Back
Home » ಇತ್ತೀಚಿನ
10,000mAh ಸಾಮರ್ಥ್ಯದ ಅತ್ಯುತ್ತಮ ಪವರ್‌ಬ್ಯಾಂಕ್‌ಗಳು!
Gizbot | 20th Feb, 2020 08:00 AM
 • ಹೌದು

  ಹೌದು, ಸ್ಮಾರ್ಟ್‌ಫೋನ್‌ಗಳನ್ನ ಯಾವುದೇ ಅಡೆತಡೆಯಿಲ್ಲದೆ ಬಳಸಬೇಕು ಅಂದರೆ ಮೊದಲಿಗೆ ನಿಮ್ಮ ಬಳಿ ಉತ್ತಮವಾದ ಪವರ್‌ಬ್ಯಾಂಕ್‌ ಇರುವುದು ಅತ್ಯಗತ್ಯವಾಗಿದೆ. ಸ್ಮಾರ್ಟ್‌ಫೋನ್‌ಗಳ ಪವರ್‌ ದಾಹ ತೀರಿಸುವ ಪವರ್‌ಬ್ಯಾಂಕ್‌ಗಳಿದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ಗಳ ಚಾರ್ಜ್‌ ಖಾಲಿಯಾಗದಂತೆ ನೊಡಿಕೊಳ್ಳಲು ಸಾಧ್ಯವಾಗಲಿದೆ. ಇನ್ನು ಈಗಾಗ್ಲೆ ಹಲವಾರು ಕಂಪೆನಿಗಳ ಪವರ್‌ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಯಾವುದು ಉತ್ತಮ ಅನ್ನೊ ಗೊಂದಲ ನಿಮ್ಮಲ್ಲಿ ಇದ್ದೆ ಇರುತ್ತೆ. ನಿಮ್ಮ ಗೊಂದಲವನ್ನ ಪರಿಹರಿಸಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಅತ್ಯುತ್ತಮವಾದ ಬ್ಯಾಕ್‌ಅಪ್ ನೀಡುವ 10000mAh ಪವರ್ ಬ್ಯಾಂಕ್‌ಗಳ ಬಗ್ಗೆ ಮಾಹಿತಿಯನ್ನ ಈ ಲೇಖನದಲ್ಲಿ ನೀಡಿದ್ದೇವೆ ಒಮ್ಮೆ ಓದಿ.


 • ಸಿಸ್ಕಾ P1016B 10000mAh ಪವರ್ ಬ್ಯಾಂಕ್

  10000mAh ಬ್ಯಾಟರಿ ಸಾಮರ್ಥ್ಯದ ಅತ್ಯುತ್ತಮ ಪವರ್‌ಬ್ಯಾಂಕ್‌ಗಳಲ್ಲಿ ಸಿಸ್ಕಾ P1016B 10000mAh ಪವರ್‌ಬ್ಯಾಂಕ್‌ ಕೂಡ ಒಂದಾಗಿದೆ. ಇದು ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದ್ದು, ಎಲ್ಲೆಡೆ ಸಾಗಿಸಲು ಸುಲಭವಾಗಿದೆ. ಅಲ್ಲದೆ ಹೆಚ್ಚಿನ ಸಾಂದ್ರತೆಯ ಪಾಲಿಮರ್ ಬ್ಯಾಟರಿಯನ್ನು ಹೊಂದಿರುವ ಈ ಪವರ್ ಬ್ಯಾಂಕ್ ನಿಮ್ಮ ಸ್ಮಾರ್ಟ್‌ಫೋನ್‌ಗೆ ಉತ್ತಮವಾದ ಬ್ಯಾಕಪ್‌ಗಳಲ್ಲಿ ಒಂದಾಗಿದೆ. ಈ ಪವರ್ ಬ್ಯಾಂಕ್ ಡ್ಯುಯಲ್ ಯುಎಸ್‌ಬಿ ಔಟ್‌ಪುಟ್‌ ಅನ್ನು ಹೊಂದಿದೆ. ಅಲ್ಲದೆ ಬ್ಯಾಟರಿ ಪ್ರಮಾಣವನ್ನ ಸೂಚಿಸುವ ಫಲಕವನ್ನು ಕೂಡ ನೀಡಲಾಗಿದೆ. ಇದಲ್ಲದೆ ಇದು ಮಲ್ಟಿ-ಪ್ರೊಟೆಕ್ಷನ್ ಸರ್ಕ್ಯೂಟ್‌ಅನ್ನು ಒಳಗೊಂಡಿದೆ. ಇದರ ಬೆಲೆ 799. ರೂ ಆಗಿದೆ.


 • ಆಂಬ್ರೇನ್ 10000mAh ಪವರ್ ಬ್ಯಾಂಕ್

  ಆಂಬ್ರೇನ್‌ ಕಂಪೆನಿಯ 10000mAh ಪವರ್ ಬ್ಯಾಂಕ್ ಅತ್ಯುತ್ತಮ ಪವರ್‌ ಬ್ಯಾಂಕ್‌ ಆಗಿದ್ದು, ಇದು ಕೂಡ ಕಾಂಪ್ಯಾಕ್ಟ್‌ ವಿನ್ಯಾಸವನ್ನು ಹೊಂದಿದೆ. ಗಾಥ್ರದಲ್ಲಿ ತುಂಬಾ ಹಗುರವಾಗಿರೊದ್ರಿಂದ ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಈ ಪವರ್‌ ಬ್ಯಾಂಕ್ 5V / 2.4A ಡ್ಯುಯಲ್ ಯುಎಸ್‌ಬಿ ಪೋರ್ಟ್ ಹೊಂದಿದ್ದು, ಹಾರ್ಡ್ ABS ಪ್ಲಾಸ್ಟಿಕ್ ಕವಚವನ್ನು ಒಳಗೊಂಡಿದೆ. ಇನ್ನು ಈ ಪವರ್‌ ಬ್ಯಾಂಕ್‌ 9ಲೆಯರ್‌ ಪ್ರೊಟೆಕ್ಷನ್ ಒಳಗೊಂಡಿದ್ದು, ಒವರ್‌ ಚಾರ್ಜಿಂಗ್‌, ಶಾರ್ಟ್‌ ಸರ್ಕ್ಯೂಟ್‌ನಿಂದ ರಕ್ಷಣೆ ನೀಡಲಿದೆ. ಅಲ್ಲದೆ ಇದರಿಂದ ಸ್ಮಾರ್ಟ್‌ಫೋನ್‌ಗೆ ಮಾತ್ರವಲ್ಲದೆ ಇತರೆ ಸ್ಮಾರ್ಟ್‌ ಡಿವೈಸ್‌ಗಳಿಗೂ ಚಾರ್ಜಿಂಗ್‌ ಮಾಡಬಹುದಾಗಿದೆ. ಇನ್ನು ಈ ಪವರ್‌ ಬ್ಯಾಂಕ್‌ನ ಬೆಲೆ 699. ರೂ ಆಗಿದೆ.


 • ಸಿಸ್ಕಾ ಪವರ್ Port100 10000mAh ಪವರ್ ಬ್ಯಾಂಕ್

  ಈ ಪವರ್‌ ಬ್ಯಾಂಕ್‌ ಇಂಟೆಲಿಜೆಂಟ್‌ ಮಲ್ಟಿ ಪ್ರೊಟೆಕ್ಷನ್‌ ಸರ್ಕ್ಯೂಟ್ಸ್‌ ಹೊಂದಿರುವ ಪವರ್‌ಬ್ಯಾಂಕ್‌ ಇದಾಗಿದ್ದು, ಇದು ಐಸಿ ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಇನ್ನು ಚಾರ್ಜಿಂಗ್‌ ಟೈಂನಲ್ಲಿ ಓವರ್‌ ದಿ ರೇಟ್‌ ಚಾರ್ಜಿಂಗ್‌ ಆದರೆ ಪವರ್‌ ಅನ್ನು ನಿಷ್ಕ್ರಿಯಗೊಳಿಸುವ ಮೂಲಕ ಡಿವೈಸ್‌ ಅನ್ನು ರಕ್ಷಣೆ ಮಾಡುತ್ತದೆ. ಅಲ್ಲದೆ ಈ ಪವರ್ ಬ್ಯಾಂಕ್ ಮೂರು ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದ್ದು, ಏಕಕಾಲದಲ್ಲಿ ಮೂರು ಡಿವೈಸ್‌ಗಳನ್ನ ಚಾರ್ಜ್ ಮಾಡಬಹುದಾಗಿದೆ. ಇದಲ್ಲದೆ ಈ ಪವರ್‌ ಬ್ಯಾಂಕ್‌ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಹೆಚ್ಚು ಸಮಯದ ಬ್ಯಾಟರಿಯನ್ನು ನೀಡಲಿದೆ. ಜೊತೆಗೆ ಎಲ್ಇಡಿ ಟಾರ್ಚ್ ಹೊಂದಿರುವ ಪವರ್ ಬ್ಯಾಂಕ್ ಇದಾಗಿದ್ದು, ಶಾರ್ಟ್ ಸರ್ಕ್ಯೂಟ್ ಮತ್ತು ಓವರ್-ಡಿಸ್ಚಾರ್ಜಿಂಗ್‌ನಿಂದ ರಕ್ಷಣೆ ನೀಡಲಿದೆ. ಈ ಪವರ್‌ ಬ್ಯಾಂಕ್‌ನ ಬೆಲೆ 1599.ರೂ ಆಗಿದೆ.


 • ರಿಯಲ್‌ಮಿ 10000mAh ಪವರ್ ಬ್ಯಾಂಕ್

  ಈ ಪವರ್ ಬ್ಯಾಂಕ್ ಪವರ್ ಡೆಲಿವರಿ(PD) ಟೆಕ್ನಾಲಜಿಯನ್ನು ಹೊಂದಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಲ್ಯಾಪ್‌ಟಾಪ್‌ಗಳನ್ನು ಕೂಡ ಚಾರ್ಜ್ ಮಾಡಬಹುದಾಗಿದೆ. ಅಲ್ಲದೆ ಸ್ಮಾರ್ಟ್‌ ಟ್ಯಾಬ್ಲೆಟ್‌ಗಳನ್ನು ಸಹ ಚಾರ್ಜ್‌ ಮಾಡಬಹುದಾಗಿದೆ. ಇದಲ್ಲದೆ ಈ ಪವರ್‌ ಬ್ಯಾಂಕ್‌ ಟುವೇ ಮಾದರಿಯ 18W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದು ಡ್ಯುಯಲ್ ಔಟ್‌ಪುಟ್‌ ಅನ್ನು ಹೊಂದಿದ್ದು, ಏಕಕಾಲದಲ್ಲಿ ಎರಡು ಡಿವೈಸ್‌ಗಳನ್ನ ಚಾರ್ಜ್ ಮಾಡಬಹುದಾಗಿದೆ. ಇನ್ನು ಈ ಪವರ್‌ ಬ್ಯಾಂಕ್‌ 12 ಲೇಯರ್‌ ಪ್ರೊಟೆಕ್ಷನ್‌ ಅನ್ನು ಹೊಂದಿದ್ದು,ಶಾರ್ಟ್‌ ಸರ್ಕ್ಯೂಟ್‌ ನಿಂದ ರಕ್ಷಣೆ ನೀಡಲಿದೆ. ಈ ಪವರ್ ಬ್ಯಾಂಕ್‌ನ ಬೆಲೆ 1299.ರೂ ಆಗಿದೆ.
ಇದು ಸ್ಮಾರ್ಟ್‌ಫೋನ್‌ಗಳ ಜಮಾನ ಎಲ್ಲರ ಕೈ ಯಲ್ಲಿಯೂ ಸ್ಮಾರ್ಟ್‌ಫೋನ್‌ಗಳು ರಿಂಗಣಿಸುತ್ತಿವೆ. ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗ ಅನ್ನುವಷ್ಟರ ಮಟ್ಟಿಗೆ ಕಾಲ ಬದಲಾಗಿ ಹೋಗಿದೆ. ಇನ್ನು ಸ್ಮಾರ್ಟ್‌ಫೋನ್‌ನ ಕೈನಲ್ಲಿ ಇಲ್ಲ ಅಂದರೆ ಹೊರಗಡೆ ಹೋಗುವುದಕ್ಕೆ ಆಗೋದಿಲ್ಲ. ಆದರೆ ನೀವು ಹೋದ ಕಡೆಯಲೆಲ್ಲಾ ಚಾರ್ಜರ್‌ ತೆಗೆದುಕೊಂಡು ಹೋಗೋದಕ್ಕೆ ಆಗೋದಿಲ್ಲ. ಬದಲಿಗೆ ಸ್ಮಾರ್ಟ್‌ಫೋನ್‌ಗಳ ಪವರ್‌ ದಾಹ ತೀರಿಸುವ ಪವರ್‌ ಬ್ಯಾಂಕ್‌ಗಳನ್ನ ತೆಗೆದುಕೊಂಡು ಹೋಗ್ತೀರಾ. ಇದರ ಮೂಲಕ ನಿಮ್ಮ ಫೋನ್ ಅನ್ನು ಸುಲಭವಾಗಿ ಚಾರ್ಜ್ ಮಾಡುವುದಲ್ಲದೆ ಯಾವುದೇ ಅಡೆತಡೆಯಿಲ್ಲದೆ ಸ್ಮಾರ್ಟ್‌ಫೋನ್‌ ಅನ್ನು ಬಳಕೆ ಮಾಡೋದಕ್ಕೆ ಸಾಧ್ಯವಾಗುತ್ತದೆ.

   
 
ಹೆಲ್ತ್