Back
Home » ಆರೋಗ್ಯ
ಉರಿಯೂತ ಶಮನ ಮಾಡುವ 14 ಅತ್ಯುತ್ತಮ ಆಹಾರಗಳು
Boldsky | 25th Jan, 2020 12:13 PM
 • 1. ಬ್ಲೂಬೆರ್ರಿ

  ಬ್ಲೂಬೆರ್ರಿ ಗಳಲ್ಲಿ ಆಂಟಿ - ಆಕ್ಸಿಡೆಂಟ್ ಅಂಶಗಳು ಎಂದು ಹೆಸರಾದ ಫ್ಲೇವನಾಯ್ಡ್ ಮತ್ತು ಆಂಥೋ ಸಯಾನಿನ್ ಎಂಬ ಅಂಶಗಳು ಹೇರಳವಾಗಿದ್ದು, ದೀರ್ಘಕಾಲದ ಉರಿಯೂತಕ್ಕೆ ತಕ್ಕ ಔಷಧಿಯಾಗಿ ಕೆಲಸ ಮಾಡುತ್ತವೆ. ತಮ್ಮ ವ್ಯಾಪಕ ಆರೋಗ್ಯ ಪ್ರಯೋಜನಗಳಿಂದ ಹೆಸರಾದ ಈ ಅಂಶಗಳು ಮಧುಮೇಹ, ಕಣ್ಣಿನ ಸಮಸ್ಯೆ, ಹೃದಯದ ಸಮಸ್ಯೆ ಇತ್ಯಾದಿಗಳ ವಿರುದ್ಧ ತಮ್ಮ ಕಾರ್ಯ ನಿರ್ವಹಿಸುತ್ತವೆ.


 • 2. ಹಸಿರು ಎಲೆ - ತರಕಾರಿಗಳು

  ಹಳದಿ, ಕಿತ್ತಳೆ, ಕೆಂಪು ಮತ್ತು ಹಚ್ಚ ಹಸಿರು ಎಲೆ ತರಕಾರಿಗಳಲ್ಲಿ ಫೈಟೋ ಕೆಮಿಕಲ್ ಗಳಾದ ಕ್ಯಾರೊಟೆನೊಯ್ಡ್ ಮತ್ತು ಫ್ಲೇವನಾಯ್ಡ್ ಗಳು ಹೆಚ್ಚಿದ್ದು, ಒಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ. ನಿಮ್ಮ ಆಹಾರ ಪದ್ಧತಿಗಳಲ್ಲಿ ಹಸಿರು ಎಲೆ - ತರಕಾರಿಗಳ ಉಪಯೋಗ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಉದಾಹರಣೆಗೆ, ಎಲೆಕೋಸು, ದಂಟಿನ ಸೊಪ್ಪು, ಬೀಟ್ರೋಟ್ ಎಲೆಗಳು ಇತ್ಯಾದಿ.


 • 3. ಗ್ರೀನ್ ಟೀ

  ಗ್ರೀನ್ ಟೀ ಯ ವೈಶಿಷ್ಟ್ಯದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದೇ ಇದೆ. ಗ್ರೀನ್ ಟೀಯಲ್ಲಿ ಮನುಷ್ಯನ ದೇಹದ ತೂಕವನ್ನು ಕಡಿಮೆ ಮಾಡುವ ಅದ್ಭುತ ಗುಣ ಲಕ್ಷಣಗಳು ಅಡಗಿವೆ. ಆದರೂ ಇಷ್ಟಕ್ಕೇ ಸೀಮಿತವಾಗದೆ ದೇಹದ ಉರಿಯೂತವನ್ನು ಕಡಿಮೆ ಮಾಡುವ ಲಕ್ಷಣ ಕೂಡ ಇದರಲ್ಲಿದೆ. ಗ್ರೀನ್ ಟೀ ನಲ್ಲಿ ಎಪಿಗ್ಲಾಲೋಕ್ಯಾಥೆಚಿನ್ - 3 - ಗ್ಯಾಲೆಟ್ ಅಥವಾ ಈ ಜಿ ಸಿ ಜಿ ಎಂಬ ಅಂಶವಿದ್ದು ಇದು ಬಹಳ ಉತ್ತಮವಾದ ಆಂಟಿ - ಇಂಪ್ಲಾಮ್ಯಾಟೋರಿ ಪ್ರಭಾವವನ್ನು ಹೊಂದಿರುತ್ತದೆ.


 • 4. ಮೀನು

  ಫ್ಯಾಟಿ ಫಿಷ್ ಗಳಾದ ಸಾಲ್ಮನ್, ಸಾರ್ಡಿನ್ಸ್, ಮ್ಯಾಕರೆಲ್ ಮತ್ತು ಹೆರಿಂಗ್ ಎಂಬವು ಪ್ರೋಟೀನ್ ಮತ್ತು ಒಮೆಗ - 3 ಫ್ಯಾಟಿ ಆಸಿಡ್ ಗಳಾದ ಇ ಪಿ ಎ ಮತ್ತು ಡಿ ಹೆಚ್ ಎ ಅಂಶಗಳನ್ನು ಒಳಗೊಂಡಿರುತ್ತವೆ. ಇವುಗಳು ಹೃದಯದ ಸಮಸ್ಯೆ, ಕಿಡ್ನಿ ಸಮಸ್ಯೆ, ಮಧುಮೇಹ ಮತ್ತು ಮೆಟಬಾಲಿಕ್ ಸಿಂಡ್ರೋಮ್ ನಂತಹ ದೀರ್ಘ ಕಾಲದ ಕಾಯಿಲೆಗಳನ್ನು ಉಂಟು ಮಾಡುವ ಉರಿಯೂತವನ್ನು ತಗ್ಗಿಸುವಂತಹ ಶಕ್ತಿಯನ್ನು ಹೊಂದಿವೆ.


 • 5. ಬೆಣ್ಣೆಹಣ್ಣು

  ಬೆಣ್ಣೆಹಣ್ಣುಗಳು ಅವುಗಳ ಪೋಷಕಾಂಶ ಮತ್ತು ಫೈಟೋ ಕೆಮಿಕಲ್ ಸಂಯೋಜನೆಯಿಂದ ಉರಿಯೂತದ ವಿರುದ್ಧ ಹೋರಾಡುವ ಅತ್ಯುತ್ತಮ ಆಹಾರಗಳೆಂದು ಗುರುತಿಸಿಕೊಂಡಿವೆ. ಈ ಹಣ್ಣುಗಳಲ್ಲಿ ಕ್ಯಾರೊಟೆನೊಯ್ಡ್, ಟೊಕೋಫೇರೋಲ್ಸ್, ಮೆಗ್ನೀಷಿಯಂ, ಪೊಟ್ಯಾಶಿಯಂ, ನಾರಿನಂಶ, ಮೋನೋ ಅನ್ ಸಾಚುರೇಟೆಡ್ ಕೊಬ್ಬಿನ ಅಂಶ ಮತ್ತು ಉರಿಯೂತವನ್ನು ಉಪಶಮನ ಮಾಡುವ ಇತರ ಅಗತ್ಯ ಸಂಯುಕ್ತಗಳು ಅಡಗಿವೆ.


 • 6. ದ್ರಾಕ್ಷಿಗಳು

  ದ್ರಾಕ್ಷಿಗಳು ನಮಗೆಲ್ಲ ತಿಳಿದಿರುವ ಹಾಗೆ ದೀರ್ಘ ಕಾಲದ ಸಮಸ್ಯೆಗಳಾಗಿ ಕಾಡುವ ಕಣ್ಣಿನ ತೊಂದರೆ, ಅಲ್ಜಿಮರ್ ಕಾಯಿಲೆ, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ, ಬೊಜ್ಜು ಇತ್ಯಾದಿಗಳ ಉಲ್ಬಣಗಳನ್ನು ತಗ್ಗಿಸುತ್ತವೆ. ಏಕೆಂದರೆ ದ್ರಾಕ್ಷಿ ಗಳಲ್ಲಿ ಆಂಥೋ ಸಯಾನಿನ್ ಎಂಬ ಉರಿಯೂತವನ್ನು ಶಮನ ಮಾಡುವ ಅಂಶ ಅಡಗಿದೆ.


 • 7. ಅಣಬೆಗಳು

  ಅಣಬೆಗಳು ಪೌಷ್ಟಿಕಾಂಶಗಳ ಆಗರ ಎಂದು ಎಲ್ಲರಿಗೂ ತಿಳಿದಿದೆ. ಇವುಗಳಲ್ಲಿ ಸಸ್ಯ ಸಂಯುಕ್ತಗಳಾದ ಫಿನಾಲ್ ಮತ್ತು ಆಂಟಿ - ಆಕ್ಸಿಡೆಂಟ್ ಗಳು ಇದ್ದು, ನಿಮ್ಮ ದೇಹವನ್ನು ದೀರ್ಘಕಾಲದ ಉರಿಯೂತದಿಂದ ರಕ್ಷಿಸುತ್ತದೆ. ನಿಮ್ಮ ಆಹಾರ ಪದ್ಧತಿಯಲ್ಲಿ ಶಿಇಟಕೆ , ಪೋರ್ಟೊಬೆಲ್ಲೊ ಮತ್ತು ತೃಫ್ಲ್ಸ್ ಅಣಬೆಗಳನ್ನು ಸೇರಿಸಿ.


 • 8. ಡಾರ್ಕ್ ಚಾಕ್ಲೇಟ್

  ಡಾರ್ಕ್ ಚಾಕ್ಲೇಟ್ ಕೇವಲ ನಾಲಿಗೆಯ ರುಚಿ ಹೆಚ್ಚಿಸುವುದರಲ್ಲಿ ಮಾತ್ರ ತನ್ನ ಪ್ರಭಾವ ತೋರದೆ, ದೇಹದ ಉರಿಯೂತವನ್ನು ಕಡಿಮೆ ಮಾಡುವ ಪ್ರಯೋಜನಗಳನ್ನು ತನ್ನಲ್ಲಿ ಹೊಂದಿದೆ. ಡಾರ್ಕ್ ಚಾಕಲೇಟ್ ನಲ್ಲಿ ಫ್ಲೇವನಾಯ್ಡ್ ಎಂಬ ಬಹುಮುಖ್ಯ ಆಂಟಿ - ಆಕ್ಸಿಡೆಂಟ್ ಅಂಶ ಲಭ್ಯವಿದ್ದು, ಉರಿಯೂತವನ್ನು ಕಡಿಮೆ ಮಾಡುತ್ತದೆ.


 • ಬ್ರೊಕೋಲಿ

  ಉರಿಯೂತ ಕಡಿಮೆ ಮಾಡುವ ಗುಣ ಬ್ರೊಕೋಲಿಯಲ್ಲಿದೆ. ಬ್ರೊಕೋಲಿಯಲ್ಲಿರುವ ಸಲ್ಫೋ ರಫಾನ್ ಎಂಬ ಆ್ಯಂಟಿ- ಆಕ್ಸಿಡೆಂಟ್ ಅಂಶವನ್ನು ಹೊಂದಿದ್ದು, ಉರಿಯೂತವನ್ನು ಹೆಚ್ಚಿಸಲು ಸಹಾಯ ಮಾಡುವ ಸೈಟೋಕೈನ್ ಮತ್ತು NF-kB ಎಂಬ ಅಂಶಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ.


 • 10. ಟೊಮೆಟೊಗಳು

  ಟೊಮೆಟೊಗಳಲ್ಲಿ ಪೌಷ್ಟಿಕ ಸತ್ವಗಳು ಮತ್ತು ಆಂಟಿ - ಇಂಪ್ಲಾಮ್ಯಾಟೋರಿ ಗುಣ ಲಕ್ಷಣಗಳನ್ನು ಹೊಂದಿರುವ " ಲೈಕೋಪಿನ್ " ಎಂಬ ಅಂಶ ಹೆಚ್ಚಾಗಿದ್ದು, ದೇಹದ ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವ ಜನರಲ್ಲಿ ಉರಿಯೂತವನ್ನು ಉಂಟು ಮಾಡುವ ಇನ್‌ಫ್ಲೇಮಟರಿ ಸೈಟೋಕೈನ್ ಗಳನ್ನು ಶಮನ ಮಾಡುವ ಕೆಲಸ ಮಾಡುತ್ತದೆ.


 • 11. ದಪ್ಪ ಮೆಣಸಿನಕಾಯಿ

  ಕ್ಯಾಪ್ಸಿಕಂ ಅಥವಾ ದೊಣ್ಣೆ ಮೆಣಸಿನಕಾಯಿ ಎಂದು ಕರೆಸಿಕೊಳ್ಳುವ ಈ ಆಹಾರ ಪದಾರ್ಥ ತನ್ನಲ್ಲಿ ವಿಟಮಿನ್ ' ಸಿ ' ಮತ್ತು ಆಂಟಿ - ಆಕ್ಸಿಡೆಂಟ್ ಗಳ ಅಂಶಗಳನ್ನು ಹೊಂದಿದ್ದು ಉರಿಯೂತದ ವಿರುದ್ಧ ಹೋರಾಡುವ ಗುಣ ಲಕ್ಷಣಗಳನ್ನು ತೋರಿಸುತ್ತದೆ. ಇದರಲ್ಲಿ ಕ್ಯೂರ್ಸೆಟಿನ್ ಎಂಬ ಆಂಟಿ - ಆಕ್ಸಿಡೆಂಟ್ ಇದ್ದು, ಜನರಲ್ಲಿ ಉರಿಯೂತದ ಕಾಯಿಲೆ ಎಂದು ಹೆಸರಾದ ಸರ್ಕಾಯ್ಡೋಸಿಸ್ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ನಿವಾರಣೆ ಮಾಡುವಲ್ಲಿ ಯಶಸ್ವಿಯಾಗುತ್ತದೆ.


 • 12. ಚೆರ್ರಿ ಹಣ್ಣುಗಳು

  ಉರಿಯೂತದ ವಿರುದ್ಧ ಹೋರಾಡುವ ಆಂಟಿ - ಆಕ್ಸಿಡೆಂಟ್ ಗಳು ಎಂದು ಹೆಸರಾದ ಆಂಥೋ ಸಯಾನಿನ್ ಮತ್ತು ಕ್ಯಾಥೆಚಿನ್ ಅಂಶಗಳು ಚೆರ್ರಿ ಹಣ್ಣುಗಳಲ್ಲಿ ಸೇರಿವೆ. ಒಂದು ಅಧ್ಯಯನ ತೋರಿಸಿಕೊಟ್ಟ ಪ್ರಕಾರ ಯಾವ ವ್ಯಕ್ತಿ ಒಂದು ತಿಂಗಳವರೆಗೆ ಪ್ರತಿ ದಿನ 280 ಗ್ರಾಂ ಗಳಷ್ಟು ಚೆರ್ರಿ ಹಣ್ಣುಗಳನ್ನು ಸೇವಿಸುವನೋ ಅವನಿಗೆ ಇಂಪ್ಲಾಮ್ಯಾಟೋರಿ ಮಾರ್ಕರ್ ಸಿ ಆರ್ ಪಿ ಕಡಿಮೆಯಾಗುವುದು ಕಂಡು ಬರುತ್ತದೆ.




ಮನುಷ್ಯನ ದೇಹಕ್ಕೆ ರೋಗ ನಿರೋಧಕ ಶಕ್ತಿ ಎಷ್ಟು ಮಹತ್ವದ್ದೆಂದರೆ ಯಾವುದೇ ರೀತಿಯ ಬ್ಯಾಕ್ಟೀರಿಯ ಅಥವಾ ವೈರಸ್ ದಾಳಿಯಾಗಿ ದೇಹ ರೋಗ ರುಜಿನಕ್ಕೆ ಒಳಗಾಗುವುದನ್ನು ತಪ್ಪಿಸುವ ಒಂದು ಆಂತರಿಕ ಚಮತ್ಕಾರಿ ಶಕ್ತಿ ನಮ್ಮ ದೇಹದಲ್ಲಿದೆ.

ಇಂತಹ ನಮ್ಮ ದೇಹದ ರೋಗ ನಿರೋಧಕ ಪ್ರತಿಕ್ರಿಯೆಗೆ ಅನುಗುಣವಾಗಿ ಉರಿಯೂತ ಸಹ ಹಾನಿಯಾದ ಅಂಗಾಂಗಗಳ ದುರಸ್ತಿ ಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಉರಿಯುತ್ತವೇ ಇಲ್ಲದಿದ್ದರೆ ನಮ್ಮ ದೇಹಕ್ಕಾಗುವ ಯಾವುದೇ ಗಾಯ ವಾಸಿಯಾಗುವುದಿಲ್ಲ ಮತ್ತು ಇನ್ನಷ್ಟು ಸೋಂಕಿಗೆ ಒಳಗಾಗುತ್ತದೆ.

ಉರಿಯೂತದ ಪ್ರಕಾರಗಳು ಮತ್ತು ಗುಣ ಲಕ್ಷಣಗಳು : -

ಉರಿಯೂತದಲ್ಲಿ ಎರಡು ಬಗೆಗಳಿವೆ. ತೀವ್ರತರದ ಮತ್ತು ದೀರ್ಘ ಕಾಲದ ಉರಿಯೂತ. ತೀವ್ರತರದ ಉರಿಯೂತಕ್ಕೆ ಉದಾಹರಣೆಯನ್ನು ಹೇಳಬೇಕೆಂದರೆ, ಚರ್ಮ ಕತ್ತರಿಸಿರುವುದು, ಗಂಟಲು ನೋವು, ಪಾದ ಉಳುಕುವುದು ಇತ್ಯಾದಿ. ಈ ರೀತಿಯ ಉರಿಯೂತ ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.

ದೀರ್ಘ ಕಾಲದ ಉರಿಯೂತದ ಗುಣ ಲಕ್ಷಣ ಹಾಗಲ್ಲ. ಒಮ್ಮೆ ಪ್ರಾರಂಭವಾದರೆ ಬಹಳ ದಿನಗಳ ಕಾಲ ಅಥವಾ ತಿಂಗಳುಗಳ ಕಾಲ ಮನುಷ್ಯನ ಆರೋಗ್ಯಕ್ಕೆ ಘಾಸಿ ಉಂಟು ಮಾಡುತ್ತಲೇ ಇರುತ್ತವೆ. ಇದಕ್ಕೆ ಉದಾಹರಣೆಯೆಂದರೆ ಆಸ್ಟಿಯೋ ಆರ್ಥರೈಟಿಸ್, ರ್ಯುಮ್ಯಾಟಿಡ್ ಆರ್ಥ್ರೈಟಿಸ್, ಅಲರ್ಜಿ, ಅಸ್ತಮಾ, ಉರಿಯೂತದ ಕರುಳಿನ ಕಾಯಿಲೆ ಇತ್ಯಾದಿ.

ಈ ಗಂಭೀರ ರೋಗ ಲಕ್ಷಣಗಳು ವಾಸಿಯಾಗಲು ಬಹಳ ಸಮಯ ತೆಗೆದುಕೊಳ್ಳುತ್ತವೆ. ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಕೆಲವೊಂದು ಆಹಾರ ಪದಾರ್ಥಗಳು ಉರಿಯೂತದ ವಿರುದ್ಧ ಹೋರಾಡುತ್ತವೆ. ಈ ಆಹಾರ ಪದಾರ್ಥಗಳಲ್ಲಿ ಫೈಟೋ ನ್ಯೂಟ್ರಿಯೆಂಟ್ ಗಳು, ಆರೋಗ್ಯಕರ ಕೊಬ್ಬಿನ ಅಂಶಗಳು ಮತ್ತು ಒಮೆಗಾ 3 ಫ್ಯಾಟಿ ಆಮ್ಲಗಳು ಹೆಚ್ಚಿದ್ದು ಉರಿಯೂತವನ್ನು ದೂರ ಮಾಡುತ್ತವೆ.

ಈ ಲೇಖನದಲ್ಲಿ ಉರಿಯೂತದ ಉಪಶಮನಕ್ಕೆ ಹೋರಾಡುವ ಸುಮಾರು 14 ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ನೀಡಲಾಗಿದೆ:

   
 
ಹೆಲ್ತ್