Back
Home » ಇತ್ತೀಚಿನ
ವಿದೇಶ ಪ್ರಯಾಣ ಮಾಡುವಾಗ ನೀವು ಹೊಂದಿರಲೇಬೇಕಾದ ಆಪ್‌ಗಳು!
Gizbot | 18th Feb, 2020 01:30 PM
 • ಹೌದು

  ಹೌದು, ಇಂದು ತಂತ್ರಜ್ಞಾನ ಮುಂದುವರೆದಿದ್ದೂ ಸ್ಮಾರ್ಟ್‌ಫೋನ್‌ಗಳು ಮಿನಿ ಕಂಪ್ಯೂಟರ್‌ಗಳಂತೆ ಕಾರ್ಯನಿರ್ವಹಿಸುತ್ತಿವೆ. ಇಂಟರ್‌ನೆಟ್‌ನಲ್ಲಿ ಮಾಡಬಹುದಾದ ಎಲ್ಲ ಕೆಲಸಗಳನ್ನು ಸ್ಮಾರ್ಟ್‌ಫೋನ್‌ನಲ್ಲಿಯೇ ಮಾಡಬಹುದಾಗಿದೆ. ಗಲ್ಲಿಯಿಂದ ದಿಲ್ಲಿಯವರೆಗೆ, ದೇಶದಿಂದ ವಿದೇಶಕ್ಕೆ ಪ್ರಯಾಣ ಮಾಡುವಾಗಲು ನಿಮಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಅತ್ಯುತ್ತಮ ಆಪ್‌ಗಳು ಕೂಡ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರಲಿವೆ. ಅದರಲ್ಲೂ ನೀವು ಏನಾದರೂ ವಿದೇಶ ಪ್ರವಾಸ ಮಾಡುವುದಾದರೆ ಕೆಲ ಅತ್ಯುತ್ತಮ ಆಪ್‌ ಗಳ ಬಗ್ಗೆ ತಿಳಿದಿರಲೇಬೇಕು, ಯಾವುವು ಅನ್ನೊದರ ಬಗ್ಗೆ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ.


 • XE ಆಪ್‌

  XE ಆಪ್‌ ವಿದೇಶ ಪ್ರವಾಸ ಮಾಡುವವರು ಹೊಂದಿರಲೇಬೇಕಾದ ಅತ್ಯುತ್ತಮ ಆಪ್‌ಗಳಲ್ಲಿ ಇಂದು ಒಂದಾಗಿದ್ದು, ಈ ಆಪ್‌ ಒಂದು ಕರೆನ್ಸಿ ಕನವರ್ಟರ್‌ ಅಪ್ಲಿಕೇಶನ್ ಆಗಿದೆ. ಈ ಆಪ್ಲಿಕೇಶನ್‌ ಮೂಲಕ ವಿದೇಶ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರ ತಮ್ಮ ಸ್ವಂತ ಕರೆನ್ಸಿಯಲ್ಲಿ ಎಷ್ಟು ಖರ್ಚು ಮಾಡುತ್ತಿದ್ದಾರೆಂದು ತಿಳಿಯಲು ಸಹಾಯ ಮಾಡುತ್ತದೆ. ಅಲ್ಲದೆ ಈ ಆಪ್ಲಿಕೇಶನ್‌ ಮೂಲಕ ಏಕಕಾಲದಲ್ಲಿ 10 ಕರೆನ್ಸಿಗಳನ್ನು ನೋಡಬಹುದಾಗಿದ್ದು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣ ವರ್ಗಾವಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇನ್ನು XE ಅಪ್ಲಿಕೇಶನ್ ಅನ್ನು ಐಒಎಸ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳೆರಡೂ ಕೂಡ ಬೆಂಬಲಿಸುತ್ತವೆ.


 • ಪೇಪಾಲ್

  ಇನ್ನು ನೀವು ವಿದೇಶ ಪ್ರಯಾಣ ಮಾಡುವಾಗ ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಪೇಪಾಲ್‌ ಆಪ್‌ ಇದ್ದರೆ ಉತ್ತಮ. ಈ ಆಪ್‌ ನಿಮಗೆ ತುರ್ತು ಸಂದರ್ಭದಲ್ಲಿ ಹಣಕಾಸಿನ ವ್ಯವಸ್ಥೆ ಮಾಡುವ ಆಪ್‌ ಆಗಿದೆ. ನಿಮ್ಮ ಬ್ಯಾಂಕ್ ಖಾತೆ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ ಮೂಲಕ ನೀವು ಪೇಪಾಲ್ ಆಪ್ಲಿಕೇಶನ್‌ಗೆ ಲಾಗಿನ್‌ ಆಗಬಹುದಾಗಿದ್ದು, ನಿಮಗೆ ಅಗತ್ಯವಿದ್ದಾಗ ಹಣ ವರ್ಗಾಯಿಸಲು ಸುರಕ್ಷಿತ ಸ್ಥಳವಾಗಿಯೂ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ. ಪೇಪಾಲ್ ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಲಭ್ಯವಿದೆ.


 • ಟ್ರಯಲ್ ವಾಲೆಟ್

  ವಿದೇಶ ಪ್ರಯಾಣ ಮಾಡುವಾಗ ಒಬ್ಬ ವ್ಯಕ್ತಿ ತಿಂಗಳಿಗೆ ಯಾವ ಪ್ರಮಾಣದಲ್ಲಿ ಹಣವನ್ನ ಖರ್ಚು ಮಾಡಬಲ್ಲ ಅನ್ನೊದನ್ನ ಈ ಆಪ್ಲಿಕೇಶನ್‌ ಟ್ರ್ಯಾಕ್‌ ಮಾಡುತ್ತದೆ. ಅಂದರೆ ನೀವು ಪ್ರಯಾಣದ ಹಾದಿಯಲ್ಲಿ ಆಹಾರ, ವಸತಿ, ಸಾರಿಗೆಗಾಗಿ ಬಳಸಿದ ಹಣವೆಷ್ಟು. ನಿಮ್ಮ ಬಳಿ ಇರುವ ಹಣವೆಷ್ಟು. ನೀವು ಇನ್ನು ಯಾವ ಪ್ರಮಾಣದಲ್ಲಿ ಹಣವನ್ನ ಖರ್ಚು ಮಾಡಬಹುದು ಅನ್ನೊ ಸೂಚನೆಯನ್ನ ಈ ಅಪ್ಲಿಕೇಶನ್‌ ಮೂಲಕ ಪಡೆಯಬಹುದು. ಇದಲ್ಲದೆ ಟ್ರಯಲ್ ವಾಲೆಟ್ ಆಪ್‌ ಬಳಕೆದಾರ ಸ್ನೇಹಿಯಾಗಿದ್ದು, ಇದನ್ನ ಟ್ಯಾಪ್ ಮಾಡುವುದರ ಮೂಲಕ ನಿಮ್ಮ ಖಾತೆಯ ಉಳಿದಿರುವ ಹಣವನ್ನು ಪರಿಶೀಲಿಸಬಹುದಾಗಿದ್ದು, ವಿದೇಶದ ಕರೆನ್ಸಿಗೆ ನಿಮ್ಮ ಕರೆನ್ಸಿಯಲ್ಲಿ ಖರ್ಚು ಮಾಡಿದ ಹಣ ಮತ್ತು ನಿಮ್ಮ ಕರೆನ್ಸಿಯ ಮೌಲ್ಯದ ಬಗ್ಗೆ ತಿಳಿದುಕೊಳ್ಳಬಹುದು. ಇದು ಐಒಎಸ್‌ ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರ ಲಭ್ಯವಿದೆ.


 • ಗೂಗಲ್‌ ಮ್ಯಾಪ್‌

  ಇನ್ನು ನಿಮಗೆಲ್ಲಾ ಗೊತ್ತಿರುವಂತೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಇತರರನ್ನ ಕೇಳುವ ಬದಲು ನಿಮ್ಮ ಗೂಗಲ್‌ ಮ್ಯಾಪ್‌ ನ್ಯಾವಿಗೇಷನ್‌ ಮೂಲಕ ಸ್ಥಳವನ್ನ ಗುರುತಿಸಬಹುದು. ಈ ಆಪ್ಲಿಕೇಶನ್‌ ಅನ್ನು ನೀವು ವಿದೇಶ ಪ್ರಯಾಣಕ್ಕೆ ಮಾತ್ರವಲ್ಲ ನಿಮ್ಮ ದೈನಂದಿನ ಪ್ರಯಾಣದಲ್ಲೂ ಅವಶ್ಯಕವಾಗಿದೆ. ಗೂಗಲ್‌ಮ್ಯಾಪ್‌ ನೀಡುವ ಮಾರ್ಗ ಸೂಚಿ ನೂರಕ್ಕೆ ನೂರು ಸರಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲದೆ ಹೊದರು ಸಹ ನ್ಯಾವಿಗೇಷನ್‌ಗೆ ಇದು ಉತ್ತಮ ಆಪ್ಲಿಕೇಶನ್‌ ಆಗಿದೆ. ಈ ಆಪ್ಲಿಕೇಶನ್‌ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಡಿವೈಸ್‌ಗಳಲ್ಲೂ ಲಭ್ಯವಿದೆ.


 • ಮೊಬೈಲ್ ಪಾಸ್‌ಪೋರ್ಟ್

  ಇದಲ್ಲದೆ ಮೊಬೈಲ್‌ ಪಾಸ್‌ಪೋರ್ಟ್‌ ಆಪ್ಲಿಕೇಶನ್‌ ಅನ್ನು ನೀವು ಹೊಂದಿದ್ದರೆ ನಿಮಗೆ ವಿದೇಶ ಪ್ರಯಾಣದ ಸಂದರ್ಭದಲ್ಲಿ ತುಂಬಾ ಅನುಕೂಲಕರವಾಗಲಿದೆ. ಈ ಆಪ್ಲಿಕೇಶನ್‌ ಮೂಲಕ ಏನೀವು ಏರ್‌ಫೋರ್ಟ್‌ನಲ್ಲಿ ಕಸ್ಟಮ್ಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಲು ಅವಕಾಶ ಕಲ್ಪಿಸುತ್ತದೆ. ಮೊಬೈಲ್‌ ಪಾಸ್‌ಪೋರ್ಟ್‌ನಲ್ಲಿ ನಿಮ್ಮ ಪಾಸ್‌ಪೋರ್ಟ್‌ ಮಾಹಿತಿ, ವಿಸಾ ಮಾಹಿತಿ ಸೇರಿದಂತೆ,ಇತರೆ ಮಾಃಇತಿಗಳು ಲಭ್ಯವಾಘಲಿದೆ. ಇದಿರಂದ ನೀವು ಕಸ್ಟಮ್ಸ್‌ ಕೌಂಟರ್‌ನಲ್ಲಿ ಸರದಿ ಸಾಲಿನಲ್ಲಿ ಸಾಕಷ್ಟು ಸಮಯ ಕಾಯುವ ಅವಶ್ಯಕತೆ ಇರುವುದಿಲ್ಲ. ನಿಮಗೆ ಇನ್ನಷ್ಟು ಸಮಯವನ್ನ ಉಳಿತಾಯ ಮಾಡಲಿದೆ.
ಇತ್ತೀಚಿನ ದಿನಗಳಲ್ಲಿ ಜಗತ್ತು ತಾಂತ್ರಿಕವಾಗಿ ಸಾಕಷ್ಟು ವೇಗವಾಗಿ ಮುನ್ನಗ್ಗುತ್ತಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳು ಇಂದು ಮನುಷ್ಯನ ಅವಿಭಾಜ್ಯ ಅಂಗದಂತೆ ಆಗಿ ಹೋಗಿವೆ. ಇಂದಿನ ಸ್ಮಾರ್ಟ್‌ಫೋನ್‌ಗಳು ಕೇವಲ ಕರೆ ಸ್ವೀಕರಿಸುವ, ಕರೆ ಮಾಡುವ ಕೆಲಸಕ್ಕೆ ಸೀಮಿತವಾಗಿಲ್ಲ, ಬದಲಿಗೆ ಮಿನಿ ಕಂಪ್ಯೂಟರ್‌ನಂತೆ ಕಾರ್ಯ ನಿರ್ವಹಿಸುವಷ್ಟರ ಮಟ್ಟಿಗೆ ಇಂದು ತಂತ್ರಜ್ಞಾನ ಬೆಳೆದಿದ್ದು, ಇಡಿ ಮನುಕುಲವನ್ನೇ ವ್ಯಾಪಿಸಿಕೊಂಡಿದೆ. ಗೂಗಲ್‌ ಅಸಿಸ್ಟೆಂಟ್‌, ಅಲೆಕ್ಸಾ, ಸಿರಿ ಅಂತಹ ತಂತ್ರಜ್ಞಾನಗಳು ನಮ್ಮ ಆಲೋಚನೆಯ ಪರಧಿಯನ್ನೇ ಮೀರಿ ಮುಂದುವರೆದಿವೆ.

   
 
ಹೆಲ್ತ್