Back
Home » ಇತ್ತೀಚಿನ
ಫ್ಲಿಪ್‌ಕಾರ್ಟ್‌ನಲ್ಲಿ ಇತ್ತೀಚಿನ ಹೊಸ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!
Gizbot | 15th Feb, 2020 09:00 AM
 • ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌

  ಹೌದು, ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ ತಾಣವು ಮತ್ತೆ ಮೊಬೈಲ್ ಬೊನಾಂಜಾ ಸೇಲ್ ಮೇಳವನ್ನು ಆಯೋಜಿಸಿದೆ. ಈ ಸೇಲ್ ಮೇಳವು ಇದೇ ಫೆಬ್ರವರಿ 17 ರಿಂದ ಶುರುವಾಗಲಿದ್ದು, ಇದೇ ಫೆ.21ರ ವರೆಗೂ ಇರಲಿದೆ. ಈ ಸೇಲ್ ಮೇಳದಲ್ಲಿ ಆಪಲ್, ಸ್ಯಾಮ್‌ಸಂಗ್, ರೆಡ್ಮಿ, ರಿಯಲ್ ಮಿ, ಒಪ್ಪೊ ಸ್ಮಾರ್ಟ್‌ಫೋನ್‌ಗಳ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಗೆ ಬಿಗ ಡಿಸ್ಕೌಂಟ್ ದೊರೆಯಲಿವೆ ಹಾಗೂ ಬ್ಯಾಂಕ್‌ಗಳಿಂದ ಆಕರ್ಷಕ ರಿಯಾಯಿತಿ ಸಿಗಲಿದೆ. ಹಾಗಾದರೆ ಯಾವೆಲ್ಲ ಸ್ಮಾರ್ಟ್‌ಫೋನ್‌ಗಳಿಗೆ ಬೆಸ್ಟ್ ಡಿಸ್ಕೌಂಟ್ ಇದೆ ಎಂಬುದನ್ನು ಮುಂದೆ ನೋಡೋಣ.


 • ಇನ್‌ಸ್ಟಂಟ್ ಡಿಸ್ಕೌಂಟ್

  ಫ್ಲಿಪ್‌ಕಾರ್ಟ್‌ ಮೊಬೈಲ್ ಬೋನಾಂಜಾ ಸೇಲ್ ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ ವಿಶೇಷ ಡಿಸ್ಕೌಂಟ್ ನೀಡಲಿದೆ. ಅದರೊಂದಿಗೆ ಆಕ್ಸಸ್ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಬಳಸಿ ಖರೀದಿಸಿದರೇ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್ ಸಹ ದೊರೆಯಲಿದೆ. ಹಾಗೆಯೇ ಆಕರ್ಷಕ ಇಎಮ್‌ಐ ಸೌಲಭ್ಯಗಳ ಆಯ್ಕೆ ಸಹ ಸಿಗಲಿದೆ.


 • ಐಫೋನ್ XS

  ಜನಪ್ರಿಯ ಆಪಲ್ ಐಫೋನ್ XS ಫ್ಲಿಪ್‌ಕಾರ್ಟ್‌ ಸೇಲ್ ಮೇಳದಲ್ಲಿ ಪಡೆಯಲಿದೆ. 64GB ವೇರಿಯಂಟ್ ಸಾಮರ್ಥ್ಯ ಐಫೋನ್ ಎಕ್ಸ್ಎಸ್‌ ಫೋನ್ 54,999ರೂ.ಗಳಿಗೆ ಸಿಗಲಿದೆ. ಈ ಐಫೋನ್ ಲಾಂಚ್ ಆದಾಗ 89,999ರೂ, ಬೆಲೆಯನ್ನು ಹೊಂದಿತ್ತು. ಇನ್ನು ಈ ಐಫೋನ್ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಸೂಪರ್ ರೇಟಿನಾ OLED ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. ಬಯೋನಿಕ್ A12 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. 12ಎಂಪಿ+7ಎಂಪಿ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ.


 • ಸ್ಯಾಮ್‌ಸಂಗ್ ಗ್ಯಾಲಕ್ಸಿ S9 ಮತ್ತು S9+

  ಗ್ಯಾಲಕ್ಸಿ S9+ ಫೋನ್ 6.2 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, Exynos 9810 ಪ್ರೊಸೆಸರ್ ಒಳಗೊಂಡಿದೆ. ಹಾಗೆಯೇ 3,500mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಗ್ಯಾಲಕ್ಸಿ S9 ಸ್ಮಾರ್ಟ್‌ಫೋನ್ 5.8 ಇಂಚಿನ ಡಿಸ್‌ಪ್ಲೇ ಇದ್ದು, 3,000mAh ಸಾಮರ್ಥ್ಯದ ಬ್ಯಾಟರಿ ಲೈಫ್ ಪಡೆದಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ ಮೊಬೈಲ್ ಬೋನಾಂಜಾ ಸೇಲ್‌ನಲ್ಲಿ ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯವಾಗಲಿವೆ. ಗ್ಯಾಲಕ್ಸಿ S9 ಬೇಸ್ ವೇರಿಯಂಟ್ ಬೆಲೆಯು 22,999ರೂ. ಮತ್ತು ಗ್ಯಾಲಕ್ಸಿ S9+ ಬೇಸ್‌ ವೇರಿಯಂಟ್ 27,999ರೂ.ಗೆ ಲಭ್ಯವಾಗಲಿದೆ.


 • ರಿಯಲ್‌ ಮಿ X2 ಪ್ರೊ

  ರಿಯಲ್‌ ಮಿ ಸಂಸ್ಥೆಯ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿರುವ ರಿಯಲ್‌ ಮಿ X2 ಪ್ರೊ ಸಹ ಫ್ಲಿಪ್‌ಕಾರ್ಟ್‌ನಲ್ಲಿ ಆಫರ್‌ ಪಡೆದಿದೆ. ಸೇಲ್‌ನಲ್ಲಿ ಈ ಫೋನ್ ಬೇಸ್‌ ವೇರಿಯಂಟ್ 27,999ರೂ,ಗೆ ದೊರೆಯಲಿದೆ. ಹಾಗೆಯೇ 2000ರೂ.ವರೆಗೂ ಎಕ್ಸ್‌ಚೇಂಜ್ ಕೊಡುಗೆ ಸಿಗಲಿದೆ. ಇನ್ನು ಈ ಫೋನ್ ಸ್ನ್ಯಾಪ್‌ಡ್ರಾಗನ್ 855+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಕ್ವಾಡ್‌ ಕ್ಯಾಮೆರಾ ಪ್ರಮುಖ ಹೈಲೈಟ್‌ ಆಗಿದೆ.


 • ಸ್ಯಾಮ್‌ಸಂಗ್ ಗ್ಯಾಲಕ್ಸಿ A50

  ಗ್ಯಾಲಕ್ಸಿ A50 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ ಸೇಲ್‌ ಮೇಳದಲ್ಲಿ 12,999ರೂ.ಗೆ ಲಭ್ಯವಾಗಲಿದೆ. ಇನ್ನು ಈ ಫೋನ್ ಲಾಂಚ್ ಪ್ರೈಸ್‌ 21,000ರೂ. ಆಗಿತ್ತು. ಈ ಫೋನ್ 6.4 ಇಂಚಿನ ಡಿಸ್‌ಪ್ಲೇ ಹೊಂದಿದ್ದು, Exynos 9610 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ರಚನೆ ಪಡೆದಿದೆ.


 • ಒಪ್ಪೊ ರೆನೋ 10X ಜೂಮ್

  ಒಪ್ಪೊ ರೆನೋ 10X ಜೂಮ್ ಸ್ಮಾರ್ಟ್‌ಫೋನ್ 41,990ರೂ.ಗಳಿಗೆ ಲಾಂಚ್ ಆಗಿತ್ತು. ಆದರೆ ಈಗ ಫ್ಲಿಪ್‌ಕಾರ್ಟ್‌ ಸೇಲ್ ಮೇಳದಲ್ಲಿ 26,990ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಫೋನ್ 6.6 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿ ಮುಖ್ಯ ಕ್ಯಾಮೆರಾವನ್ನು ಹೊಂದಿದೆ.
ಇ-ಕಾಮರ್ಸ್‌ ತಾಣಗಳಲ್ಲಿ ಗ್ಯಾಡ್ಜೆಟ್‌ ಉತ್ಪನ್ನಗಳಿಗೆ ಭರ್ಜರಿ ಆಫರ್ ನೀಡುತ್ತಾರೆ. ಈ ನಿಟ್ಟಿನಲ್ಲಿ ಆನ್‌ಲೈನ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಜನಪ್ರಿಯ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ತಾಣಗಳು ವಿಶೇಷ ದಿನಗಳಂದು ಗ್ರಾಹಕರನ್ನು ಸೆಳೆಯಲು ಡಿಸ್ಕೌಂಟ್ ಮಿತಿಯನ್ನು ಹೆಚ್ಚಿಸುತ್ತವೆ. ಸದ್ಯ ಫ್ಲಿಪ್‌ಕಾರ್ಟ್‌ ಗ್ರಾಹಕರಿಗೆ ಅಧಿಕ ರಿಯಾಯಿತಿ ಘೋಷಿಸಿದೆ.

   
 
ಹೆಲ್ತ್