Back
Home » ಇತ್ತೀಚಿನ
ಗೂಗಲ್ ಪೇ ಆಪ್‌ನಲ್ಲಿ 'ಫಾಸ್ಟ್‌ಟ್ಯಾಗ್' ರೀಚಾರ್ಜ್ ಈಗ ಅತೀ ಸುಲಭ!
Gizbot | 28th Jan, 2020 11:07 AM
 • ಗೂಗಲ್ ಪೇ

  ಹೌದು, ಸದ್ಯ ಗೂಗಲ್ ಪೇ ಆಪ್‌ ಯುಪಿಐ ಪೇಮೆಂಟ್ ವಲಯದಲ್ಲಿ ಮುಂಚೂಣಿಯಲ್ಲಿದೆ. ಈ ಆಪ್‌ನಲ್ಲಿ ಬಳಕೆದಾರರು ವಿದ್ಯುತ್ ಬಿಲ್, ಡಿಟಿಎಚ್ ಬಿಲ್, ಫೋನ್ ಬಿಲ್, ಫೋನ್ ರೀಚಾರ್ಜ್, ಬ್ಯಾಂಕ್‌ಗೆ ಹಣ ವರ್ಗಾವಣೆ, ಟ್ರೈನ್‌ ಬುಕ್ಕಿಂಗ್ ಒಳಗೊಂಡಂತೆ ಹಲವು ಅಗತ್ಯ ಸೇವೆಗಳ ಪೇಮೆಂಟ್ ಸುಲಭವಾಗಿ ಮಾಡಬಹುದಾಗಿದೆ. ಆದ್ರೆ ಇದೀಗ ಗೂಗಲ್ ಪೇ ತನ್ನ ಸೇವೆಗಳ ವ್ಯಾಪ್ತಿಗೆ ಹೊಸದಾಗಿ ಫಾಸ್ಟ್‌ಟ್ಯಾಗ್ ರೀಚಾರ್ಜ್ ಸೌಲಭ್ಯವನ್ನು ಸೇರಿಸಿದೆ. ಹಾಗಾದರೆ ಗೂಗಲ್ ಪೇ ಆಪ್‌ನಲ್ಲಿ ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.


 • ಫಾಸ್ಟ್‌ಟ್ಯಾಗ್ ರೀಚಾರ್ಜ್

  ರಾಷ್ಟೀಯ ಹೆದ್ದಾರಿಗಳಲ್ಲಿನ ಟೋಲ್‌ಗಳಲ್ಲಿ ಇದೀಗ ಡಿಜಿಟಲ್ ಪೇಮೆಂಟ್ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಜಾರಿಯಲ್ಲಿದ್ದು, ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಖಾತೆಗೆ ರೀಚಾರ್ಜ್ ಮಾಡಿಸಿಕೊಳ್ಳುವ ಅಗತ್ಯವಿದೆ. ಅದಕ್ಕಾಗಿ ಗೂಗಲ್ ಪೇ ಅನುಕೂಲ ಮಾಡಿಕೊಟ್ಟಿದ್ದು, ಗೂಗಲ್‌ ಪೇ ಆಪ್‌ನಲ್ಲಿ ಫಾಸ್ಟ್‌ಟ್ಯಾಗ್ ಖಾತೆಯನ್ನು ಲಿಂಕ್ ಮಾಡಿ ಅತೀ ಸುಲಭವಾಗಿ ರೀಚಾರ್ಜ್ ಮಾಡಿಸಿಕೊಳ್ಳುವ ಸೇವೆ ಇದೀಗ ಲಭ್ಯ ಇದೆ.


 • ಫಾಸ್ಟ್‌ಟ್ಯಾಗ್ ಖಾತೆ ಲಿಂಕ್ ಮಾಡಿ

  ಗೂಗಲ್ ಪೇ ಆಪ್‌ನಲ್ಲಿ ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡಿಕೊಳ್ಳಲು ಗ್ರಾಹಕರು ಮೊದಲು ಅವರ ಫಾಸ್ಟ್‌ಟ್ಯಾಗ್ ಖಾತೆಯನ್ನು ಲಿಂಕ್ ಮಾಡಬೇಕಿದೆ. ಖಾತೆಯನ್ನು ಲಿಂಕ್ ಮಾಡಲು ಗೂಗಲ್‌ ಪೇ ಆಪ್‌ನ ಬಿಲ್ ಪೇಮೆಂಟ್ಸ್‌(Bill Payments) ವಿಭಾಗದಲ್ಲಿ 'ಫಾಸ್ಟ್‌ಟ್ಯಾಗ್' ಆಯ್ಕೆ ಕಾಣಿಸುತ್ತದೆ. ನಂತರ ರುಪಿ ಐಕಾನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ಫಾಸ್ಟ್‌ಟ್ಯಾಗ್ ರೀಚಾರ್ಜ್ ಆಯ್ಕೆ ಸೆಲೆಕ್ಟ್ ಮಾಡಿರಿ.


 • ಫಾಸ್ಟ್‌ಟ್ಯಾಗ್ ಖಾತೆ ರೀಚಾರ್ಜ್ ಮಾಡಲು ಈ ಹಂತಗಳನ್ನು ಅನುಸರಿಸಿ

  * ಗೂಗಲ್ ಪೇ ಆಪ್‌ನಲ್ಲಿ ಬಿಲ್ ಪೇಮೆಂಟ್ ಆಯ್ಕೆ ಸೆಲೆಕ್ಟ್ ಮಾಡಿ
  * ಬಿಲ್ ಪೇಮೆಂಟ್‌ ಆಯ್ಕೆಯಲ್ಲಿ ಫಾಸ್ಟ್‌ಟ್ಯಾಗ್ ಆಯ್ಕೆ ಒತ್ತಿರಿ
  * ಫಾಸ್ಟ್‌ಟ್ಯಾಗ್ ಆಯ್ಕೆಯಲ್ಲಿ ರುಪಿ ಐಕಾನ್ ಸೆಲೆಕ್ಟ್ ಮಾಡಿರಿ
  * ನಂತರ ಫಾಸ್ಟ್‌ಟ್ಯಾಗ್ ರೀಚಾರ್ಜ್ ಆಯ್ಕೆಯನ್ನು ಕ್ಲಿಕ್ಕ್ ಮಾಡಿರಿ
  * ಫಾಸ್ಟ್‌ಟ್ಯಾಗ್ ನೀಡಿರುವ ಬ್ಯಾಂಕ್ ಸೆಲೆಕ್ಟ್ ಮಾಡಿರಿ.


 • ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್‍ ಚೆಕ್

  ಗೂಗಲ್ ಪೇ ಆಪ್‌ನಲ್ಲಿ ಇದೀಗ ಫಾಸ್ಟ್‌ಟ್ಯಾಗ್ ಖಾತೆಗೆ ರೀಚಾರ್ಜ್ ಮಾಡುವ ಸೇವೆಯನ್ನು ಗೂಗಲ್ ಅಳವಡಿಸಿದೆ. ಅದರೊಂದಿಗೆ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್‌ ಚೆಕ್ ಮಾಡುವ ಆಯ್ಕೆಯನ್ನು ಸಹ ಒದಗಿಸಿದೆ. ಗ್ರಾಹಕರು ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಉಳಿದಿರುವ ಮೊತ್ತವನ್ನು ಸಹ ಸುಲಭವಾಗಿ ಚೆಕ್ ಮಾಡಬಹುದಾಗಿದೆ.
ಪ್ರಸ್ತುತ ಆನ್‌ಲೈನ್ ಪೇಮೆಂಟ್ ಎಲ್ಲಡೆ ಬಳಕೆಯಲ್ಲಿದ್ದು, ಅದರಲ್ಲಿಯು ಯುಪಿಐ ಆಧಾರಿತ ಹಣ ವರ್ಗಾವಣೆ ಸೇವೆ ಹೆಚ್ಚು ಚಾಲ್ತಿಯಲ್ಲಿದೆ. ಗೂಗಲ್ ಪೇ, ಫೋನ್‌ ಪೇ, ಬೀಮ್, ಸೇರಿದಂತೆ ಹಲವು ತಾಣಗಳು ಯುಪಿಐ ಆಧಾರಿತ ಹಣ ವರ್ಗಾವಣೆಗೆ ಜನಪ್ರಿಯ ಪ್ಲಾಟ್‌ಫಾರ್ಮ್ ಆಗಿವೆ. ಅದರಲ್ಲಿಯೂ ಬಹುತೇಕ ಬಳಕೆದಾರರು ಡಿಜಿಟಲ್ ಪೇಮೆಂಟ್‌ಗೆ ಗೂಗಲ್ ಪೇ ಅಪ್ಲಿಕೇಶನ್‌ ಅನ್ನೆ ವಿಶ್ವಾಸದಿಂದ ನೆಚ್ಚಿಕೊಂಡಿದ್ದಾರೆ. ಇದೀಗ ಗೂಗಲ್ ತನ್ನ ಬಳಕೆದಾರರಿಗೆ ಖುಷಿ ಸಮಾಚಾರ ತಿಳಿಸಿದೆ.

 
ಹೆಲ್ತ್