Back
Home » ಆರೋಗ್ಯ
ಚೀನಾದಲ್ಲಿ ಇದೀಗ ಹಂಟಾ ವೈರಸ್‌ ಭೀತಿ: ಇದರ ಬಗ್ಗೆ ನೀವು ತಿಳಿಯಲೇಬೇಕಾದ ಅಂಶಗಳಿವು
Boldsky | 25th Mar, 2020 12:21 PM
 • ಹಂಟಾ ವೈರಸ್ ಎಂದರೇನು?

  ಸಿಡಿಸಿ (Centers for Disease Control and Prevention) ಪ್ರಕಾರ ಇಲಿಗಳ ಜಾತಿಗೆ ಸೇರಿದ ಪ್ರಾಣಿಗಳ ಮೂಲ ಹರಡುತ್ತದೆ. ಇದು ಗಾಳಿಯಿಂದ ಹರಡುವ ರೋಗವಲ್ಲ ಬದಲಿಗೆ ಮೂತ್ರ, ಮಲ, ಎಂಜಲು, ಸತ್ತು ಕೊಳೆತ ಪ್ರಾಣಿಗಳ ಮೂಲಕ ಹರಡುತ್ತದೆ. HFRS ಜ್ವರ (haemorrhagic fever with renal syndrome) ಈ ರೋಗದ ಲಕ್ಷಣವಾಗಿದೆ.


 • ಹಂಟಾ ವೈರಸ್ ಲಕ್ಷಣಗಳೇನು?

  ಹಂಟಾ ವೈರಸ್‌ ಪ್ರಕರಣಗಳು ಇದುವರೆಗೆ ಅಷ್ಟಾಗಿ ಕಂಡು ಬಾರದೇ ಇರುವುದರಿಂದ ಈ ರೋಗದ ಲಕ್ಷಣಗಳು ಗೋಚರಿಸಲು ಎಷ್ಟು ದಿನಗಳು ಬೇಕಾಗುತ್ತದೆ ಎಂಬುವುದರ ಬಗ್ಗೆ ನಿಖರ ಮಾಹಿತಿಯಿಲ್ಲ. ಆದರೆ ಸಿಡಿಸಿ ಪ್ರಕಾರ ಹಂಟಾ ವೈರಸ್ ಸೋಂಕಿದರೆ 1-8 ವಾರಗಳಲ್ಲಿ ಕಾಯಿಲೆಯ ಲಕ್ಷಣಗಳು ಕಂಡು ಬರುತ್ತದೆ. ಆದರೆ ಇದು ಮನುಷ್ಯರಿಂದ-ಮನುಷ್ಯರಿಗೆ ಹರಡುವುದು ತುಂಬಾ ವಿರಳ.

  ಹಂಟಾ ವೈರಸ್ ಸೋಂಕಿದಾಗ ಕಂಡು ಬರುವ ಲಕ್ಷಣಗಳು]

  • ತಲೆಸುತ್ತು
  • ಜ್ವರ
  • ತಲೆನೋವು
  • ತಲೆಸುತ್ತು
  • ಮೈ ಚಳಿಯಾಗುವುದು
  • ಕಿಬ್ಬೊಟ್ಟೆ ನೋವು, ತಲೆಸುತ್ತು, ವಾಂತಿ, ಬೇಧಿ
  • ಸ್ನಾಯುಗಳಲ್ಲಿ ನೋವು, ಅದರಲ್ಲೂ ಹಿಂಬಾಗ, ತೋಳುಗಳು, ಬೆನ್ನುಗಳಲ್ಲಿ ನೋವು ಕಂಡು ಬರುವುದು.

 • ನಂತರ ಕಂಡು ಬರುವ ಲಕ್ಷಣಗಳು:

  ಈ ರೋಗ ಕಾಣಿಸಿಕೊಂಡ 10 ದಿನಗಳ ಬಳಿಕ ಈ ರೋಗದ ಇತರ ಲಕ್ಷಣಗಳು ಕಂಡು ಬರುವುದು ಅವುಗಳೆಂದರೆ

  • ಕೆಮ್ಮು
  • ಉಸಿರಾಟದ ತೊಂದರೆ
  • ಎದೆಯಲ್ಲಿ ಬಿಗಿಯ ಅನುಭವ.

  ಹಂಟಾವೈರಸ್ ಸೋಂಕಿನ ಸಾವಿನ ಪ್ರಮಾಣಶೇ.38. ಮೊದಲಿಗೆ HERS ಹಾಗೂ HPS (ಪ್ಲೇಟ್‌ಲೆಟ್ ಸಮಸ್ಯೆಯಿಂದ ರಕ್ತಸ್ರಾವ ಉಂಟಾಗುವುದು) ಲಕ್ಷಣಗಳು ಒಂದೇ ರೀತಿ ಇದ್ದರು HERSನಲ್ಲಿ ರಕ್ತದೊತ್ತಡ, ಕಿಡ್ನಿ ಸಮಸ್ಯೆ, ಅಕ್ಯೂಟ್‌ ಶಾಕ್ ಇವೆಲ್ಲಾ ಉಂಟಾಗುವುದು.


 • ಹಂಟಾ ವೈರಸ್ ಕಂಡು ಹಿಡಿಯುವುದು ಹೇಗೆ?

  HFRS ಮತ್ತು HPSಯನ್ನು ಪ್ರತ್ಯೇಕವಾಗಿ ಪರೀಕ್ಷೆ ಮಾಡಲಾಗುವುದು.

  HPS : ಅನೇಕ ಲ್ಯಾಬೋಲೇಟರಿ ಪರೀಕ್ಷೆಗಳನ್ನು ಮಾಡಿ ಪರೀಕ್ಷಿಸಲಾಗುವುದು. ಇದರಲ್ಲಿ ರಕ್ತ ಪರೀಕ್ಷೆ ಹಾಗೂ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಪರೀಕ್ಷೆ ಮಾಡಲಾಗುವುದು.

  HFRS: ಪ್ರಾರಂಭದಲ್ಲಿ ಕಾಣಿಸುವ ಲಕ್ಷಣಗಳ ಮೂಲಕ ಈ ರೋಗವನ್ನು ಪತ್ತೆ ಹಚ್ಚುವುದು ಕಷ್ಟ. ಆದರೆ ಉಸಿರಾಟದಲ್ಲಿ ತೊಂದರೆ, ಸ್ನಾಯುಗಳಲ್ಲಿ ನೋವು , ಎದೆ ಹಿಡಿದ ಅನುಭವ ಈ ಲಕ್ಷಣಗಳು ಆಧಾರದ ಮೇಲೆ ಕಂಡು ಹಿಡಿಯಲಾಗುವುದು.


 • ಹಂಟಾವೈರಸ್‌ಗೆ ಚಿಕಿತ್ಸೆಯೇನು?

  ಹಂಟಾವೈರಸ್‌ಗೂ ಇದುವರೆಗೆ ಯಾವುದೇ ಸೂಕ್ತ ಚಿಕಿತ್ಸೆ ಕಂಡು ಹಿಡಿದಿಲ್ಲ. ಆದರೆ ಹಂಟಾವೈರಸ್‌ ಅನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದರೆ ಸೂಕ್ತ ಚಿಕಿತ್ಸೆ ನೀಡಿದರೆ ಆರೋಗ್ಯ ಪರಿಸ್ಥಿತಿ ಸ್ವಲ್ಪ ಸುಧಾರಿಸುವ ಸಾಧ್ಯತೆ ಇದೆ.


 • ಹಂಟಾವೈರಸ್ ತಡೆಗಟ್ಟುವುದು ಹೇಗೆ?

  • ಇಲಿ, ಹೆಗ್ಗಣಗಳು ಇವುಗಳ ನಿಯಂತ್ರಣ ಮಾಡಬೇಕು.
  • ಮನೆಯ ಅಕ್ಕ-ಪಕ್ಕ ಇಲಿಗಳ ಬಿಲಗಳಿದ್ದರೆ ಅವುಗಳನ್ನು ಮುಚ್ಚಬೇಕು
  • ಮನೆಯ ಸುತ್ತ ಆಹಾರಗಳನ್ನು ಹಾಗೇ ಬಿಡಬೇಡಿ
  • ಅವುಗಳ ಮಲವನ್ನು ಹಾಗೇ ಮುಟ್ಟಬೇಡಿ
  • ಅವುಗಳ ಮಲವನ್ನು ಗ್ಲೌಸ್‌ ತೆಗೆದು ಆ ಜಾಗವನ್ನು ಸ್ಯಾನಿಟೈಸರ್‌ ಹಾಕಿ ಶುದ್ಧ ಮಾಡಿ.ಚೀನಾದ ವುಹಾನ್‌ ನಗರದಲ್ಲಿ ಡಿಸೆಂಬರ್ 31, 2019ರಲ್ಲಿ ಕಾಣಿಸಿದ ಕೊರೊನಾವೈರಸ್ ಇದೀಗ ಸಾಂಕ್ರಾಮಿಕ ಪಿಡುಗು ಆಗಿ ಮಾರ್ಪಟ್ಟಿದೆ. ವುಹಾನ್‌ ನಗರದ ಎಲ್ಲೆ ದಾಟಿ ವಿಶ್ವದ ಎಲ್ಲೆಡೆ ಸಾವಿನ ರಣಕೇಕೆ ಹಾಕುತ್ತಿದೆ. ಅತ್ಯಾಧುನಿಕ ವೈದ್ಯಕೀಯ ಇರುವ ಇಟಲಿ, ಸ್ಪೇನ್‌, ಅಮೆರಿಕದಂಥ ಮುಂದುವರೆದ ರಾಷ್ಟ್ರಗಳೇ ಈ ಮಹಾಮಾರಿಗೆ ಸಿಲುಕಿ ನಮಗುತ್ತಿವೆ.

ಭಾರತದಲ್ಲೂ ಕೊರೊನಾವೈರಸ್ ತನ್ನ ಕರಳಾಬಾಹು ಚಾಚಿರುವ ಕೊರೊನಾವನ್ನು ಮಟ್ಟಹಾಕಲು ದೇಶದ ಜನತೆಗೆ 21 ದಿನಗಳವರೆಗೆ ಮನೆಬಿಟ್ಟು ಹೊರಬರದಂತೆ ಪ್ರಧಾನಿಯೇ ಮನವಿ ಮಾಡಿದ್ದಾರೆ. ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಧಾನಿಯವರ ಮಾತಿನಂತೆ ಮನೆಬಿಟ್ಟು ಹೊರಬಾರಲೇಬಾರದ ಎಂದು ವೈದ್ಯರು ಕೂಡ ಹೇಳುತ್ತಿದ್ದಾರೆ. ಹೀಗೆ ಕೊರೊನಾವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿರುವಾಗಲೇ ಹಂಟಾ ವೈರಸ್‌ಗೆ ಚೀನಾದಲ್ಲಿ ವ್ಯಕ್ತಿಯೊಬ್ಬ ಬಲಿಯಾದ ಸುದ್ದಿ ಬಂದಿದೆ.

ಏನಿದು ಹಂಟಾ ವೈರಸ್? ಇದು ಎಷ್ಟು ಅಪಾಯಕಾರಿ? ಇದು ಹರಡುವ ಬಗೆಯಾದರೂ ಹೇಗೆ ಎಂಬ ಮಾಹಿತಿ ನೋಡಿ ಇಲ್ಲಿದೆ.

ಚೀನಾದಲ್ಲಿ ವ್ಯಕ್ತಿ ಮಾರ್ಚ್‌ 23 ಸೋಮಾವಾರ ಕೆಲಸದಿಂದ ಮರಳುವಾಗ ಸಾವನ್ನಪ್ಪಿದ್ದರು, ಆಗ ಅವರನ್ನು ಪರೀಕ್ಷಿಸಿದಾಗ ಹಂಟಾ ವೈರಸ್ ದಾಳಿಯಿಂದಾಗಿ ಮೃತಪಟ್ಟಿರುವುದು ದೃಢಪಟ್ಟಿತು, ಈ ಸೋಂಕು ಆತ ಪ್ರಯಾಣಿಸಿದ ಬಸ್‌ನಲ್ಲಿದ್ದ ಇತರ 32 ಪ್ರಯಾಣಿಕರಲ್ಲೂ ಪತ್ತೆಯಾಯಿತು.

 
ಹೆಲ್ತ್