Back
Home » ಆರೋಗ್ಯ
ಕೊರೊನಾವೈರಸ್ ಸೋಂಕಿತರಿಗೆ ನೀಡುತ್ತಿರುವ ಆಹಾರಗಳಿವು
Boldsky | 20th Mar, 2020 09:35 AM
 • ಬ್ರೇಕ್‌ಫಾಸ್ಟ್

  ಇದರಲ್ಲಿ ದೋಸೆ, ಸಾಂಬಾರ್‌, 2 ಬೇಯಿಸಿದ ಮೊಟ್ಟೆ, ಎರಡು ಕಿತ್ತಳೆ ಹಣ್ಣು, ಟೀ, ಮಿನರಲ್‌ ವಾಟರ್ ಇವುಗಳನ್ನು ಭಾರತೀಯರಿಗೆ ನೀಡಲಾಯಿತು. ಇನ್ನು ವಿದೇಶಿ ಸೋಂಕಿತರಿಗೆ ಟೋಸ್ಟ್ಡ್ ಬ್ರೆಡ್, ಆಮ್ಲೆಟ್, ಸೂಪ್, ಜ್ಯೂಸ್‌ ನೀಡಲಾಗುತ್ತಿತ್ತು. ಇದನ್ನು ಬೆಳಗ್ಗೆ 7.30ಕ್ಕೆ ನೀಡುತ್ತಿದ್ದರು, ನಂತರ 10 ಗಂಟೆಗೆ ಫ್ರೆಶ್ ಜ್ಯೂಸ್‌ (ಹಣ್ಣಿನ ರಸ) ನೀಡುತ್ತಾರೆ.


 • ಲಂಚ್ (ಮಧ್ಯಾಹ್ನದ ಊಟ)

  ಚಪಾತಿ, ಅನ್ನ, ಫ್ರೈ ಮಾಡಿದ ಮೀನು, ಪಲ್ಯ, ಮೊಸರು, ಮಿನರಲ್ ವಾಟರ್‌ ನಮ್ಮ ಭಾರತೀಯರಿಗೆ ನೀಡಿದರೆ, ವಿದೇಶಿ ಸೋಂಕಿತರಿಗೆ ಟೋಸ್ಟ್ಡ್‌ ಬ್ರೆಡ್, ಚೀಸ್, ಹಣ್ಣುಗಳನ್ನು ನೀಡುತ್ತಿದ್ದರು. ಇವುಗಳನ್ನು ಮಧ್ಯಾಹ್ನ 12 ಗಂಟೆಗೆ ನೀಡುತ್ತಾರೆ.


 • ಸಂಜೆ

  ಟೀ ಹಾಗೂ ಆರೋಗ್ಯಕರ ಸ್ನ್ಯಾಕ್ಸ್ ನೀಡುತ್ತಿದ್ದರು. ಇನ್ನು ಫ್ರೆಶ್‌ ಜ್ಯೂಸ್ ನೀಡಲಾಗುತ್ತಿತ್ತು. ಆರೋಗ್ಯಕರ ಸ್ನ್ಯಾಕ್ಸ್ ಅಂದರೆ ಹಣ್ಣುಗಳು, ಡ್ರೈ ಫ್ರೂಟ್ಸ್, ಬೇಯಿಸಿದ ತರಕಾರಿ ಹೀಗೆ ಇವುಗಳನ್ನು ಸೇರಿಸಬಹುದು.


 • ರಾತ್ರಿ ಊಟಕ್ಕೆ

  ಕೇರಳ ಸ್ಟೈಲ್‌ ಅಪ್ಪಾಂ, ನಮ್ಮ ಕರ್ನಾಟಕದವರು ಅದರ ಬದಲಿಗೆ ದೋಸೆ ನೀಡಬಹುದು. ಇದರ ಜೊತೆಗೆ ಪಲ್ಯ ಹಾಗೂ ತಾಜಾ ಹಣ್ಣಿನ ಜ್ಯೂಸ್‌ ಎರಡು ದೊಡ್ಡ ಬಾಳೆಹಣ್ಣು ನೀಡುತ್ತಾರೆ. ವಿದೇಶಿಯರಿಗೆ ಟೋಸ್ಟ್ಡ್ ಬ್ರೆಡ್‌ ಹಾಗೂ ಮೊಟ್ಟೆ ಬುರ್ಜಿ ಹಾಗೂ ತಾಜಾ ಹಣ್ಣಿನ ರಸ ನೀಡುತ್ತಿದ್ದರು. ಆಸ್ಪತ್ರೆಯಲ್ಲಿದ್ದ ಮಕ್ಕಳಿಗೆ ಹಾಲು ನೀಡಲಾಗುತ್ತದೆ.


 • ಕೊರೊನಾವೈರಸ್ ಹರಡದಂತೆ ಎಚ್ಚರವಹಿಸಿ

  ಕೊರೊನಾ ಸೋಂಕಿನ ಬಗ್ಗೆ ಬಗ್ಗೆ ಭಯ ಬೇಡ, ಆದರೆ ಎಚ್ಚರಿಕೆ ವಹಿಸಿ. ಈ ಕಾಯಿಲೆ ಬಂದರೆ ಸಾವನ್ನಪ್ಪುತ್ತಾರೆ ಎಂಬ ಆತಂಕ ಬೇಡ, ಇದರಿಂದ ಸಾವನ್ನಪ್ಪಿದವರ ಸಂಖ್ಯೆಗಿಂತ ಚೇತರಿಸಿಕೊಂಡವರ ಸಂಖ್ಯೆ ಅಧಿಕವಿದೆ. ಭಾರತದಲ್ಲಿಯೇ ಈಗಾಗಲೇ 20 ಜನ ಗುಣಮುಖರಾಗಿದ್ದಾರೆ. ಸೋಂಕು ತಗುಲಿದಾಗ ಇತರರಿಗೆ ಹರಡದಂತೆ ಎಚ್ಚರವಹಿಸಿ, ಇನ್ನು ಇತರರು ಸೋಂಕು ತಗಲದಂತೆ ಎಚ್ಚರದಿಂದ ಇರಿ.
ಕೊರೊನಾವೈರಸ್ ಸೋಂಕು ಮೊದಲು ಪತ್ತೆಯಾಗಿದ್ದೇ ಕೇರಳದಲ್ಲಿ. ಕೇರಳದಲ್ಲಿ ಪತ್ತೆಯಾದ ಮೊದಲ ಮೂರು ಪ್ರಕರಣದಲ್ಲಿ ಕೊರೊನಾ ಸೋಂಕಿತರು ಕೊರೊನಾ ವೈರಸ್‌ನಿಂದ ಮುಕ್ತರಾಗಿವಂತೆ ಮಾಡುವಲ್ಲಿ ಕೇರಳ ಯಶಸ್ವಿಯಾಗಿತ್ತು. ಅದರಲ್ಲಿ ಒಬ್ಬರು ನಂತರ ನ್ಯೂಮೋನಿಯಾ ಕಾಯಿಲೆಗೆ ತುತ್ತಾದರು.

ಆದರೆ ಕೊರೊನಾ ಎಂಬ ಮಹಾಮರಿ ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಎರ್ನಾಕುಳಂನನ ಕಲ್ಮಷೇರಿ ಮೆಡಿಕಲ್ ಕಾಲೇಜ್ ಕೊರೊನಾ ಸೋಂಕಿತರಿಗೆ ನೀಡಿದ್ದ ಆಹಾರದ ಪಟ್ಟಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪ್ರಕಟಿಸಿದ್ದು, ಈ ಆಹಾರ ಮೆನು ಕೊರೊನಾ ಸೋಂಕಿತರಿಗೆ ಯಾವ ಆಹಾರ ನೀಡಬೇಕು ಎಂಬ ಗೊಂದಲವನ್ನು ಬಗೆಹರಿಸಿದೆ.

ಇದೀಗ ಕೊರೊನಾ ಸೋಂಕಿನ ಭಯ ಹೆಚ್ಚುತ್ತಿರುವಾಗ ಜನರು ಕೂಡ ಕೊರೊನಾ ರೋಗ ಬಾರದಂತೆ ತಡೆಗಟ್ಟಲು ತುಂಬಾ ಮುನ್ನೆಚ್ಚರಿಕೆವಹಿಸುತ್ತಿದ್ದಾರೆ. ಭಾರತದಲ್ಲಿ ಈಗಾಗಲೇ 170 ಜನರಿಗೆ ಸೋಂಕು ತಗುಲಿದ್ದು, 20 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ, 4 ಜನರು ಸಾವನ್ನಪ್ಪಿದ್ದಾರೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾದರೆ ಈ ವೈರಸ್ ಮಟ್ಟ ಹಾಕಲು ಸಾಧ್ಯ. ಇಲ್ಲಿ ಕೊರೊನಾ ಸೋಂಕಿತರಿಗೆ ನೀಡಲಾದ ಆಹಾರ ಮೆನುಗಳ ಬಗ್ಗೆ ಹೇಳಲಾಗಿದೆ. ವಿದೇಶಿಯರ ಹಾಗೂ ಭಾರತೀಯರ ಭಾರತೀಯರ ಬಾಯಿ ರುಚಿಗೆ ತಕ್ಕಂತೆ ಆಹಾರದ ಮೆನುವನ್ನು ಮಾಡಿದ್ದು, ಈ ಆಹಾರಗಳು ಕೊರೊನಾ ಸೋಂಕಿತರ ಆರೋಗ್ಯ ಸುಧಾರಿಸುವಲ್ಲಿ ಸಹಕಾರಿಯಾಗಿದೆ.

 
ಹೆಲ್ತ್