Back
Home » ಆರೋಗ್ಯ
ನರ ಹಿಡಿದುಕೊಳ್ಳುತ್ತಿದೆಯೇ? ಹಾಗಿದ್ದರೆ ಇದೇ ಕಾರಣ
Boldsky | 8th Feb, 2020 12:00 PM
 • ಏನಿದು ಸೆಟೆದುಕೊಂಡ ನರ ಎಂದರೆ?

  ಸೆಟೆದುಕೊಂಡ ನರ ಎಂದರೆ ಒಂದು ನರ ಅಥವಾ ಹಲವಾರು ನರಗಳ ಗುಂಪಿನ ಮೇಲೆ ಅಕ್ಕ ಪಕ್ಕದ ಮಾಂಸ ಖಂಡಗಳು, ಮೂಳೆಗಳು, ಕಾರ್ಟಿಲೇಜ್ ಅಥವಾ ಟೆಂಡನ್ ಗಳು ಅತಿಯಾದ ಒತ್ತಡವನ್ನು ಉಂಟು ಮಾಡುವುದು. ಈ ಒತ್ತಡ ಆ ನಿರ್ದಿಷ್ಟ ನರಕ್ಕೆ ತನ್ನ ಕಾರ್ಯ ಚಟುವಟಿಕೆಯನ್ನು ನಿಲ್ಲಿಸುವಂತೆ ಉತ್ತೇಜಿಸಿ ಘಾಸಿಗೊಂಡ ಜಾಗವು ನೋವು ಅಥವಾ ಜಡ ವಸ್ತುವಿನ ರೀತಿಯಲ್ಲಿ ವರ್ತಿಸಲು ಪ್ರಾರಂಭವಾಗುತ್ತದೆ.

  ನಿಮ್ಮ ನರಗಳು ಮೆದುಳಿನಿಂದ ಸ್ಪೈನಲ್ ಕಾರ್ಡ್ ಮುಖಾಂತರ ಇಡೀ ದೇಹದ ಎಲ್ಲಾ ಭಾಗಗಳಿಗೆ ಮತ್ತು ಅಲ್ಲಿಂದ ವಾಪಸ್ ಮೆದುಳಿಗೆ ಮುಖ್ಯ ಸಂದೇಶಗಳನ್ನು ಕಳುಹಿಸುತ್ತಾ ತೆಗೆದುಕೊಳ್ಳುತ್ತಾ ಇರುತ್ತದೆ. ಸೆಟೆದುಕೊಂಡ ನರ ಈ ರೀತಿಯ ಸಂದೇಶದ ಸೂಚಕಗಳನ್ನು ನೋವಿನ ರೂಪದಲ್ಲಿ ಕೊಡಲು ಪ್ರಾರಂಭ ಮಾಡುತ್ತದೆ. ಆಗ ನಾವು ಯಾವುದೇ ಕಾರಣಕ್ಕೂ ಇಂತಹ ಚಿಹ್ನೆಗಳನ್ನು ನಿರ್ಲಕ್ಷಿಸುವಂತಿಲ್ಲ.


 • ಸೆಟೆದುಕೊಂಡ ನರದ ಗುಣ ಲಕ್ಷಣಗಳು ಯಾವುವು ?

  ನೋವನ್ನು ಹೊರತುಪಡಿಸಿ ಸೆಟೆದುಕೊಂಡ ಅಥವಾ ಸಂಕುಚಿತ ನರ ಈ ಕೆಳಗಿನ ಚಿಹ್ನೆಗಳು ಮತ್ತು ಗುಣ ಲಕ್ಷಣಗಳನ್ನು ತೋರಿಸಬಹುದು.

  • ಒಂದು ನಿರ್ದಿಷ್ಟ ಭಾಗ ಬಹಳ ಹೊತ್ತಿನ ತನಕ ಜಡವಾಗುವುದು.
  • ದೇಹದ ಹೊರ ಭಾಗಕ್ಕೆ ಚಾಚುವಂತಹ ತೀವ್ರ ರೀತಿಯ ನೋವು ಕಾಣಿಸುವುದು.
  • ಮುಳ್ಳುಗಳು ಅಥವಾ ಸೂಜಿಗಳು ಚುಚ್ಚಿದಂತಹ ಅನುಭವ ಉಂಟಾಗುವುದು.
  • ಒಂದು ನಿರ್ದಿಷ್ಟ ಭಾಗದಲ್ಲಿ ಮಾಂಸ ಖಂಡಗಳು ದುರ್ಬಲಗೊಳ್ಳುವುದು.
  • ಕೈಗಳಲ್ಲಿ ಅಥವಾ ಕಾಲುಗಳಲ್ಲಿ ಸಂವೇದನೆ ಇಲ್ಲದಂತಾಗುವುದು.
  • ಮಲಗಿದ್ದ ಸಮಯದಲ್ಲಿ ಈ ಮೇಲಿನ ಸಮಸ್ಯೆಗಳು ಉಲ್ಬಣವಾಗುವುದು.

 • ಕತ್ತಿನ ಭಾಗದಲ್ಲಿ ನರಗಳು ಏಕೆ ಸೆಟೆದುಕೊಳ್ಳುತ್ತವೆ?

  ನರ ಸೆಟೆದುಕೊಳ್ಳಲು ಈ ಕೆಳಗಿನ ಕಾರಣಗಳು ಇದ್ದರೂ ಇರಬಹುದು
  ದೇಹದಲ್ಲಿ ಎಲ್ಲಿಯಾದರೂ ಗಾಯವಾಗಿರುವುದು
  ದೀರ್ಘಕಾಲದ ಆರ್ಥ್ರೈಟಿಸ್
  ದೈಹಿಕ ಅಥವಾ ಮಾನಸಿಕ ಒತ್ತಡ
  ದೈಹಿಕ ಚಟುವಟಿಕೆಗಳು ಇಲ್ಲದ ಜೀವನ
  ಬೊಜ್ಜು ಅಥವಾ ಸ್ಥೂಲಕಾಯ

  ನಿಮ್ಮ ದೇಹದ ಭಾಗದ ಯಾವುದಾದರೂ ಒಂದು ನರ ಸ್ವಲ್ಪ ಸಮಯದವರೆಗೆ ಮಾತ್ರ ಸಂಕುಚಿತವಾಗಿ ಸೆಟೆದುಕೊಂಡಿದ್ದರೆ, ಅದರ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಒಂದು ವೇಳೆ ದೀರ್ಘ ಕಾಲದವರೆಗೆ ಇದೇ ಸಮಸ್ಯೆ ಮುಂದುವರೆದರೆ ವಿಪರೀತ ನೋವು ಉಂಟಾಗಿ ಶಾಶ್ವತವಾಗಿ ನರ ಹಾನಿಗೊಳಗಾಗಬಹುದು.


 • ಸೆಟೆದುಕೊಂಡ ನರ ಉಂಟಾಗಲು ಕಾರಣಗಳು

  • ರ್ಯುಮ್ಯಾಟಿಡ್ ಆರ್ಥ್ರೈಟಿಸ್
  • ಥೈರಾಯಿಡ್ ಸಮಸ್ಯೆ

  ಗಾಯದಿಂದ ಮೂಳೆಗಳ ಸಮಸ್ಯೆ ಕೂಡ ಉಂಟಾಗಬಹುದು. ಇನ್ನು ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಗಳಿಂದ carpal tunnel syndrome ಎಂಬ ಸಮಸ್ಯೆ ಕಾಡಬಹುದು ಮತ್ತು ಇದೂ ಕೂಡ ಸೆಟೆದುಕೊಂಡ ನರಗಳ ಸಮಸ್ಯೆಗೆ ಕಾರಣವಾಗಬಹುದು.

  ಆದ್ದರಿಂದ ನಿಮ್ಮ ದೇಹದ ಭಾಗದ ಯಾವುದಾದರೂ ನರ ಶಾಶ್ವತವಾಗಿ ಹಾನಿಯಾಗುವುದನ್ನು ತಪ್ಪಿಸಲು ಮೊದಲು ಅದರ ಬಗ್ಗೆ ವಿಶೇಷವಾದ ಗಮನ ನೀಡಬೇಕಾಗಿದೆ. ಕೆಲವೊಂದು ಮನೆಯಲ್ಲಿ ಮಾಡಬಹುದಾದಂತಹ ಸುಲಭವಾದ ಪರಿಹಾರಗಳು ನಿಮ್ಮ ಸಮಸ್ಯೆಯನ್ನು ದೂರ ಮಾಡಬಹುದು.


 • ನರಗಳು ಸೆಟೆದುಕೊಳ್ಳದಂತೆ ತಡೆಗಟ್ಟುವ ಸಲಹೆಗಳು

  • ನಿಮ್ಮ ದೇಹ ಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಿ
  • ಯಾವಾಗಲೂ ಒಂದೇ ಸ್ಥಿತಿಯಲ್ಲಿ ಇರುವುದನ್ನು ತಪ್ಪಿಸಿ
  • ನಿಯಮಿತವಾದ ವ್ಯಾಯಾಮ ಮಾಡಿ
  • ಆರೋಗ್ಯಕರ ತೂಕ ಮತ್ತು ಆಹಾರ ಪದ್ಧತಿಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ

  ಈ ಕೆಳಗಿನ ಕೆಲವೊಂದು ಕುಳಿತುಕೊಳ್ಳುವ ಮತ್ತು ಮಲಗುವ ಭಂಗಿಗಳನ್ನು ರೂಢಿ ಮಾಡಿಕೊಂಡರೆ ಸೆಟೆದುಕೊಂಡ ನರಗಳ ಸಮಸ್ಯೆ ದೂರವಾಗುವುದು.


 • ನರಗಳು ಸೆಟೆದುಕೊಳ್ಳದಂತೆ ತಡೆಗಟ್ಟುವ ಸಲಹೆಗಳು

  ಕುತ್ತಿಗೆಯ ಭಾಗದಲ್ಲಿ ಸೆಟೆದುಕೊಂಡ ನರಗಳಿಗೆ ಉಪಯೋಗವಾಗುವಂತಹ ಅತ್ಯುತ್ತಮ ಕುಳಿತುಕೊಳ್ಳುವ ಮತ್ತು ಮಲಗಿಕೊಳ್ಳುವ ಸ್ಥಾನಗಳು

  • ನಿಮ್ಮ ಕುತ್ತಿಗೆ ಭಾಗಕ್ಕೆ ಮತ್ತು ಮಂಡಿಗಳ ಭಾಗದಲ್ಲಿ ದಿಂಬುಗಳನ್ನು ಇಟ್ಟುಕೊಂಡು ನಿಮ್ಮ ಬೆನ್ನಿನ ಭಾಗದಲ್ಲಿರುವ ಹಿಂಭಾಗದ ಮೂಳೆಯನ್ನು ಸಾಧ್ಯವಾದಷ್ಟು ನೇರವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ.
  • ಸರಿಯಾದ ರೀತಿಯಲ್ಲಿ ಕುಳಿತುಕೊಳ್ಳುವುದು ಕೂಡ ನಿಮ್ಮ ಬೆನ್ನಿನಿಂದ ಬಹಳಷ್ಟು ಒತ್ತಡವನ್ನು ನಿವಾರಣೆ ಮಾಡುತ್ತದೆ. ನಿಮ್ಮ ಬೆನ್ನಿಗೆ ಆಸರೆ ನೀಡುವಂತಹ ಚೇರ್ ಮೇಲೆ ಕುಳಿತುಕೊಳ್ಳಿ. ಬಹಳ ಹೊತ್ತು ಒಂದೇ ಜಾಗದಲ್ಲಿ ಕುಳಿತುಕೊಳ್ಳಬೇಡಿ ಮತ್ತು ಕೈಕಾಲುಗಳನ್ನು ನೀಡಿಕೊಂಡು ಕುಳಿತುಕೊಂಡರೆ ಆಗಾಗ ಎದ್ದು ಓಡಾಡಿ.
  • ಈ ಮೇಲಿನ ಕೆಲವೊಂದು ಸುಲಭ ಉಪಾಯಗಳು ನಿಮ್ಮ ಕೈಗಳು ಮತ್ತು ಕಾಲುಗಳಲ್ಲಿ ನೋವು ಮತ್ತು ಊತ ನಿವಾರಣೆ ಮಾಡುತ್ತದೆ. ಒಂದು ವೇಳೆ ಇವುಗಳಿಂದ ಯಾವುದೇ ಉಪಯೋಗವಾಗದೆ ನೋವು ಹಾಗೆ ಇದ್ದರೆ ನಿಮ್ಮ ವೈದ್ಯರನ್ನು ತಕ್ಷಣ ಭೇಟಿ ಮಾಡಿ.

 • ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

  ಈ ಕೆಳಗಿನ ಗುಣ ಲಕ್ಷಣಗಳು ನಿಮಗೆ ಕಂಡು ಬಂದಿದ್ದೇ ಆದರೆ, ನಿರ್ಲಕ್ಷ ತೋರದೆ ತಕ್ಷಣ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

  • ಚಿಕಿತ್ಸೆಯ ಹೊರತಾಗಿಯೂ ನಿರಂತರ ಮತ್ತು ಸಹಿಸಿಕೊಳ್ಳಲು ಸಾಧ್ಯವಿಲ್ಲದಂತಹ ನೋವು ಎದುರಾಗುವುದು.
  • ತೀವ್ರ ದುರ್ಬಲತೆ (ನಿಮ್ಮ ಒಂದು ಕಾಲು ನಿಮ್ಮ ತೂಕವನ್ನು ತಡೆದುಕೊಳ್ಳಲು ಆಗದೆ ಇರುವುದು).
  • ನಿಮ್ಮ ದೇಹದ ಯಾವುದಾದರೂ ಭಾಗಗಳಲ್ಲಿ ಸಂವೇದನೆ ಇಲ್ಲದಂತಾಗುವುದು.
  • ತೀವ್ರವಾದ ಮೂತ್ರ ವಿಸರ್ಜನೆ ಮತ್ತು ಕರುಳಿನ ದುರ್ಬಲತೆಯಿಂದ ಮಲ ವಿಸರ್ಜನೆ.

  ಕುತ್ತಿಗೆಯ ಭಾಗದಲ್ಲಿ ನರ ಸೆಟೆದುಕೊಳ್ಳುವಂತೆ ಆಗುವುದು ಹಲವಾರು ಜನರು ಸಾಮಾನ್ಯವಾಗಿ ತಮ್ಮ ಜೀವನದ ಯಾವುದಾದರೂ ಒಂದು ಕಾಲಘಟ್ಟದಲ್ಲಿ ಅನುಭವಿಸುತ್ತಾರೆ. ಆದರೆ ತಮ್ಮ ಆರೋಗ್ಯಕರ ಜೀವನಶೈಲಿ ಮತ್ತು ಪೌಷ್ಟಿಕ ಸತ್ವಗಳನ್ನು ತುಂಬಿದ ಆಹಾರ ಸೇವನೆಗಳಿಂದ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು. ಅಗತ್ಯಕ್ಕಿಂತ ಹೆಚ್ಚಿನ ಕೆಲಸ ಮಾಡಬಾರದು. ಇದರಿಂದ ದೇಹದ ಮಾಂಸ ಖಂಡಗಳಿಗೆ ಸಮಸ್ಯೆ ಉಂಟಾಗುತ್ತದೆ.
ಮನುಷ್ಯನಾಗಿ ಹುಟ್ಟಿದ ಮೇಲೆ ದಿನ ಕಳೆದಂತೆ ನಾನಾ ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಂದು ಅಲ್ಪ ಪ್ರಮಾಣದಲ್ಲಿ ಬಂದು ಕೆಲ ಹೊತ್ತಿನ ನಂತರ ಮಾಯವಾಗುವ ಆರೋಗ್ಯ ಸಮಸ್ಯೆಗಳಾದರೆ, ಇನ್ನೂ ಕೆಲವು ದೀರ್ಘ ಕಾಲದವೆರೆಗೆ ಮನುಷ್ಯನ ದೇಹದಲ್ಲಿ ಠಿಕಾಣಿ ಹೂಡಿ, ಜೀವನದ ದಿಕ್ಕನ್ನೇ ಬೇರೆ ರೀತಿಯಲ್ಲಿ ಬದಲಾಯಿಸುವ ಆರೋಗ್ಯ ಸಮಸ್ಯೆಗಳು.

ಎಲ್ಲಾ ಅರೋಗ್ಯ ಸಮಸ್ಯೆಗಳಿಗೂ ಒಂದೊಂದು ಕೊಂಡಿಗಳು ಬೆಸೆದುಕೊಂಡಿರುತ್ತವೆ. ಅಂದರೆ ನಮ್ಮ ದೇಹದ ಯಾವುದಾದರೂ ಭಾಗಕ್ಕೆ ಹಾನಿಯಾದರೆ ಅದರ ಪರಿಣಾಮ ಇನ್ನಾವುದೋ ಭಾಗದ ಮೇಲೆ ಪರೋಕ್ಷವಾಗಿ ಆಗುತ್ತದೆ. ಇದರಿಂದ ಅರೋಗ್ಯ ಸಮಸ್ಯೆಗಳು ಬೇರೆ ದಿಕ್ಕಿನಲ್ಲಿ ಬದಲಾಗುತ್ತವೆ.

ಕೆಲವೊಂದು ಬಾರಿ ಜನರು ಈ ಮಾತುಗಳನ್ನು ಆಗಾಗ ಹೇಳುವುದು ನಮ್ಮ ಕಿವಿಗೆ ಬಿದ್ದಿರುತ್ತದೆ. "ಈ ಸಣ್ಣ ವಸ್ತುವನ್ನು ಇಲ್ಲಿಂದ ಅಲ್ಲಿಗೆ ಎತ್ತಿಡಲು ಆಗುತ್ತಿಲ್ಲ. ನರ ಹಿಡಿದುಕೊಂಡು ಬಿಟ್ಟಿದೆ. ಯಾವ್ಯಾವುದೋ ನೋವು ನಿವಾರಕ ಕ್ರೀಮ್ ಮತ್ತು ಔಷಧಿಗಳನ್ನು ತೆಗೆದುಕೊಂಡರೂ ಇನ್ನೂ ಬಿಟ್ಟಿಲ್ಲ " ಎಂದು. ಅಂದರೆ ಇದರರ್ಥ ಅವರ ಮಾತಿನಲ್ಲಿ ಹಿಡಿದುಕೊಂಡಿರುವ ನರಗಳು ವೈದ್ಯಕೀಯ ಭಾಷೆಯಲ್ಲಿ ಸೆಟೆದುಕೊಂಡಿರುತ್ತವೆ ಎಂದು.

ಹೀಗೆ ನರಗಳು ಹಿಡಿದುಕೊಂಡು ಕೆಲವೊಮ್ಮೆ ಬಹಳ ಘಾಸಿ ಕೊಡುತ್ತವೆ. ನಮ್ಮ ಕೈಲಾದ ಕೆಲಸಗಳನ್ನು ಮಾಡಿಕೊಳ್ಳಲು ಸಹ ಬಿಡುವುದಿಲ್ಲ. ಸೆಟೆದುಕೊಂಡ ನರದಿಂದ ಅಥವಾ ನರಗಳ ಗುಂಪಿನಿಂದ ದೇಹದ ಒಂದು ನಿರ್ಧಿಷ್ಟ ಭಾಗ ಜಡವಾಗಿ ಕೆಲವೊಮ್ಮೆ ಭಯವನ್ನು ಹುಟ್ಟು ಹಾಕುತ್ತದೆ. ಇದು ನರ ದೌರ್ಬಲ್ಯದ ಒಂದು ಕಾರಣ ಎಂದುಕೊಂಡರೂ ಆಶ್ಚರ್ಯ ಇಲ್ಲ. ಈ ಸಮಸ್ಯೆಯಿಂದ ದೇಹದಲ್ಲಿ ಸರಾಗವಾಗಿ ನಡೆಯುತ್ತಿರುವ ರಕ್ತ ಸಂಚಾರದಲ್ಲಿ ಕೂಡ ವ್ಯತ್ಯಾಸವಾಗಿ ದೇಹದಲ್ಲಿ ಇನ್ನಿತರ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ.

   
 
ಹೆಲ್ತ್