Back
Home » ಆರೋಗ್ಯ
ಚರ್ಮದ ಕಾಯಿಲೆಗಳಿಗೆ ಅತ್ಯುತ್ತಮ ಹೋಮಿಯೋಪಥಿ ಔಷಧಿಗಳು
Boldsky | 11th Feb, 2020 12:51 PM
 • 1. ಗಂಧಕ (Sulphur)

  ಗಂಧಕ ಪೈರೈಟ್ ಎಂಬ ಅದಿರಿನ ರೂಪದಲ್ಲಿ ನೈಸರ್ಗಿಕವಾಗಿ ಲಭ್ಯವಿದ್ದರೂ ಇದನ್ನು ಸಂಸ್ಕರಿಸಲು ಹೆಚ್ಚಿನ ವೆಚ್ಚ ತಗಲುವ ಕಾರಣ ಇಂದು ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸುವಾಗ ಸಹ ಉತ್ಪನ್ನವಾಗಿ ದೊರಕುವ ಗಂಧಕವನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಗಂಧಕ ಚರ್ಮಕ್ಕೆ ತಗುಲಿದರೆ ಅಲ್ಲಿ ತುರಿಕೆ ಪ್ರಾರಂಭವಾಗುತ್ತದೆ. ಒಂದು ಅಧ್ಯಯನದಲ್ಲಿ ಎಕ್ಸಿಮಾ ಅಥವಾ atopic dermatitis ಎಂಬ ಚರ್ಮದ ಕಾಯಿಲೆ ಇರುವ ನಲವತ್ತೆರಡು ವ್ಯಕ್ತಿಗಳಿಗೆ ಗಂಧಕವನ್ನು ಒಂದು ನಿಗದಿತ ಪ್ರಮಾಣದಲ್ಲಿ ಎಕ್ಸಿಮಾ ಇರುವ ಭಾಗಕ್ಕೆ ಹಚ್ಚಿಕೊಳ್ಳಲು ಹೇಳಿದಾಗ ಇದು ಪ್ರಾರಂಭದಲ್ಲಿ ತುರಿಕೆಯನ್ನು ಹೆಚ್ಚಿಸಿದರೂ ಕ್ರಮೇಣ ಇಲ್ಲವಾಗಿರುವುದನ್ನು ದಾಖಲಿಸಲಾಗಿದೆ. ಈ ತೊಂದರೆಯ ಹೊರತಾಗಿ ಗಂಧಕವನ್ನು ಈ ಕೆಳಗಿನ ಕಾಯಿಲೆಗಳಿಗೂ ಚಿಕಿತ್ಸಾ ರೂಪದಲ್ಲಿ ಬಳಸಬಹುದು:

  • ಹಾಸಿಗೆ ಹುಣ್ಣುಗಳು
  • ಮೊಡವೆ
  • ಕೀವುಗುಳ್ಳಿಗಳು
  • ಪಾದದ ಆಣಿಗಳು
  • ಬಂಗು ಅಥವಾ Freckles
  • ಹರ್ಪಿಸ್
  • ತುರಿಕೆ ಮತ್ತು ಉರಿತ
  • ಹುಳಕಡ್ಡಿ.

 • 2. ಕಾಡಿಗೆ (Graphites)

  ಇದು ಇಂಗಾಲದ ಒಂದು ರೂಪವಾಗಿದೆ ಹಾಗೂ ಇದರಲ್ಲಿ ಕೊಂಚ ಪ್ರಮಾಣದ ಕಬ್ಬಿಣದ ಅಂಶವೂ ಇರುತ್ತದೆ. ಈ ವಿಧಾನವನ್ನು ಜರ್ಮನಿಯ ಭೌತಶಾಸ್ತ್ರಜ್ಞ ಸ್ಯಾಮ್ಯುಯೆಲ್ ಹಾಹ್ನೆಮನ್ ರವರು ಕಂಡುಹಿಡಿದಿದ್ದಾರೆ. ಕಾಡಿಗೆಯನ್ನು ತೀವ್ರ ತರದ ಎಕ್ಸಿಮಾ ಹಾಗೂ ಇತರ ಚರ್ಮದ ಕಾಯಿಲೆಗಳಿಗೆ ಔಷಧದ ರೂಪದಲ್ಲಿ ಬಳಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಕಾಡಿಗೆಯನ್ನು ಹಲವಾರು ಬಗೆಯ ಚರ್ಮದ ವ್ಯಾಧಿಗಳನ್ನು ಗುಣಪಡಿಸಲು ಬಳಸಬಹುದು. ಇವುಗಳಲ್ಲಿ ಪ್ರಮುಖವಾದವು ಎಂದರೆ:

  • ಎಕ್ಸಿಮಾ
  • ಚರ್ಮ ತೀವ್ರವಾಗಿ ಒಣಗುವ ಮೂಲಕ ಎದುರಾಗುವ ಪಕಳೆ ಏಳುವುದು ಹಾಗೂ ಬಿರುಕು ಬಿಡುವುದು
  • ಗಾಯ ಅಥವಾ ಶಸ್ತ್ರಕ್ರಿಯೆ ಆದ ಬಳಿಕ ಹೊಲಿದ ಭಾಗದ ಚರ್ಮದ ಮೇಲೆ ದಪ್ಪನಾದ ಚರ್ಮ ಬೆಳೆದಿರುವುದನ್ನು ಸರಿಪಡಿಸಲು
  • ವಿಶೇಷವಾಗಿ ಎಕ್ಸಿಮಾ ಮತ್ತು ತುರಿಕೆಗೆ ಈ ವಿಧಾನ ಅತ್ಯುತ್ತಮ ಎಂದು ಅಧ್ಯಯನಗಳು ತಿಳಿಸಿವೆ

 • 3. ಬೊಂಡಾಸ್‌ ಮೀನು (Squid)

  ಇದೊಂದು ಮೃದ್ವಂಗಿಯಂತಿರುವ ಆಕ್ಟೋಪಸ್ ಜಾತಿಗೆ ಸೇರಿದ ಕಟಲ್ ಫಿಶ್ ಅಥವಾ ಅಷ್ಟಪದಿ ಮೀನು ಆಗಿದೆ. ಈ ಸಾಗರಜೀವಿಯ ಖಾದ್ಯವನ್ನು ಔಷಧಿಯ ರೂಪದಲ್ಲಿ ವಿಶೇಷವಾಗಿ ಬಾಣಂತಿಯರಿಗೆ ಎದುರಾಗುವ ಖಿನ್ನತೆಯನ್ನು ನಿವಾರಿಸಲು ನೀಡಲಾಗುತ್ತಿತ್ತು. ಅಲ್ಲದೇ ರಜೋನಿವೃತ್ತಿಯ ಸಮಯದಲ್ಲಿಯೂ ಮಾನಸಿಕ ತೊಳಲಾಟವನ್ನು ನಿವಾರಿಸಲು ನೀಡಬಹುದು ಎಂದು British Homeopathic Association ಸಂಸ್ಥೆ ತಿಳಿಸಿದೆ. National Center For Homeopathy ಸಂಸ್ಥೆಯ ಪ್ರಕಾರ ಈ ಮೀನನ್ನು ಅಸಾಧ್ಯ ನೋವು ಇರುವ ಚರ್ಮದ ತೊಂದರೆ ಇರುವ ವ್ಯಕ್ತಿಗಳು ಆಹಾರದ ಮೂಲಕ ಸೇವಿಸಬಹುದು ಎಂದು ತಿಳಿಸಿದೆ. ಉಳಿದಂತೆ ಈ ಮೀನಿನ ಖಾದ್ಯ ಗುಣಪಡಿಸುವ ರೋಗಗಳೆಂದರೆ:

  • ತಲೆಹೊಟ್ಟು
  • ಎಕ್ಸಿಮಾ
  • ಬಂಗು
  • ಹುಳಕಡ್ಡಿ
  • ಕೀವುಗುಳ್ಳೆ
  • ತಿರುಚಿದ ನರಗಳು (Varicose veins)
  • ನರೂಲಿ (Warts)

 • 4. ಉಪ್ಪು (Natrum muriaticum)

  ಇದೊಂದು ಬಗೆಯ ಸಾಮಾನ್ಯ ಉಪ್ಪೇ ಆಗಿದ್ದರೂ ಸಾಗರದ ಉಪ್ಪಲ್ಲ ಬದಲಿಗೆ ಮಿಲಿಯಾಂತರ ವರ್ಷ ಹಿಂದೆ ಸಾಗರವಾಗಿದ್ದು ಈಗ ಒಣಗಿ ಉಪ್ಪಾಗಿರುವ ಗಣಿಯ ಉಪ್ಪು. ಆದರೆ ಇನ್ನೂ ನೀರಿನಂಶ ಉಳಿದುಕೊಂಡಿರುವ ಉಪ್ಪನ್ನು ಈ ಅಗತ್ಯತೆಗಾಗಿ ಬಳಸಿಕೊಳ್ಳಲಾಗುತ್ತದೆ. ಉಪ್ಪು ಎಂದರೆ ಸೋಡಿಯಂ ಕ್ಲೋರೈಡ್ ಅಷ್ಟೇ. ಆದರೆ ಈ ಉಪ್ಪಿನಲ್ಲಿ ಕೊಂಚ ಪೊಟ್ಯಾಶಿಯಂ ಅಂಶ ಬೆರೆತಿರುತ್ತದೆ. ನೈಸರ್ಗಿಕ ರೂಪದಲ್ಲಿ ಈ ಬಗೆಯ ಉಪ್ಪು ಅಲ್ಪವಾಗಿರುವ ಕಾರಣ ಕೃತಕವಾಗಿ ಪೊಟ್ಯಾಶಿಯಂ ಬೆರೆಸಿ ಔಷಧಿ ರೂಪದಲ್ಲಿ ಒದಗಿಸಲಾಗುತ್ತದೆ. ಇದನ್ನು ಪ್ರಮುಖವಾಗಿ ವಲ್ಗಾರಿಸ್ ಎಂಬ ಮೊಡವೆ (acne vulgaris) ಅಥವಾ ಚಿಕ್ಕ ಗಾತ್ರದ ಮೊಡವೆಯೊಂದು ಪ್ರಾರಂಭವಾದ ಬಳಿಕ ನಿಧಾನವಾಗಿ ಸುತ್ತಲೂ ಹರಡುತ್ತಾ ಇಡಿಯ ಮುಖವನ್ನೇ ವ್ಯಾಪಿಸುವ ಮೊಡವೆಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ.
  ಉಳಿದಂತೆ ಹರ್ಪಿಸ್ ಅಥವಾ ಎಕ್ಸಿಮಾದಿಂದ ಎದುರಾಗ ಗುಳ್ಳೆಗಳು
  ಎಕ್ಸಿಮಾ ಅಥವಾ ಸೂರ್ಯನ ಪ್ರಖರತೆ ಅಥವಾ ಅಲರ್ಜಿಯಿಂದ ಎದುರಾಗಿರುವ ಚರ್ಮ ಕೆಂಪಗಾಗಿರುರುವ ಸ್ಥಿತಿ


 • 5. ರುಸ್ ಟಾಕ್ಸಿಕೋಡೆಂಡ್ರಾನ್ (Rhus toxicodendron)

  ಇದೊಂದು ಗಿಡದ ಹೆಸರಾಗಿದ್ದು ಇದಕ್ಕೆ ಪಾಯ್ಸನ್ ಓಕ್ ಅಥವಾ ಪಾಯ್ಸನ್ ಐವಿ (Poison Ivy) ಎಂದೂ ಕರೆಯಲಾಗುತ್ತದೆ. ಈ ಎಲೆಯನ್ನು ಮಡಚಿದಾಗ ಹಾಲಿನಂತಹ ದ್ರವ ಒಸರುತ್ತದೆ ಹಾಗೂ ಇದು ಚರ್ಮಕ್ಕೆ ತಗಲಿದರೆ ಭಾರೀ ತುರಿಕೆ ಎದುರಾಗುತ್ತದೆ. ಈ ರಸವನ್ನು ಹೋಮಿಯೋಪಥಿ ಸಂಧಿವಾತದ ಚಿಕಿತ್ಸೆಗೆ ಪ್ರಮುಖವಾಗಿ ಬಳಸಿಕೊಳ್ಳುತ್ತದೆ. ಉಳಿದಂತೆ ಈ ಔಷಧಿಯನ್ನು ಬಳಸಲಾಗುವ ಕಾಯಿಲೆಗಳೆಂದರೆ:

  • ಹರ್ಪಿಸ್
  • ಎಕ್ಸಿಮಾ
  • ಡರ್ಮಟೈಟಿಸ್
  • ಹಾಗೂ ಉರಿ, ತುರಿಕೆ, ಬೆಂಕಿ ಬಿದ್ದ ಅನುಭವ ಹಾಗೂ ಚರ್ಮದ ಕಾಯಿಲೆಗಳಿಂದ ಎದುರಾಗಿರುವ ನೋವನ್ನು ಕಡಿಮೆ ಮಾಡಲೂ ಉಪಯೋಗಿಸಬಹುದು

 • 6. ಆರ್ಸೆನಿಕ್ ಟ್ರೈಯಾಕ್ಸೈಡ್ (Arsenicum album)

  ಆರ್ಸೆನಿಕ್ ಟ್ರೈಯಾಕ್ಸೈಡ್ ಎಂಬ ಪ್ರಬಲ ಆಮ್ಲವನ್ನು ನೀರಿನಲ್ಲಿ ಕರಗಿಸಲಾಗುತ್ತದೆ. ಎಲ್ಲಿಯವರೆಗೆ ಇದರಲ್ಲಿರುವ ಆರ್ಸೆನಿಕ್ ಎಲ್ಲವೂ ಕರಗುವುದಿಲ್ಲವೂ ಅಲ್ಲಿಯವರೆಗೂ ನೀರು ಬೆರೆಸಲಾಗುತ್ತದೆ. ಈಗ ಈ ಆರ್ಸೆನಿಕ್ ನಿಂದ ಯಾವುದೇ ಭಯವಿಲ್ಲ. ಈ ಔಷಧಿಯನ್ನು ಆರ್ಸೆನಿಕ್ ವಿಷದಿಂದ ಎದುರಾಗಿರುವ ಕಾಯಿಲೆಗಳಿಗೆ ಚಿಕಿತ್ಸೆಯ ರೂಪದಲ್ಲಿ ಬಳಸಲಾಗುತ್ತದೆ. ಇವುಗಳೆಂದರೆ:

  • ಅತಿ ಎನಿಸುವಷ್ಟು ಚರ್ಮದಲ್ಲಿ ಪಕಳೆ ಏಳುವುದು (arsenical keratosis)
  • ಆರ್ಸೆನಿಕ್ ಗೆ ಒಡ್ಡಿಕೊಂಡ ಕಾರಣ ಎದುರಾದ ಕ್ಯಾನ್ಸರ್
  • ಚರ್ಮದ ಮೇಲೆ ಅತಿ ಎನಿಸುವಷ್ಟು ಪುಡಿರೂಪದ ಸತ್ತ ಜೀವಕೋಶಗಳು ಇರುವುದು (Exfoliative dermatitis)
  • ಅಲ್ಲದೇ ಸೋರಿಯಾಸಿಸ್ ಮತ್ತು ಪ್ರಬಲ ಎಕ್ಸಿಮಾ ಕಾಯಿಲೆಗೂ ಉತ್ತಮ ಔಷಧಿಯಾಗಿದೆ.

 • 7. ಕಾಂಥಾರಿಸ್ (Cantharis)

  ಹಸಿರು ಜೀರುಂಡೆಯ ದೇಹದಲ್ಲಿರುವ ಈ ಅಂಶವನ್ನು ಪ್ರತ್ಯೇಕಿಸಿ ತೆಗೆಯಲಾಗುತ್ತದೆ. ಇದೊಂದು ವಿಷವಸ್ತುವಾಗಿದ್ದು ಇದು ತಗಲಿದ ಭಾಗದಲ್ಲಿ ತಕ್ಷಣವೇ ಉರಿ ಗುಳ್ಳೆಗಳು ಏಳುತ್ತವೆ. ಹೋಮಿಯೋಪಥಿ ಈ ಶಕ್ತಿಯನ್ನು ಔಷದದ ರೂಪದಲ್ಲಿ ಈ ಕೆಳಗಿನ ಕಾಯಿಲೆಗಳಿಗೆ ಬಳಸುತ್ತದೆ:

  • ಚಿಕ್ಕ ಪುಟ್ಟ ಚರ್ಮದ ಸುಟ್ಟ ಗಾಯಗಳು
  • ಚಿಕ್ಕ ಗುಳ್ಳೆಗಳು, ತುರಿಕೆ ಮತ್ತು ಉರಿ
  • ಆದರೆ ಔಷಧಿಯ ರೂಪದಲ್ಲಿ ಇದನ್ನು ಬಳಸಿದಾಗ ಉರಿ ತಕ್ಷಣ ಕಡಿಮೆಯಾಗಿ ತಂಪಾಗುವುದಲ್ಲದೇ ಶೀಘ್ರವೇ ಹೊಸಚರ್ಮ ಬೆಳೆಯುತ್ತದೆ.

 • 8. ರಾನುಕುಲಸ್ ಬಲ್ಬೊಸಸ್ (Ranunculus bulbosus)

  ಇದೊಂದು ಮೂಲಂಗಿ ಜಾತಿಯ ಗಡ್ಡೆಯಾಗಿದ್ದು ಇದಕ್ಕೆ ಸೆಂಟ್ ಅಂಥೋನಿ ಗಡ್ಡೆ ಎಂಬ ಅನ್ವರ್ಥನಾಮವೂ ಇದೆ. ಇದರ ಗಡ್ಡೆ ಬೆಳ್ಳಗಿರುವ ಕಾರಣ buttercups ಎಂದೂ ಕರೆಯುತ್ತಾರೆ. ಇದರ ಹೂವುಗಳು ಹಳದಿ ಬಣ್ಣದಲ್ಲಿದ್ದು ವಿಷಕಾರಕವಾಗಿವೆ. ಇದನ್ನು ಸ್ನಾಯುಗಳ ಅಂಗಾಂಶ ಮತ್ತು ಚರ್ಮದ ಕಾಯಿಲೆಗಳಿಗೆ ಬಳಸಲಾಗುತ್ತದೆ. National Center of Homeopathy ಇದನ್ನು ಬಳಸಲಾಗುವ ಕಾಯಿಲೆಗಳೆಂದರೆ:

  • ಎಕ್ಸಿಮಾ
  • ಹರ್ಪಿಸ್ ಜೋಸ್ಟರ್
  • ಪಾದಗಳ ಆಣಿ
  • ಹಸ್ತದ ಚರ್ಮ ಬಿರುಕು ಬಿಡುವುದು ಹಾಗೂ ಬೆರಳುಗಳ ತುದಿಗಳಲ್ಲಿ ರಕ್ತ ಒಸರುವುದು
  • ತುರಿಕೆ

 • 9. ಹೆಪರ್‌ ಸಲ್ಫ್ಯೂರಿಯಸ್‌ (Hepar sulphuris)

  ಹೋಮಿಯೋಪತಿ ಪಿತಾಮಹರಾದ ಸಾಮ್ಯುಯೆಲ್ ಹಾಹ್ನೆಮನ್ ರವರೇ ಕಂಡುಹಿಡಿದಿರುವ ಈ ಔಷಧಿ ಪ್ರಬಲ ಎಕ್ಸಿಮಾಕ್ಕೆ ಉತ್ತಮ ಔಷಧಿಯಾಗಿದೆ. ಈ ಅಂಶವನ್ನು ಸಾಗರ ಚಿಪ್ಪುಗಳ ಒಳಭಾಗದ ಪದರಗಳನ್ನು ಕೆರೆದು ತೆಗೆದಾಗ ಸಿಗುವ ಪುಡಿಯಿಂದ ಪ್ರತ್ಯೇಕಿಸಲಾಗುತ್ತದೆ. ಅಲ್ಲದೇ ಗಂಧಕ ಸಸ್ಯದ ಹೂವುಗಳನ್ನು ಸುಟ್ಟ ಬೂದಿಯಿಂದಲೂ ಪ್ರತ್ಯೇಕಿಸಬಹುದು. ಇದನ್ನು ಚಿಕಿತ್ಸೆಗೆ ಬಳಸಲಾಗುವ ಕಾಯಿಲೆಗಳು ಎಂದರೆ:

  • ಎಕ್ಸಿಮಾ ಅಥವಾ ಬಿರುಕುಬಿಟ್ಟ್ ಚರ್ಮ
  • ಮೊಡವೆ
  • ಶೀತದ ಪ್ರಭಾವದಿಂದ ಎದುರಾಗಿರುವ ಗುಳ್ಳೆಗಳು
  • ನೋವಿನಿಂದ ಕೂಡಿರುವ ಕೀವುಗುಳ್ಳೆಗಳು
  • ಅಲ್ಲದೇ ಈ ಔಷಧಿ ಇರುವ ಭಾಗದಲ್ಲಿ ಮೊಡವೆಗಲು ಮೂಡಲು ಕಾರಣವಾಗಿರುವ Staphylococcus aureus ಎಂಬ ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ.

 • 10. ಮೆಜೆರಿಯಂ (Mezereum)

  ಮೆಜೆರಿಯಂ ಚಿಕ್ಕ ಪೊದೆಯ ಕಾಂಡದ ತೊಗಟೆಯಿಂದ ಈ ಔಷಧಿಯನ್ನು ಪ್ರತ್ಯೇಕಿಸಲಾಗುತ್ತದೆ. ವಿಶೇಷವಾಗಿ ಹಲ್ಲು ನೋವು ಮತ್ತು ತಲೆನೋವಿಗೆ ಈ ಔಷಧಿ ಉತ್ತಮ ಆಯ್ಕೆಯಾಗಿದೆ. ಆದರೆ ಸ್ಯಾಮ್ಯುಯೆಲ್‌ ಹಾಹ್ನೆಮನ್ ರವರು ಇದನ್ನು Crusta lactea ಎಂಬ ಕಾಯಿಲೆಗೆ ಔಷಧಿಯಾಗಿ ಬಳಸಬಹುದು ಎಂದು ತಿಳಿಸಿದ್ದಾರೆ. ಇದೊಂದು ಪುಟ್ಟ ಮಕ್ಕಳಲ್ಲಿ ಕಂಡುಬರುವ ರೋಗವಾಗಿದೆ. ಈ ಕಾಯಿಲೆಗೆ ತುತ್ತಾದ ಮಕ್ಕಳ ಕಿವಿಯ ಹಿಂಭಾಗ ಮತ್ತು ತಲೆಯ ಚರ್ಮದ ಅಡಿಯಲ್ಲಿ ಕೀವುಗುಳ್ಳೆಗಳು ಎದುರಾಗಿ ಚರ್ಮ ಪಕಳೆ ಏಳುವುದು ಮತ್ತು ಜಿಡ್ಡು ಜಿಡ್ಡಾಗಿ ಇರುತ್ತದೆ. ಅಪರೂಪದ ಸಂದರ್ಭದಲ್ಲಿ ಇದು ಅತಿರೇಕ ರೂಪವನ್ನೂ ಪಡೆದುಕೊಳ್ಳಬಹುದು.


 • 11. ನೈಟ್ರಿಕ್ ಆಮ್ಲ(Nitricum acid)

  ಇದೊಂದು ನೈಸರ್ಗಿಕವಾಗಿ ಅದಿರಿನ ಆಮ್ಲದ ರೂಪದಲ್ಲಿ ದೊರಕುವ ಸಾಮಾಗ್ರಿಯಾಗಿದೆ. ಇದು ನರಹುಲಿ (wart) ಶಾಶ್ವತ ಕಲೆ (skin lesions) ಗಳನ್ನು ನಿವಾರಿಸಲು ನೆರವಾಗುತ್ತದೆ. ಉಳಿದಂತೆ ಇದನ್ನು ಚಿಕಿತ್ಸೆಗೆ ಬಳಸಲಾಗುವ ಕಾಯಿಲೆಗಳು ಎಂದರೆ:

  • ಪಾದರಸದ ಪ್ರಭಾವದಿಂದ ಎದುರಾದ ಕಾಯಿಲೆಗಳು
  • ಚರ್ಮದ ಅಡಿಯಲ್ಲಿ ಎದುರಾಗಿರುವ ಗಡ್ಡೆಗಳು ಮತ್ತು ಬಿರುಕುಗಳು
  • ಸುಲಭವಾಗಿ ರಕ್ತ ಒಸರುವಂತೆ ಮಾಡುವ ಹುಣ್ಣುಗಳು
  • ಅಲ್ಲದೇ ಒಸಡುಗಳ ಹುಣ್ಣು ಮತ್ತು ಬಾಯಿಯ ದುರ್ವಾಸನೆಗೆ ಕಾರಣವಾಗಿರುವ ತೊಂದರೆಗಳನ್ನು ನಿವಾರಿಸಲೂ ಬಳಕೆಯಾಗುತ್ತದೆ.

 • 12. Oleander (ಗಣಗಲೆ ಹೂ)

  Nerium oleander ಎಂಬ ವಿಷಯುಕ್ತ ಗಿಡದ ಹೂವಿನಿಂದ ಪ್ರತ್ಯೇಕಿಸಲ್ಪಟ್ಟ ಈ ಔಷಧಿ ಯಲ್ಲಿ ಅಧಿಕ ಮಟ್ಟದ ಆಂಟಿ ಆಕ್ಸಿಡೆಂಟುಗಳಿವೆ. ಇವು ಜೀವಕೋಶದ ಸವೆಯುವಿಕೆ ಹಾಗೂ ಉತ್ಕರ್ಷಣಶೀಲ ಒತ್ತಡ (oxidative stress)ವನ್ನು ಕಡಿಮೆ ಮಾಡುತ್ತವೆ. ಇದರಲ್ಲಿ ಬ್ಯಾಕ್ಟೀರಿಯಾ ನಿರೋಧಕ, ಶಿಲೀಂಧ್ರ ನಿವಾರಕ, ವೈರಸ್ ನಿವಾರಕ ಗುಣಗಳಿವೆ ಹಾಗೂ ವೃದ್ದಾಪ್ಯದ ಚಿಹ್ಲೆಗಳು ಆವರಿಸುವುದನ್ನು ತಡವಾಗಿಸುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಫ್ಲೇವನಾಯ್ಡುಗಳು, ವಿಟಮಿನ್ನುಗಳು ಹಾಗೂ ಅಮೈನೋ ಆಮ್ಲಗಳಿದ್ದು ಉರಿಯೂತವನ್ನು ತಗ್ಗಿಸುತ್ತವೆ. ಈ ಔಷಧಿ ಗುಣಪಡಿಸುವ ಕಾಯಿಲೆಗಳು ಎಂದರೆ:

  • ಎಕ್ಸಿಮಾ
  • ಸೋರಿಯಾಸಿಸ್
  • ಹರ್ಪಿಸ್ ಜೋಸ್ಟರ್
  • ಅಲ್ಲದೇ ಆಹಾರದ ಅಲರ್ಜಿ ಮತ್ತು ಕೊಲೈಟಿಸ್ (colitis) ಎಂಬ ತೊಂದರೆಗಳಿಗೂ ಉತ್ತಮವಾಗಿದೆ.

 • ಸೂಚನೆ

  ಹೋಮಿಯೋಪತಿ ಔಷಧಿಗಳು ಸುರಕ್ಷಿತವಾಗಿದ್ದರೂ ಇದರ ಬಳಕೆ ಸರಿಯಾದ ಕ್ರಮ ಮತ್ತು ಪ್ರಮಾಣದಲ್ಲಿರಬೇಕಾದುದು ಅವಶ್ಯವಾಗಿದೆ. ತಪ್ಪು ಬಳಕೆಯಿಂದ ಕೆಲವು ಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು.

  ಚರ್ಮದ ಅಲರ್ಜಿಗೆ ಹೋಮಿಯೋಪತಿ ಔಷಧಿ ಬಳಸಿದರೆ ಎದುರಾಗುವ ತೊಂದರೆಗಳ ಸಾಧ್ಯತೆಗಳು:
  ಈ ಔಷಧಿಗಳಲಿ ವಿಷಯುಕ್ತ ರಾಸಾಯನಿಕ ಮತ್ತು ಖನಿಜಗಳಿವೆ. ಇವುಗಳನ್ನು ಹೋಮಿಯೋಪತಿ ತಜ್ಞರಿಂದ ನೀಡಲ್ಪಟ್ಟ ಸರಿಯಾದ ಮಾರ್ಗದರ್ಶನವಿಲ್ಲದೇ ಬಳಸಿದರೆ ಇದರ ಪ್ರಭಾವ ವ್ಯತಿರಿಕ್ತವಾಗಬಹುದು.

  ಹೆಚ್ಚಿನ ಔಷಧಿಗಳೆಲ್ಲವೂ ನೀರಿನಲ್ಲಿ ಕರಗಿಸಲ್ಪಟ್ಟು ಇದರ ಪ್ರಭಾವವನ್ನು ಕುಂದಿಸುರುವಂತಹವೇ ಆಗಿವೆ. ಹಾಗಾಗಿ ಇವುಗಳ ಅಡ್ಡ ಪರಿಣಾಮಗಳು ಎದುರಾದರೂ ಇವು ಅಲ್ಪವೇ ಆಗಿರುತ್ತವೆ. ಆದರೆ ರೋಗಿ ಈಗಾಗಲೇ ಸೇವಿಸುತ್ತಿರುವ ಇತರ ಔಷಧಿಗಳ ಮೇಲೆ ಇವುಗಳು ಪ್ರಭಾವ ಬೀರಬಹುದು. ಕೆಲವು ಔಷಧಿಗಳನ್ನು ಅಧಿಕೃತರಲ್ಲದ ನಿರ್ಮಾತೃರು ತಯಾರಿಸಲ್ಪಟ್ಟಿದ್ದರೆ ಇವು ಅಪಾಯಕಾರಿಯಾಗಬಹುದು.

  ಆಯುರ್ವೇದದಂತೆಯೇ ಹೋಮಿಯೋಪತಿ ಸಹಾ ನಿಧಾನವಾಗಿ ಕಾರ್ಯನಿರ್ವಹಿಸುವ ಕಾರಣ ರೋಗಿಗೆ ಕೊಂಚ ತಾಳ್ಮೆ ವಹಿಸುವ ಅಗತ್ಯವಿದೆ. ಒಂದು ವೇಳೆ ನಿಮಗೆ ಚರ್ಮದ ಕೆಲವು ತೊಂದರೆಗಳು ಆಗಾಗ ಎದುರಾಗುತ್ತಿದ್ದರೆ ಇದನ್ನು ಶಾಶ್ವತವಾಗಿ ಗುಣಪಡಿಸಲು ಹೋಮಿಯೋಪತಿ ಪದ್ದತಿಯನ್ನೇಕೆ ಪ್ರಯತ್ನಿಸಬಾರದು? ಆದರೆ ತಜ್ಞ ಹೋಮಿಯೋಪತಿ ವೈದ್ಯರನ್ನು ಸಂಪರ್ಕಿಸಿ ಸಲಹೆಯನ್ನು ಪಡೆಯಲು ಮಾತ್ರ ಮರೆಯದಿರಿ.

  ಸೂಚನೆ: ಇಲ್ಲಿ ನೀಡಲಾಗಿರುವ ಔಷಧಿಗಳನ್ನಾಗಲೀ ಸಾಮಾಗ್ರಿಗಳನ್ನಾಗಲೀ ತಜ್ಞ ಹೋಮಿಯೋಪತಿ ವೈದ್ಯರ ಸಲಹೆ ಪಡೆಯದೇ ನೇರವಾಗಿ ಬಳಸದಿರಿ. ನಿಮ್ಮ ಅನಾರೋಗ್ಯದ ಲಕ್ಷಣಗಳನ್ನು ಪರಿಗಣಿಸಿ ವೈದ್ಯರೇ ಎಷ್ಟು ಪ್ರಮಾಣದಲ್ಲಿ ಮತ್ತು ಅವಧಿಯಲ್ಲಿ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ವಿವರಿಸುತ್ತಾರೆ.
ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಸತತವಾಗಿ ಹಲವಾರು ಬಗೆಯ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತಾ ಇರುತ್ತದೆ. ಎಲ್ಲೋ ಒಂದು ಕಡೆಯಲ್ಲಿ ಇದರ ಪ್ರಾಬಲ್ಯಕ್ಕೂ ಮೀರಿ ಕ್ರಿಮಿಗಳ ಧಾಳಿ ಎದ್ದಾಗ ಮಾತ್ರ ಸೋಂಕು ಎದುರಾಗುತ್ತದೆ. ಆಗ ದೇಹ ರೊಗ ನಿರೋಧಕ ಶಕ್ತಿಯನ್ನು ಈ ನಿಟ್ಟಿನಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಈ ರೋಗವನ್ನು ಶೀಘ್ರವಾಗಿ ಗುಣಪಡಿಸುವಂತೆ ಮಾಡುತ್ತದೆ.

ಹೋಮಿಯೋಪತಿ ವೈದ್ಯ ಪದ್ದತಿ ಈ ಶಕ್ತಿಯನ್ನೇ ಅವಲಂಬಿಸಿರುವ ವೈದ್ಯ ವಿಜ್ಞಾನವಾಗಿದೆ. ಚರ್ಮ ಹಾಗೂ ಇತರ ಪ್ರಮುಖ ಅಂಗಗಳಿಗೆ ಎದುರಾಗುವ ಸೋಂಕು ಮತ್ತು ಇತರ ತೊಂದರೆಗಳನ್ನು ನಿವಾರಿಸಲು ಹೋಮಿಯೋಪಥಿ ಕೆಲವಾರು ಔಷಧಿಗಳನ್ನು ಸಿದ್ಧಪಡಿಸಿದೆ. ಈ ಪದ್ಧತಿಯಲ್ಲಿ ಬಳಸಲಾಗುವ ಸಾಮಾಗ್ರಿಗಳು ಬಹುತೇಕ ನೈಸರ್ಗಿಕವೇ ಆಗಿರುತ್ತವೆ ಹಾಗೂ ಈ ಸೋಂಕಿಗೆ ಸೂಕ್ತ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.

ಉದಾಹರಣೆಗೆ ಚರ್ಮದಲ್ಲಿ ತುರಿಕೆ ಉಂಟಾಗಿದೆ ಎಂದುಕೊಳ್ಳೋಣ. ಈಗ ಹೋಮಿಯೋಪತಿ ಔಷಧಿಯಲ್ಲಿ ಈ ತುರಿಕೆಯನ್ನು ಹೆಚ್ಚಿಸುವ ಅಂಶವಿರುತ್ತದೆ. ಆಗ ದೇಹ ಅನಿವಾರ್ಯವಾಗಿ ಈ ಹೆಚ್ಚಾಗಿರುವ ತುರಿಕೆಯನ್ನು ಸರಿಪಡಿಸಲು ರೋಗ ನಿರೋಧಕ ಶಕ್ತಿಯನ್ನು ಬಳಸಲೇಬೇಕಾಗುತ್ತದೆ. ತನ್ಮೂಲಕ ರೋಗ ನೈಸರ್ಗಿಕವಾಗಿ ವಾಸಿಯಾಗುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿ ಈ ತೊಂದರೆಗೆ ಕಾರಣವಾದ ಅಂಶಗಳಿಗೆ ಪ್ರತಿರೋಧ ಶಕ್ತಿಯನ್ನೂ ಬೆಳೆಸಿಬಿಡುತ್ತದೆ. ಹಾಗಾಗಿ ಒಂದು ಬಾರಿ ಬಂದ ಕಾಯಿಲೆ ಜೀವಮಾನದಲ್ಲಿ ಮತ್ತೊಮ್ಮೆ ಬರುವುದು ಬಹುತೇಕ ಅಸಾಧ್ಯ.

ಇಂದಿನ ಲೇಖನದಲ್ಲಿ ಚರ್ಮದ ಸಾಮಾನ್ಯ ತೊಂದರೆಗಳು, ಅಲರ್ಜಿಗಳು, ಚರ್ಮ ಕೆಂಪಗಾಗುವಿಕೆ ಮತ್ತು ಇತರ ಸಾಮಾನ್ಯ ಕಾಯಿಲೆಗಳಿಗೆ ಹೋಮಿಯೋಪತಿ ವಿಜ್ಞಾನ ಒದಗಿಸುವ ಔಷಧಿಗಳ ಬಗ್ಗೆ ಅರಿಯೋಣ.

ಸಾಮಾನ್ಯ ಚರ್ಮದ ತೊಂದರೆಗಳಿಗೆ ಹೋಮಿಯೋಪತಿ ಚಿಕಿತ್ಸಾ ವಿಧಾನಗಳು:
   
 
ಹೆಲ್ತ್