Back
Home » ಇತ್ತೀಚಿನ
ಫೆಬ್ರವರಿ 29 ಕ್ಕೆ ಲಾಂಚ್‌ ಆಗಲಿದೆ ವಿವೋ Z6 5G ಸ್ಮಾರ್ಟ್‌ಫೋನ್‌!
Gizbot | 20th Feb, 2020 05:30 PM
 • ಹೌದು

  ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ವಿವೋ ತನ್ನ ಹೊಸ ವಿವೋ Z6 5G ಸ್ಮಾರ್ಟ್‌ಫೋನ್‌ ಬಿಡುಗಡೆಗೆ ವೇದಿಕೆ ಸಿದ್ದ ಪಡಿಸುತ್ತಿದೆ. ಅಲ್ಲದೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ ಇದೇ ಫೆಬ್ರವರಿ 29 ರಂದು ಚೀನಾ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಸದ್ಯ ವಿವೋ ಕಂಪನಿ ಬಿಡುಗಡೆ ಮಾಡಲಿರುವ ಈ ಸ್ಮಾರ್ಟ್‌ಫೋನ್‌ ಮಿಡ್‌ರೇಂಜ್‌ ಬೆಲೆಯನ್ನ ಹೊಂದಿರುವ 5G ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಹೇಳಲಾಗ್ತಿದೆ.


 • ಡಿಸ್‌ಪ್ಲೇ ಮಾದರಿ

  ಇನ್ನು ಈ ಸ್ಮಾರ್ಟ್‌ಫೋನ್‌ ಉತ್ತಮ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ ಡಿಸ್‌ಪ್ಲೇ ಹೊಂದಿರಲಿದ್ದು, ಇದು ಅಮೋಲ್ಡ್ ಡಿಸ್‌ಪ್ಲೇ ಆಗಿರಲಿದೆ ಎನ್ನಲಾಗ್ತಿದೆ. ಇದಲ್ಲದೆ ಈ ಡಿಸ್‌ಪ್ಲೇ ಪಂಚ್-ಹೋಲ್ ಡಿಸ್‌ಪ್ಲೇ ಆಗಿದ್ದು, ಡಿಸ್‌ಪ್ಲೇ ಪಿಕ್ಸೆಲ್‌ ಸಾಂದ್ರತೆ ಉತ್ತಮವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 5G ಬೆಂಬಲಿಸುವುದರಿಂದ ಡಿಸ್‌ಪ್ಲೇ ವಿನ್ಯಾಸ ವಿಡಿಯೋ ವೀಕ್ಷಣೆಗೆ ಉತ್ತಮ ಅನುಭವ ನೀಡಲಿದೆ ಎನ್ನಲಾಗ್ತಿದೆ.


 • ಪ್ರೊಸೆಸರ್‌

  ವಿವೋ Z6 5G ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 765G SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌
  5G ಡ್ಯುಯೆಲ್‌ ಮೋಡ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ RAM ಮತ್ತು ಇಂಟರ್‌ ಸ್ಟೋರೇಜ್‌ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯದ ಬಗ್ಗೆಯೂ ಕೂಡ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


 • ಕ್ಯಾಮೆರಾ ವಿನ್ಯಾಸ

  ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಯಾವ ಕ್ಯಾಮೆರಾ ಎಷ್ಟು ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ ಎನ್ನುವ ಮಾಹಿತಿಯನ್ನ ಕಂಪೆನಿ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಆದರೆ ಸದ್ಯ ಟೀಸರ್‌ ಹಾಗೂ ಆನ್‌ಲೈನ್‌ನಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಲೆನ್ಸ್‌ ಉತ್ತಮವಾಗಿರಲಿದ್ದು, ವಿಡಿಯೋ ಕರೆಗಳು ಹಾಗೂ ಉತ್ತಮ ಫೊಟೋ ಮೋಡ್‌ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.


 • ಬ್ಯಾಟರಿ ಮತ್ತು ಇತರೆ

  ಇನ್ನು ಈ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿರಲಿದ್ದು, 44W ಅಲ್ಟ್ರಾ ಫಾಸ್ಟ್‌ ಫ್ಲಾಶ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಬ್ಲೂಟೂತ್‌, ವೈಫೈ, ಹಾಟ್‌ಸ್ಪಾಟ್‌, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಮಿಡ್‌ ರೇಂಜ್‌ ಬೆಲೆಯನ್ನ ಹೊಂದಿಲಿದೆ ಎನ್ನಲಾಗ್ತಿದ್ದು, ಬೆಲೆಯ ಬಗ್ಗೆ ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈಗಿನ ಜಮಾನಕ್ಕೆ ತಕ್ಕಂತೆ ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಕೂಡ ಬದಲಾಗುತ್ತಿದ್ದು ಹೊಸ ಮಾದರಿಯ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದರೂ ಗ್ರಾಹಕರು ಮಾತ್ರ ಆಕರ್ಷಕ ಫೀಚರ್ಸ್‌ಗಳನ್ನ ಹೊಂದಿರುವ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈಗಾಗ್ಲೆ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ವಿವೋ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ದತೆ ನಡೆಸುತ್ತಿದೆ.

   
 
ಹೆಲ್ತ್