Back
Home » ಇತ್ತೀಚಿನ
ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಈ ತಪ್ಪು ಎಂದಿಗೂ ಮಾಡಬೇಡಿ!
Gizbot | 16th Feb, 2020 09:04 AM
 • ಸ್ಮಾರ್ಟ್‌ಫೋನ್‌

  ಹೌದು, ಸ್ಮಾರ್ಟ್‌ಫೋನ್‌ಗಳಿಗೆ ಬ್ಯಾಟರಿಯೇ ಜೀವಾಳ. ಬ್ಯಾಟರಿ ಸುವ್ಯವಸ್ಥಿತವಾಗಿದ್ದರೇ ಸ್ಮಾರ್ಟ್‌ಫೋನ್ ಕಾರ್ಯವೈಖರಿ ಉತ್ತಮವಾಗಿರುವುದು. ಹೀಗಾಗಿ ಸ್ಮಾರ್ಟ್‌ಫೋನ್ ಬ್ಯಾಟರಿ ಕಾಳಜಿ ಬಗ್ಗೆಯು ಬಳಕೆದಾರರು ಹೆಚ್ಚಿನ ಗಮನ ನೀಡಬೇಕಿದೆ. ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಲೇಬಾರದು ಆದರು ಬಹುತೇಕರು ಅವೇ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಸ್ಮಾರ್ಟ್‌ಫೋನ್ ಬ್ಯಾಟರಿ ಲೈಫ್‌ ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ಫೋನ್ ಚಾರ್ಜ್ ಮಾಡುವಾಗ ಏನು ಮಾಡಬಾರದು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.


 • ಬೇರೆ ಚಾರ್ಜರ್ ಬೇಡ

  ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಫೋನಿನೊಂದಿಗೆ ನೀಡಿರುವ ಚಾರ್ಜರ್‌ ಅನ್ನು ಮಾತ್ರವೇ ಬಳಕೆ ಮಾಡಿರಿ. ಚಾರ್ಜರ್ ಇಲ್ಲ ಅಂತಾ ಬೇರೆ ಸಂಸ್ಥೆಯ, ಭಿನ್ನ ಸಾಮರ್ಥ್ಯದ ಚಾರ್ಜರ್ ಬಳಕೆ ಮಾಡಬೇಡಿ. ಇದರಿಂದ ಬ್ಯಾಟರಿ ಲೈಫ್‌ಗೆ ಧಕ್ಕೆ ಆಗುವ ಸಾಧ್ಯತೆಗಳಿರುತ್ತವೆ.


 • 100% ಚಾರ್ಜ್ ಬೇಡ

  ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಸಾಮನ್ಯವಾಗಿ ಬ್ಯಾಟರಿ ಫುಲ್ 100% ಪರ್ಸೆಂಟ್ ಆಗುವವರೆಗೂ ಚಾರ್ಜ್ ತೆಗೆಯುವುದೇ ಇಲ್ಲ. ಇದು ಬ್ಯಾಟರಿ ಲೈಫ್ ದೃಷ್ಠಿಯಿಂದ ಉತ್ತಮ ನಿರ್ಧಾರವಲ್ಲ. ಫುಲ್ 100% ಚಾರ್ಜ್ ಮಾಡಲೇಬೇಡಿ. 90ರ ಗಡಿ ಮುಟ್ಟಿದ್ದರೇ ಸಾಕು. ಇದು ಬ್ಯಾಟರಿ ಬಾಳಿಕೆಯನ್ನು ವೃದ್ಧಿಸುತ್ತದೆ.


 • ರಾತ್ರಿಯಿಡಿ ಚಾರ್ಜ್

  ಅನೇಕ ಬಳಕೆದಾರರಿಗೆ ರಾತ್ರಿಯಿಡಿ ಫೋನ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಆಯ್ಕೆ ಅಲ್ಲವೇ ಅಲ್ಲ. ಆ ರೀತಿ ಓವರ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಬಾಳಿಕೆ ಕುಗ್ಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಮಾಡಬೇಡಿರಿ.


 • ಚಾರ್ಜ್ ಮಾಡುವಾಗ ಬಳಕೆಬೇಡ

  ಸ್ಮಾರ್ಟ್‌ಫೋನ್ ಚಾರ್ಜಿಗೆ ಹಾಕಿದಾಗ ಫೋನ್ ಬಳಕೆ ಮಾಡಬೇಡಿರಿ. ಫೋನ್ ಬಳಕೆ ಮಾಡುತ್ತ ಚಾರ್ಜ್ ಮಾಡುವುದರಿಂದ ಫೋನ್ ಬಿಸಿ ಆಗಬಹುದು ಹಾಗೂ ಅತೀ ಬಿಸಿಯಾಗಿ ಅಪಾಯಕರ ಹಾನಿಗೆ ಕಾರಣವಾಗಲೂಬಹುದು. ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವ ಅಭ್ಯಾಸ ಇದ್ದರೇ ಬಿಟ್ಟುಬಿಡಿ.
ಸ್ಮಾರ್ಟ್‌ಫೋನ್ ಇಂದಿನ ಪ್ರಸ್ತುತ ಅಗತ್ಯ ಡಿವೈಸ್‌ ಆಗಿದೆ. ಅಗತ್ಯ ಮತ್ತು ಅವಶ್ಯ ಕೆಲಸಗಳು ಫೋನಿನ ಮೂಲಕವೇ ನಡೆಯುವುದರಿಂದ ಬಹುತೇಕರಿಗೆ ಸ್ಮಾರ್ಟ್‌ಫೋನ್ ಬಿಟ್ಟಿರುವುದು ಕಷ್ಟದ ಕೆಲಸವಾಗಿದೆ. ಆದರೆ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಮತ್ತು ಸ್ಮಾರ್ಟ್‌ಫೋನ್ ನಿರ್ವಹಣೆಯಲ್ಲಿ ಗಮನವಹಿಸಿದರೂ ಅನೇಕ ಬಾರಿ ಸ್ಮಾರ್ಟ್‌ಫೋನ್ ಬ್ಯಾಟರಿ ಕೈಕೊಡುವ ಸಾಧ್ಯತೆಗಳು ಅಧಿಕವಾಗಿರುತ್ತವೆ.

   
 
ಹೆಲ್ತ್