Back
Home » ಆರೋಗ್ಯ
ಮಾಂಸಾಹಾರ ತಿಂದರೆ ಕೊರೊನಾ ವೈರಸ್ ಹರಡುವುದೇ?
Boldsky | 10th Feb, 2020 01:34 PM
 • ಸಮುದ್ರಾಹಾರ ತಿನ್ನಬಹುದೇ?

  ಕೊರೊನಾ ವೈರಸ್‌ ಮೊದಲಿಗೆ ಹುಟ್ಟಿಕೊಂಡಿದ್ದು ಚೀನಾದ ವುಹಾನ್‌ ನಗರದ ಮಾಂಸದ ಮಾರುಕಟ್ಟೆಯಲ್ಲಿ ಎನ್ನಲಾಗುತ್ತಿದೆ. ಚೀನಾದ ಮಾಂಸದ ಮಾರುಕಟ್ಟೆಯಲ್ಲಿ ನಾನಾ ಬಗೆಯ ಮಾಂಸಗಳು ದೊರೆಯುತ್ತವೆ. ಅಲ್ಲಿ ಚಿಕನ್, ಸಮಯದ್ರಾಹಾರ, ಮಟನ್, ಹಂದಿ ಮಾಂಸ ಅಷ್ಟೇ ಏಕೆ ಹಾವು, ಬಾವಲಿ ಕೂಡ ದೊರೆಯುತ್ತವೆ.

  ಆದ್ದರಿಂದಾಗಿ ಕೊರೊನಾ ವೈರಸ್ ಯಾವ ಮಾಂಸಾಹಾರದ ಮೂಲಕ ಹರಡಿತು ಎಂದು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಆದ್ದರಿಂದ ಸಮುದ್ರಾಹಾರ ಮುಖಾಂತರವೇ ಹರಡಿತು ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿಯ ಮೀನು ಮಾರುಕಟ್ಟೆಗೆ ಹೋದವರಲ್ಲಿ ಮೊದಲಿಗೆ ಕಂಡು ಬಂದಿತು. ಆದರೆ ಭಾರತದ ಸಮುದ್ರಾಹಾರ ತಿನ್ನುವುದಕ್ಕೆ ಭಯ ಪಡಬೇಕಾಗಿಲ್ಲ.

  ಕೊರೊನಾ ವೈರಸ್‌ ಭಾರತದಲ್ಲಿಯೂ ಪತ್ತೆಯಾಗಿತ್ತು. ಆದರೆ ಆ ವ್ಯಕ್ತಿಗಳು ಚೀನಾದಿಂದ ಬಂದವರಾಗಿದ್ದು, ಅಲ್ಲಿ ಕೊರೊನಾ ಸೋಂಕಿರುವ ವ್ಯಕ್ತಿಗಳಿಂದ ಇವರಿಗೆ ಹರಡಿತ್ತು. ಆದ್ದರಿಂದ ಸಮುದ್ರಾಹಾರ ತಿನ್ನಲು ಭಯ ಪಡಬೇಕಾಗಿಲ್ಲ. ಸಮುದ್ರಾಹಾರ ತಯಾರಿಸಿ ತಿನ್ನುವಾಗ ಚೆನ್ನಾಗಿ ಬೇಯಿಸಿ ತಿನ್ನಿ.


 • ಬಾವಲಿ ಮಾಂಸದಿಂದ ಹರಡುತ್ತದೆಯೇ?

  ಇತ್ತೀಚೆಗೆ ಚೀನಾದಲ್ಲಿ ಯುವತಿಯೊಬ್ಬಳು ಬಾವಲಿ ಸೂಪ್ ಕುಡಿಯುತ್ತಿರುವ ವೀಡಿಯೋ ಪೋಸ್ಟ್ ಮಾಡಿದ್ದಳು. ಆ ಪೋಸ್ಟ್ ನೋಡಿದವರು ಬಾವಲಿ ತಿನ್ನುವ ಅವಳಿಂದ ಕೊರೊನಾ ವೈರಸ್ ಹರಡಿತು ಎಂದು ಸುದ್ದಿ ಹಬ್ಬಿಸಿದರು. ಬಾವಲಿ ಮೂಲಕ ಈ ಹಿಂದೆಯೂ ರೋಗ ಹರಡಿದೆ. ನಿಫಾ ವೈರಸ್ ಹರಡಲು ಬಾವಲಿ ಪ್ರಮುಖ ಕಾರಣವಾಗಿತ್ತು. ಆದರೆ ಕೊರೊನಾ ವೈರಸ್‌ ಬಾವಲಿಯಿಂದ ಹರಡುತ್ತದೆ ಎಂಬ ಯಾವ ದಾಖಲೆಯೂ ಇಲ್ಲ. ಕೊರೊನೊ ವೈರಸ್‌ ಹರಡುವುದಕ್ಕೂ ಬಾವಲಿ, ಹಾವುಗಳಿಗೆ ಏನಾದರೂ ಸಂಬಂಧವಿದೆಯೇ? ಎಂಬುವುದರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.


 • ಕೊರೊನಾ ಬೀರ್‌ಗೂ ಕೊರೊನಾ ವೈರಸ್‌ಗೂ ಸಂಬಂಧವಿದೆಯೇ?

  ಕೊರೊನಾ ಬೀರ್ ಎನ್ನುವುದು ಬೀರ್‌ನ ಬ್ರ್ಯಾಂಡ್. ಅದಕ್ಕೂ, ಕೊರೊನಾ ವೈರಸ್‌ಗೂ ಯಾವುದೇ ಸಂಬಂಧವಿಲ್ಲ. ಜನರು ಇದೀಗ ಗೂಗಲ್‌ನಲ್ಲಿ ಕೊರೊನಾ ಬೀರ್‌ ಬಗ್ಗೆ ಸರ್ಚ್‌ ಮಾಡುತ್ತಿದ್ದಾರಂತೆ. ಇದರಿಂದ ಬ್ರ್ಯಾಂಡ್‌ಗೆ ಹೊಡೆತ ಬೀಳುತ್ತಿದೆ ಎಂದು 'ಕೊರೊನಾವೈರಸ್' ಹೆಸರನ್ನು 'ಬಡ್‌ಲೈಟ್‌ವೈರಸ್' ಅಂತ ಬದಲಾಯಿಸಲು 15 ಮಿಲಿಯನ್ ಡಾಲರ್ ಆಫರ್ ಮಾಡಿದೆ.


 • ಬೆಳ್ಳುಳ್ಳಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತದೆಯೇ?

  ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮಾರ್ಥ್ಯ ಇದೆ. ಇದನ್ನು ತಿನ್ನುವುದರಿಂದ ಕ್ಯಾನ್ಸರ್ ಕೂಡ ತಡೆಗಟ್ಟಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕೊರೊನಾ ಸೋಂಕು ದಾಳಿ ಮಾಡುತ್ತದೆ. ಹಾಗೇ ನೋಡಿದರೆ ಬೆಳ್ಳುಳ್ಳಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಆದರೆ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಎಷ್ಟರ ಮಟ್ಟಿಗೆ ಸಹಕಾರಿ ಎಂಬುವುದು ಇನ್ನೂ ಪತ್ತೆಯಾಗಿಲ್ಲ.


 • ಮಾಂಸಾಹಾರ ಸೇವನೆಯಿಂದ ಕೊರೊನಾ ವೈರಸ್ ಬರುವುದೇ?

  ಮಾಂಸಾಹಾರ ತಿನ್ನುವುದರಿಂದ ಕೊರೊನಾ ವೈರಸ್ ಬರುತ್ತದೆ ಎಂಬ ತಪ್ಪು ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಮಾಂಸಾಹಾರದಿಂದ ಕೊರೊನಾ ವೈರಸ್‌ ಬರುತ್ತದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಭಾರತದಲ್ಲಿ ಮಾಂಸಾಹಾರ ಸೇವನೆ ಮಾಡಲು ಯೋಚಿಸಬೇಕಾಗಿಲ್ಲ. ಮಾಂಸಾಹಾರವನ್ನು ಶುಚಿಯಾಗಿ ಮಾಡಿ, ಚೆನ್ನಾಗಿ ಬೇಯಿಸಿ ತಿನ್ನಿ.
ಕೊರೊನಾ ವೈರಸ್‌ನ ಭೀಕರತೆಗೆ ಚೀನಾ ತತ್ತರಿಸಿ ಹೋಗಿದೆ. ಇತರ ದೇಶಗಳಲ್ಲೂಈ ರೋಗ ಹರಡಿದ್ದು, ಪ್ರತಿಯೊಂದು ದೇಶವೂ ಈ ರೋಗ ಹರಡುವುದನ್ನು ತಡೆಯಲು ತುಂಬಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಕೊರೊನಾ ವೈರಸ್ ಬಗ್ಗೆ ಜನ ಸಾಮಾನ್ಯರಲ್ಲಿ ಭೀತಿ ಉಂಟಾಗಿದೆ. ಕೆಲವೊಂದು ತಪ್ಪು ಮಾಹಿತಿಗಳು ಜನರ ಭೀತಿಯನ್ನು ಹೆಚ್ಚು ಮಾಡುವ ಕಾರ್ಯ ಮಾಡುತ್ತಿವೆ. ಮಾಂಸಾಹಾರ ತಿಂದರೆ ಕೊರೊನಾ ವೈರಸ್ ಹರಡುತ್ತದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿದ್ದು, ಮಾಂಸ ತಿಂದರೆ ಕೊರೊನಾ ಬರಬಹುದೇ? ಎಂಬ ಭಯ ಮಾಂಸಾಹಾರ ಪ್ರಿಯರಲ್ಲಿ ಹುಟ್ಟು ಹಾಕಿದೆ.

ಈ ಲೇಖನದಲ್ಲಿ ಯಾವ ಆಹಾರ ತಿಂದರೆ ತೊಂದರೆಯಿಲ್ಲ, ಆಹಾರದ ಕುರಿತು ಹರಡಿರುವ ತಪ್ಪು ಕಲ್ಪನೆಗಳೇನು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

   
 
ಹೆಲ್ತ್