Back
Home » ಇತ್ತೀಚಿನ
ಬಿಬಿಎಂಪಿ ಪರವಾನಿಗೆ ಇಲ್ಲದೇ ಹಾಕಲಾದ ಕೇಬಲ್‌ಗಳ ತೆರವು!
Gizbot | 19th Feb, 2020 03:39 PM
  • ಜಯನಗರದ ಎಲಿಫಂಟಾ ರಾಕ್

    ಜಯನಗರದ ಎಲಿಫಂಟಾ ರಾಕ್ ರಸ್ತೆ ಸೇರಿದಂತೆ ನಗರದ ವಿವಿದೆಡೆ ಪರವಾನಿಗೆ ಇಲ್ಲದೆ ಹಾಕಲಾಗಿರುವ ಕೇಬಲ್‌ಗಳನ್ನು ಇಂದು ಮುಂಜಾನೆ ಬಿಬಿಎಂಪಿ ಸಿಬ್ಬಂದಿಗಳು ತೆರೆವುಗೊಳಿಸಿದರು. ಈ ಹಿಂದೆಯು ಬಿಬಿಎಂಪಿ ಈ ರೀತಿಯ ಕ್ರಮ ಕೈಗೊಂಡಿದ್ದು, ಈಗ ಮತ್ತೊಮ್ಮೆ ಕಾರ್ಯಚರಣೆ ನಡೆಸಿದೆ. ಪರವಾನಿಗೆ ಪಡೆಯದೆ ಮರಗಳಿಗೆ ಸುತ್ತಲಾದ ಬ್ರಾಡ್‌ಬ್ಯಾಂಡ್ ಕೇಬಲ್‌ಗಳನ್ನು ತೆಗೆದುಹಾಕಲಾಯಿತು.


  • ಟೆಲಿಕಾಂ ಕಂಪನಿ

    ಅಧಿಕೃತವಾಗಿ ಇವು ಯಾವ ಟೆಲಿಕಾಂ ಕಂಪನಿಯ ಕೇಬಲ್‌ಗಳು ಎಂಬ ಗೊತ್ತಿಲ್ಲ. ಆದರೆ ಬಿಬಿಎಂಪಿ ಪರವಾನಿಗೆ ಪಡೆಯದೇ ಮರಗಳಿಗೆ, ವಿದ್ಯುತ್ ಕಂಬಗಳಿಗೆ ಹಾಕಲಾದ ಕೇಬಲ್ ಸಂಪರ್ಕಗಳನ್ನು ತೆರೆಯುಗೊಳಿಸುತ್ತಿದ್ದೆವೆ ಎಂದು ಕೇಬಲ್ ತೆರೆವುಗೊಳಿಸುತ್ತಿದ್ದ ಬಿಬಿಎಂಪಿ ಸಿಬ್ಬಂದಿಯೊಬ್ಬರು ತಿಳಿಸಿದರು.


  • ಕೇಬಲ್‌ಗಳು ಖಾಸಗಿ

    ತೆರೆವುಗೊಳಿಸಲಾದ ಕೇಬಲ್‌ಗಳು ಖಾಸಗಿ ಟೆಲಿಕಾಂಗಳ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಕೇಬಲ್‌ಗಳು ಎಂದು ಹೇಳಲಾಗಿದೆ. ಸದ್ಯ ಇಂಟರ್ನೆಟ್ ಇಲ್ಲದೇ ಯಾವ ಕೆಲಸಗಳು ಸುಗಮವಾಗಿ ನಡೆಯಲ್ಲ, ಬ್ರಾಡ್‌ಬ್ಯಾಂಡ್ ಕೇಬಲ್ ತೆರೆವುಗೊಳಸಿದ್ದರಿಂದ ಕೆಲ ಕಛೇರಿಗಳಲ್ಲಿ ಇಂಟರ್ನೆಟ್ ತೊಂದರೆ ಕಂಡುಬಂದಿತು.
ಬೆಂಗಳೂರಿನ ರಸ್ತೆಗಳಲ್ಲಿ ಎತ್ತ ನೋಡಿದರೂ ಮರಗಳಿಗೆ ಜೋತು ಬಿದ್ದಿರುವ ಕೇಬಲ್‌ಗಳ ದರ್ಶನವಾಗುತ್ತದೆ. ಬಿಬಿಎಂಪಿಯ ಅಧಿಕೃತ ಪರವಾನಿಗೆ ಪಡೆಯದೇ ಈ ರೀತಿ ನಗರದಲ್ಲಿ ಹಾಕಲಾಗಿರುವ ಕೇಬಲ್‌ಗಳನ್ನು ಇಂದು ಬಿಬಿಎಂಪಿ ಸಿಬ್ಬಂದಿಗಳು ತೆರವುಗೊಳಿಸಿದರು.

   
 
ಹೆಲ್ತ್