Back
Home » ಇತ್ತೀಚಿನ
1GB ಡೇಟಾಗೆ 35ರೂ. ಶುಲ್ಕ ನಿಗದಿಗೆ ಬೇಡಿಕೆ ಇಟ್ಟ ವೊಡಾಫೋನ್!
Gizbot | 28th Feb, 2020 02:57 PM
 • ಖಾಸಗಿ ಟೆಲಿಕಾಂ

  ಹೌದು, ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳು ಹೊಂದಾಣಿಕೆ ಮಾಡಿದ ಒಟ್ಟು ವರಮಾನ (AGR) ಬಾಕಿ ಪಾವತಿಸದ ಕಾರಣ ಸುಪ್ರೀಂ ಕೋರ್ಟ್‌ನಿಂದ ಬಿಸಿ ಮುಟ್ಟಿಸಿಕೊಂಡಿದ್ದವು. ಜಿಯೋ, ಏರ್‌ಟೆಲ್ ಈ ಸಂಕಷ್ಟದಿಂದ ಪಾರಾಗಿದ್ದು, ಆದ್ರೆ ವೊಡಾಫೋನ್ ಐಡಿಯಾ ಮಾತ್ರ ದೊಡ್ಡ ಮೊತ್ತದ ಬಾಕಿ ಪಾವತಿಸದ ಕಾರಣ ಈಗ ಪ್ರಪಾತದ ತುದಿಯಲ್ಲಿ ನಿಂತಿದೆ. ವೊಡಾಫೋನ್ ಈಗ ಬಾಕಿ ಪಾವತಿಸಲು ಕಾಲಾವಕಾಶ ಕೋರಿದೆ. ಹಾಗೆಯೇ ಡೇಟಾ ಬೆಲೆಯನ್ನು ಏರಿಕೆ ಮಾಡಿ ಎಂದು ಬೇಡಿಕೆ ಇಟ್ಟಿದೆ.


 • 18 ವರ್ಷಗಳ ಕಾಲಾವಕಾಶ ಕೋರಿದ ವೊಡಾಫೋನ್

  ವೊಡಾಫೋನ್ ಐಡಿಯಾ ಒಟ್ಟು 57,000 ಕೋಟಿ ಹೊಂದಾಣಿಕೆ ಮಾಡಿದ ಒಟ್ಟು ವರಮಾನ ಬಾಕಿ ಉಳಿಸಿತ್ತು. ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ಅದಾದ ನಂತರ ವೊಡಾಫೋನ್ 3,500 ಕೋಟಿ ಮೊತ್ತವನ್ನು ಪಾವತಿಸಿತು. ಆದರೆ ಕೋರ್ಟ್‌ ಪೂರ್ಣ ಬಾಕಿ ಚುಕ್ತಾ ಮಾಡಲು ಮತ್ತೆ ಆದೇಶಿಸಿತ್ತು. ಆದ್ರೆ ವೊಡಾಫೋನ್ ಬಾಕಿ ಉಳಿದಿರುವ ದೊಡ್ಡ ಮೊತ್ತದ ಹಣ ಪಾವತಿಸಲು 15 ವರ್ಷ ಕಾಲಾವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದೆ.


 • ಡೇಟಾ ದರ ಏರಿಕೆಗೆ ಮನವಿ

  ಬಾಕಿ ಹಣ ಪಾವತಿಸಲು ಕಾಲಾವಕಾಶ ಕೇಳಿರುವ ವೊಡಾಫೋನ್ ಐಡಿಯಾ ಕೆಲವು ಬೇಡಿಕೆಗಳನ್ನು ಇಟ್ಟಿದೆ. ಪ್ರಸ್ತುತ ಇರುವ ಡೇಟಾ ಬೆಲೆಯನ್ನು ಸುಮಾರು 7 ರಿಂದ 8 ಪಟ್ಟು ಹೆಚ್ಚಳ ಮಾಡಬೇಕು ಎಂದು ಹೇಳಿದೆ. 1GB ಡೇಟಾಗೆ ಕನಿಷ್ಠ 35ರೂ ದರ ನಿಗದಿ ಮಾಡಬೇಕೆಂದಿದೆ. ಸದ್ಯ 1GB ಡೇಟಾ ಬೆಲೆಯು 4-5ರೂ ಆಗಿದೆ ಎಂದು ಹೇಳಿದೆ.


 • ಪ್ರತಿ ನಿಮಿಷಕ್ಕೆ 6 ಪೈಸೆ

  ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ ಕನಿಷ್ಠ 6 ಪೈಸೆ ಶುಲ್ಕ ನಿಗದಿ ಮಾಡಬೇಕು ಎಂದು ವೊಡಾಫೋನ್ ಐಡಿಯಾ ಹೇಳಿದೆ. ಹಾಗೂ ತಿಂಗಳ ಶುಲ್ಕ ಸಹ ವಿಧಿಸಬೇಕು ಎಂದು ಬೇಡಿಕೆ ಸಲ್ಲಿಸಿದೆ.


 • ಏಪ್ರಿಲ್ 1 ರಿಂದ ಜಾರಿ ಮಾಡಿ

  ಡೇಟಾ ಪ್ಲ್ಯಾನ್‌ಗಳ ದರ ಹೆಚ್ಚಳ ಮತ್ತು ಹೊರ ಹೋಗುವ ಕರೆಗಳಿಗೆ 6 ಪೈಸೆ ಶುಲ್ಕ ವಿಧಿಸುವುದು ಈ ಯೋಜನೆಗಳು ಇದೇ ಏಪ್ರಿಲ್ 1 ರಿಂದ ಜಾರಿ ಮಾಡಿರಿ ಎಂದು ವೊಡಾಫೋನ್ ಐಡಿಯಾ ಬೇಡಿಕೆ ಇಟ್ಟಿದೆ.


 • ವೊಡಾಫೋನ್ ಉರಳುತ್ತಾ?..ಉಳಿಯುತ್ತಾ?

  ಸದ್ಯ ವೊಡಾಫೋನ್ ಐಡಿಯಾ ಸಂಕಷ್ಟದಲ್ಲಿದ್ದು, ಹೊಂದಾಣಿಕೆ ಮಾಡಿದ ಒಟ್ಟು ವರಮಾನ ಬಾಕಿ ಪಾವತಿಸುವ ದಾರಿ ಹುಡುಕುತ್ತಿದೆ. ಈ ನಿಟ್ಟಿನಲ್ಲಿ ಡೇಟಾ ದರ ಏರಿಕೆ ಮಾಡಲು ಮತ್ತು ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ನಿಗದಿ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ ವೊಡಾಫೋನ್ ಉಳಿಯುವುದೇ? ಇಲ್ಲ ಉರುಳುವುದೇ ಎನ್ನುವ ಪ್ರಶ್ನೇ ವೊಡಾಫೋನ್ ಐಡಿಯಾ ಬಳಕೆದಾರರಲ್ಲಿ ಮೂಡಿದೆ.
ವೊಡಾಫೋನ್ ಐಡಿಯಾ ಟೆಲಿಕಾಂ ಸಂಸ್ಥೆಯು ಒಟ್ಟು 50 ಸಾವಿರ ಕೋಟಿ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (AGR) ಬಾಕಿ ಉಳಿಸಿಕೊಂಡಿದ್ದು, ಅಳಿವಿನ ಅಂಚಿನಲ್ಲಿ ಬಂದು ನಿಂತಿದೆ. ಆದರೆ ವೊಡಾಫೋನ್ ಐಡಿಯಾ ಇದೀಗ ಉಳಿದಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ ಬಾಕಿ ಮೊತ್ತ ಪಾವತಿಸಲು ಸುಮಾರು 18 ವರ್ಷಗಳ ಕಾಲಾವಕಾಶ ಕೋರಿದೆ. ಜೊತೆಗೆ ಕೆಲವು ಮಹತ್ತರ ಬೇಡಿಕೆಗಳನ್ನು ಮುಂದಿಟ್ಟಿದೆ.

   
 
ಹೆಲ್ತ್