Back
Home » ಇತ್ತೀಚಿನ
ಭಾರತದಲ್ಲಿ ಮುಂಚೂಣಿಯಲ್ಲಿರುವ 5 ಮೊಬೈಲ್‌ ಬ್ರ್ಯಾಂಡ್‌ಗಳು!
Gizbot | 26th Jan, 2020 12:00 PM
 • ಹೌದು

  ಹೌದು, ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ಇಂದು ಜಾಗತಿಕವಾಗಿ ವಿಶಾಲವಾಗಿದೆ. ಶತಕೋಟಿಗೂ ಮೀರಿದ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೂಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಿಶಾಲವಾಗುತ್ತಲೇ ಇದೆ. ಅದರಲ್ಲೂ 2019 ರಲ್ಲಿ 158 ದಶಲಕ್ಷದಷ್ಟು ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಬಂದಿದ್ದು, ವರ್ಷದಿಂದ ವರ್ಷಕ್ಕೆ, ವರ್ಷಕ್ಕೆ 7% ಬೆಳವಣಿಗೆಯಾಗಿದೆ. ಅದರಲ್ಲೂ ಭಾರತೀಯ ಮಾರುಕಟ್ಟೆಯಲ್ಲಿ ಸೇಲ್‌ ಆದ ಅಗ್ರ 5 ರಲ್ಲಿ ನಾಲ್ಕು ಚೀನಾ ಸ್ಮಾರ್ಟ್‌ಫೋನ್‌ಗಳು ಸ್ಥಾನಪಡೆದಿದ್ದು, ಭಾರತದಲ್ಲಿ ಚೀನಾ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳ ಪಾಲು 2019 ರಲ್ಲಿ 72% ಕ್ಕೆ ಏರಿದೆ. ಅಷ್ಟ್ಕಕೂ ಭಾರತದಲ್ಲಿ 2019 ರಲ್ಲಿ ಪ್ರಮುಖ ಸ್ಥಾನ ಪಡೆದ 5 ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಕಂಪನಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.


 • ಶಿಯೋಮಿ

  ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಪ್ರಾಬಲ್ಯ ಸಾಧಿಸಿರುವ ಸ್ಮಾರ್ಟ್‌ಫೋನ್‌ ಕಂಪೆನಿ ಅಂದರೆ ಅದು ಚೀನಾ ಮೂಲದ ಶಿಯೋಮಿ ಕಂಪೆನಿ. ಹೌದು ಚೀನಾ ಮೂಲದ ಶಿಯೋಮಿ ಕಂಪೆನಿ ಇಂದು ಭಾರತದಲ್ಲಿ ಅತಿದೊಡ್ಡ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದೆ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಶೇಖಡಾ 5 ರಷ್ಟು ಬೆಳವಣಿಗೆಯನ್ನ ಸಾಧಿಸಿದ್ದು, 2019 ರಲ್ಲಿ
  ಶೇಖಡಾ 28 ರಷ್ಟು ಮಾರುಕಟ್ಟೆ ಪಾಲನ್ನ ಭಾರತದಲ್ಲಿ ಹೊಂದಿದ್ದು, ತನ್ನ ಕೇಂದ್ರ ಸ್ಥಾನ ಚೀನಾಕ್ಕಿಂತಲೂ ಹೆಚ್ಚಿನ ಪ್ರಗತಿಯನ್ನ ಭಾರತದಲ್ಲಿ ಸಾಧಿಸಿದೆ.ಈ ಮೂಲಕ ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತನ್ನ ಮುನ್ನಡೆಯನ್ನ ಸಾಧಿಸಿದೆ.


 • ಸ್ಯಾಮ್‌ಸಂಗ್

  ಕೋರಿಯಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿ ಆಗಿರುವ ಸ್ಯಾಮ್‌ಸಂಗ್ ಜಾಗತಿಕವಾಗಿ ಸ್ಮಾರ್ಟ್‌ಫೋನ್‌ ಕ್ಷೇತ್ರದ ದಿಗ್ಗಜ ಕಂಪೆನಿಗಳಲ್ಲಿ ಒಂದಾಗಿದ್ದು, ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನವನ್ನ ಪಡೆದುಕೊಂಡಿದೆ. ಭಾರತದಲ್ಲಿ ಶೇಖಡಾ 21ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು. ಹಾಗೇ ನೋಡಿದ್ರೆ 2019 ರ ಅವಧಿಯಲ್ಲಿ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶೇಖಡಾ 5ರಷ್ಟು ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದ್ದರೂ, ಸಹ ಆದಾಯದ ದೃಷ್ಟಿಯಿಂದ ಇದು ಅತಿದೊಡ್ಡ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ಉಳಿದಿದೆ. ಅಲ್ಲದೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಶಿಯೋಮಿಯನ್ನ ಹಿಂದಿಕ್ಕುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗ್ತಿದೆ.


 • ವಿವೋ

  ಭಾರತದ ಸ್ಮಾರ್ಟ್‌ಫೋನ್‌ ವಲಯದಲ್ಲಿ ಪ್ರಾಬಲ್ಯ ಸಾಧಿಸಿರುವ ಚೀನಾ ಸ್ಮಾರ್ಟ್‌ಫೋನ್‌ಗಳಲ್ಲಿ ವಿವೋ ಕಂಪೆನಿ ಕೂಡ ಒಂದಾಗಿದೆ. ಚೀನಾ ಮೂಲದ ಸ್ಮಾರ್ಟ್‌ಫೋನ್‌ ಆಗಿರುವ ವಿವೋ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶೇಖಡಾ 16 ರಷ್ಟು ಮಾರುಕಟ್ಟೆ ಪಾಲನು ಪಡೆದುಕೊಂಡಿದ್ದು ಈ ಮೂಲಕ ಮೂರನೇ ಸ್ಥಾನವನ್ನ ವಿವೊ ಪಡೆದುಕೊಂಡಿದೆ. ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ವಿವೋ ಕಂಪೆನಿ ತನ್ನ ಮಾರುಕಟ್ಟೆ ಪಾಲನ್ನ ಒಂದೇ ವರ್ಷದಲ್ಲಿ ಶೇಖಡಾ 76% ರಷ್ಟು ಹೆಚ್ಚಿಸಿಕೊಂಡಿದ್ದು, 2019 ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 2 ಸ್ಥಾನಕ್ಕೇರಿದ ಹೆಗ್ಗಳಿಕೆಯನ್ನ ಸಹ ಪಡೆದುಕೊಂಡಿದೆ.


 • ರಿಯಲ್‌ಮಿ

  ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪೆನಿ ಆಗಿರುವ ರಿಯಲ್‌ಮಿ ಕೂಡ ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿದೆ. ಅಷ್ಟೇ ಅಲ್ಲ ಭಾರತೀಯ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಸ್ಮಾರ್ಟ್‌ಫೋನ್‌ ಕಂಪೆನಿ ಇದಾಗಿದೆ. ಸದ್ಯ ನಾಲ್ಕನೇ ಸ್ಥಾನ ಪಡೆದುಕೊಂಡಿರುವ ರಿಯಲ್‌ಮಿ ಕಂಪೆನಿ 2018 ರಲ್ಲಿ ಶೇಖಡಾ 3ರಷ್ಟು ಮಾರುಕಟ್ಟೆ ಪಾಲು ಪಡೆದುಕೊಂಡಿದ್ದ ರಿಯಲ್‌ ಮಿ, 2019 ರಲ್ಲಿ ಶೇಖಡಾ 10ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದ್ದು, ಶೇಖಡಾ 255 ರಷ್ಟು ತನ್ನ ಪಾಲನ್ನ ಹೆಚ್ಚಿಸಿಕೊಳ್ಳುವಲ್ಲಿ ಸಫಲವಾಗಿದೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಟಾಪ್‌ 3ನಲ್ಲಿ ಗುರ್ತಿಸಿಕೊಳ್ಳುವ ಸಾಧ್ಯತೆ ಕೂಡ ಇದೆ.


 • ಒಪ್ಪೊ

  ಇನ್ನು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ ಪರಿಚಯಿಸೋ ಒಪ್ಪೋ ಭಾರತದಲ್ಲಿ ಐದನೇ ಅತಿದೊಡ್ಡ ಸ್ಮಾರ್ಟ್‌ಫೋನ್‌ ಕಂಪೆನಿಯಾಗಿ ಹೊರಹೊಮ್ಮಿದೆ. ಭಾರತೀಯ ಮಾರುಕಟ್ಟೆಯಲ್ಲಿ ಶೇಖಡಾ 9ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಈ ಕಂಪೆನಿ ವರ್ಷದಿಂದ ವರ್ಷಕ್ಕೆ ಏರುಗತಿಯ ಪ್ರಗತಿಯನ್ನ ಕಾಣುತ್ತಿದೆ. ಅಲ್ಲದೆ 2019 ರ ವರ್ಷದಲ್ಲಿ ಒಪ್ಪೋ ಕಂಪನಿಯು ಭಾರತದಲ್ಲಿ ಶೇಖಡಾ 28ರಷ್ಟು ಪ್ಭಾವಶಾಲಿಯಾಗಿ ಹೊರಹೊಮ್ಮಿದೆ.
ಟೆಕ್‌ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳ ಭರಾಟೆ ಹೆಚ್ಚಾಗುತ್ತಲೇ ಇದ್ದು, ಜಾಗತಿಕವಾಗಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಇಂದು ವಿಶಾಲವಾಗಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಅಷ್ಟೇ ಯಾಕೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯನ್ನ ಮಾನಿಟರ್ ಮಾಡುವ ಕೌಂಟರ್‌ ಪಾಯಿಂಟ್‌ ವರದಿ ಪ್ರಕಾರ ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಇದೇ ಮೊದಲ ಬಾರಿಗೆ ಯುಎಸ್ ಅನ್ನು ಮೀರಿಸಿದ್ದು, ಜಾಗತಿಕವಾಗಿ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿದೆ.

 
ಹೆಲ್ತ್