Back
Home » ಇತ್ತೀಚಿನ
ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್: ನೂತನ ಫೋನ್‌ಗಳಿಗೆ ಬಿಗ್ ಆಫರ್!
Gizbot | 24th Mar, 2020 09:00 AM
  • ಅಮೆಜಾನ್ ಆಯೋಜಿಸುವ

    ಹೌದು, ಅಮೆಜಾನ್ ಆಯೋಜಿಸುವ ಅಮೆಜಾನ್ ಫ್ಯಾಬ್ ಫೋನ್ ಫೆಸ್ಟ್ ಮೇಳ ಮತ್ತೆ ಬಂದಿದೆ. ನಾಲ್ಕು ದಿನಗಳ ಈ ಮೇಳವು ಇಂದು(ಮಾ.23) ಶುರುವಾಗಿದ್ದು, ಇದೇ ಮಾ.26ರ ವರೆಗೂ ಇರಲಿದೆ. ಈ ಸೇಲ್ ಮೇಳದಲ್ಲಿ ನೂತನ ಸ್ಯಾಮ್‌ಸಂಗ್, ಒನ್‌ಪ್ಲಸ್‌, ಶಿಯೋಮಿ, ಆಪಲ್ ಸಂಸ್ಥೆಗಳ ಸ್ಮಾರ್ಟ್‌ಫೋನ್‌ಗಳಿಗೂ ರಿಯಾಯಿತಿ ಲಭ್ಯವಿದ್ದು, ಜೊತೆಗೆ ಆಯ್ದ ಬ್ಯಾಂಕ್‌ಗಳಿಂದ ಇಎಮ್‌ಐ ಸೌಲಭ್ಯ ಸಹ ಇವೆ. ಈ ಸೇಲ್ ಮೇಳದಲ್ಲಿ ಬಿಗ್ ಡಿಸ್ಕೌಂಟ್ ಪಡೆದ ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.


  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ21

    ಸ್ಯಾಮ್‌ಸಂಗ್ ಹೊಸಾದಿ ಬಿಡುಗಡೆ ಮಾಡಿರುವ ಗ್ಯಾಲಕ್ಸಿ M21 ಇಂದು ಮೊದಲ ಸೇಲ್ ಕಂಡಿದ್ದು, 500ರೂ. ಡಿಸ್ಕೌಂಟ್ ನೀಡಿದೆ. ಈ ಫೋನಿನ ಆರಂಭಿಕ 4GB+ 64GB ವೇರಿಯಂಟ್‌ ಬೆಲೆಯು 13,499ರೂ. ಆಗಿದೆ. 6,000mAh ಬ್ಯಾಟರಿ ಲೈಫ್ ಮತ್ತು 48ಎಂಪಿ ಸೆನ್ಸಾರ್ ಕ್ಯಾಮೆರಾ ಹೊಂದಿರುವುದು ಪ್ಲಸ್‌ ಪಾಯಿಂಟ್ ಆಗಿದೆ.


  • ರೆಡ್ಮಿ ನೋಟ್ 8

    ಜನಪ್ರಿಯ ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್ ಆರಂಭಿಕ ವೇರಿಯಂಟ್ 10,499ರೂ.ಗಳಿಗೆ ಲಭ್ಯವಿದ್ದು, ಇದರೊಂದಿಗೆ 1000ರೂ. ಎಕ್ಸ್‌ಚೇಂಜ್ ಕೊಡುಗೆಯು ದೊರೆಯಲಿದೆ. ಪ್ರತಿ ತಿಂಗಳಿಗೆ 2,166ರೂ.ಗಳ ಇಎಮ್‌ಐ ಆಯ್ಕೆಯು ಲಭ್ಯವಿದೆ. 48ಎಂಪಿ ಸೆನ್ಸಾರ್ ಕ್ಯಾಮೆರಾಮ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಹಾಗೂ 4000mAh ಬ್ಯಾಟರಿ ಈ ಫೋನಿನ ಪ್ರಮುಖ ಹೈಲೈಟ್ಸ್‌ಗಳಾಗಿವೆ.


  • ಒನ್‌ಪ್ಲಸ್ 7T

    ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಜನಪ್ರಿಯ 7T 34,999 ರೂ.ಗಳ ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಫೋನ್ 6.55-ಇಂಚಿನ ಪೂರ್ಣ HD + ಡಿಸ್‌ಪ್ಲೇ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಆಯ್ಕೆ ಪಡೆದಿದೆ. ಸ್ನಾಪ್‌ಡ್ರಾಗನ್ 855+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 3,800mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ.


  • ರೆಡ್ಮಿ ನೋಟ್ 8 ಪ್ರೊ

    ಶಿಯೋಮಿಯ ರೆಡ್ಮಿ ನೋಟ್ 8 ಪ್ರೊ ಫೋನ್ ಆರಂಭಿಕ ಬೆಲೆಯು 13,999ರೂ.ಗಳಿಗೆ ಸಿಗಲಿದೆ. ಇದರೊಂದಿಗೆ 1000ರೂ. ಎಕ್ಸ್‌ಚೇಂಜ್ ಕೊಡುಗೆಯು ದೊರೆಯಲಿದೆ. 64ಎಂಪಿ ಕ್ಯಾಮೆರಾ ಸೆನ್ಸಾರ್ ಪಡೆದಿರುವುದು ಈ ಫೋನಿನ ಪ್ಲಸ್ ಪಾಯಿಂಟ್ ಆಗಿದೆ. ಉಳಿದಂತೆ ಹಿಲಿಯೊ G90T ಪ್ರೊಸೆಸರ್ ಬಲವನ್ನು ಹೊಂದಿದ್ದು, ಬಿಲ್ಟ್‌ ಇನ್ ಅಲೆಕ್ಸಾ ಸೌಲಭ್ಯವನ್ನು ಪಡೆದಿದೆ.


  • ಇತರೆ ಫೋನ್‌ಗಳ ಆಫರ್

    ಆಪಲ್‌ ಐಫೋನ್ 11 ಫೋನ್ ಬೆಲೆಯು 64,900ರೂ. ಆಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌10 ಫೋನ್‌ ಖರೀದಿಗೆ ಒಂಬತ್ತು ತಿಂಗಳು ನೋ ಕಾಸ್ಟ್ ಇಎಮ್‌ಐ ಸೌಲಭ್ಯ ಇದೆ. ಅದೇ ರೀತಿ ಒನ್‌ಪ್ಲಸ್‌ 7 ಪ್ರೊ ಬೆಲೆಯು 42,999ರೂ. ಆಗಿದೆ. ವಿವೋ ಯು20 ಆರಂಭಿಕ ಬೆಲೆಯು 10,990ರೂ. ಆಗಿದೆ.




ಇ-ಕಾಮರ್ಸ್‌ ತಾಣಗಳು ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಘೋಷಿಸುತ್ತವೆ. ಕ್ಯಾಶ್‌ಬ್ಯಾಕ್‌, ಬಿಗ್ ಡಿಸ್ಕೌಂಟ್‌ ನೀಡುತ್ತವೆ. ಹೀಗಾಗಿ ಪ್ರಸ್ತುತ ಅನೇಕರು ಆನ್‌ಲೈನ್‌ನಲ್ಲಿಯೇ ಸ್ಮಾರ್ಟ್‌ಫೋನ್ ಖರೀದಿಗೆ ಮುಂದಾಗುತ್ತಾರೆ. ಇತ್ತೀಚಿಗೆ ಬಿಡುಗಡೆ ಆಗಿರುವ ಸ್ಮಾರ್ಟ್‌ಫೋನ್‌ಗಳನ್ನು ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಸುವ ಪ್ಲ್ಯಾನ್‌ ನಿಮ್ಮಲ್ಲೂ ಇದ್ದರೇ ಅದಕ್ಕೆ ಇದೀಗ ಕಾಲ ಕೂಡಿ ಬಂದಿದೆ. ಜನಪ್ರಿಯ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸೂಕ್ತ ವೇದಿಕೆ ಸಿದ್ಧವಾಗಿದೆ.

   
 
ಹೆಲ್ತ್