Back
Home » ಇತ್ತೀಚಿನ
ಫಾಸ್ಟ್ ಟ್ಯಾಗ್ ಹೆಸರಲ್ಲಿ ಹಣ ಲಪಟಾಯಿಸುವ ಹೊಸ ದಂಧೆ
Gizbot | 26th Jan, 2020 07:03 AM
 • ಮೊದಲ ಪ್ರಕರಣ

  ಇತ್ತೀಚೆಗೆ ಇಂತಹ ಮೊದಲ ಪ್ರಕರಣ ಬೆಂಗಳೂರಿನಲ್ಲಿ ನಡೆದಿದ್ದು ವ್ಯಕ್ತಿಯೊಬ್ಬರು 50,000 ರುಪಾಯಿಯನ್ನು ಕಳೆದುಕೊಂಡಿದ್ದಾರೆ. ಫಾಸ್ಟ್ ಟ್ಯಾಗ್ ವ್ಯಾಲೆಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರಿಗೆ ಆಕ್ಸಿಸ್ ಬ್ಯಾಂಕಿನ ಗ್ರಾಹಕ ಕೇಂದ್ರದ ಸರ್ವೀಸ್ ಎಕ್ಸಿಕ್ಯೂಟಿವ್ ಹೆಸರಿನಲ್ಲಿ ಬಂದ ಸುಳ್ಳು ಕರೆಯೊಂದು ಅವರಿಗೆ ಫಾಸ್ಟ್ ಟ್ಯಾಗ್ ವ್ಯಾಲೆಟ್ ಸರಿಯಾಗಿ ಕಾರ್ಯ ನಿರ್ವಹಿಸುವುದಕ್ಕಾಗಿ ಕಳುಹಿಸಲಾಗಿರುವ ಆನ್ ಲೈನ್ ಫಾರ್ಮ್ ನ್ನು ಭರ್ತಿ ಮಾಡುವಂತೆ ಹೇಳಿದ್ದಾರೆ.


 • ಸ್ಕ್ಯಾಮರ್

  ಸ್ಕ್ಯಾಮರ್ ಗಳು ಯುಪಿಐ ಪಿನ್ ನ್ನು ಪಡೆಯುವುದಕ್ಕೆ ಬಹಳ ಬುದ್ಧಿವಂತಿಕೆಯನ್ನು ವಹಿಸಿದ್ದಾರೆ. ಅದಕ್ಕಾಗಿ ಆನ್ ಲೈನ್ ರಿಜಿಸ್ಟ್ರೇಷನ್ ಪ್ರೊಸೆಸ್ ನ್ನು ಮಾಡುವಂತೆ ಹೇಳಿದ್ದಾರೆ.


 • ಎಸ್ಎಂಎಸ್

  ಎಸ್ಎಂಎಸ್ ಮೂಲಕ ಮೋಸಗಾರರು ಲಿಂಕ್ ವೊಂದನ್ನು ಕಳುಹಿಸಿದ್ದಾರೆ.ಆ ಲಿಂಕ್ ನಲ್ಲಿ 'ಆಕ್ಸಿಸ್ ಬ್ಯಾಂಕ್ - ಫಾಸ್ಟ್ ಟ್ಯಾಗ್ ಫಾರ್ಮ್'ಎಂದು ನಮೂದಿಸಲಾಗಿತ್ತು ಮತ್ತು ಅದನ್ನು ಭರ್ತಿ ಮಾಡಿದರೆ ಫಾಸ್ಟ್ ಟ್ಯಾಗ್ ವ್ಯಾಲೆಟ್ ಆಕ್ಟಿವೇಟ್ ಆಗುತ್ತದೆ ಎಂದು ಸುಳ್ಳು ಹೇಳಿದ್ದಾರೆ.


 • ಫಾರ್ಮ್

  ಆ ಫಾರ್ಮ್ ನಲ್ಲಿ ಹೆಸರು, ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಮತ್ತು ಯುಪಿಐ ಪಿನ್ ನಂಬರ್ ನಮೂದಿಸುವುದಕ್ಕೆ ತಿಳಿಸಲಾಗಿದೆ. ಅಪ್ಲಿಕೇಷನ್ ನಲ್ಲೇ ರೀಚಾರ್ಜ್ ಮಾಡುವ ಅವಕಾಶವಿದೆ ಎಂದು ನಂಬಿದ ವ್ಯಕ್ತಿ ಪಿನ್ ನಂಬರ್ ನ್ನು ಎಂಟ್ರಿ ಮಾಡಿ ಸಬ್ಮಿಟ್ ಬಟನ್ ನ್ನು ಒತ್ತಿದ್ದಾರೆ. ಅದೇ ಸಮಯಕ್ಕೆ ಒನ್ ಟೈಮ್ ಪಾಸ್ ವರ್ಡ್ ನ್ನು ಕೂಡ ಜನರೇಟ್ ಮಾಡಲಾಗಿದೆ ಆ ಓಟಿಪಿ ಅವರ ಮೊಬೈಲಿಗೆ ಬಂದಾಗ ಅದನ್ನೂ ಕೂಡ ಇವರು ಎಂಟ್ರಿ ಮಾಡಿದ್ದಾರೆ. ಕರೆ ಮಾಡಿದ ವ್ಯಕ್ತಿ ಓಟಿಪಿಯನ್ನು ಮತ್ತೊಂದು ನಂಬರ್ ಗೆ ಕಳುಹಿಸುವಂತೆ ತಿಳಿಸಿದ್ದಾರೆ. ಯಾವಾಗ ಓಟಿಪಿ ಕಳುಹಿಸಿದರೋ ಖಾತೆಯಿಂದ ಹಣ ಡೆಬಿಟ್ ಆಗಿದೆ. ಕರೆ ಮಾಡಿದ ವ್ಯಕ್ತಿ ಹೇಳಿದಂತೆಯೇ ನಡೆದುಕೊಂಡಿದ್ದಕ್ಕೆ ಬ್ಯಾಂಕ್ ಖಾತೆಯ ಹಣ ಖೋತಾ ಆಗಿದೆ.


 • ರಿಜಿಸ್ಟ್ರೇಷನ್

  ಯಾವುದೇ ಕಾರಣಕ್ಕೂ ಪಿನ್ ನಂಬರ್, ಪಾಸ್ ವರ್ಡ್ ನ್ನು ಯಾವುದೇ ಫಾರ್ಮ್ ನಲ್ಲಿ ಅಥವಾ ಇತರೆ ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಾರದು ಎಂಬುದು ನಿಮ್ಮ ಗಮನದಲ್ಲಿರಲಿ.ಫಾಸ್ಟ್ ಟ್ಯಾಗ್ ಗೆ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದಕ್ಕಾಗಿ ಯಾವುದೇ ರೀತಿಯ ಪಾಸ್ ವರ್ಡ್ ಅಥವಾ ಆನ್ ಲೈನ್ ಬ್ಯಾಂಕಿಂಗ್ ವಿವರದ ಅಗತ್ಯವಿರುವುದಿಲ್ಲ.ಸದ್ಯ ಪಾಸ್ಟ್ ಟ್ಯಾಗ್ ಸೇವೆ ಹೊಸದಾಗಿರುವುದರಿಂದಾಗಿ ಮೋಸಗಾರು ಜನರನ್ನು ಮೋಸಗೊಳಿಸುವುದಕ್ಕೆ ಈ ಮಾರ್ಗವನ್ನು ಅನುಸರಿಸುತ್ತಿದ್ದಾರೆ.


 • ಫಾಸ್ಟ್ ಟ್ಯಾಗ್

  ಫಾಸ್ಟ್ ಟ್ಯಾಗ್ ನ್ನು ಆಕ್ಟಿವೇಟ್ ಮಾಡುವುದಕ್ಕೆ ಕೇವಲ ಎರಡೇ ಮಾರ್ಗವಿರುತ್ತದೆ-ಮೈಫಾಸ್ಟ್ ಟ್ಯಾಗ್ ಆಪ್ ಮೂಲಕ ನೀವೇ ಸ್ವತಃ ಆಕ್ಟಿವೇಟ್ ಮಾಡಿಕೊಳ್ಳಬಹುದು ಅಥವಾ ಹತ್ತಿರದ ಯಾವುದಾದರೂ ಬ್ಯಾಂಕಿನ ಬ್ರ್ಯಾಂಚಿಗೆ ತೆರಳಿ ಮಾಡಿಕೊಳ್ಳಬಹುದು. ಫಾಸ್ಟ್ ಟ್ಯಾಗ್ ರಿಜಿಸ್ಟ್ರೇಷನ್ ಯಾವುದೇ ಬ್ಯಾಂಕಿನ ವ್ಯಕ್ತಿಯೊಂದಿಗೆ ಫೋನಿನಲ್ಲಿ ಮಾತನಾಡುವ ಮೂಲಕ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ.ಒಂದು ವೇಳೆ ನೀವು ಅಂತಹ ಯಾವುದೇ ಕರೆಯನ್ನು ರಿಸೀವ್ ಮಾಡಿದರೆ ಕೂಡಲೇ ಆ ಕರೆಯನ್ನು ಕಟ್ ಮಾಡಿಬಿಡಿ ಮತ್ತು ಹತ್ತಿರದ ನಿಮ್ಮ ಬ್ಯಾಂಕಿನ ಬ್ರ್ಯಾಂಚಿಗೆ ಭೇಟಿ ನೀಡಿ ಮತ್ತು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಏನಾದರೂ ಸಮಸ್ಯೆಯಾಗಿದೆಯಾ ಎಂಬುದನ್ನು ಪರೀಕ್ಷಿಸಿಕೊಳ್ಳಿ.


 • ಬ್ಯಾಂಕ್

  ಫಾಸ್ಟ್ ಟ್ಯಾಗ್ ನೇರವಾಗಿ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿರುವುದರಿಂದಾಗಿ ನೇರವಾಗಿ ಬ್ಯಾಂಕ್ ಖಾತೆಯಿಂದ ಹಣವು ಕಟ್ ಆಗುತ್ತದೆ.ಬಳಕೆದಾರರಿಗೆ NHAI ಪ್ರಿಪೇಯ್ಡ್ ವ್ಯಾಲೆಟ್ ನಿರ್ಮಿಸಿಕೊಳ್ಳುವುದಕ್ಕೂ ಕೂಡ ಅವಕಾಶವಿರುತ್ತದೆ.ಅದನ್ನು ರೀಚಾರ್ಜ್ ಮಾಡಿಕೊಳ್ಳಬಹುದು ಮತ್ತು ಪಾವತಿಗಾಗಿ ಫಾಸ್ಟ್ ಟ್ಯಾಗ್ ಗೆ ಕನೆಕ್ಟ್ ಮಾಡಿಕೊಂಡಿರಬಹುದು. ಯುಪಿಐ ಮೂಲಕ ಮೈ ಫಾಸ್ಟ್ ಟ್ಯಾಗ್ ಆಪ್ ನಲ್ಲೂ ಕೂಡ ರೀಚಾರ್ಜ್ ಮಾಡುವುದಕ್ಕೆ ಅವಕಾಶವಿರುತ್ತದೆ.


 • ಫಾಸ್ಟ್ ಟ್ಯಾಗ್

  ಫಾಸ್ಟ್ ಟ್ಯಾಗ್ ನೆಪದಲ್ಲಿ ಬರುತ್ತಿರುವ ಸುಳ್ಳು ಕರೆಗಳಿಗೆ ಮರುಳಾಗಿ ಯಾವುದೇ ಕಾರಣಕ್ಕೆ ಯುಪಿಐ ಪಿನ್, ಒನ್ ಟೈಮ್ ಪಾಸ್ ವರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ಯಾರೊಂದಿಗೂ ಕೂಡ ಹಂಚಿಕೊಳ್ಳಲು ಹೋಗಬೇಡಿ.
ದೇಶದಲ್ಲಿ ಫಾಸ್ಟ್ ಟ್ಯಾಗ್ ಜಾರಿಗೆ ಬಂದ ಹಿನ್ನೆಲೆಯಲ್ಲಿ ಜನರನ್ನು ಮೋಸಗೊಳಿಸುವುದಕ್ಕೆ ಇದೀಗ ಹೊಸ ಮಾರ್ಗವೊಂದನ್ನು ಕಳ್ಳರು ಕಂಡುಕೊಂಡಿದ್ದಾರೆ.ಫಾಸ್ಟ್ ಟ್ಯಾಗ್ ಗೆ ರಿಜಿಸ್ಟರ್ ಮಾಡಿಕೊಳ್ಳುವುದು ಮತ್ತು ಅದನ್ನು ಪಡೆದುಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಿರುವ ಜನರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕಳ್ಳರು ಅವರ ಬ್ಯಾಂಕ್ ಖಾತೆಯಿಂದ ಯುಪಿಐ ಮೂಲಕ ಹಣ ಲಪಟಾಯಿಸುವ ಧಂಧೆಗೆ ಇಳಿದಿದ್ದಾರೆ.

 
ಹೆಲ್ತ್