Back
Home » ಆರೋಗ್ಯ
ಗೇರುಬೀಜದ ಎಣ್ಣೆ: ತ್ವಚೆ, ಕೂದಲು ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು
Boldsky | 25th Mar, 2020 09:45 AM
 • 1. ಈ ಎಣ್ಣೆ ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ.

  ನಿಮ್ಮ ಚರ್ಮದಲ್ಲಿ ಸಾಕಷ್ಟು ತೇವಾಂಶ ಇದೆ ಎಂದು ಎಂದು ಕಂಡುಹಿಡಿಯಲು ಈ ಎಣ್ಣೆಯನ್ನು ನಿಯಮಿತವಾಗಿ ಅನ್ವಯಿಸಿ. ಗೋಡಂಬಿ ಎಣ್ಣೆಯಲ್ಲಿ ಹೇರಳವಾಗಿರುವ ತೇವಾಂಶವೇ ಇದಕ್ಕೆ ಕಾರಣ. ಇದರಲ್ಲಿ ಹೆಚ್ಚಿನ ಪ್ರಮಾಣದ ಅಪರ್ಯಾಪ್ತ ಕೊಬ್ಬಿನಾಮ್ಲಗಳ ಲಭ್ಯತೆಗೆ ಇದು ಕಾರಣವಾಗಬಹುದು.


 • 2.ಯೌವನದ ಕಳೆ ಕಾಪಾಡುತ್ತದೆ

  ಗೇರುಬೀಜದ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು ವಯಸ್ಸಾಗುವಿಕೆಯ ಗತಿಯನ್ನು ನಿಧಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೇ ಕಾರಣಕ್ಕೆ ವಯಸ್ಸಾಗುವಿಕೆಯನ್ನು ತಡೆಯುವ ಪ್ರಸಾದನಗಳಲಿ ವಿಟಮಿನ್ ಇ ಅಗತ್ಯವಾಗಿ ಇದ್ದೇ ಇರುತ್ತದೆ.


 • 3. ಚರ್ಮದ ಸೋಂಕು ತಡೆಗಟ್ಟುತ್ತದೆ

  ನಿಮಗೆ ಆಗಾಗ ಚರ್ಮದ ಸೋಂಕು ಅಥವಾ ದದ್ದುಗಳ ತೊಂದರೆಗಳು ಎದುರಾಗುತ್ತಿರುತ್ತವೆಯೇ? ನಿಮಗೆ ಇದನ್ನು ಪರಿಹರಿಸಲು ಮನೆಮದ್ದಿನ ಅವಶ್ಯಕತೆ ಇದೆಯೇ? ಸೋಂಕು ಇರುವ ಭಾಗದ ಮೇಲೆ ಗೇರುಬೀಜದ ಎಣ್ಣೆಯನ್ನು ಹಚ್ಚಿಕೊಳ್ಳಬಹುದು. ಈ ಎಣ್ಣೆಯ ಪ್ರಬಲ ಶಿಲೀಂಧ್ರ ನಿವಾರಕ ಗುಣ ಈ ಸೋಂಕನ್ನು ನಿವಾರಿಸಿ ಶೀಘ್ರವೇ ಹೊಸ ಚರ್ಮ ಬೆಳೆಯಲು ನೆರವಾಗುತ್ತದೆ.


 • 4. ಬಿಸಿಲಿನಿಂದ ಕಪ್ಪಾದ ತ್ವಚೆ ಸರಿಪಡಿಸುತ್ತದೆ

  ಅಲ್ಲದೇ ಈ ಎಣ್ಣೆ ಬಿಸಿಲಿನಿಂದ ಕಪ್ಪಗಾಗಿದ್ದ ಬಣ್ನವನ್ನು ಮತ್ತೆ ಸಹಜವರ್ಣಕ್ಕೆ ತರಲೂ ನೆರವಾಗುತ್ತದೆ. ಈ ಎಲ್ಲಾ ಗುಣಗಳು ಗೇರುಬೀಜದ ಎಣ್ಣೆಯನ್ನು ಅತ್ಯುತ್ತಮ ಮನೆ ಮದ್ದು ಆಗಿಸಲು ಸಾಕು. ಇದರ ನಿಯಮಿತ ಬಳಕೆಯಿಂದ ನವತಾರುಣ್ಯದ, ಪ್ರಖರ ಮತ್ತು ಸುಂದರ ತ್ವಚೆಯನ್ನು ಪಡೆಯಬಹುದು. ಗೇರುಬೀಜದ ಎಣ್ಣೆಯಿಂದ ಕೂದಲಿಗೆ ದೊರಕುವ ಪ್ರಯೋಜನಗಳು: ಈ ಎಣ್ಣೆ ಕೊಂಚ ಸಿಹಿಯಾದ ರುಚಿ ಹೊಂದಿದೆ ಹಾಗೂ ಸುಗಂಧವನ್ನೂ ಪಡೆದಿದೆ ಹಾಗೂ ಕೂದಲಿಗೂ ಹೆಚ್ಚಿನ ಪೋಷಣೆಯನ್ನು ಒದಗಿಸುತ್ತದೆ. ಆದರೆ ಹೇಗೆ? ಇದನ್ನು ನೀವು ಕೇಳಬಹುದು. ಬನ್ನಿ ನೋಡೋಣ:

  ಈ ಎಣ್ಣೆಯ ಅದ್ಭುತ ಆರೋಗ್ಯಕರ ಅಂಶಗಳು ಪ್ರಮುಖವಾಗಿ ವಿಟಮಿನ್ ಇ ಮತ್ತು ಅಪರ್ಯಾಪ್ತ ಕೊಬ್ಬಿನಾಮ್ಲಗಳಿಂದಲೇ ಬಂದಿದೆ. ಇದರ ಜೊತೆಗೇ ಲಿನೋಲಿಕ್ ಆಮ್ಲ ಮತ್ತು ಒಲೀಕ್ ಆಮ್ಲದಂತಹ ಆಮ್ಲಗಳೂ ಉತ್ತಮ ಪ್ರಮಾಣದಲ್ಲಿದೆ ಹಾಗೂ ಎಲ್ಲಾ ಬಗೆಯ ಕೂದಲಿಗೆ ಇವು ಉತ್ತಮ ಪೋಷಣೆಯನ್ನುಒದಗಿಸುತ್ತವೆ. ಉತ್ತಮ ಪೋಷಣೆ ಪಡೆದ ಕೂದಲು ಸೊಂಪಾಗಿ, ದೃಢ ಮತ್ತು ಕಾಂತಿಯುಕ್ತವಾಗಿರುತ್ತವೆ.


 • 5. ಬಕ್ಕ ತಲೆ ತಡೆಗಟ್ಟುವಲ್ಲಿ ಸಹಕಾರಿ

  ಕೂದಲುದುರುವಿಕೆ ಹೆಚ್ಚಾಗಿದ್ದು ಬಕ್ಕ ತಲೆ ಆವರಿಸುವ ದುಗುಡದಲ್ಲಿರುವವರಿಗೂ ಈ ಎಣ್ಣೆ ಹೆಚ್ಚಿನ ಪೋಷಣೆಯನ್ನು ಒದಗಿಸುತ್ತದೆ. ನಿತ್ಯವೂ ಗೇರುಬೀಜದ ಎಣ್ಣೆಯನ್ನು ಬಳಸುವ ಮೂಲಕ ಕೂದಲ ಬುಡಗಳು ಹೆಚ್ಚು ದೃಢವಾಗುತ್ತವೆ ಹಾಗೂ ಕೂದಲು ಉದುರುವುದನ್ನು ತಡೆಯುತ್ತದೆ.


 • 6. ಆರೋಗ್ಯಕ್ಕೂ ತುಂಬಾ ಒಳ್ಳೆಯದು

  ಒಂದು ವೇಳೆ ನೆತ್ತಿಯ ಭಾಗದಲ್ಲಿ ಯಾವುದಾದರೂ ಸೋಂಕು ಎದುರಾಗಿದ್ದರೆ ಈ ಎಣ್ಣೆಯನ್ನು ಬಳಸುವ ಮೂಲಕ ಈ ಸೋಂಕನ್ನು ನಿವಾರಿಸಬಹುದು. ಗೇರುಬೀಜದ ಎಣ್ಣೆಯ ಬಳಕೆ ಕೇವಲ ಚರ್ಮ ಮತ್ತು ಕೂದಲಿಗೆ ಮೀಸಲಾಗಿಲ್ಲ. ಬದಲಿಗೆ ಒಟ್ಟಾರೆ ಆರೋಗ್ಯಕ್ಕೂ ಹೆಚ್ಚಿನ ನೆರವನ್ನು ನೀಡುತ್ತದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:

  ಸಮಶೀತೋಷ್ಣ ಪ್ರದೇಶದಲ್ಲಿ ಹೆಚ್ಚಿನ ಆರೈಕೆ ಬೇಡದೇ ಬೆಳೆಯುವ ಗೇರು ಮರದಿಂದ ವರ್ಷದ ಹಲವು ಬಾರಿ ಬೀಜಗಳು ದೊರಕುತ್ತಿರುತ್ತವೆ. ಈ ಬೀಜದಲ್ಲಿನ ಎಣ್ಣೆಯಲ್ಲಿ ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿವೆ. ಇವು ಸೌಂದರ್ಯವರ್ಧಕ ಮಾತ್ರವಲ್ಲ, ಮೂಳೆ ಮತ್ತು ಹಲ್ಲುಗಳು ಗಟ್ಟಿಯಾಗಲೂ ಅವಶ್ಯವಾಗಿವೆ.


 • 7. ನೆರೆ ಕೂದಲು ತಡೆಗಟ್ಟುತ್ತದೆ

  ವಯಸ್ಸಾಗುವ ಮುನ್ನವೇ ಕೂದಲು ನೆರೆಯುವುದನ್ನು ಈ ಎಣ್ಣೆ ತಡೆಯುತ್ತದೆ. ಈ ಎಣ್ಣೆ ಕೂದಲಿಗೆ ಬಣ್ಣ ನೀಡುವ ಮೆಲನಿನ್ ಅಂಶವನ್ನು ಹೆಚ್ಚಿಸುವ ಮೂಲಕ ಅಕಾಲಿಕೆ ಕೂದಲು ನೆರೆಯುವುದನ್ನು ತಪ್ಪಿಸುತ್ತದೆ.


 • 8. ವಿಟಮಿನ್ ಇ

  ರಜೋನಿವೃತ್ತಿಯ ಸಮಯದಲ್ಲಿರುವ ಮಹಿಳೆಯರಿಗೆ ನೆಮ್ಮದಿಯ ನಿದ್ದೆ ಪಡೆಯಲು ನೆರವಾಗುತ್ತದೆ.

  ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಇದರಲ್ಲಿ ಆಂಟಿ ಆಕ್ಸಿಡೆಂಟುಗಳೂ ಹೆಚ್ಚೇ ಇರುತ್ತವೆ. ಅಲ್ಲದೇ ದೇಹಕ್ಕೆ ಎದುರಾಗುವ ಹಲವಾರು ಬಗೆಯ ಕ್ಯಾನ್ಸರ್ ನಿಂದಲೂ ಮತ್ತು ಇತರ ಮಾರಕ ರೋಗಗಳಿಂದಲೂ ರಕ್ಷಣೆ ಒದಗಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಲೂ ನೆರವಾಗುವ ಮೂಲಕ ಹಲವಾರು ಸೋಂಕುಗಳ ವಿರುದ್ದ ರಕ್ಷಣೆ ಒದಗಿಸುತ್ತದೆ.


 • 10. ಅಡುಗೆಗೆ ಬಳಸಿ

  ಈ ಎಣ್ಣೆಯಲ್ಲಿ ಓಲಿಕ್ ಆಮ್ಲ ಮತ್ತು ಲಿನೋಲಿಕ್ ಆಮ್ಲದಂತಹ ಏಕ ಅಪರ್ಯಾಪ್ತ ಕೊಬ್ಬುಗಳು ಹೇರಳವಾಗಿರುವ ಕಾರಣ ಈ ಎಣ್ಣೆಯನ್ನು ಅಡುಗೆಯಲ್ಲಿಯೂ ಬಳಸಬಹುದು. ಇವುಗಳ ಸೇವನೆಯಿಂದ ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ (LDL cholesterol - low-density lipoproteins) ಮಟ್ಟವನ್ನು ತಗ್ಗಿಸಿ ಹೃದಯದ ಮೇಲೆ ಬೀಳುವ ಹೊರೆಯಿಂದ ಮುಕ್ತಗೊಳಿಸುತ್ತದೆ ಹಾಗೂ ಹೃದಯದ ಆರೋಗ್ಯವನ್ನೂ ಹೆಚ್ಚಿಸುತ್ತದೆ.
ಗೇರು ಬೀಜ ಅಥವಾ ಗೋಡಂಬಿ ಯಾರಿಗೆ ಇಷ್ಟವಿಲ್ಲ? ಈ ಕುರುಕು ಒಣಫಲ ಹಾಗೇ ತಿನ್ನಬಹುದು ಅಥವಾ ಹುರಿದು, ಮಸಾಲೆ ಸವರಿ ಕರಿದು, ಸಿಹಿ ತಿಂಡಿಗಳಲ್ಲಿ ಸೇರಿಸಿ ಅಥವಾ ಇತರ ಭಕ್ಷ್ಯಗಳಲ್ಲಿ ಸೇರಿಸಿ ಸೇವಿಸಬಹುದು. ಆದರೆ ಗೇರು ಎಣ್ಣೆಯ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.

ಗೇರುಬೀಜ ಅಂದರೆ ಹಣ್ಣಿನ ಕೆಳಭಾಗದಲ್ಲಿರುವ ದೃಢ ಭಾಗದ ಒಳಗೆ ಬೀಜವಾಗಿ ಗೋಡಂಬಿ ಇರುತ್ತದೆ. ಈ ಬೀಜವನ್ನು ಸೀಳಿ ಒಳಗಿನ ಗೋಡಂಬಿಯನ್ನು ಸಂಗ್ರಹಿಸಿದ ಬಳಿಕ ಉಳಿಯುವ ಸಿಪ್ಪೆಯಲ್ಲಿ ಎಣ್ಣೆಯ ಅಂಶ ಇರುತ್ತದೆ,. ಈ ಸಿಪ್ಪೆಗಳನ್ನು ತಣ್ಣನೆಯ ವಿಧಾನದಿಂದ ಹಿಂಡಿ ತೆಗೆದ ತೈಲವೇ ಗೇರುಬೀಜದ ಎಣ್ಣೆ. ಗೇರು ಸಸ್ಯ ಭಾರತ ಮೂಲದ್ದಲ್ಲ. ಇದು ಈಶಾನ್ಯ ಬ್ರೆಜಿಲ್ ದಿಂದ ಬಂದಿದ್ದು ಇದನ್ನು ಔಷಧೀಯ ಅಥವಾ ಆರೋಗ್ಯ ಉದ್ದೇಶಗಳಿಗಾಗಿ ಮಾತ್ರವಲ್ಲ, ಸೌಂದರ್ಯ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ.

ಈ ಎಣ್ಣೆಯಲ್ಲಿಯೂ ವಿಟಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ ಹಾಗೂ ಇವುಗಳ ಆರೋಗ್ಯಕರವಾಗಿವೆ. ಅಲ್ಲದೇ ಇದರಲ್ಲಿ ಕ್ಯಾಲೋರಿಗಳೂ ಹೆಚ್ಚಿನ ಪ್ರಮಾಣದಲ್ಲಿವೆ. ಕೊಲೆಸ್ಟ್ರಾಲ್ ನಿಯಂತ್ರಣದಿಂದ ಹಿಡಿದು ಬಿರುಕು ಬಿಟ್ಟ ಹಿಮ್ಮಡಿಗಳನ್ನು ಸರಿಪಡಿಸುವವರೆಗೂ ಈ ಎಣ್ಣೆಯಲ್ಲಿರುವ ಪೋಷಕಾಂಶಗಳು ಹಲವಾರು ಬಗೆಯಲ್ಲಿ ಪ್ರಯೋಜನಕ್ಕೆ ಬರುತ್ತವೆ.

ಬನ್ನಿ, ಈ ಎಣ್ಣೆಯಿಂದ ತ್ವಚೆಗೆ ಯಾವ ಬಗೆಯ ಪ್ರಯೋಜನಗಳನ್ನು ಪಡೆಯಬಹುದು. ಗೇರುಬೀಜದ ಎಣ್ಣೆಯನ್ನು ಬಳಸುವುದರಿಂದ ತ್ವಚೆಗೆ ದೊರಕುವ ಪ್ರಯೋಜನಗಳು: ಇಂದು ಮಾರುಕಟ್ಟೆಯಲ್ಲಿ ದೊರಕುತ್ತಿರುವ ನೂರಾರು ಪ್ರಸಾದನಗಳಲ್ಲಿ ಪ್ರಮುಖ ಅಂಶವಾಗಿ ಗೇರುಬೀಜದ ಎಣ್ಣೆಯನ್ನು ಬಳಸಿರುವುದನ್ನು ಕಾಣಬಹುದು. ಏಕೆಂದು ಗೊತ್ತೇ? ಇದಕ್ಕೆ ಉತ್ತರಗಳನ್ನು ನೋಡೋಣ:

 
ಹೆಲ್ತ್