Back
Home » ಇತ್ತೀಚಿನ
ವಿಶ್ವದಲ್ಲಿ ಯಾವ ಕಂಪನಿಯ ಫೋನ್‌ಗಳು ಹೆಚ್ಚು ಮಾರಾಟ ಕಂಡಿವೆ ಗೊತ್ತಾ?
Gizbot | 19th Feb, 2020 09:00 AM
 • ಕೌಂಟರ್‌ ಪಾಯಿಂಟ್

  ಹೌದು, ಕೌಂಟರ್‌ ಪಾಯಿಂಟ್ ಮಾರ್ಕೆಟ್ ಸರ್ವೀಸ್ ಸಂಸ್ಥೆಯು 2019ರಲ್ಲಿ ವಿಶ್ವದಲ್ಲಿಯೇ ಯಾವ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಅಧಿಕವಾಗಿ ಮಾರಾಟ ಕಂಡಿವೆ ಎಂಬುದರ ಬಗ್ಗೆ ವರದಿಯನ್ನು ಹೊರಹಾಕಿದೆ. ಈ ವರದಿಯ ಪ್ರಕಾರ 2019ರಲ್ಲಿ ಸ್ಯಾಮ್‌ಸಂಗ್ ಸಂಸ್ಥೆಯು ಅತೀ ಹೆಚ್ಚಿನ ಸ್ಮಾರ್ಟ್‌ಫೋನ್ ಮಾರಾಟ ಮಾಡಿದ್ದು, ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹಾಗಾದರೇ ಆಪಲ್, ಹಾನರ್ ಹಾಗೂ ಇನ್ನುಳಿದ ಜನಪ್ರಿಯ ಕಂಪನಿಗಳ ಸ್ಥಾನ ಹೇಗಿದೆ ತಿಳಿಯಲು ಮುಂದೆ ಓದಿರಿ.


 • ಸ್ಯಾಮ್‌ಸಂಗ್

  ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಶೇ.20% ಮಾರುಕಟ್ಟೆ ಶೇರ್ ಹೊಂದಿದ್ದು, ಹೆಚ್ಚು ಫೋನ್ ಮಾರಾಟದಲ್ಲಿ ನಂಬರ್‌ ಒನ್ ಸ್ಥಾನದಲ್ಲಿದೆ. 2019ರಲ್ಲಿ ಸ್ಯಾಮ್‌ಸಂಗ್ ವಿಶ್ವದಲ್ಲಿಯೇ ಒಟ್ಟು 296.1 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ.


 • ಹುವಾವೆ

  ಚೀನಾ ಮೂಲದ ಸ್ಮಾರ್ಟ್‌ಫೋನ್ ದಿಗ್ಗಜ ಹುವಾವೆ ಕಂಪನಿಯು ಶೇ.16% ಮಾರುಕಟ್ಟೆ ಶೇರ್ ಹೊಂದಿದೆ. ಇನ್ನು ಈ ಕಂಪನಿಯು ಕಳೆದ ವರ್ಷ ವಿಶ್ವದಲ್ಲಿಯೇ ಒಟ್ಟು 238.5 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಸೇಲ್ ಮಾಡಿದ್ದು, ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.


 • ಆಪಲ್

  ಕ್ಯಾಲಿಫೊರ್ನಿಯ ನಗರದ Cupertino ಮೂಲದ ಆಪಲ್ ಸಂಸ್ಥೆಯ ಫೋನ್‌ಗಳಿಗೆ ಉತ್ತಮ ಬೇಡಿಕೆ ಇದೆ. ಆಪಲ್ ಒಟ್ಟು ಶೇ.13% ಮಾರುಕಟ್ಟೆ ಶೇರ್ ಒಳಗೊಂಡಿದ್ದು, ಅಧಿಕ ಫೋನ್ ಮಾರಾಟದಲ್ಲಿ ತೃತೀಯ ಸ್ಥಾನ ಗಳಿಸಿದೆ. ಕಳೆದ ವರ್ಷ ಆಪಲ್ ಸಂಸ್ಥೆಯು ವಿಶ್ವದಲ್ಲಿಯೇ ಸುಮಾರು 196.2 ಮಿಲಿಯನ್ ಐಫೋನ್ ಸೇಲ್ ಮಾಡಿದೆ.


 • ಶಿಯೋಮಿ

  ಚೀನಾ ಮೂಲದ ಶಿಯೋಮಿ ಬಜೆಟ್ ಬೆಲೆಯ ಫೋನ್‌ಗಳಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಈ ಸಂಸ್ಥೆಯು ಕಳೆದ ವರ್ಷ ವಿಶ್ವದಲ್ಲಿಯೇ ಒಟ್ಟು 124.5 ಮಿಲಿಯನ್ ಸ್ಮಾರ್ಟ್‌ಫೋನ್ ಯೂನಿಟ್‌ಗಳನ್ನು ಮಾರಾಟ ಮಾಡಿದ್ದು, ನಾಲ್ಕನೇ ಸ್ಥಾನ ಪಡೆದಿದೆ. ಹಾಗೆಯೇ ಶೇ.8% ಮಾರುಕಟ್ಟೆಯ ಶೇರ್ ಹೊಂದಿದೆ.


 • ಒಪ್ಪೊ

  ಚೀನಾದ BBK ಗ್ರೂಪ್‌ಗೆ ಸೇರಿದ ಒಪ್ಪೊ ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಗಟ್ಟಿಸ್ಥಾನ ಪಡೆದಿದೆ. ಇನ್ನು ಈ ಕಂಪನಿಯು 2019ರಲ್ಲಿ ವಿಶ್ವದಲ್ಲಿಯೇ ಒಟ್ಟು 119.8 ಮಿಲಿಯನ್ ಯೂನಿಟ್ ಫೋನ್‌ಗಳನ್ನು ಸೇಲ್ ಮಾಡಿದ್ದು, ಈ ಮೂಲಕ ಹೆಚ್ಚು ಫೋನ್‌ಗಳನ್ನು ಮಾರಾಟ ಮಾಡಿದ ಐದನೇ ಕಂಪನಿಯಾಗಿ ಕಾಣಿಸಿಕೊಂಡಿದೆ. ಒಪ್ಪೊ ಸಹ ಶೇ.8% ಮಾರುಕಟ್ಟೆಯ ಶೇರ್ ಹೊಂದಿದೆ.


 • ವಿವೋ

  ವಿವೋ ಸಹ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಯಾಗಿದೆ. ವಿವೋ ಶೇ.8% ಫರ್ಸೆಂಟ್‌ನಷ್ಟು ಮಾರುಕಟ್ಟೆ ಶೇರ್ ಹೊಂದಿದೆ. ಕಳೆದ 2019ರಲ್ಲಿ ವಿಶ್ವದಲ್ಲಿಯೇ ಒಟ್ಟು 113.7 ಯೂನಿಟ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದ್ದು, ಆರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.


 • ಲೆನೊವಾ

  ಲೆನೊವಾ ಸಹ ಚೀನಾ ಮೂಲದ ಸಂಸ್ಥೆಯೇ ಆಗಿದ್ದು, ಒಟ್ಟು ಶೇ. 3% ಮಾರುಕಟ್ಟೆ ಶೇರ್ ಹೊಂದಿದೆ. ಮೊಟೊರೊಲಾ ಫೋನ್‌ಗಳು ಲೆನೊವಾ ಸಂಸ್ಥೆಗೆ ಒಳಪಡುತ್ತವೆ. ಕಳೆದ ವರ್ಷ ಲೆನೊವಾ ಗ್ರೂಪ್ ಒಟ್ಟು 39.6 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಸೇಲ್ ಮಾಡಿದೆ. ಈ ಮೂಲಕ ಹೆಚ್ಚು ಫೋನ್ ಮಾರಾಟ ಮಾಡಿದ ಏಳನೇ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ.


 • ಎಲ್‌ಜಿ

  ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಭಾರಿ ಜನಪ್ರಿಯ ಹೆಸರನ್ನು ಹೊಂದಿರುವ 'ಎಲ್‌ಜಿ' ಮೂಲತ ದಕ್ಷಿಣ ಕೊರಿಯಾದ ಸಂಸ್ಥೆಯಾಗಿದೆ. ಶೇ,2% ಮಾರುಕಟ್ಟೆ ಶೇರ್ ಹೊಂದಿರುವ ಎಲ್‌ಜಿ ಎಂಟನೇ ಸ್ಥಾನದಲ್ಲಿದೆ. ಇನ್ನು ಕಳೆದ ವರ್ಷ ಎಲ್‌ಜಿ ವಿಶ್ವದಲ್ಲಿಯೇ ಒಟ್ಟು 29.2 ಯೂನಿಟ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ.


 • ರಿಯಲ್‌ ಮಿ

  ಚೀನಾ ಮೂಲದ ಟೆಕ್ ಸಂಸ್ಥೆ 'ರಿಯಲ್ ಮಿ' ಶೇ.2% ಮಾರುಕಟ್ಟೆ ಶೇರ್ ಅನ್ನು ಹೊಂದಿದೆ. ಬಜೆಟ್ ದರದ ಫೋನ್‌ಗಳಿಂದ ಗ್ರಾಹಕರನ್ನು ಸೆಳೆದಿರುವ ರಿಯಲ್‌ ಮಿ ಸಂಸ್ಥೆಯು ಕಳೆದ ವರ್ಷ ವಿಶ್ವ ಮಾರುಕಟ್ಟೆಯಲ್ಲಿ ಒಟ್ಟು 25.7 ಮಿಲಿಯನ್ ಯೂನಿಟ್ ಸ್ಮಾರ್ಟ್‌ಫೋನ್ ಮಾರಾಟ ಮಾಡಿದೆ. ಈ ಮೂಲಕ ಒಂಬತ್ತನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.


 • ಟೆಕ್ನೋ

  ಶೇ,1% ಮಾರುಕಟ್ಟೆಯ ಶೇರ್ ಹೊಂದಿರುವ ಹ್ಯಾಂಗ್ ಕಾಂಗ್ ಮೂಲದ 'ಟೆಕ್ನೋ' ಸಂಸ್ಥೆಯು ಫೋನ್ ಮಾರಾಟದಲ್ಲಿ ಹತ್ತನೇ ಸ್ಥಾನ ಪಡೆದಿದೆ. ಇನ್ನು ಟೆಕ್ನೋ ಕಳೆದ ವರ್ಷ ವಿಶ್ವದಲ್ಲಿಯೇ ಒಟ್ಟು 21.5 ಮಿಲಿಯನ್ ಯೂನಿಟ್ ಫೋನ್‌ಗಳನ್ನು ಸೇಲ್ ಮಾಡಿದೆ.
ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ವಿಸ್ತಾರವಾಗಿದ್ದು, ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳ ನಡುವೆ ಪೈಪೋಟಿ ನಡೆದಿದೆ. ಸ್ಯಾಮ್‌ಸಂಗ್‌, ಆಪಲ್, ಹಾನರ್, ವಿಶ್ವಮಟ್ಟದಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದು, ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅದಾಗ್ಯೂ ಬಹುತೇಕ ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ವಿಶ್ವದಲ್ಲಿಯೇ ಅತೀ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿರುವ ಪ್ರಮುಖ ಮೊಬೈಲ್ ಬ್ರ್ಯಾಂಡ್ ಯಾವುದು ಎಂದು ತಿಳಿಯುವ ಕುತೂಹಲ ಇದ್ದೆ ಇರುತ್ತದೆ.

   
 
ಹೆಲ್ತ್