Back
Home » ಇತ್ತೀಚಿನ
WhatsApp: ಆಪ್‌ ಡೌನ್‌ಲೋಡ್‌ನಲ್ಲಿ ಟಿಕ್‌ಟಾಕ್‌ ಅನ್ನು ಹಿಂದಿಕ್ಕಿದ ವಾಟ್ಸಾಪ್‌!
Gizbot | 27th Jan, 2020 11:45 AM
 • ಹೌದು

  ಹೌದು, ಆಪ್‌ ಸ್ಟೋರ್‌ ಹಾಗೂ ಗೂಗಲ್‌ ಪ್ಲೇ ಸ್ಟೋರ್‌ ನಲ್ಲಿ ಈ ಆಪ್‌ಗಳದ್ದೇ ಪಾರುಪತ್ಯ ಮುಂದುವರೆದಿದ್ದು, ಸದ್ಯ ಅತಿ ಹೆಚ್ಚು ಡೌನ್‌ಲೋಡ್‌ ಆದ ಆಪ್‌ಗಳು ಯಾವುದು ಅನ್ನೊ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ. ಸದ್ಯ ಇದಕ್ಕೆ ಸಂಬಂದಿಸಿದಂತೆ ಟೆನ್ಸಾರ್‌ ಟವರ್‌ ಸಂಸ್ಥೆ ಸಂಶೋದನೆ ನಡೆಸಿದ್ದು, 2019ರ ನಾಲ್ಕನೇ ತ್ರೈ ಮಾಸಿಕದಲ್ಲಿ ಅತಿ ಹೆಚ್ಚು ಡೌನ್‌ಲೋಡ್‌ ಆದ ಆಪ್‌ಗಳಲ್ಲಿ ವಾಟ್ಸಾಪ್‌ ನಂಬರ್‌ ಒನ್‌ ಸ್ಥಾನ ಪಡೆದುಕೊಂಡಿದೆ.


 • ಇಂದು

  ಜಾಗತಿಕವಾಗಿ, ಇಂದು ಸಾಕಷ್ಟು ಆಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, 2019 ರ ಅವಧಿಯಲ್ಲಿ ಸಾಕಷ್ಟು ಆಪ್ಲಿಕೇಶನ್‌ಗಳನ್ನ ಬಳಕೆದಾರರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಅದರಲ್ಲೂ ಟೆನ್ಸಾರ್‌ ಟವರ್‌ ವರದಿ ಪ್ರಕಾರ ಈ ಅವಧಿಯಲ್ಲಿ ಡೌನ್‌ಲೋಡ್‌ ಆದ ಒಟ್ಟು ಅಪ್ಲಿಕೇಶನ್ ಗಳ ಸಂಖ್ಯೆ 28.7 ಬಿಲಿಯನ್ ಗಡಿ ಮುಟ್ಟಿದೆ. ಇದರಲ್ಲಿ ಆಪಲ್‌ನ ಆಪ್ ಸ್ಟೋರ್‌ನಲ್ಲಿ 7.8 ಬಿಲಿಯನ್ ನೋಂದಾಯಿಸಲಾದ ಆಪ್‌ಗಳು ಡೌನ್‌ಲೋಡ್‌ ಆಗಿದ್ದರೆ, ಗೂಗಲ್‌ನ ಪ್ಲೇ ಸ್ಟೋರ್‌ ಮೂಲಕ 20.9 ಬಿಲಿಯನ್ ನೋಂದಾಯಿಸಲಾದ ಆಪ್‌ಗಳನ್ನ ಡೌನ್‌ಲೋಡ್‌ ಮಾಡಲಾಗಿದೆ.


 • ಸದ್ಯ

  ಸದ್ಯ ಟೆನ್ಸರ್ ಟವರ್‌ನ ಸಂಶೋಧನೆಯ ಪ್ರಕಾರ, 2019 ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಅತಿ ಹೆಚ್ಚು ಡೌನ್‌ಲೋಡ್‌ ಆದ ಆಪ್‌ಗಳ ಸಾಲಿನಲ್ಲಿ ವಾಟ್ಸಾಪ್‌ ನಂಬರ್‌ ಒನ್‌ ಸ್ಥಾನ ಪಡೆದುಕೊಂಡಿದ್ದು, ಒಟ್ಟು 250 ಮಿಲಿಯನ್ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದ್ದು, ಆಪ್ ಸ್ಟೋರ್‌ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ 25 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ನೋಂದಾಯಿಸಿದರೆ, ಸುಮಾರು 250 ಮಿಲಿಯನ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಸಾಧನಗಳಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ.


 • ವಾಟ್ಸಾಪ್‌

  ಇನ್ನು ವಾಟ್ಸಾಪ್‌ ಅತಿ ಹೆಚ್ಚು ಡೌನ್‌ಲೋಡ್‌ ಆದ ಆಪ್ಲಿಕೇಶನ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ವಿಶ್ವದ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಎರಡನೇ ಅಪ್ಲಿಕೇಶನ್‌ ಆಗಿ ಬೈಟ್‌ಡ್ಯಾನ್ಸ್‌ನ ಟಿಕ್‌ಟಾಕ್ ಆಪ್‌ ಗುರ್ತಿಸಿಕೊಂಡಿದೆ. ಇದು ಆಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್‌ನಲ್ಲಿ 200 ಮಿಲಿಯನ್ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದೆ. ಇನ್ನು ಫೇಸ್‌ಬುಕ್‌ ಒಡೆತನದ ಸೊಶೀಯಲ್‌ ಮೀಡಿಯಾ ಆಪ್‌ ಇನ್‌ಸ್ಟಾಗ್ರಾಮ್ 100 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿದ್ದರೆ, ಮೇಸೆಂಜರ್ 150 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿದೆ.


 • ಫೇಸ್‌ಬುಕ್

  ಇದಲ್ಲದೆ ಫೇಸ್‌ಬುಕ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ನಲ್ಲಿ 150 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿ ಟಾಪ್‌ 5ನಲ್ಲಿ ಗುರ್ತಿಸಿಕೊಂಡಿದೆ. ಇನ್ನು 2019 ರ ನಾಲ್ಕನೇ ತ್ರೈಮಾಸಿಕದಲ್ಲಿ ಟಿಕ್‌ಟಾಕ್ ಶೇಖಡ 27% ಬೆಳವಣಿಗೆಯನ್ನು ಸಾಧಿಸಿದ್ದು, ವಾಟ್ಸಾಪ್ ಹೊರತುಪಡಿಸಿ ಭಾರತದಲ್ಲಿ ಹೆಚ್ಚಿನ ಡೌನ್‌ಲೋಡ್‌ಗಳನ್ನು ಹೊಂದಿರುವ ಏಕೈಕ ಅಪ್ಲಿಕೇಶನ್ ಇದಾಗಿದೆ ಎಂದು ವರದಿ ಹೇಳಿದೆ.




ಇಂದಿನ ಜಗತ್ತಿನಲ್ಲಿ ಎಲ್ಲವೂ ಆಪ್‌ ಮಯವಾಗುತ್ತಿದೆ. ಯಾವುದೇ ಕೆಲಸ ಮಾಡಬೇಕಾದರೂ ಯಾವುದೇ ಸಲಹೆ ಸೂಚನೆ ಬೇಕಾದರೂ ಅದಕ್ಕೆ ಸಂಬಂದಿಸಿದ ಯಾವುದಾದರೊಂದು ಆಪ್‌ ಲಭ್ಯವಿದೆಯೇ ಎಂದು ಸರ್ಚ್ ಮಾಡುವಷ್ಟರ ಮಟ್ಟಿಗೆ ತಾಂತ್ರಿಕವಾಗಿ ಮುಂದುವರೆದಿದ್ದೇವೆ. ಈಗಾಗ್ಲೆ ವಾಟ್ಸಾಪ್‌, ಟಿಕ್‌ಟಾಕ್, ಫೇಸ್‌ಬುಕ್, ಮೆಸೆಂಜರ್‌, ಇನ್‌ಸ್ಟಾಗ್ರಾಮ್‌ ಆಪ್‌ಗಳು ಆಪಲ್‌ ಐಫೋನ್‌ ಹಾಗೂ ಆಂಡ್ರಾಯ್ಡ್‌ ಆಧಾರಿತ ಸ್ಮಾರ್ಟ್‌ಫೋನ್‌ ಬಳಕೆದಾರರ ಅವಿಭಾಜ್ಯ ಅಂಗವಾಗಿ ಹೋಗಿವೆ. ಅದರಲ್ಲೂ ವಾಟ್ಸಾಪ್‌ ಜಾಗತಿಕವಾಗಿ ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಬಳಕೆದಾರರ ನೆಚ್ಚಿನ ಇನ್ಸ್‌ಸ್ಟಂಟ್‌ ಮೆಸೇಜಿಂಗ್‌ ಆಪ್‌ ಆಗಿ ಗುರ್ತಿಸಿಕೊಂಡಿದೆ.

 
ಹೆಲ್ತ್