Back
Home » ಇತ್ತೀಚಿನ
2020 ಕ್ಕೆ ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಬಹು ನಿರೀಕ್ಷಿತ 5ಜಿ ರೆಡಿ ಸ್ಮಾರ್ಟ್ ಫೋನ್ ಗಳು
Gizbot | 17th Feb, 2020 07:00 AM
 • 5ಜಿ

  5ಜಿ ತಂತ್ರಗಾರಿಕೆಯನ್ನು ಹೊಂದಿರುವ ಇನ್ನಷ್ಟು ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಭಾರತದಲ್ಲಿ 5ಜಿ ಸ್ಪೆಕ್ಟ್ರಂ ಇನ್ನೂ ಕೂಡ ಬಿಡುಗಡೆಗೊಂಡಿಲ್ಲ.2021 ರ ಹೊತ್ತಿಗೆ ಭಾರತದಲ್ಲಿ ಈ ಸೌಲಭ್ಯ ಲಭ್ಯವಾಗುವ ಸಾಧ್ಯತೆ ಇದೆ.


 • ಒನ್ ಪ್ಲಸ್ 8

  ಒನ್ ಪ್ಲಸ್ ಸಂಸ್ಥೆ ಆಫರ್ ಮಾಡುವ ಮುಂದಿನ ಫ್ಲ್ಯಾಗ್ ಶಿಪ್ ಡಿವೈಸ್ ಇದಾಗಿದ್ದು ತನ್ನ ಈಗಿನ ಸಕ್ಸಸರ್ ಫೋನ್ ನಲ್ಲಿ ತಪ್ಪಿಹೋಗಿರುವ ಕೆಲವು ಫೀಚರ್ ಗಳು ಇದರಲ್ಲಿ ಲಭ್ಯವಾಗಲಿದೆ. ಅವುಗಳಲ್ಲಿ ಪ್ರಮುಖವಾಗಿರುವ ಫೀಚರ್ ಎಂದರೆ 5ಜಿ ನೆಟ್ ವರ್ಕ್ ಆಯ್ಕೆ ಕೂಡ ಆಗಿದೆ.


 • ಒನ್ ಪ್ಲಸ್ 8 ಪ್ರೋ

  ಒನ್ ಪ್ಲಸ್ 8 ರ ಮುಂದಿನ ವರ್ಷನ್ ಇದಾಗಿದ್ದು ಸ್ನ್ಯಾಪ್ ಡ್ರ್ಯಾಗನ್ 865 SoC ಇರಲಿದೆ ಮತ್ತು ಆಂಡ್ರಾಯ್ಡ್ 10 out-of-the-box ಆಗಿರಲಿದೆ.ಮೊದಲ ಬಾರಿಗೆ ಈ ಫೋನ್ ನಲ್ಲಿ ವಯರ್ ಲೆಸ್ ಚಾರ್ಜಿಂಗ್ ತಂತ್ರಜ್ಞಾನವಿರುತ್ತದೆ.


 • ವಿವೋ iQOO ಪ್ರೋ

  ವಿವೋ ಸಂಸ್ಥೆಯ ಐಕಾನಿಕ್ ಫೀಚರ್ ನಲ್ಲಿ 5ಜಿ ಪೋರ್ಟ್ ಇರಲಿದೆ.ಇದರಲ್ಲಿ 44W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವಿರುತ್ತದೆ. ಕೆಲವೇ ನಿಮಿಷದಲ್ಲಿ ಫೋನ ಸಂಪೂರ್ಣ ಚಾರ್ಜ್ ಆಗುತ್ತದೆ ಮತ್ತು ನಿಮ್ಮ ಹ್ಯಾಂಡ್ ಸೆಟ್ 90% ಪವರ್ ನ್ನು ಹೊಂದಿರುತ್ತದೆ.


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20

  ಪ್ರೀಮಿಯಂ ಸ್ಮಾರ್ಟ್ ಫೋನ್ ಆಗಿರುವ ಇದು ಹೆಚ್ಚುಕಡಿಮೆ (Rs 70,000-74,000) ರುಪಾಯಿ ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.ಇದರಲ್ಲಿ 64MP ಪ್ರೈಮರಿ ಕ್ಯಾಮರಾ ಲೆನ್ಸ್, 10MP ಸೆಲ್ಫೀ ಲೆನ್ಸ್ ವ್ಯವಸ್ಥೆ ಸೇರಿದಂತೆ ಹಲವು ಫೀಚರ್ ಗಳು ಲಭ್ಯವಾಗುತ್ತದೆ.


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20+

  ಮುಂಬರುವ ಈ ಡಿವೈಸ್ ನಲ್ಲಿ 5ಜಿ ಕನೆಕ್ಷನ್ ಇದ್ದು ಆಂಡ್ರಾಯ್ಡ್ 10 ಆಧಾರಿತ ಒನ್ UI 2.0 ವ್ಯವಸ್ಥೆ ಇರಲಿದೆ.ಇದರಲ್ಲಿ 4,500mAh ಬ್ಯಾಟರಿ ಸೇರಿದಂತೆ ಹಲವು ಹೊಸ ಫೀಚರ್ ಗಳು ಲಭ್ಯವಾಗುತ್ತದೆ.


 • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಆಲ್ಟ್ರಾ

  ಎಸ್20 ಯ ಹೈಯರ್ ವರ್ಷನ್ ಆಗಿರುವ ಈ ಫೋನಿನಲ್ಲಿ 5ಜಿ ನೆಟ್ ವರ್ಕ್ ಇರುತ್ತದೆ ಜೊತೆಗೆ ಇತರೆ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಲ್ಲಿರುವಂತೆ ಹಲವು ಪ್ರಮುಖ ಫೀಚರ್ ಗಳು ಲಭ್ಯವಾಗುತ್ತದೆ. ಈ ಹ್ಯಾಂಡ್ ಸೆಟ್ 12GB RAM ಮತ್ತು 16GB RAM ಆಯ್ಕೆಯ ಫೋನ್ ಗಳು ಲಭ್ಯವಿದೆ. 108MP ಪ್ರೈಮರಿ ಕ್ಯಾಮರಾ ಮತ್ತು 5,000mAh ಬ್ಯಾಟರಿ ಕೆಪಾಸಿಟಿಯನ್ನು ಇದು ಹೊಂದಿದೆ.
ಕಳೆದೊಂದು ವರ್ಷದಿಂದ 5ಜಿ ನೆಟ್ ವರ್ಕ್ ಇದೀಗ ಬಹಳ ಟ್ರೆಂಡ್ ಸೃಷ್ಟಿ ಮಾಡಿದೆ. ನೂತನ ಕನೆಕ್ಷನ್ ಗಾಗಿ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಕೂಡ ಹೊಸ ಡಿವೈಸ್ ಗಳನ್ನು ತಯಾರಿಸುವುದಕ್ಕೆ ಮುಂದಾಗುತ್ತಿದ್ದಾರೆ. ಸ್ಯಾಮ್ ಸಂಗ್ ಸಂಸ್ಥೆ ಬಿಡುಗಡೆಗೊಳಿಸಲಿರುವ ನೂತನ ಫೋನ್ ಗಳಾಗಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಪ್ಲಸ್ ಮತ್ತು ಎಸ್ 20 ಆಲ್ಟ್ರಾ ಫೋನ್ ಗಳಲ್ಲಿ 5ಜಿ ಫೋರ್ಟ್ ಲಭ್ಯವಿರಲಿದೆ.

   
 
ಹೆಲ್ತ್