕ್ಷತೆಯನ್ನು ಸುಧಾರಿಸುತ್ತದೆ. ಪಬ್‌ಜಿ ಗೇಮ್‌ ಸ್ಟೇಬಿಲಿಟಿ 55.8% ಹಾಗೂ AOV ಶೇ.17.4%ರಷ್ಟು ತಗ್ಗಿಸಲಿದೆ. ಗೇಮಿಂಗ್ ಹಾದಿಯನ್ನು ಸುಗಮಗೊಳಿಸಲು ಸೆರವಾಗಲಿದೆ.

  ಹಾಗೆಯೇ ಗೇಮಿಂಗ್ ವಾಯಿಸ್ ಚೇಂಜರ್ ಆಯ್ಕೆ ಇದ್ದು, ಹುಡುಗನ ಧ್ವನಿಯಿಂದ ಹುಡುಗಿಯ ಧ್ವನಿಗೆ ಆಟಗಾರ ವಾಯಿಸ್ ಬದಲಿಸಿಕೊಳ್ಳಲು ಅವಕಾಶ ನೀಡುತ್ತದೆ. ಗೇಮ್ ನಾಯಿಸ್ ಕ್ಯಾನ್ಸ್‌ಲೇಶನ್ ಸೌಲಭ್ಯ ಸಹ ಇದೆ. ಗೇಮಿಂಗ್ ಕಾರ್ಯವೈಖರಿಯನ್ನು ಉತ್ತಮಗೊಳಿಸಲು ಸಹಕಾರಿ.


 • AMOLED ಡಿಸ್‌ಪ್ಲೇ ಮಾದರಿ

  ಒಪ್ಪೊ ಎಫ್‌ 15 ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶ್‌ನ ಸಾಮರ್ಥ್ಯದೊಂದಿಗೆ 6.4 ಇಂಚಿನ AMOLED ಮಾದರಿಯ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಪಡೆದಿದೆ. ಗೇಮಿಂಗ್ ಹಾಗೂ ವಿಡಿಯೊ ವೀಕ್ಷಣೆಗೆ ಉತ್ತಮ ಎನ್ನಬಹುದು. ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ.97%ರಷ್ಟು ಆಗಿದೆ. ಗೇಮಿಂಗ್ ಮತ್ತು ವಿಡಿಯೊ ವೀಕ್ಷಣೆಗೆ ಅತ್ಯುತ್ತಮ ಅನಿಸಲಿದೆ. ಹಾಗೆಯೇ ಬಳಕೆದಾರರಿಗೆ ಯೂಬ್ಯೂಬ್, ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ಅಂತಹ ಅಪ್ಲಿಕೇಶನ್ ವೀಕ್ಷಣೆಗೂ ಸಹ ಪೂರಕ ಅನಿಸಲಿದೆ. ಪೂರ್ಣ ಹೆಚ್‌ಡಿ ಪ್ಲಸ್‌ ಸಾಮರ್ಥ್ಯದಲ್ಲಿ ದೃಶ್ಯಗಳು ಮೂಡಿಬರಲಿವೆ. ಐ ಪ್ರೋಟೆಕ್ಷನ್ ಸರ್ಟಿಫಿಕೇಶನ್ ಪಡೆದಿದೆ.


 • ಕಲರ್ ಓಎಸ್‌ 6 ಬೆಂಬಲ

  ಒಪ್ಪೊ ಎಫ್ 15 ಸ್ಮಾರ್ಟ್‌ಫೋನ್ ಇತ್ತೀಚಿನ ಕಲರ್ ಓಎಸ್‌ 6 ಸ್ಕೀನ್ ಬೆಂಬಲ ಪಡೆದಿದೆ. ಫೋನ್ ಆಪರೇಟಿಂಗ್‌ನಲ್ಲಿ ಸಾಕಷ್ಟು ಹೊಸತನಗಳನ್ನು ಕಾಣಬಹುದಾಗಿದೆ. ColorOS 6.1.2 ಈ ಓಎಸ್‌ AMOLED ಡಿಸ್‌ಪ್ಲೇಗಳ ಬ್ಲಾಕ್‌ ಉತ್ತಮಗೊಳಿಸಲಿದೆ. ಸ್ಕ್ರೀನ್ ಸರಿಸುವಿಕೆಯ ಅನಿಮೇಶನ್‌ನಲ್ಲಿ ಹೊಸತನ ಕಾಣಿಸುತ್ತದೆ. ಹಾಗೆಯೇ ವೈಫೈ ಸಿಂಕ್, ಅಲ್ಬಮ್ ಶೇರ್ ಆಯ್ಕೆಗಳು ಸಹ ವೇಗವಾಗಿ ನಡೆಯುತ್ತವೆ. ನೋಟಿಫಿಕೇಶನ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳುವ ಆಯ್ಕೆ ಸಹ ಇದೆ. ಓಎಸ್‌ ಐಸ್‌ ಬಾಕ್ಸ್‌ ಸೌಲಭ್ಯವು ಅತೀ ಹೆಚ್ಚಿ ಸ್ಥಳ ಕಬಳಿಸಿರುವ ಆಪ್ಸ್‌, ಮತ್ತು ಇತರೆ ಕಂಟೆಂಟ್‌ಗಳಲ್ಲಿ ಸ್ಪೇಸ್/ಸ್ಥಳ ಉಳಿಸುವ ಕಾರ್ಯ ಮಾಡಲಿದೆ.


 • ಸ್ಮಾರ್ಟ್‌ ಅಸಿಸ್ಟಂಟ್ ಆಯ್ಕೆ

  ಈ ಸ್ಮಾರ್ಟ್‌ಫೋನಿನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೇ ಅದುವೇ ಸ್ಮಾರ್ಟ್‌ ಅಸಿಸ್ಟಂಟ್ ಆಯ್ಕೆ. ಈ ಆಯ್ಕೆಯು ಎಲ್ಲ ಅಗತ್ಯ ಮಾಹಿತಿಯನ್ನು ಒಂದು ಪಾಯಿಂಟ್‌ನಲ್ಲಿ ಒದಗಿಸಲಿದೆ. ಈ ಸ್ಮಾರ್ಟ್‌ ಅಸಿಸ್ಟಂಟ್ ಫಂಗ್ಷನ್ ಸೌಲಭ್ಯವು ನೇರವಾಗಿ ಅಗತ್ಯ ಆಪ್‌ ಅಥವಾ ಅಗತ್ಯ ಮಾಹಿತಿ ತರೆಯಲು ನೆರವಾಗಲಿದೆ. ಬಳಕೆದಾರರು ಅವರಿಗೆ ಅಗತ್ಯವಾಗ ಮತು ಅವರ ಫೇವರೇಟ್ ಆಪ್ಸ್‌, ಮಾಹಿತಿಯನ್ನು ಸೆಟ್‌ಮಾಡಿಕೊಳ್ಳಬಹುದು. ಅದರಂತೆ ಸ್ಮಾರ್ಟ್‌ ಅಸಿಸ್ಟಂಟ್ ಆಯ್ಕೆಯು ಕೆಲಸಮಾಡಲಿದೆ.

  ಇಷ್ಟೆಲ್ಲ ಸೌಲಭ್ಯಗಳಿಂದ ಗ್ರಾಹಕರನ್ನು ಸೆಳೆದಿರುವ ಈ ಫೋನ್ ಇದೇ ಜನೆವರಿ 16 ರಂದು ಬಿಡುಗಡೆ ಆಗಿದೆ. ಸದ್ಯ ಈ ಫೋನ್ ಖರೀದಿಗೆ ಲಭ್ಯವಿದ್ದು, ಹಲವು ಆಫರ್‌ಗಳು ಸಹ ಇವೆ. ಐಸಿಐಸಿಐ ಕಾರ್ಡ್ ಬಳಸಿ ಖರಿದಿಸಿದರೇ ಶೇ.5% ಕಾಶ್‌ಬ್ಯಾಕ್, ಬಜಾಜ್ ಫೈನಾಸ್‌ ಆಯ್ಕೆ ಇದೆ, ಇಎಮ್‌ಐ ಸೌಲಭ್ಯಗಳ ಆಯ್ಕೆ ಇದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೇ ಶೇ.10 ಡಿಸ್ಕೌಂಟ್ ಸಿಗಲಿದೆ. ಒಟ್ಟಾರೇ 20,000ರೂ ಒಳಗೆ ಒಪ್ಪೊ ಎಫ್‌15 ಸ್ಮಾರ್ಟ್‌ಫೋನ್ ಬೆಸ್ಟ್‌ ಎನ್ನಬಹುದು.
ಜನಪ್ರಿಯ ಮೊಬೈಲ್ ಕಂಪನಿಗಳು ಪ್ರಸ್ತುತ ಮಾರುಕಟ್ಟೆಗೆ ಭಿನ್ನ ವಿಭಿನ್ನ ಫೀಚರ್ಸ್‌ಗಳಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಹೀಗೆ ಫೋನ್‌ಗಳಲ್ಲಿ ಸದಾ ಹೊಸತನವನ್ನು ಪರಿಚಯಿಸುವ ಪ್ರತಿಷ್ಠಿತ ಮೊಬೈಲ್ ಕಂಪನಿಗಳಲ್ಲಿ 'ಒಪ್ಪೊ' ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ. ಒಪ್ಪೊ ಈಗಾಗಲೇ ಹಲವು ನೂತನ ಫೀಚರ್ಸ್‌ಗಳನ್ನು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಿ ಗ್ರಾಹಕರಿಂದ ಬೇಷ್ ಎನಿಸಿಕೊಂಡಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಒಪ್ಪೊ ಇದೀಗ ಮತ್ತೊಂದು ಅಚ್ಚರಿಯ ಫೋನ್ ಲಾಂಚ್ ಮಾಡಿ ಎಲ್ಲರು ಹುಬ್ಬೆರಿಸುವಂತೆ ಮಾಡಿದೆ. ಅದುವೇ ಒಪ್ಪೊ ಎಫ್‌ 15 ಸ್ಮಾರ್ಟ್‌ಫೋನ್.

 
ಹೆಲ್ತ್