Back
Home » ಇತ್ತೀಚಿನ
ಇದೇ ಫೆ.29ರ ವರೆಗೂ ಉಚಿತವಾಗಿ ಫಾಸ್ಟ್‌ಟ್ಯಾಗ್ ಮಾಡಿಸಲು ಅವಕಾಶ!
Gizbot | 17th Feb, 2020 11:09 AM

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ 'ಫಾಸ್ಟ್‌ಟ್ಯಾಗ್' ಅನ್ನು ಜಾರಿಮಾಡಲಾಗಿದೆ. ಬೈಕ್ ಹೊರತುಪಡಿಸಿ ಎಲ್ಲ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ ಆಗಿದ್ದು, ಆದರೂ ಇನ್ನು ಅನೇಕ ವಾಹನ ಮಾಲೀಕರು ವಾಹನಗಳಿಗೆ ಫಾಸ್ಟ್‌ಟ್ಯಾಗ್ ಮಾಡಿಸಿಕೊಂಡಿಲ್ಲ. ಇನ್ನು ಕೆಲವರಿಗೆ ಫಾಸ್ಟ್‌ಟ್ಯಾಗ್ ಎಲ್ಲಿ ಮಾಡಿಸುವುದು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಉಚಿತವಾಗಿ ಫಾಸ್ಟ್‌ಟ್ಯಾಗ್ ಮಾಡಿಸಿಕೊಳ್ಳುವ ಅವಧಿ ವಿಸ್ತರಿಸಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಹೌದು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಉಚಿತವಾಗಿ ಫಾಸ್ಟ್‌ಟ್ಯಾಗ್ ಮಾಡಿಸಿಕೊಳ್ಳಲು ಇದೇ ಫೆಬ್ರವರಿ 29ರ ವರೆಗೂ ವಿಸ್ತರಿಸಿದೆ. ಫಾಸ್ಟ್‌ಟ್ಯಾಗ್ ಮಾಡಿಸಿಕೊಳ್ಳಲು ಇದ್ದ 100ರೂ. ಶುಲ್ಕ 15 ದಿನಗಳವರೆಗೆ ಇರುವುದಿಲ್ಲ. ಹೀಗಾಗಿ ವಾಹನ ಮಾಲೀಕರು ಫೆ.29ರ ಒಳಗಾಗಿ ಉಚಿತ ಫಾಸ್ಟ್‌ಟ್ಯಾಗ್ ರೀಜಿಸ್ಟ್ರೇಷನ್ ಮಾಡಿಸಿಕೊಳ್ಳಬಹುದಾಗಿದೆ. ಇನ್ನು ಫಾಸ್ಟ್‌ಟ್ಯಾಗ್ ಮಾಡಿಸಿಕೊಳ್ಳಲು ಹಲವು ಅನುಕೂಲ ಮಾಡಿದೆ.

ಹೆದ್ದಾರಿ ಟೋಲ್

ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ, ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ, ಟ್ರಾನ್ಸ್‌ಫೋರ್ಟ್‌ ಹಬ್‌ಗಳಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಮಾಡಿಸಿಕೊಳ್ಳಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗ್ರಾಹಕರಿಗೆ ಅವಕಾಶ ಕಲ್ಪಿಸಿದೆ. ಈ ಸ್ಥಳಗಳಲ್ಲಿ ವಾಹನದ ಮಾಲೀಕರು ಆನ್‌ಲೈನ್ ವ್ಯವಹಾರ ವಿಲ್ಲದೇ, ನೇರವಾಗಿ ಭೇಟಿ ನೀಡಿ ವಾಹನಗಳ ಮೂಲ ದಾಖಲಾತಿಗಳನ್ನು RC ಪರಿಶೀಲನೆ ಮಾಡಿಸಿ ಫಾಸ್ಟ್‌ಟ್ಯಾಗ್ ಮಾಡಿಸಿಕೊಳ್ಳಬಹುದಾಗಿದೆ.

ಪೇಟಿಎಮ್, ಐಸಿಐಸಿಐ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಳೆದ ಡಿಸೆಂಬರ್ ಅಂತ್ಯದವರೆಗೂ ಉಚಿತ ಫಾಸ್ಟ್‌ಟ್ಯಾಗ್ ಮಾಡಿಸಿಕೊಳ್ಳಲು ಅವಾಕಾಶ ನೀಡಿತ್ತು. ಈಗ ಮತ್ತೆ 15 ದಿನ ಉಚಿತ ಮಾಡಿದೆ. ಹಾಗೆಯೇ ಪೇಟಿಎಮ್, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಮತ್ತು ಇತರೆ ಫಾಸ್ಟ್‌ಟ್ಯಾಗ್ ವಿತರಿಸುವ ಬ್ಯಾಂಕ್‌ಗಳು ಈಗಲೂ 100ರೂ. ಚಾರ್ಜ್ ಮಾಡುತ್ತಿವೆ. ಇದರೊಂದಿಗೆ 200ರೂ. ಸೆಕ್ಯುರಿಟಿ ಠೇವಣಿ ಇರಿಸಿಕೊಳ್ಳುತ್ತಿವೆ.

ಫಾಸ್ಟ್‌ಟ್ಯಾಗ್ ರೀಚಾರ್ಜ್ ಹೇಗೆ

ರಾಷ್ಟೀಯ ಹೆದ್ದಾರಿಗಳಲ್ಲಿನ ಟೋಲ್‌ಗಳಲ್ಲಿ ಇದೀಗ ಡಿಜಿಟಲ್ ಪೇಮೆಂಟ್ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಜಾರಿಯಲ್ಲಿದ್ದು, ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಖಾತೆಗೆ ರೀಚಾರ್ಜ್ ಮಾಡಿಸಿಕೊಳ್ಳುವ ಅಗತ್ಯವಿದೆ. ಅದಕ್ಕಾಗಿ ಗೂಗಲ್ ಪೇ ಅನುಕೂಲ ಮಾಡಿಕೊಟ್ಟಿದ್ದು, ಗೂಗಲ್‌ ಪೇ ಆಪ್‌ನಲ್ಲಿ ಫಾಸ್ಟ್‌ಟ್ಯಾಗ್ ಖಾತೆಯನ್ನು ಲಿಂಕ್ ಮಾಡಿ ಅತೀ ಸುಲಭವಾಗಿ ರೀಚಾರ್ಜ್ ಮಾಡಿಸಿಕೊಳ್ಳುವ ಸೇವೆ ಇದೀಗ ಲಭ್ಯ ಇದೆ.

ಫಾಸ್ಟ್‌ಟ್ಯಾಗ್ ಖಾತೆ ಲಿಂಕ್ ಮಾಡಿ

ಗೂಗಲ್ ಪೇ ಆಪ್‌ನಲ್ಲಿ ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡಿಕೊಳ್ಳಲು ಗ್ರಾಹಕರು ಮೊದಲು ಅವರ ಫಾಸ್ಟ್‌ಟ್ಯಾಗ್ ಖಾತೆಯನ್ನು ಲಿಂಕ್ ಮಾಡಬೇಕಿದೆ. ಖಾತೆಯನ್ನು ಲಿಂಕ್ ಮಾಡಲು ಗೂಗಲ್‌ ಪೇ ಆಪ್‌ನ ಬಿಲ್ ಪೇಮೆಂಟ್ಸ್‌(Bill Payments) ವಿಭಾಗದಲ್ಲಿ 'ಫಾಸ್ಟ್‌ಟ್ಯಾಗ್' ಆಯ್ಕೆ ಕಾಣಿಸುತ್ತದೆ. ನಂತರ ರುಪಿ ಐಕಾನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ಫಾಸ್ಟ್‌ಟ್ಯಾಗ್ ರೀಚಾರ್ಜ್ ಆಯ್ಕೆ ಸೆಲೆಕ್ಟ್ ಮಾಡಿರಿ.

ಫಾಸ್ಟ್‌ಟ್ಯಾಗ್ ಖಾತೆ ರೀಚಾರ್ಜ್ ಮಾಡಲು ಈ ಹಂತಗಳನ್ನು ಅನುಸರಿಸಿ

* ಗೂಗಲ್ ಪೇ ಆಪ್‌ನಲ್ಲಿ ಬಿಲ್ ಪೇಮೆಂಟ್ ಆಯ್ಕೆ ಸೆಲೆಕ್ಟ್ ಮಾಡಿ
* ಬಿಲ್ ಪೇಮೆಂಟ್‌ ಆಯ್ಕೆಯಲ್ಲಿ ಫಾಸ್ಟ್‌ಟ್ಯಾಗ್ ಆಯ್ಕೆ ಒತ್ತಿರಿ
* ಫಾಸ್ಟ್‌ಟ್ಯಾಗ್ ಆಯ್ಕೆಯಲ್ಲಿ ರುಪಿ ಐಕಾನ್ ಸೆಲೆಕ್ಟ್ ಮಾಡಿರಿ
* ನಂತರ ಫಾಸ್ಟ್‌ಟ್ಯಾಗ್ ರೀಚಾರ್ಜ್ ಆಯ್ಕೆಯನ್ನು ಕ್ಲಿಕ್ಕ್ ಮಾಡಿರಿ
* ಫಾಸ್ಟ್‌ಟ್ಯಾಗ್ ನೀಡಿರುವ ಬ್ಯಾಂಕ್ ಸೆಲೆಕ್ಟ್ ಮಾಡಿರಿ.

ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್‍ ಚೆಕ್

ಗೂಗಲ್ ಪೇ ಆಪ್‌ನಲ್ಲಿ ಇದೀಗ ಫಾಸ್ಟ್‌ಟ್ಯಾಗ್ ಖಾತೆಗೆ ರೀಚಾರ್ಜ್ ಮಾಡುವ ಸೇವೆಯನ್ನು ಗೂಗಲ್ ಅಳವಡಿಸಿದೆ. ಅದರೊಂದಿಗೆ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್‌ ಚೆಕ್ ಮಾಡುವ ಆಯ್ಕೆಯನ್ನು ಸಹ ಒದಗಿಸಿದೆ. ಗ್ರಾಹಕರು ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಉಳಿದಿರುವ ಮೊತ್ತವನ್ನು ಸಹ ಸುಲಭವಾಗಿ ಚೆಕ್ ಮಾಡಬಹುದಾಗಿದೆ.

   
 
ಹೆಲ್ತ್