Back
Home » ಆರೋಗ್ಯ
ಈ ರೀತಿ ಮಾಡಿದರೆ ಬ್ಯುಸಿ ಲೈಫ್‌ನಲ್ಲಿಯೂ ಬಾಡಿ ಫಿಟ್‌ ಆಗಿಡಬಹುದು
Boldsky | 27th Jan, 2020 10:30 AM
 • 1. ಆರೋಗ್ಯಕರವಾಗಿರುವುದನ್ನು ಖರೀದಿಸಿ ತಿನ್ನಿ

  ಪ್ರತೀ ವಾರವು ನೀವು ಮನೆಗೆ ದಿನಸಿ ಹಾಕುವ ವೇಳೆ ಆರೋಗ್ಯಕರವಾದ ಸಾಮಗ್ರಿಗಳನ್ನು ಖರೀದಿ ಮಾಡಬೇಕು. ಸಲಾಡ್, ಮೊಸರು, ಹಣ್ಣುಗಳುಮತ್ತು ಆರೋಗ್ಯಕರವಾದ ತಿಂಡಿಗಳನ್ನು ನೀವು ದಿನಸಿ ಖರೀದಿ ವೇಳೆ ಸೇರಿಸಿಕೊಳ್ಳಿ. ಬಾದಾಮಿಯು ತುಂಬಾ ಆರೋಗ್ಯಕಾರಿ ಆಹಾರ. ಇದನ್ನು ಯಾವುದೇ ಸಮಯ ವ್ಯಯಿಸದೆ ನೀವು ಸೇವಿಸಬಹುದು. ಹಸಿವಾದ ವೇಳೆ ಫಿಜ್ಜಾ ಮತ್ತು ಬರ್ಗರ್ ತೆಗೆದುಕೊಳ್ಳುವ ಬದಲು ಬಾದಾಮಿ ಬಾಯಿಗೆ ಹಾಕಿಕೊಳ್ಳಿ.


 • 2. ಅಡುಗೆ ಪೂರ್ವ ತಯಾರಿ

  ಉತ್ತಮ ಆರೋಗ್ಯ ಬೇಕಾದರೆ ಆಗ ಖಂಡಿತವಾಗಿಯೂ ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು. ಇದರಿಂದ ಕಾಯಿಲೆಗಳನ್ನು ದೂರವಿಡಲು ಸಾಧ್ಯವಾಗುವುದು. ಇದನ್ನು ಸಾಧಿಸಲು ಒಳ್ಳೆಯ ವಿಧಾನವೆಂದರೆ ಪೂರ್ವ ಅಡುಗೆ ಮಾಡುವುದು. ಬೆಳಗ್ಗೆ ಎದ್ದು ನಿಮಗೆ ಉಪಾಹಾರ ತಯಾರಿಸಿಕೊಳ್ಳಲು ಸಮಯ ಸಿಗದೇ ಇದ್ದರೆ ಆಗ ನೀವು ರಾತ್ರಿ ವೇಳೆ ಇದನ್ನು ತಯಾರಿಸಿಕೊಳ್ಳಿ. ಕಚೇರಿಯಿಂದ ಬರುವ ವೇಳೆ ತಡರಾತ್ರಿ ಆಗುತ್ತಲಿದ್ದರೆ ಆಗ ನೀವು ಬೆಳಗ್ಗೆ ಇದನ್ನು ತಯಾರಿಸಿ. ಕೆಲವು ತರಕಾರಿಗಳನ್ನು ಮೊದಲೇ ಕತ್ತರಿಸಿಟ್ಟುಕೊಂಡು ಅದನ್ನು ಅಡುಗೆ ವೇಳೆ ಬಳಸಬಹುದು.


 • 3. ಅಧಿಕ ನಾರಿನಾಂಶವಿರುವ ಆಹಾರ ಸೇವಿಸಿ

  ನಾರಿನಾಂಶವು ಅಧಿಕವಾಗಿ ಇರುವಂತಹ ಆಹಾರವು ದೀರ್ಘ ಸಮಯದ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು. ಹಣ್ಣುಗಳಾದ ಸ್ಟ್ರಾಬೆರಿ, ಸೇಬು, ಅವಕಾಡೊ, ಬಾಳೆಹಣ್ಣು ಮತ್ತು ನೇರಳೆಹಣ್ಣಿನ ಜತೆಗೆ ಕ್ಯಾರೆಟ್, ನೆಲಗಡಲೆ, ಓಟ್ಸ್, ಬಾದಾಮಿ ಮತ್ತು ಡಾರ್ಕ್ ಚಾಕಲೇಟ್ ಸೇವಿಸಿ. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇದೆ ಮತ್ತು ಇದು ನಿಧಾನವಾಗಿ ಜೀರ್ಣವಾಗುವುದು. ಇದರಿಂದ ಹೊಟ್ಟೆಯು ದೀರ್ಘಕಾಲ ತುಂಬಿದಂತೆ ಆಗುವುದು.


 • 4. ಊಟ ಬಿಡಬೇಡಿ

  ನಾವು ಎಷ್ಟೇ ವ್ಯಸ್ತರಾಗಿದ್ದರೂ ಕೂಡ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುತ್ತಲಿದ್ದರೆ ಆಗ ಯಾವುದೇ ಅನಾರೋಗ್ಯ ಸಮಸ್ಯೆಯು ಕಾಡದು. ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಬಿಟ್ಟರೆ ಆಗ ಅದರಿಂದ ನಿಮಗೆ ಮತ್ತಷ್ಟು ಸಮಸ್ಯೆ ಆಗುವುದು. ಇದು ತೂಕ ಹೆಚ್ಚಳಕ್ಕೆ ನೆರವಾಗುವುದು. ಊಟ ಬಿಟ್ಟರೆ ಆಗ ಮುಂದಿನ ಸಲ ನೀವು ಇದರ ಎರಡು ಪಾಲು ಆಹಾರ ತಿನ್ನುವಿರಿ. ಇದರಿಂದ ಸರಿಯಾದ ಸಮಯಕ್ಕೆ ಊಟ ಮಾಡಿ. ಪ್ರೋಟೀನ್ ಇರುವಂತಹ ಮೊಸರು, ನೆಲಗಡಲೆ ಮತ್ತು ಬಾದಾಮಿ ತಿನ್ನಿ.


 • 5. ಸಣ್ಣ ಬದಲಾವಣೆ ದೊಡ್ಡ ಪರಿಣಾಮ ಬೀರುವುದು

  ತುಂಬಾ ವ್ಯಸ್ತರಾಗಿದ್ದರೂ ಕೆಲವು ಸಣ್ಣ ಬದಲಾವಣೆಗಳು ದೊಡ್ಡ ಮಟ್ಟದ ಪರಿಣಾಮ ಬೀರುವುದು. ಉದಾಹರಣೆಗೆ ಕೃತಕ ಸಿಹಿ ಹೊಂದಿರುವ ಪಾನೀಯ ಸೇವಿಸುವ ಬದಲು ನೈಸರ್ಗಿಕ ಹಣ್ಣಿನ ಜ್ಯೂಸ ನ್ನು ಕುಡಿಯಬೇಕು. ಕಾಫಿಯಲ್ಲಿ ಒಂದು ಚಮಚ ಸಕ್ಕರೆ ಕಡಿಮೆ ಮಾಡುವುದು ಮತ್ತು ಹೊರಗಿನ ಆಹಾರದ ಬದಲಿಗೆ ಮನೆಯಲ್ಲೇ ತಯಾರಿಸಿದ ಊಟ ಸೇವಿಸಿ. ಈ ಸಣ್ಣ ಬದಲಾವಣೆಗಳು ನಿಮ್ಮ ಆರೋಗ್ಯದ ಮೇಲೆ ದೊಡ್ಡ ರೀತಿಯ ಪರಿಣಾಮ ಬೀರುವುದು.


 • 6. ಊಟಕ್ಕೆ ಮೊದಲು ನೀರು ಕುಡಿಯಿರಿ

  ಪ್ರತೀ ಸಲ ನೀವು ಊಟ ಮಾಡುವ 30 ನಿಮಿಷ ಮೊದಲು ಎರಡು ಕಪ್ ನೀರು ಕುಡಿದರೆ ಆಗ ಎರಡು ವಾರದಲ್ಲಿ ಗಣನೀಯ ಪ್ರಮಾಣದಲ್ಲಿ ತೂಕ ಇಳಿಸಬಹುದು ಎಂದು ಅಧ್ಯಯನಗಳು ಹೇಳಿವೆ. ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಶುಚಿಗೊಂಡು ಫಿಟ್ ಆಗಿರುವಂತೆ ಮಾಡುವುದು ಮಾತ್ರವಲ್ಲದೆ, ತಲೆನೋವು ಕಡಿಮೆ ಮಾಡಿ ಗಂಟುಗಳಿಗೆ ಲ್ಯುಬ್ರಿಕೆಂಟ್ ಒದಗಿಸುವುದು. ಇದರಿಂದ ನೀರು ಕುಡಿದು ಫಿಟ್ ಆಗಿರಬೇಕು.


 • 7. ವ್ಯಾಯಾಮದ ಸಮಯ ವಿಭಾಗಿಸಿ

  ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಮೀಟಿಂಗ್ ಹಾಗೂ ಕಚೇರಿಯ ಬೇರೆ ಕೆಲಸಗಳಲ್ಲಿ ವ್ಯಸ್ತರಾಗಿರುವ ಕಾರಣ ಸರಿಯಾದ ಸಮಯದಲ್ಲಿ ವ್ಯಾಯಮ ಮಾಡಲು ಆಗಲ್ಲ. ಹೀಗಿದ್ದರೆ ಅದಕ್ಕೆ ನೀವು ದಿನದಲ್ಲಿ ಒಂದು ಗಂಟೆ ನಿರಂತರ ವ್ಯಾಯಾಮ ಮಾಡುವ ಬದಲು ಹತ್ತು ನಿಮಿಷದ ಐದು ಭಾಗಗಳನ್ನಾಗಿ ಮಾಡಿಕೊಂಡು ವ್ಯಾಯಾ ಮಾಡಿ. ಮೆಟ್ಟಿಲು ಹತ್ತುವುದು, ನಡೆಯುವುದು, ನೃತ್ಯ ಅಥವಾ ಇತರ ಯಾವುದೇ ದೈಹಿಕ ಚಟುವಟಿಕೆಗಳನ್ನು ನೀವು ಮಾಡಬಹುದು. ಟಿವಿ ನೋಡುವಾಗ ಜಾಹೀರಾತು ಬಂದ ವೇಳೆ ನೀವು ಸ್ವಲ್ಪ ಪುಶ್ ಅಪ್ ಮಾಡಬಹುದು.


 • 8. ಮೊಬೈಲ್ ಕರೆಯ ಲಾಭ ಪಡೆಯಿರಿ

  ಆಧುನಿಕತೆಯತ್ತ ಸಾಗುತ್ತಿರುವಂತೆ ನಾವು ತುಂಬಾ ಆಲಸಿ ಹಾಗೂ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದೇವೆ. ನೀವು ತುಂಬಾ ದೀರ್ಘಕಾಲ ಮೊಬೈಲ್ ನಲ್ಲಿ ಮಾತನಾಡುತ್ತಲಿದ್ದರೆ ಆಗ ನೀವು ನಡೆಯುವ ಮೂಲಕ ಇದರಿಂದ ಲಾಭ ಪಡೆಯಬಹುದು. ಇದರಿಂದ ದೈಹಿಕವಾಗಿ ನೀವು ಚಟುವಟಿಕೆಯಿಂದ ಇರಬಹುದು ಮತ್ತು ಯಾವುದೇ ಸಮಸ್ಯೆಯು ನಿಮಗೆ ಇರದು.


 • 9. ಕಚೇರಿಗೆ ನಡೆದುಕೊಂಡೇ ಹೋಗಿ

  ಸಾಧ್ಯವಿದ್ದರೆ ಮತ್ತು ತುಂಬಾ ಹತ್ತಿರವಿದ್ದರೆ ಆಗ ನೀವು ಕಚೇರಿಗೆ ನಡೆದುಕೊಂಡು ಹೋಗಬಹುದು. ನಡೆಯುವುದು ಒಂದು ಒಳ್ಳೆಯ ಚಿಕಿತ್ಸೆ. ಇದರಿಂದ ನೀವು ಹೆಚ್ಚು ಸಮಯ ವ್ಯಯಿಸದೆ ಫಿಟ್ ಆಗಿರಬಹುದು. ಕಚೇರಿಯು 2-3 ಕಿ.ಮೀ.ದೂರದಲ್ಲಿದ್ದರೆ ಆಗ ನೀವು ಅರ್ಧ ಗಂಟೆ ಬೇಗನೆ ನಡೆದುಕೊಂಡು ಹೋಗಬಹುದು. ದೂರವಿದ್ದರೆ ಆಗ ನೀವು ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸಿ.


 • 10. ಬೇಗ ಕೆಲಸ ಮುಗಿಸಿ

  ದಿನವಿಡಿ ಕೆಲಸ ಮಾಡಿದರೆ ಆಗ ನಿಮ್ಮ ಒತ್ತಡದ ಮಟ್ಟವು ಹೆಚ್ಚಾಗುವುದು ಮತ್ತು ಇದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇದರಿಂದ ನೀವು ಆದಷ್ಟು ಬೇಗನೆ ಕೆಲಸಗಳನ್ನು ಮುಗಿಸಿ ಆರಾಮ ಮಾಡಿ. ಬಿಸಿ ನೀರಿನ ಸ್ನಾನ, ಧಾನ್ಯ ಮತ್ತು ನಿಮಗೆ ಇಷ್ಟದ ಹಾಡು ಕೇಳಿ ಅಥವಾ ತಮಾಷೆಯ ವೀಡಿಯೋ ನೋಡಿ ಮನಸ್ಸನ್ನು ಹಗುರಗೊಳಿಸಿ.
ಆರೋಗ್ಯವೇ ಭಾಗ್ಯ ಎನ್ನುವ ನಾಣ್ನುಡಿಯಿದೆ. ಇದು ನೂರಕ್ಕೆ ನೂರರಷ್ಟು ನಿಜ. ಯಾಕೆಂದರೆ ಆರೋಗ್ಯವೇ ಇಲ್ಲದಿದ್ದರೆ ಆಗ ನೀವು ಎಷ್ಟೇ ಹಣ, ಶ್ರೀಮಂತಿಕೆ ಸಂಪಾದಿಸಿದರೂ ಅದು ಫಲ ನೀಡದು. ಆರೋಗ್ಯ ಒಂದಿದ್ದರೆ ಆಗ ಹೆಚ್ಚು ದುಡ್ಡಿಲ್ಲದೆ ಇದ್ದರೂ ಜೀವನ ಸಾಗಿಸಬಹುದು. ಒತ್ತಡವಿಲ್ಲದೆ ಜೀವನ ನಡೆಸಲು ಆರೋಗ್ಯವು ಬೇಕಾಗಿರುವುದು.

ನಮ್ಮ ಹಿರಿಯರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನಹರಿಸುತ್ತಿದ್ದ ಕಾರಣ ಅವರು ದೀರ್ಘಾಯುಷಿಗಳಾಗಿದ್ದರು. ಆದರೆ ಆಧುನಿಕ ಯುಗದಲ್ಲಿ ಎಲ್ಲವೂ ವೇಗ ಹಾಗೂ ಒತ್ತಡದಿಂದ ಕೂಡಿರುವ ಕಾರಣದಿಂದಾಗಿ ಪ್ರತಿಯೊಬ್ಬರಲ್ಲಿ ಏನಾದರೊಂದು ಅನಾರೋಗ್ಯದ ಸಮಸ್ಯೆಯು ಇದ್ದೇ ಇರುವುದು. ಹೀಗಾಗಿ ದುಡಿದ ಹಣವೆಲ್ಲಾ ಔಷಧಿಗೆ ಖರ್ಚಾಗುವುದು. ಮಾಡುವಂತಹ ಕೆಲಸದ ಒತ್ತಡದಿಂದಾಗಿ ಆರೋಗ್ಯದ ಕಡೆಗೆ ಗಮನ ನೀಡಲು ಸಾಧ್ಯವಾಗದು. ಹೀಗಾಗಿ ಕೆಲವೊಂದು ದೀರ್ಘಕಾಲಿಕ ಕಾಯಿಲೆಗಳಿಗೆ ತುತ್ತಾಗುವರು. ಇದು ದುಡಿದ ಹಣವನ್ನೆಲ್ಲಾ ಆಸ್ಪತ್ರೆಗೆ ಸುರಿಯುವಂತೆ ಮಾಡುವುದು.

ಆದರೆ ದೇಹವು ಫಿಟ್ ಆಗಿದ್ದರೆ ಆಗ ಯಾವುದೇ ರೀತಿಯ ಸಮಸ್ಯೆಯು ಬಾಧಿಸದು. ಇದಕ್ಕಾಗಿ ಆಹಾರ ಕ್ರಮವು ಸರಿಯಾಗಿರಬೇಕು. ಅದೇ ರೀತಿಯಾಗಿ ವ್ಯಾಯಾಮ ಮತ್ತು ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಮಡರೆ ಖಂಡಿತವಾಗಿಯೂ ಫಿಟ್ನೆಸ್ ಮತ್ತು ಆರೋಗ್ಯ ಪಡೆಯಬಹುದು. ತುಂಬಾ ವ್ಯಸ್ತರಾಗಿ ಇರುವಂತಹ ಜನರಿಗೆ ಅವರ ದೈನಂದಿನ ಚಟುವಟಿಕೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದೆ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ.

   
 
ಹೆಲ್ತ್