Back
Home » ಆರೋಗ್ಯ
ಕೊರೊನಾವೈರಸ್‌ ದೇಹದ ಮೇಲೆ ಬೀರುವ ಪರಿಣಾಮಗಳೇನು?
Boldsky | 14th Mar, 2020 05:00 PM
 • ಕೊರೊನಾ ಸೋಂಕಿನ ಲಕ್ಷಣಗಳು ಜ್ವರ, ಕೆಮ್ಮು, ಉಸಿರಾಟದಲ್ಲಿ ತೊಂದರೆ

  ಈ ರೀತಿಯ ಲಕ್ಷಣಗಳು ಅನೇಕ ಕಾಯಿಲೆಗಳಲ್ಲಿ ಕಂಡು ಬರುತ್ತದೆ. ಸಾಮಾನ್ಯ ಜ್ವರ, ನೆಗಡಿ ಉಂಟಾದಾಗಲೂ ದೇಹದಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬರುತ್ತದೆ. ಆರೋಗ್ಯ ತಜ್ಷರು ನಡೆಸಿದ ಇದುವರೆಗಿನ ಅಧ್ಯಯನ ಹಾಗೂ ಪರೀಕ್ಷೆಯಿಂದ ತಿಳಿದು ಬಂದಿರುವುದು ಏನೆಂದರೆ ಕೊರೊನಾವೈರಸ್‌ ದೇಹವನ್ನು ಸೇರಿದಾಗ ಜ್ವರ, ನೆಗಡಿಯಂಥ ಕಾಯಿಲೆ ಕಾಣಿಸಿಕೊಂಡಾಗ ಕಾಣಿಸುವ ಈ ಲಕ್ಷಣಗಳು ಹೇಗೆ ಗಂಭೀರ ಹಂತಕ್ಕೆ ತಲುಪುತ್ತವೆ, ಇದನ್ನು ತಡೆಯುವುದು ಹೇಗೆ ಎಂಬುವುದು ಇನ್ನೂ ವೈದ್ಯಕೀಯ ಲೋಕಕ್ಕೆ ತಿಳಿದಿಲ್ಲ.


 • ಕೊರೊನಾವೈರಸ್ ಹೇಗೆ ಹರಡುತ್ತದೆ?

  ಕೊರೊನಾವೈರಸ್ ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಗಾಳಿಯ ಮೂಲಕ ಮತ್ತೊಬ್ಬರ ದೇಹವನ್ನು ಹರಡುತ್ತದೆ, ಈ ವೈರಸ್ ಎಷ್ಟು ಭಯಾನಕವೆಂದರೆ ಸೋಂಕಿತ ವ್ಯಕ್ತಿ ಮುಟ್ಟಿದ ವಸ್ತುಗಳಲ್ಲಿಯೂ ಕೆಲವು ಗಂಟೆಗಳವರೆಗೆ, ಇನ್ನೂ ಕೆಲವು ವಸ್ತುಗಳಲ್ಲಿ ಕೆಲವು ದಿನಗಳವರೆಗೆ ಜೀವಿಸಿದ್ದು, ಆ ವಸ್ತುಗಳನ್ನು ಮುಟ್ಟಿದ ವ್ಯಕ್ತಿಯ ದೇಹವನ್ನು ಸೇರುತ್ತದೆ.


 • ವೈರಸ್‌ ಸೋಂಕಿದಾಗ ಉಸಿರಾಟದ ತೊಂದರೆ ಹೇಗೆ ಉಂಟಾಗುತ್ತದೆ?

  ವೈರಸ್‌ ದೇಹವನ್ನು ಸೇರಿದಾಗ ಅದು ಹೆಚ್ಚಾಗಿ ದೇಹದ ಎಲ್ಲಾ ಜೀವಕಣಗಳಿಗೆ ಹರಡುತ್ತದೆ, ಇದರ ಮೊದಲ ಲಕ್ಷಣವಾಗಿ ಗಂಟಲು ಕೆರೆತ, ಒಣ ಕೆಮ್ಮು ಕಾಣಿಸಿಕೊಳ್ಳುವುದು. ನಂತರ ವವೈರಸ್‌ ಬ್ರೊಚೈಲ್ ಟ್ಯೂಬ್ಸ್ ಮುಖಾಂತರ ಶ್ವಾಸಕೋಶ ತಲುಪುತ್ತದೆ, ನಂತರ ಶ್ವಾಸಕೋಶ ತನ್ನ ಕಾರ್ಯವನ್ನು ಮಾಡಲು ಅಸಮರ್ಥವಾಗುತ್ತದೆ. ಆಗ ದೇಹಕ್ಕೆ ಆಮ್ಲಜನಕ ಪೂರೈಕೆಗೆ ಕಷ್ಟವಾಗುತ್ತದೆ ಹಾಗೂ ದೇಹಲ್ಲಿನ ಕಾರ್ಬನ್‌ ಡೈಯಾಕ್ಸೈಡ್‌ ಹೊರಹಾಕಲು ಸಾಧ್ಯವಾಗುವುದಿಲ್ಲ.

  ಶ್ವಾಸಕೋಶದಲ್ಲಿ ಊತ ಕಂಡು ಬಂದರೆ ಆಗ ಆಮ್ಲಜನಕ ಪೂರೈಕೆ ಕಷ್ಟವಾಗುತ್ತದೆ ಎಂದು ಅಮೆರಿಕದ ಪ್ರೋವಿಡೆನ್ಸ್ ಹೆಲ್ತ್ ಸಿಸ್ಟಮ್‌ನ ಮುಖ್ಯ ಆರೋಗ್ಯ ಅಧಿಕಾರಿ ಡಾ. ಆ್ಯಮಿ ಕ್ಯಾಪ್ಟೋನ್ ಫಿಲಿಪ್ಸ್ ಎಂದು ತಿಳಿಸಿದ್ದಾರೆ.

  ಊತದಿಂದ ಆಮ್ಲಜನಕ ಪೂರೈಕೆ ಸರಿಯಾಗಿ ಆಗದೇ ಹೋದಾಗ ಶ್ವಾಸಕೋಶದಲ್ಲಿ ನೀರು, ಕೀವು, ನಿರ್ಜೀವ ಕಣಗಳಿಂದಾಗಿ ನ್ಯೂಮೋನಿಯಾ ಸೋಂಕು ಉಂಟಾಗಬಹುದು.
  ಕೆಲವರಿಗೆ ಉಸಿರಾಟದ ತೊಂದರೆ ಉಂಟಾದಾಗ ವೆಂಟಿಲೇಟರ್‌ನಲ್ಲಿ ಇಡಬೇಕಾಗುತ್ತದೆ. ಇನ್ನು ಕೆಲವೊಂದು ಕೇಸ್‌ಗಳಲ್ಲಿ ತುಂಬಾ ಗಂಭೀರವಾಗುತ್ತದೆ, ಈ ಸಂದರ್ಭದಲ್ಲಿ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು. ಶ್ವಾಸಕೋಶ ತುಂಬಾ ನೀರು ತುಂಬಿಕೊಂಡಾಗ ಉಸಿರಾಟ ಸಾಧ್ಯವಾಗದೆ ರೋಗಿ ಸಾವನ್ನಪ್ಪುತ್ತಾನೆ/ಳೆ.


 • ವೈರಸ್‌ ಶ್ವಾಸಕೋಶದಲ್ಲಿ ಏನು ಮಾಡುತ್ತದೆ?

  ಯೂನಿವರ್ಸಿಟಿ ಚಿಕಾಗೋ ಸ್ಕೂಲ್‌ ಆಫ್‌ ಎಡಿಷಿನ್‌ನ ಪ್ರೊಫೆಸರ್ ಡಾ. ಯಾನ್ ಯೂನ್ ಕ್ಸಿಯೊ ಚೀನಾದಲ್ಲಿ ಕೊರೊನಾ ಸೋಂಕಿತ ರೋಗಿಗಳನ್ನು ಸೂಕ್ಷ್ಮವಾಗಿ ಪರಿಚಯಿಸಿದ ಬಳಿಕ ' ವೈರಸ್‌ ಶ್ವಾಸಕೋಶದ ಎರಡೂ ಬದಿಯಲ್ಲಿ ಬೆಳೆಯಲಾರಂಸುತ್ತವೆ, ಇದರಿಂದಾಗಿ ಶ್ವಾಸಕೋಶದಲ್ಲಿ ಊತ ಉಂಟಾಗಿ ಉಸಿರಾಟದ ತೊಂದರೆ ಉಂಟಾಗುವುದು' ಎಂದು ತಿಳಿಸಿದ್ದಾರೆ.

  ಇನ್ನು ವುಹಾನ್‌ ಈ ರೋಗ ಹುಟ್ಟಿಕೊಂಡಾಗ ಹಲವು ಕೇಸ್‌ಗಳನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸದೇ ಹೋದದ್ದು ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲು ಕಾರಣವಾಯಿತು ಎಂದು ಪೆಥೋಲಾಜಿ ಅಂಡ್‌ ಮಾಲ್ಯುಕ್ಯುಲರ್ ಡಯಾಗ್ನಿಸ್ಟಿಕ್‌ ತಜ್ಸ ಡಾ. ಕ್ಸಿಯೋ ಹೇಳಿದ್ದಾರೆ. ಚೀನಾದ ಆಸ್ಪತ್ರೆಗಳಲ್ಲಿ ಈ ರೋಗದ ಪ್ರಾರಂಭಿಕ ಲಕ್ಷಣಗಳನ್ನು ಗುರುತಿಸಲಿಲ್ಲ, ಜನರು ಯಾವುದಾದರೂ ಒಂದು ಆಸ್ಪತ್ರೆಗೆ ಹೋಗಿ ಔಷಧಿ ತಂದು ಮನೆಯಲ್ಲಿರುತ್ತಿದ್ದರು, ಇದರಿಂದಾಗಿ ಮನೆಯವರಿಗೂ ಹರಡುತ್ತಿತ್ತು ಹೀಗೆ ಅತೀ ಹೆಚ್ಚಿನ ಜನರಿಗೆ ರೋಗ ಹರಡಲ್ಪಟ್ಟಿತು.

  ವುಹಾನ್‌ ಸೋಂಕಿತ ರೋಗಿಗಳನ್ನು ಪರಿಶೀಲಿಸಿದಾಗ ಈ ಸೋಂಕು ತಗುಲಿದ ಪ್ರಾರಂಭಿಕ ಹಂತದಲ್ಲಿ ಶ್ವಾಸಕೋಶದಲ್ಲಿ ಸ್ವಲ್ಪ ಮಂದವಾದ ಪಿಂಕ್ ನೀರು ಇರುವುದು ಫೋಟೋಮೈಕ್ರೋಗ್ರಾಫ್‌ನಲ್ಲಿ ಪತ್ತೆಯಾಗಿತ್ತು.


 • ವೈರಸ್‌ ಶ್ವಾಸಕೋಶಕ್ಕೆ ಮಾತ್ರ ಹಾನಿಯುಂಟು ಮಾಡುತ್ತಾ?

  ಪರಿಣಿತರ ಪ್ರಕಾರ ಕೊರೊನಾ ವೈರಸ್ ಶ್ವಾಸಕೋಶ ಮಾತ್ರವಲ್ಲದೆ ಜಠರ-ಕರುಳಿಗೂ ಹಾನಿಯುಂಟು ಮಾಡುತ್ತದೆ, ಆದ್ದರಿಂದಲೇ ಕೆಲವು ವ್ಯಕ್ತಿಗಳಲ್ಲಿ ಭೇದಿ ಉಂಟಾಗುತ್ತದೆ.

  ಈ ವೈರಸ್ ಹೃದಯ, ಕಿಡ್ನಿ, ಲಿವರ್‌ಗೂ ಹಾನಿಯುಂಟು ಮಾಡುವುದು.


 • ಈ ವೈರಸ್‌ ಏಕೆ ಕೆಲವರಲ್ಲಿ ಮಾತ್ರ ತುಂಬಾ ಗಂಭೀರವಾಗುತ್ತದೆ?

  ಶೇ.80ರಷ್ಟು ಕೊರೊನಾ ಸೋಂಕಿತರಲ್ಲಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ, ಶೇ. 20ರಷ್ಟು ಜನರ ಪರಿಸ್ಥಿತಿ ಮಾತ್ರ ಗಂಭೀರವಾಗಿ ಸಾವನ್ನಪ್ಪುತ್ತಾರೆ. ಈ ವೈರಸ್‌ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಅವರ ರೋಗನಿರೋಧಕ ಶಕ್ತಿಯನ್ನು ಅವಲಂಭಿಸಿದೆ. ವಯಸ್ಸಾದವರಲ್ಲಿ ಹಾಗೂ ಮಧುಮೇಹ, ಇತರ ಕಾಯಿಲೆ ಇರುವವರಿಗೆ ಈ ರೋಗು ಸೋಂಕಿದಾಗ ಪರಿಸ್ಥಿತಿ ಗಂಭೀರವಾಗುವುದು.


 • ಕೊರೊನಾ ಸೋಂಕಿನ ಬಗ್ಗೆ ವಿಕ್ಞಾನಿಗಳಿಗೆ ತಿಳಿಯದೇ ಇರುವ ಅಂಶಗಳೇನು?

  ಈ ನೋವೆಲ್‌ ಕೊರೊನಾ ವೈರಸ್‌ ಹೇಗೆ ನಿಯಂತ್ರಿಸಬಹುದು, ಇದಕ್ಕೆ ಸೂಕ್ತ ಚಿಕಿತ್ಸೆ ಏನೂ ಎಂಬುವುದು ಇನ್ನೂ ನಿಖರವಾಗಿ ತಿಳಿದಿಲ್ಲ. ಇದರ ಲಕ್ಷಣಗಳು ನೆಗಡಿ, ನ್ಯೋಮೋನಿಯಾ, ಸಾರ್ಸ್‌ನ ರೀತಿ ಕಂಡು ಬಂದರೂ ಇದರ ಬಗ್ಗೆ ಇನ್ನೂ ಸಂಪೂರ್ಣವಾಗಿ ತಿಳಿದು ಬಂದಿಲ್ಲ.

  ಕೆಲವರಲ್ಲಿ ಈ ವೈರಸ್‌ ಬೇಗನೆ ಆರೋಗ್ಯ ಹಾಳು ಮಾಡಿದರೆ, ಇನ್ನು ಕೆಲವರ ದೇಹದಲ್ಲಿ ವೈರಸ್ ಸೇರಿ ಒಂದು ವಾರವಾದರೂ ಹೆಚ್ಚಿನ ಲಕ್ಷಣಗಳು ಗೋಚರಿಸುವುದಿಲ್ಲ. ಆದರೆ ಇದ್ದಕ್ಕಿದ್ದಂತೆ ಕಾಯಿಲೆ ಉಲ್ಬಣವಾಗಿ ಸಾವು ಸಂಭವಿಸುತ್ತದೆ.

  ಡಾ.ಕ್ಸಿಯೋ ಹೇಳುವ ಪ್ರಕಾರ ಚೀನಾದಲ್ಲಿ ಸೋಂಕಿತರಲ್ಲಿ ಎಲ್ಲರೂ ವೈರಸ್‌ನಿಂದ ಸಾವನ್ನಪ್ಪಿಲ್ಲ, ಕೆಲವರು ಬ್ಯಾಕ್ಟಿರಿಯಾಗಳಿಂದಾಗಿ ಸಾವನ್ನಪ್ಪಿದ್ದಾರೆ, ಆದರೆ ಹೀಗೆ ಸಾವನ್ನಪ್ಪಿರುವವರ ಸಂಖ್ಯೆ ಕಡಿಮೆ ಎಂದಿದ್ದಾರೆ.

  ಒಂದು ಕೇಸ್‌ನ ಬಗ್ಗೆ ಹೇಳುತ್ತಾ ಪುರುಷ ಹಾಗೂ ಮಹಿಳೆ ಇಬ್ಬರಲ್ಲಿ ಸೋಂಕು ಕಾಣಿಸಿ ಆಸ್ಪತ್ರೆಗೆ ದಾಖಲಾಗಿದ್ದರು, ಮಹಿಳೆ ಬೇಗನೆ ಚೇತರಿಸಿಕೊಂಡರು, ಪುರುಷ ಚೇರಿಸಿಕೊಳ್ಳಲಾರಂಭಿಸಿದ, ಮಧ್ಯಾಹ್ನ ನನಗೆ ಉಸಿರಾಡಲು ಸಾಧ್ಯವಾಗುತ್ತಿದೆ ಎಂದು ಮೆಸೇಜ್ ಕೂಡ ಕಳುಹಿಸಿದ್ದ. ಆದರೆ ರಾತ್ರಿ 10 ಗಂಟೆಗೆ ಆಸ್ಪತ್ರೆಯ ಸಿಬ್ಬಂದಿ ಆತ ಸಾವನ್ನಪ್ಪಿದ ಸುದ್ದಿ ತಿಳಿಸಿದರು.


 • ಕೊರೊನಾ ವೈರಸ್ ಕುರಿತ ಪ್ರಶ್ನೆಗಳು

  ಕೊರೊನಾ ವೈರಸ್ ಎಂದರೇನು?
  ಕೊರೊನಾ ವೈರಸ್‌ ಎಲ್ಲವೂ ಅಪಾಯಕಾರಿಯಲ್ಲ. ಆಲ್ಭಾ ಕೊರೊನಾವೈರಸ್ (ಇದರಲ್ಲಿ NL63 ಮತ್ತು 229E ಎಂಬ ಎರಡು ವಿಧವಿದೆ) ಮತ್ತು ಬೀಟಾ ಕೊರೊನಾವೈರಸ್ (ಇದರಲ್ಲಿ HKU1ಮತ್ತು OC43 ಎಂಬ ಎರಡು ವಿಧಗಳಿವೆ) ಕಾಣಿಸಿದರೆ ಸ್ವಲ್ಪ ಮಟ್ಟಿಗೆ ಆರೋಗ್ಯ ಸಮಸ್ಯೆ ಕಂಡು ಬರುವುದು ಅಷ್ಟೇ. ಆದರೆ SARS-CoV ಮತ್ತು MERS-CoV ಬಗೆಯ ಕೊರೊನಾ ವೈರಸ್ ಬಂದರೆ ಸಾವು ಕೂಡ ಸಂಭವಿಸಬಹುದು. ಈಗ ಕಾಣಿಸಿರುವ ಮಾರಕ ಕೊರೊನಾ ವೈರಸ್ SARS ಕುಟುಂಬಕ್ಕೆ ಸೇರಿರುವುದರಿಂದ ಅಪಾಯ ತೀವ್ರತೆ ಹೆಚ್ಚಾಗಿದೆ.

  ಕೊರೊನಾ ವೈರಸ್ ಹೇಗೆ ಹರಡುತ್ತದೆ?
  ಈ ಕೊರನಾ ವೈರಸ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇದು ಉಸಿರಾಟದ ಮುಖಾಂತರ ಹರಡುತ್ತದೆ, ಸೋಂಕಿರುವ ವ್ಯಕ್ತಿಯನ್ನು ಮುಟ್ಟುವುದರಿಂದ ಹರಡುತ್ತದೆ. ಸೋಂಕಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಸೋಂಕಾಣುಗಳಲ್ಲಿ ಗಾಳಿಯ ಮುಖಾಂತರ ಮತ್ತೊಬ್ಬ ವ್ಯಕ್ತಿಗೆ ಹರಡುತ್ತದೆ. ಇದರಿಂದ ಮತ್ತೊಬ್ಬ ವ್ಯಕ್ತಿಗೆ ಸೋಂಕು ತಗುಲುವುದು. ಸೋಂಕು ಇರುವ ವ್ಯಕ್ತಿ ಮಾಸ್ಕ್‌ ಧರಿಸಬೇಕು ಹಾಗೂ ಕೊರೊನಾ ವೈರಸ್‌ ಸೋಕಿದ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇಟ್ಟು ಚಿಕಿತ್ಸೆ ನೀಡುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಬಹುದು.

  ಕೊರೊನಾ ವೈರಸ್ ಲಕ್ಷಣಗಳೇಣು?
  ಜ್ವರ ಬಂದಾಗ ಅಥವಾ ಕೊರೊನಾ ವೈರಸ್ ಬಂದಾಗ ಲಕ್ಷಣಗಳು ಒಂದೇ ರೀತಿ ಇರುತ್ತದೆ. ಆದ್ದರಿಂದ ರಕ್ತ ಪರೀಕ್ಷೆ ಮಾಡದೆ ಹೊರತು ಪತ್ತೆ ಹಚ್ಚಲು ಸಾಧ್ಯವಿಲ್ಲ. ಕೊರೊನಾ ವೈರಸ್ ಬಂದಾಗಲೂ ಶೀತ, ಜ್ವರ, ಕೆಮ್ಮು, ಸೀನು, ಉಸಿರಾಟದ ಲಕ್ಷಣಗಳು ಕಂಡು ಬರುವುದು.
ಕೊರೊನಾವೈರಸ್‌ ತಡೆಗಟ್ಟಲು ಸರಕಾರ ಕಠಿಣ ಕ್ರಮಕೈಗೊಂಡಿದೆ. ಕರ್ನಾಟದಲ್ಲಿ ಕೊರೊನಾ ವೈರಸ್‌ಗೆ ಒಂದು ಬಲಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸರಕಾರ ಈ ಮಹಾಮಾರಿ ಪಿಡುಗು ಕಟ್ಟಿ ಹಾಕಲು ಕರ್ನಾಟಕ ಬಂದ್‌ ಮಾಡಿದೆ. ಜನರು ಗುಂಪು ಸೇರದಂತೆ, ಯಾವುದೇ ಮದುವೆ, ಜಾತ್ರೆ ಸಮಾರಂಭಗಳನ್ನು ನಡೆಸದಂತೆ ಆದೇಶ ನೀಡಿದೆ. ಮಾಲ್‌, ಥಿಯೇಟರುಗಳನ್ನು ಬಂದ್‌ ಮಾಡಲಾಗಿದೆ. ಜನರಿಗೆ ಅನವಶ್ಯಕವಾಗಿ ಹೊರಗಡೆ ಸುತ್ತಾಡದಂತೆ ತಿಳಿಸಲಾಗಿದೆ.

ಕೊರೊನಾ ವೈರಸ್ ಹಾಗೂ ಇದು ದೇಹವನ್ನು ಸೇರಿದಾಗ ಏನಾಗುತ್ತದೆ ಎಂಬುವುದರ ಬಗ್ಗೆ ಜನರಿಗೆ ಅನೇಕ ಗೊಂದಲಗಳಿವೆ. ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

 
ಹೆಲ್ತ್