Back
Home » ಆರೋಗ್ಯ
ದೇಹ ಬೀರುವ ಈ 8 ದುರ್ವಾಸನೆ ನಿರ್ಲಕ್ಷ್ಯ ಮಾಡಿದರೆ ಆರೋಗ್ಯ ಜೋಕೆ
Boldsky | 12th Feb, 2020 01:27 PM
 • 1. ಮೂತ್ರ ತುಂಬಾ ದುರ್ವಾಸನೆ ಬೀರಿದರೆ

  ಮೂತ್ರದ ಮೂಲಕ ದೇಹವು ಬೇಡದ ಕಶ್ಮಲಗಳನ್ನು ಹೊರ ಹಾಕುತ್ತದೆ. ಆದ್ದರಿಂದ ಮೂತ್ರ ದುರ್ವಾಸನೆ ಬೀರುವುದು ಸಹಜ. ಆದರೆ ಕೆಲವೊಮ್ಮೆ ಮೂತ್ರ ವಿಸರ್ಜನೆ ಮಾಡುವಾಗ ತುಂಬಾ ದುರ್ವಾಸನೆ ಬೀರುತ್ತದೆ. ಈ ರೀತಿಯಾದಾಗ ನಿರ್ಲಕ್ಷ್ಯ ಮಾಡಬೇಡಿ. ಮೂತ್ರ ಸೋಂಕು ಉಂಟಾದಾಗ ಮೂತ್ರ ತುಂಬಾ ದುರ್ವಾಸನೆ ಬೀರುವುದು.


 • 2. ಹುಳಿ ತೇಗು

  ಬಾಯಿ ಎಷ್ಟೇ ಶುಚಿ ಮಾಡಿದರೂ ಹುಳಿ ತೇಗು ಬಂದು ದುರ್ವಾಸನೆ ಬೀರುತ್ತಿದ್ದರೆ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಬಾಯ ದುರ್ವಾಸನೆ ಬೀರುತ್ತಿದ್ದರೆ ಅದು ಮಧುಮೇಹದ ಲಕ್ಷಣವಿರಬಹುದು. ನಿಮ್ಮ ದೇಹದಲ್ಲಿ ದೇಹದ ಕಾರ್ಯವಿಧಾನಕ್ಕೆ ಅಗ್ಯತವಾದ ಶಕ್ತಿ ಉತ್ಪಾದಿಸಲು ಸಾಧ್ಯವಾಗದೇ ಇದ್ದಾಗ ಇದು ಕೊಬ್ಬಿನ ಆಮ್ಲವನ್ನು ಇಂಧನವಾಗಿ ಬಳಸಲಾರಂಭಿಸುತ್ತದೆ. ಇದರಿಂದ ಹುಳಿ ತೇಗು ಬಂದು ಬಾಯಿ ದುರ್ವಾಸನೆ ಬೀರುವುದು.


 • 3. ಬಾಯಿ ದುರ್ವಾಸನೆ

  ಬಾಯಿ ದುರ್ವಾಸನೆ ಬೀರುತ್ತಿದ್ದರೆ ಅದು ಅಸಿಡಿಟಿ ಸಮಸ್ಯೆಯ ಲಕ್ಷಣವಿರಬಹುದು. ಆಮ್ಲ ರಿಫ್ಲಕ್ಸ್ ಉಂಟಾದಾಗ ಇದರಿಂದ ಬಾಯಿ ದುರ್ವಾಸನೆ ಉಂಟಾಗುವುದು. ಇದರಿಂದ ಎದೆಯುರಿ ಕಾಣಿಸಿಕೊಳ್ಳಬಹುದು. ಅಸಿಡಿಟಿ ಸಮಸ್ಯೆ ನಿಯಂತ್ರಣಕ್ಕೆ ಬಂದರೆ ಬಾಯಿ ದುರ್ವಾಸನೆ ಬೀರುವುದು ಕಡಿಮೆಯಾಗುವುದು.


 • 4. ಮೂಗಿನಿಂದ ದುರ್ವಾಸನೆ

  ನಮಗೆ ವಾಸನೆಯನ್ನು ಗ್ರಹಿಸಲು ಸಹಾಯ ಮಾಡುವ ಮೂಗಿನಿಂದಲೇ ದುರ್ವಾಸನೆ ಬೀರುತ್ತಿದ್ದರೆ ಹಲ್ಲಿನ ಅಥವಾ ಸೈನಸ್‌ ಸಮಸ್ಯೆ ಇರಬಹುದು. ಹಲ್ಲಿನ ಸಮಸ್ಯೆ ಇದ್ದಾಗಲೂ ಬಾಯಿ ದುರ್ವಾಸನೆ ಬೀರುವುದು. ಏಕೆಂದರೆ ಬಾಯಿ ಹಾಗೂ ಮೂಗಿನ ನರಗಳಿಗೆ ಒಂದಕ್ಕೊಂದು ಸಂಬಂಧವಿರುತ್ತದೆ. ಮೂಗಿಗೆ ಏನಾದರೂ ಡ್ರಾಪ್ ಹಾಕಿದರೆ ಬಾಯಿಗೆ ಬರುತ್ತದೆ ಅಲ್ವಾ? ಅದೇ ರೀತಿ ಹಲ್ಲಿನ ಸಮಸ್ಯೆ ಇದ್ದಾಗ ಮೂಗು ದುರ್ವಾಸನೆ ಬೀರುವುದು.


 • 5. ದುರ್ವಾಸನೆ ಬೀರುವ ಕಾಲುಗಳು

  ಕಾಲುಗಳು ತುಂಬಾ ದುರ್ವಾಸನೆ ಬೀರುತ್ತಿದ್ದರೆ ಅದಕ್ಕೆ ಶಿಲೀಂದ್ರ ಬ್ಯಾಕ್ಟಿರಿಯಾ ಕಾರಣವಾಗಿರಬಹುದು. ಇದರಿಂದ ಕಾಲು ಉರಿ, ಪಾದಗಳು ಕೆಂಪಾಗುವುದು, ತುರಿಕೆ, ಉಗುರಿನ ಬಳಿ ಕಜ್ಜಿ ಅಥವಾ ಚರ್ಮ ಹೋಗುವುದು ಮುತಾದ ಸಮಸ್ಯೆ ಉಂಟಾಗುವುದು. ಈ ಸಮಸ್ಯೆಗಳು ಹೆಚ್ಚಾಗಿ ಕಾಲಿನ ಶುಚಿತ್ವಕ್ಕೆ ಗಮನ ನೀಡದೇ ಇರುವುದರಿಂದ ಉಂಟಾಗುವುದು.


 • 6. ಬೆವರಿನ ವಾಸನೆ

  ಕೆಲವೊಂದು ಆಹಾರಗಳನ್ನು ಸೇವಿಸಿದಾಗ ಬೆವರು ತುಂಬಾ ದುರ್ವಾಸನೆ ಬೀರುವುದು. ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾದಗಲೂ ಬೆವರಿ ದುರ್ಗಂಧ ಹೆಚ್ಚಾಗುವುದು. ಬೆಳ್ಳುಳ್ಳಿ, ಈರುಳ್ಳಿ, ಬ್ರೊಕೋಲಿ, ಮೂಲಂಗಿ, ಹೂಕೋಸು, ನವಿಲು ಕೋಸು ಈ ರೀತಿಯ ತರಕಾರಿಗಳನ್ನು ತಿಂದಾಗ ಬೆವರಿನ ದುರ್ಗಂಧ ಹೆಚ್ಚಾಗುವುದು.
  ಇನ್ನು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ಅಪೊಕ್ರೈನ್ ಗ್ರಂಥಿ ಬಿಳಿ ದ್ರಾವಕವನ್ನು ಉತ್ಪತ್ತಿ ಮಾಡುವುದು, ಇದು ಬ್ಯಾಕ್ಟಿರಿಯಾ ಜೊತೆ ಸೇರಿ ಬೆವರಿನ ದುರ್ಗಂಧ ಹೆಚ್ಚಾಗುವುದು.


 • 7. ಮಲ ವಿರ್ಸಜನೆ ಮಾಡುವಾಗ ತುಂಬಾ ಕೆಟ್ಟ ವಾಸನೆ

  ಮಲವೆಂದರೆ ದುರ್ವಾಸನೆ ಸಹಜ, ಆದರೆ ತುಂಬಾ ಕೆಟ್ಟ ವಾಸನೆ ಬೀರಿದರೆ ಜೀರ್ಣಕ್ರಿಯೆಯಲ್ಲಿ ಏನೋ ವ್ಯತ್ಯಾಸವಾಗಿದೆ ಎಂದರ್ಥ. ದೇಹದಲ್ಲಿ ಲ್ಯಾಕ್ಟೋಸ್ ಅಸಮತೋಲನವಿದ್ದರೆ ಈ ಸಮಸ್ಯೆ ಉಂಟಾಗುವುದು. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಇದರಿಂದ ಮಲ ತುಂಬಾ ಕೆಟ್ಟವಾಸನೆ ಬೀರುವುದು.


 • 8. ಕಿವಿಯಿಂದ ದುರ್ವಾಸನೆ ಬೀರುವುದು

  ಕಿವಿ ಸೋರುತ್ತಿದ್ದರೆ ದುರ್ವಾಸನೆ ಬೀರುವುದು. ಇನ್ನು ಕಿವಿಯಲ್ಲಿ ಗುಗ್ಗೆ ತುಂಬಿಕೊಂಡಿದ್ದರೆ ಇದರಿಂದ ಸೋಂಕು ಉಂಟಾಗಿ ಕಿವಿ ದುರ್ವಾಸನೆ ಬೀರುತ್ತದೆ. ಈ ರೀತಿ ಉಂಟಾದಾಗ ಇಎನ್‌ಟಿ ತಜ್ಞರನ್ನು ಭೇಟಿಯಾಗಿ.

  ಸಲಹೆ: ದೇಹವು ದುರ್ವಾಸನೆ ಮೀರುವುದು ಸಹಜ. ಆದರೆ ಆ ದುರ್ವಾಸನೆ ಮಿತಿ ಮೀರಿದರೆ ಅದು ಅನಾರೋಗ್ಯದ ಲಕ್ಷಣವಾಗಿರಬಹುದು, ವೈದ್ಯರನ್ನು ಬೇಟಿಯಾಗಿ ಸಲಹೆ ಪಡೆಯಿರಿ.
ಎಲ್ಲರ ದೇಹದ ವಾಸನೆ ಒಂದೇ ರೀತಿ ಇರುವುದಿಲ್ಲ. ಕೆಲವರ ದೇಹದಲ್ಲಿ ಬೆವರು ಹೆಚ್ಚು ಉತ್ಪತ್ತಿಯಾಗುವುದಿಲ್ಲ, ಆದ್ದರಿಂದ ಅಷ್ಟೇನು ಬೆವರಿನ ವಾಸನೆ ಬೀರುವುದಿಲ್ಲ, ಇನ್ನು ಕೆಲವರ ದೇಹದಲ್ಲಿ ಬೆವರು ತುಂಬಾ ಉತ್ಪತ್ತಿಯಾಉತ್ತದೆ ಅಂಥವರ ದೇಹದಿಂದ ಬೆವರಿನ ದುರ್ವಾಸನೆ ಬೀರುವುದು ಹೆಚ್ಚು.

ಬರೀ ತ್ವಚೆಯಿಂದ ಮಾತ್ರ ದುರ್ವಾಸನೆ ಬೀರುವುದಿಲ್ಲ, ದೇಹದ ನವ ರಂಧ್ರಗಳಿಂದಲೂ ದುರ್ವಾಸನೆ ಬೀರುತ್ತದೆ, ಅದು ಸ್ವಾಭಾವಿಕ. ಆದರೆ ಕೆಲವೊಮ್ಮೆ ಬಾಯಿ ಎಷ್ಟೇ ಸ್ವಚ್ಛ ಮಾಡಿದರೂ ದುರ್ವಾಸನೆ ಬೀರುತ್ತಿರುತ್ತದೆ. ಇನ್ನು ಕೆಲವರಿಗೆ ಮೂತ್ರ ವಿಸರ್ಜನೆಗೆ ಹೋದಾಗ, ಮಲ ವಿಸರ್ಜನೆಗೆ ಹೋದಾಗ ತುಂಬಾ ದುರ್ವಾಸನೆ ಬೀರುತ್ತದೆ. ಇವೆಲ್ಲಾ ಸಹಜ ಎಂದು ಭಾವಿಸಬೇಡಿ. ಏಕೆಂದರೆ ಇವೆಲ್ಲಾ ಯಾವುದೋ ರೋಗದ ಲಕ್ಷಣಗಳಾಗಿರುತ್ತವೆ.

ದೇಹದ ದುರ್ವಾಸನೆ ನಿಮ್ಮ ಆರೋಗ್ಯದ ಗುಟ್ಟು ಬಿಚ್ಚಿಡುವುದರಿಂದ ದೇಹ ಬೀರುವ ಈ ದುರ್ವಾಸನೆಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ:

   
 
ಹೆಲ್ತ್