Back
Home » ಇತ್ತೀಚಿನ
ಫೆಬ್ರವರಿ 24ಕ್ಕೆ ರಿಯಲ್‌ಮಿ x50 ಪ್ರೊ 5G ಸ್ಮಾರ್ಟ್‌ಫೋನ್‌ ಲಾಂಚ್‌!
Gizbot | 14th Feb, 2020 02:10 PM
 • ಹೌದು

  ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ರಿಯಲ್‌ಮಿ ತನ್ನ ಹೊಸ ರಿಯಲ್‌ಮಿ X50 ಪ್ರೊ 5G ಸ್ಮಾರ್ಟ್‌ಫೋನ್‌ ಅನ್ನು ಇದೇ ಫೆಬ್ರವರಿ 24 ರಂದು ಜಾಗತಿಕವಾಗಿ ಬಿಡುಗಡೆ ಮಾಡಲಿದೆ ಎನ್ನಲಾಗ್ತಿದೆ. ಮಾರಕ ಕೊರೋನಾ ವೈರಸ್‌ ವ್ಯಾಪಕವಾಗಿರೊದ್ರಿಂದ MWC 2020 ರಲ್ಲಿ ರಿಯಲ್‌ಮಿ ಭಾಗವಹಿಸೋದು ಅನುಮಾನವಾಗಿದ್ದು, ಸಮ್ಮೇಳನಕ್ಕೂ ಮೊದಲೇ ತನ್ನ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಸದ್ಯ ಲಭ್ಯ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.


 • ಡಿಸ್‌ಪ್ಲೇ ಮಾದರಿ

  ರಿಯಲ್‌ಮಿ X50 ಪ್ರೊ 5G ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.57 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು 401 PPI ಪಿಕ್ಸೆಲ್‌ ಸಾಂದ್ರತೆ ಹೊಂದಿದ್ದು, ಸೂಪರ್‌ ಅಮೋಲೆಡ್ ಡಿಸ್‌ಪ್ಲೇ ಆಗಿದೆ. ಜೊತೆಗೆ ಡಿಸ್‌ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿ 5 ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದ್ದು, ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯ ವಿನ್ಯಾಸವನ್ನ ಹೊಂದಿರಲಿದೆ.


 • ಪ್ರೊಸೆಸರ್‌

  ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ 2.84 GHz,ಹಾಗೂ 504,000 ಸ್ಕೋರ್‌ ಹೊಂದಿರುವ ಸ್ನಾಪ್‌ಡ್ರಾಗನ್ 865 SoC ಪ್ರೊಸೆಸರ್‌ ಹೊಂದಿದ್ದು,ಇದು ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 12GB RAM ಮತ್ತು 256 GB ಶೇಖರಣಾ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಮೆಮೊರಿಕಾರ್ಡ್‌ ಮೂಲಕ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


 • ಕ್ಯಾಮೆರಾ ವಿನ್ಯಾಸ

  ರಿಯಲ್‌ಮಿಯ ಹೊಸ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮೊದಲನೇ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌, ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್‌, ಮೂರನೇ ಕ್ಯಾಮೆರಾ 8ಮೆಗಾ ಪಿಕ್ಸೆಲ್‌ ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 32ಮೆಗಾ ಪಿಕ್ಸೆಲ್‌ ಹಾಗೂ 8ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಡ್ಯುಯೆಲ್‌ಸೆಲ್ಫಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.


 • ಬ್ಯಾಟರಿ ಮತ್ತು ಇತರೆ

  ರಿಯಲ್‌ಮಿ X50 ಪ್ರೊ 5G ಸ್ಮಾರ್ಟ್‌ಫೋನ್‌ 4500 mAh ಬ್ಯಾರಿ ಪ್ಯಾಕ್‌ ಆಪ್‌ ಹೊಂದಿದ್ದು, ವೇಗದ ಚಾರ್ಜಿಂಗ್‌ ಬೆಂಬಲಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಸ್ಮಾರ್ಟ್‌ಫೋನ್‌ ಬ್ಲೂಟೂತ್‌ v5.0, ಮೊಬೈಲ್‌ ಹಾಟ್‌ಸ್ಪಾಟ್‌, ಯುಎಸ್‌ಬಿ ಚಾರ್ಜಿಂಗ್‌, 4G ನೆಟ್‌ವರ್ಕ್‌ ಡ್ಯುಯೆಲ್‌ ಸಿಮ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಲೈಟ್‌ ಸೆನ್ಸಾರ್‌, ಪ್ರಾಕ್ಸಿಮಿಟಿ ಸೆನ್ಸಾರ್‌ಅನ್ನು ಸಹ ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ.


 • ಬೆಲೆ

  ಈ ಸ್ಮಾರ್ಟ್‌ಫೋನ್‌ನ ಬೆಲೆ ಏನು ಅನ್ನೊದರ ಬಗ್ಗೆ ಕಂಪೆನಿ ಎಲ್ಲಿಯೂ ಸಹ ಮಾಹಿತಿಯನ್ನ ಬಹಿರಂಗ ಪಡಿಸಿಲ್ಲ ಆದರೆ ಟೆಕ್‌ ವಲಯದ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ನ ಬೆಲೆ 48,999 ರೂ ಇರಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಇದೆ ಫೆಬ್ರವರಿ 24 ರಂದು ಜಾಗತಿಕವಾಗಿ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ನಂತರದ ದಿನಗಳಲ್ಲಿ ಆಪ್‌ಲೈನ್‌ನಲ್ಲೂ ಖರೀದಿಗೆ ಲಭ್ಯವಾಗಲಿದೆ.
ಟೆಕ್‌ ಮಾರುಕಟ್ಟೆಯಲ್ಲಿ ಏರುಗತಿಯಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ರಿಯಲ್‌ಮಿ ಕಂಪೆನಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ದತೆ ನಡೆಸಿದೆ. ಈಗಾಗಲೇ ಹಲವು ವೈವಿಧ್ಯಮಯ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ ಪರಿಚಯಿಸಿ ಸೈ ಎನಿಸಿಕೊಂಡಿರುವ ರಿಯಲ್‌ಮಿ ಹೊಸ ಸ್ಮಾರ್ಟ್‌ಫೋನ್‌ ಹೇಗಿರಲಿದೆ ಅನ್ನೊ ಕುತೂಹಲ ಇದ್ದೇ ಇರುತ್ತೆ. ಅಲ್ಲದೆ ಈ ಹೊಸ ಸ್ಮಾರ್ಟ್‌ಫೋನ್‌ ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್‌ ವರ್ಲ್ಡ ಸಮ್ಮೇಳನ 2020ರಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಬಿಡುಗಡೆಯ ದಿನಾಂಕ ಬದಲಾಗಿದೆ.

   
 
ಹೆಲ್ತ್