Back
Home » ಇತ್ತೀಚಿನ
ಕೊರೊನಾ ವೈರಸ್‌: ಡೈಮಂಡ್ ಪ್ರಿನ್ಸ್‌ ಹಡಗಿನ ಪ್ರಯಾಣಿಕರಿಗೆ ಉಚಿತ ಐಫೋನ್ ನೀಡಿದ ಜಪಾನ!
Gizbot | 17th Feb, 2020 05:35 PM

ಚೀನಾದಲ್ಲಿ ಉಗಮವಾಗಿರುವ ಮಾರಕ ಕೊರೊನಾ ವೈರಸ್‌ ಹೆಚ್ಚಿನ ಜನರನ್ನು ಬಲಿ ಪಡೆಯುತ್ತಿದೆ. ಇದು ಇತರೆ ರಾಷ್ಟ್ರಗಳಲ್ಲಿಯೂ ಆತಂಕ ಮೂಡಿಸಿದೆ. ಆದ್ರೆ ಚೀನಾ ಸರ್ಕಾರವು ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಮುಂದುವರೆಸಿದೆ. ಕೊರೊನಾ ವೈರಸ್‌ ತಗುಲಿರುವವರಿಗೂ ಸೂಕ್ತ ಚಿಕಿತ್ಸೆ ನೀಡುವ ಮತ್ತು ಸಲಹೆ ನೀಡುವ ಕೆಲಸಗಳನ್ನು ನಡೆಸುತ್ತಿದೆ. ಹಾಗೆಯೇ ಜಪಾನ ಸರ್ಕಾರ ಸಹ ಡೈಮಂಡ್ ಪ್ರಿನ್ಸ್‌ ಹಡಗಿನ ಪ್ರಯಾಣಿಕರಿಗೆ ಇದೀಗ ಉಚಿತ ಐಫೋನ್ ನೀಡಿದೆ.

ಡೈಮಂಡ್ ಪ್ರಿನ್ಸ್‌

ಹೌದು, ಜಪಾನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಡೈಮಂಡ್ ಪ್ರಿನ್ಸ್‌ ಹಡಗಿನಲ್ಲಿನ ಪ್ರಯಾಣಿಕರಿಗೆ ಸುಮಾರು 2000 ಉಚಿತ ಐಫೋನ್‌ಗಳನ್ನು ನೀಡಿದೆ ಎಂದು ಅಲ್ಲಿಯ ಸುದ್ದಿ ಸಂಸ್ಥೆ Macotakara-ಮಕೋಟಕರ ವರದಿ ಮಾಡಿದೆ. ಸುಮಾರು 3,700 ಪ್ರಯಾಣಿಕರಿದ್ದ ಡೈಮಂಡ್ ಪ್ರಿನ್ಸ್‌ ಹಡಗಿನಲ್ಲಿ ಸುಮಾರು 350ಕ್ಕೂ ಅಧಿಕ ಪ್ರಯಾಣಿಕರಿಗೆ ಕೊರೊನಾ ವೈರಸ್‌ ಇರುವುದು ಪತ್ತೆಯಾಗಿದೆ. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಡಗಿನಲ್ಲಿ

ಇನ್ನುಳಿದ ಪ್ರಯಾಣಿಕರನ್ನು ಹಡಗಿನಲ್ಲಿಯೇ ಉಳಿಸಲಾಗಿದ್ದು, ಅಲ್ಲಿಯೇ ಅವರ ಆರೋಗ್ಯದ ಕಾಳಜಿ ಮುಂದುವರೆಸಿದ್ದಾರೆ. ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಲು ನೆರವಾಗಲೆಂದು ಹಡಗಿನ ಪ್ರಯಾಣಿಕರು ಉಚಿತವಾಗಿ ಸುಮಾರು 2000 ಐಫೋನ್‌ಗಳನ್ನು ನೀಡಿದ್ದಾರೆ. ಐಫೋನ್ ಮೂಲಕ ಅಗತ್ಯ ಮೆಡಿಸಿನ್ ಮತ್ತು ಚಾಟ್‌ ಮೂಲಕ ಸೈಕಾಲಾಜಿಸ್ಟ್‌ಗಳನ್ನು ಸಂಪರ್ಕಿಸಲು ಮಾಡಲು ಫೋನ್ ನೆರವಾಗುತ್ತದೆ ಎನ್ನಲಾಗಿದೆ.

ಐಫೋನ್‌ಗಳಲ್ಲಿ

ಪ್ರಯಾಣಿಕರಿಗೆ ನೀಡಿರುವ ಐಫೋನ್‌ಗಳಲ್ಲಿ ಲೈನ್ ಆಪ್ ಪ್ರಿ-ಇನ್‌ಸ್ಟಾಲ್‌ ಮಾಡಲಾಗಿದ್ದು, ಈ ಆಪ್ ಮೂಲಕ ವೈದ್ಯಕೀಯ ಸಹಾಯ ಪಡೆಯಬಹುದಾಗಿದೆ. ಆಪ್‌ ಮೂಲಕವೇ ತಜ್ಞ ವೈದ್ಯರನ್ನು ಸಂಪರ್ಕ ಮಾಡಿ ಅಗತ್ಯ ಔಷಧಿಗಳನ್ನು ತರಿಸಿಕೊಳ್ಳಲು ಫೋನ್‌ ನೆರವಾಗಲಿದೆ. ಏಕೆಂದರೇ ಈ ಆಪ್ ಸ್ಟೋರ್‌ಗಳಲ್ಲಿ ಅಲಭ್ಯವಾಗಿದ್ದು, ಹೀಗಾಗಿ ಸರ್ಕಾರವೇ ಆಪ್‌ ಪ್ರಿ ಇನ್‌ಸ್ಟಾಲ್ ಮಾಡಿರುವ ಐಫೋನ್‌ಗಳನ್ನು ನೀಡಿದೆ.

ಜಪಾನ ಸೇರಿದಂತೆ

ಹಡಗಿನಲ್ಲಿ ಪ್ರಯಾಣಿಕರಿರುವ ಪ್ರತಿ ಕ್ಯಾಬಿನ್‌ನಲ್ಲಿ ಒಂದು ಐಫೋನ್ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಈ ಹಡಗಿನಲ್ಲಿ ಜಪಾನ ಸೇರಿದಂತೆ ಇತರೆ ರಾಷ್ಟ್ರಗಳ ಪ್ರಯಾಣಿಕರು ಇದ್ದು, ಅವರಲ್ಲಿ ಸುಮಾರು 400 ಜನರು ಅಮೆರಿಕನ್ನರು ಹಾಗೂ ಸುಮಾರು 138 ಭಾರತೀಯ ಮೂಲದ ಪ್ರಯಾಣಿಕರು ಇದ್ದಾರೆ ಎಂದು ಹೇಳಾಗಿದೆ.

   
 
ಹೆಲ್ತ್