Back
Home » ಇತ್ತೀಚಿನ
ಅತೀ ಕಡಿಮೆ ಬೆಲೆಗೆ ಲಭ್ಯ ಇರುವ 5 ಆಂಡ್ರಾಯ್ಡ್‌ ಓಎಸ್‌ ಸ್ಮಾರ್ಟ್‌ಫೋನ್‌ಗಳು!
Gizbot | 18th Feb, 2020 03:50 PM
 • ತರಹೇವಾರಿ ಫೀಚರ್ಸ್‌

  ಹೌದು, ಮಾರುಕಟ್ಟೆಯಲ್ಲಿ ತರಹೇವಾರಿ ಫೀಚರ್ಸ್‌, ವೇರಿಯಂಟ್‌ಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳು ಲಭ್ಯ ಇವೆ. ಅವುಗಳಲ್ಲಿ ಕೆಲವರು ಐಫೋನ್ ನಂತಹ ಹೈ ಎಂಡ್‌ ಫೋನ್‌ ಖರೀದಿಸುತ್ತಾರೆ ಹಾಗೂ ಇನ್ನು ಕೆಲವರು ಬಜೆಟ್‌ ಬೆಲೆಯಲ್ಲಿಯೇ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಲು ಮುಂದಾಗುತ್ತಾರೆ. ಸದ್ಯ 5,000ರೂ. ಪ್ರೈಸ್‌ಟ್ಯಾಗ್‌ನ ಒಳಗೆ ಲಭ್ಯ ಇರುವ 5 ಸ್ಮಾರ್ಟ್‌ಫೋನ್‌ಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿದ್ದೆವೆ. ಮುಂದೆ ಓದಿರಿ.


 • ನೋಕಿಯಾ 8110 4G

  ಜನಪ್ರಿಯ ನೋಕಿಯಾ ಸಂಸ್ಥೆಯು ಆಂಡ್ರಾಯ್ಡ್‌ನಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಎಂಟ್ರಿ ಲೆವೆಲ್ ಫೋನ್ ಸಹ ಲಾಂಚ್ ಮಾಡಿದೆ. ಅದುವೇ ನೋಕಿಯಾ 8110 4G. ಈ ಸ್ಮಾರ್ಟ್‌ಫೋನ್ ಅಮೆಜಾನ್‌ ತಾಣದಲ್ಲಿ 3,239ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಫೋನ್ 2.4 ಇಂಚಿನ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 205 ಪ್ರೊಸೆಸರ್, 1500 mAh ಬ್ಯಾಟರಿ ಹೊಂದಿದೆ. ಹಾಗೂ 4 GB ಆಂತರಿಕ ಸ್ಟೋರೇಜ್ ಹಾಗೂ 2ಎಂಪಿ ಕ್ಯಾಮೆರಾ ಪಡೆದಿದೆ.


 • ಶಿಯೋಮಿ ರೆಡ್ಮಿ ಗೋ

  ಶಿಯೋಮಿ ರೆಡ್ಮಿ ಗೋ ಸ್ಮಾರ್ಟ್‌ಫೋನ್ ಎಂಟ್ರಿಲೆವಲ್‌ ಫೋನ್ ಆಗಿ ಗಮನ ಸೆಳೆದಿದೆ. ಈ ಫೋನ್ ಅಮೆಜಾನ್ ತಾಣದಲ್ಲಿ 4,677ರೂ, ಬೆಲೆಯನ್ನು ಹೊಂದಿದ್ದು, ಖರೀದಿಗೆ ಲಭ್ಯವಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 425 ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಈ ಫೋನ್ 3000 mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ. 5ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಇದ್ದು, 8 GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಪಡೆದಿದೆ.


 • ಮೈಕ್ರೋಮ್ಯಾಕ್ಸ್‌ ಕ್ಯಾನ್ವಾಸ್ ಸ್ಪಾರ್ಕ್ 2 ಪ್ಲಸ್‌

  ಮೈಕ್ರೋಮ್ಯಾಕ್ಸ್‌ ಸಂಸ್ಥೆಯ ಈ ಫೋನ್ ಅಮೆಜಾನ್ ಇ-ಕಾಮರ್ಸ್‌ ತಾಣದಲ್ಲಿ 3,495ರೂ.ಗಳ ಪ್ರೈಸ್‌ನಲ್ಲಿ ಗುರುತಿಸಿಕೊಂಡಿದೆ. 5 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ ಫೋನ್ ಆಂಡ್ರಾಯ್ಡ್‌ 6 ಓಎಸ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂಬದಿ 5ಎಂಪಿ+ ಸೆಲ್ಫಿ ಕ್ಯಾಮೆರಾ 2ಎಂಪಿ ಆಗಿದ್ದು, 1GB RAM ಸಾಮರ್ಥ್ಯದೊಂದಿಗೆ 8 GB ಆಂತರಿಕ ಸ್ಥಳಾವಕಾಶ ಪಡೆದಿದೆ.


 • ಲಾವಾ Z60S

  ಅಗ್ಗದ ಬೆಲೆಯ ಫೋನ್‌ಗಳಿಂದ ಗುರುತಿಸಿಕೊಂಡಿರುವ ಲಾವಾ ಸಂಸ್ಥೆಯ ಬೇಸಿಕ್ ಸ್ಮಾರ್ಟ್‌ಫೋನ್ ಲಾವಾ Z60S ಅಮೆಜಾನ್ ತಾಣದಲ್ಲಿ 4,890ರೂ. ಬೆಲೆಯನ್ನು ಹೊಂದಿದೆ. 5 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ ಫೋನ್ 1GB RAM ಜೊತೆಗೆ 16GB ಆಂತರಿಕ ಶೇಖರಣಾ ಸಾಮರ್ಥ್ಯವನ್ನು ಪಡೆದಿದೆ. ಹಾಗೂ ಎಸ್‌ಡಿ ಕಾರ್ಡ್‌ ಮೂಲಕ 64GB ವರೆಗೂ ವಿಸ್ತರಿಸುವ ಅವಕಾಶ ಪಡೆದಿದೆ.


 • ಮೈಕ್ರೋಮ್ಯಾಕ್ಸ್‌ ಭಾರತ್ ಗೋ

  ಮೈಕ್ರೋಮ್ಯಾಕ್ಸ್‌ ಸಂಸ್ಥೆಯ ಮತ್ತೊಂದು ಅಗ್ಗದ ಎಂಟ್ರಿಲೆವೆಲ್ ಫೋನ್ ಇದಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಬೆಲೆಯು 3,789ರೂ. ಆಗಿದೆ. 4.5 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ ಫೋನ್ 5ಎಂಪಿ ರಿಯರ್ ಕ್ಯಾಮೆರಾ ಮತ್ತು 5 ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ. 1 GB RAMನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 2,000 mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ.
ಪ್ರಸ್ತುತ ಸ್ಮಾರ್ಟ್‌ಫೋನ್ ಅತೀ ಅಗತ್ಯವಾದ ಡಿವೈಸ್ ಆಗಿದೆ. ಪ್ರತಿ ಕೆಲಸಕ್ಕೂ ಸ್ಮಾರ್ಟ್‌ಫೋನ್ ಅನ್ನು ನೆಚ್ಚುವಂತಾಗಿದೆ. ಸದ್ಯ ಕಾಲೇಜ್ ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ವಯೋಮಾನದವರಿಗೂ ಸ್ಮಾರ್ಟ್‌ಫೋನ್ ಅನಿವಾರ್ಯವಾಗಿದೆ. ಆದರೆ ಫೋನ್ ಅಗತ್ಯವೆಂದು ಎಲ್ಲರೂ ದುಬಾರಿ ಬೆಲೆಯ ಫೋನ್ ಖರೀದಿಸುವುದಿಲ್ಲ. ಬಹುತೇಕರು ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಮುಂದಾಗುತ್ತಾರೆ.

   
 
ಹೆಲ್ತ್