Back
Home » ಇತ್ತೀಚಿನ
ನ್ಯಾವಿಕ್‌ ಟೆಕ್ನಾಲಜಿ ವಿಚಾರದಲ್ಲಿ ರಿಯಲ್‌ ಮಿ V/s ಶಿಯೋಮಿ ನಡುವೆ ಪೈಪೋಟಿ!
Gizbot | 28th Feb, 2020 01:50 PM
 • ಹೌದು

  ಹೌದು, ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಶಿಯೋಮಿ ಹಾಗೂ ರಿಯಲ್‌ಮಿ ಪರಸ್ಪರ ಪೈಫೋಟಿಗೆ ನಿಂತಿವೆ. ಭಾರತದ ಹೆಮ್ಮೆಯ ಬಾಹ್ಯಕಾಶ ಸಂಸ್ಥೆ ಇಸ್ರೋ ಅಭಿವೃದ್ದಿ ಪಡಿಸಿರುವ ನ್ಯಾವಿಕ್‌ ತಂತ್ರಜ್ಞಾನವ್ನನ ಬಳಸಿಕೊಳ್ಳುವ ವಿಚಾರದಲ್ಲಿ ಪೈಫೋಟಿಗೆ ಇಳಿದಿವೆ. ನ್ಯಾವಿಕ್‌ ತಂತ್ರಜ್ಞಾನವನ್ನ ಬೆಂಬಲಿಸುವ ಮೊದಲ ಸ್ಮಾರ್ಟ್‌ಫೋನ್‌ ನಮ್ಮದಾಗಿದೆ ಎಂದು ಶಿಯೋಮಿ ಹೇಳಿಕೊಂಡರೆ, ರಿಯಲ್‌ಮಿ ಕಂಪೆನಿ ನ್ಯಾವಿಕ್‌ ಬೆಂಬಲಿಸುವ ಮೊದಲ ಸ್ಮಾರ್ಟ್‌ಫೋನ್‌ ನಮ್ಮದಾಗಿದ್ದು, ರಿಯಲ್‌ಮಿ X50 ಪ್ರೊ ನ್ಯಾವಿಕ್‌ ತಂತ್ರಜ್ಞಾನವನ್ನು ಬೆಂಬಲಿಸಲಿದೆ ಎಂದು ಹೇಳಿದೆ. ಆದರೆ ಇಲ್ಲಿ ಯಾವುದು ಸರಿ? ಅಷ್ಟಕ್ಕೂ ನ್ಯಾವಿಕ್‌ ತಂತ್ರಜ್ಞಾನ ಎಂದರೇನು,? ನ್ಯಾವಿಕ್‌ ಬೆಂಬಲಿಸುವ ಪ್ರೊಸೆಸರ್‌ಗಳು ಯಾವುವು? ಇದೆಲ್ಲದರ ಬಗ್ಗೆ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ.


 • ನ್ಯಾವಿಕ್‌

  ಭಾರತದ ಬಾಹ್ಯಕಾಶ ಸಂಸ್ಥೆ ಇಸ್ರೋ ಅಭವೃದ್ದಿ ಪಡಿಸಿರುವ ನ್ಯಾವಿಕ್‌ ತಂತ್ರಜ್ಞಾನ ಮುಂದಿನ ತಲೆಮಾರಿನ ಸ್ಮಾರ್ಟ್‌ಫೋನ್‌ಗಳಿಗೆ ಬಹಳ ಉಪಯುಕ್ತವಾಗಲಿದೆ. 7ಕ್ಕೂ ಅಧಿಕ ಉಪಗ್ರಹಗಳ ಬೆಂಬಲದೊಂದಿಗೆ ಕಾರ್ಯನಿರ್ವಹಿಸುವ ನ್ಯಾವಿಕ್‌ ಸ್ಮಾರ್ಟ್‌ಫೋನ್‌ಗಳಲ್ಲಿನ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಎಲ್ಲಾ ಸ್ಥಳಗಳನ್ನು ನ್ಯಾವಿಗೇಟ್‌ ಮಾಡಬಲ್ಲ ಭಾರತೀಯ ಜಿಪಿಎಸ್ ಆವೃತ್ತಿಯಾಗಿದೆ. ಅಲ್ಲದೆ ಈ ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ ಜೊತೆ ಇಸ್ರೊ ಕೈ ಜೋಡಿಸದೆ. ಈ ಕಾರಣಕ್ಕಾಗಿ ಈ ಟೆಕ್ನಾಲಜಿ ಕೆಲವೇ ಕೆಲ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಲಿದೆ.


 • ನ್ಯಾವಿಕ್‌ ಬೆಂಬಲಿಸುವ ಪ್ರೊಸೆಸರ್‌

  ಸ್ನಾಪ್‌ಡ್ರಾಗನ್‌ 765 5G ಮೊಬೈಲ್‌ಪ್ಲಾಟ್‌ಫಾರ್ಮ್‌
  ಸ್ನಾಪ್‌ಡ್ರಾಗನ್‌ 720G ಮೊಬೈಲ್‌ ಪ್ಲಾಟ್‌ಫಾರ್ಮ್
  ಸ್ನಾಪ್‌ಡ್ರಾಗನ್‌ 460 ಮೊಬೈಲ್‌ ಪ್ಲಾಟ್‌ಫಾರ್ಮ್
  ಸ್ನಾಪ್‌ಡ್ರಾಗನ್‌ 662 ಮೊಬೈಲ್‌ ಪ್ಲಾಟ್‌ಫಾರ್ಮ್
  ಸ್ನಾಪ್‌ಡ್ರಾಗನ್‌ 7C ಕಂಪ್ಯೂಟರ್‌ ಪ್ಲಾಟ್‌ಫಾರ್ಮ್


 • ಶಿಯೋಮಿ V/s ರಿಯಲ್‌ಮಿ

  ಸದ್ಯ ಶಿಯೋಮಿ ಕಂಪೆನಿಯ ಭಾರತದ ಮ್ಯಾನೇಜಿಂಗ್‌ ಡೈರೆಕ್ಟರ್‌ ಮನು ಕುಮಾರ್ ಜೈನ್ ನ್ಯಾವಿಕ್ ಟೆಕ್ನಾಲಜಿಯನ್ನ ಬೆಂಬಲಿಸುವ ಮೊದಲ ಸ್ಮಾರ್ಟ್‌ಫೋನ್‌ ಅನ್ನು ಶಿಯೋಮಿ ಮುಂದಿನ ದಿನಗಳಲ್ಲಿ ಲಾಂಚ್‌ ಮಾಡಲಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇದಾದ ಕೆಲವು ದಿನಗಳ ನಂತರ ರಿಯಲ್‌ಮಿ ಕಂಪೆನಿಯ ಸಿಇಒ ಮಾಧವ್ ಶೇಠ್‌, ರಿಯಲ್‌ಮಿ X50 ಪ್ರೊ 5G ಈಗಾಗಲೇ ನ್ಯಾವಿಕ್ ಅನ್ನು ಬೆಂಬಲಿಸುವ ಸ್ಮಾರ್ಟ್‌ಫೋನ್‌ ಆಗಿದೆ. ಅಲ್ಲದೆ ರಿಯಲ್‌ಮಿ X50 ಪ್ರೊ 5G ಮೊದಲ ನ್ಯಾವಿಕ್ ಸ್ಪೋರ್ಟಿಂಗ್ ಸ್ಮಾರ್ಟ್‌ಫೋನ್‌ ಆಗಿದ್ದು, ನ್ಯಾವಿಕ್ ಬೆಂಬಲದ ಮತ್ತೊಂದು ಸ್ಮಾರ್ಟ್‌ಫೋನ್‌ ರಿಯಲ್‌ಮಿಯಿಂದ ಬರಲಿದೆ ಎಂದು ಹೇಳಿಕೊಂಡಿದ್ದಾರೆ. ಇದು ಎರಡು ಕಂಪೆನಿಗಳ ನಡುವಿನ ಪೈಪೋಟಿಗೆ ಕಾರಣವಾಗಿದೆ.


 • ರಿಯಲ್‌ಮಿ X50 ಪ್ರೊ 5G ನಿಜಕ್ಕೂ ನ್ಯಾವಿಕ್‌ ಬೆಂಬಲಿಸುತ್ತಾ.?

  ಯಾವಾಗ ರಿಯಲ್‌ಮಿ ಕಂಪೆನಿ ರಿಯಲ್‌ಮಿ X50 ಪ್ರೊ 5G ಸ್ಮಾರ್ಟ್‌ಫೋನ್‌ ನ್ಯಾವಿಕ್‌ ಬೆಂಬಲಿಸಲಿದೆ ಎಂದು ಹೇಳಿದ ಕೂಡಲೇ ಅಸಲಿ ಪೈಪೋಟಿ ಶುರುವಾಗಿದೆ. ಯಾಕೆಂದರೆ ರಿಯಲ್‌ಮಿ ಕಂಪೆನಿಯೇ ಹೇಳಿಕೊಂಡಿರುವಂತೆ ರಿಯಲ್‌ಮಿ X50 ಪ್ರೊ 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 SoC ಪ್ರೊಸೆಸರ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಆದರೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 865 SoC ಪ್ರೊಸೆಸರ್‌ ನ್ಯಾವಿಕ್ ಟೆಕ್ನಾಲಜಿಯ ಬೆಂಬಲದೊಂದಿಗೆ ಬರುವುದಿಲ್ಲ. ಹಾಗಿದ್ದರೂ ರಿಯಲ್‌ಮಿ ಕಂಪೆನಿ ಯಾವ ಆಧಾರದ ಮೇಲೆ X50 ಪ್ರೊ 5G ಸ್ಮಾರ್ಟ್‌ಫೋನ್‌ ನ್ಯಾವಿಕ್‌ ಬೆಂಬಲಸಿಲಿದೆ ಎಂದು ಹೇಳಿದೆ ಅನ್ನೊದನ್ನ ರಿಯಲ್‌ಮಿ ಕಂಪೆನಿಯೆ ಸ್ಪಷ್ಟ ಪಡಿಸಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಬಹಳ ವಿಸ್ತಾರವಾಗಿ ಬೆಳೆಯುತ್ತಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಶಿಯೋಮಿ ತನ್ನ ಪ್ರಾಬಲ್ಯ ಸಾಧಿಸಿದ್ದರೆ, ರಿಯಲ್‌ಮಿ ಕಂಪೆನಿ ತನ್ನ ಜನಪ್ರಿಯತೆಯನ್ನ ಹಂತ ಹಂತವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಸದ್ಯ ಈ ಎರಡು ಸ್ಮಾರ್ಟ್‌ಫೋನ್‌ ಕಂಪೆನಿಗಳು ಭಾರತದಲ್ಲಿನ ಹೊಸ ತಂತ್ರಜ್ಞಾನವನ್ನ ಬಳಸಿಕೊಳ್ಳುವ ವಿಚಾರದಲ್ಲಿ ಪೈಪೋಟಿಗೆ ಇಳಿದು ಬಿಟ್ಟಿವೆ. ನಾ ಮೊದಲು ತಾ ಮೊದಲು ಎಂದು ಪರಸ್ಪರ ಹೇಳಿಕೆಗಳನ್ನ ನೀಡುತ್ತಿವೆ.

   
 
ಹೆಲ್ತ್