Back
Home » ಆರೋಗ್ಯ
ಕೊರೊನಾವೈರಸ್ ಹಾಗೂ ಸಾಮಾನ್ಯ ಜ್ವರದ ನಡುವೆ ಸಾಮ್ಯತೆ ಹಾಗೂ ವ್ಯತ್ಯಾಸ
Boldsky | 26th Mar, 2020 12:00 PM
 • ಕೊರೊನಾವೈರಸ್ ಎಂದರೇನು?

  ಕೊರೊನಾವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಂಡು ಬರುವ ವೈರಸ್ ಆಗಿದೆ. ಇವುಗಳಲ್ಲಿ 6 ಬಗೆಗಳಿವೆ. ಆದರೆ ಎಲ್ಲಾ ಬಗೆಯ ಕೊರೊನಾ ವೈರಸ್ ಅಪಾಯಕಾರಿಯಲ್ಲ. ಈ ಹಿಂದೆ MERS ಹಾಗೂ ಸಾರ್ಸ್ ಎಂಬ ಅಪಾಯಕಾರಿ ಕೊರೊನಾವೈರಸ್‌ ಕಾಣಿಸಿಕೊಂಡಿದ್ದೆವು. ಇದೀಗ ಬಂದಿರುವುದು ಕೂಡ ಈ ಅಪಾಯಕಾರಿ ಜಾತಿಗೆ ಸೇರಿದ ವೈರಸ್ ಆಗಿದ್ದು, ಇದನ್ನು ಕೋವಿಡ್ 19 ಎಂದು ಗುರುತಿಸಲಾಗಿದೆ.


 • ಕೊರೊನಾವೈರಸ್ ಸೋಂಕಿದಾಗ ದೇಹದಲ್ಲಿ ಕಂಡು ಬರುವ ಲಕ್ಷಣಗಳು

  ಜ್ವರ, ಕೆಮ್ಮು, ತಲೆಸುತ್ತು, ಹೊಟ್ಟೆ ಹಾಳಾಗುವುದು, ಮೂಗು ಕಟ್ಟುವುದು, ತಲೆನೋವು, ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು. ಈ ಸೋಂಕು ತಗುಲಿದ 2-14 ದಿನಗಳ ಒಳಗೆ ದೇಹದಲ್ಲಿ ಈ ಲಕ್ಷಣಗಳು ಕಂಡು ಬರುತ್ತವೆ.


 • ಕೊರೊನಾವೈರಸ್‌ನಿಂದ ಉಂಟಾಗುವ ಸಾವಿನ ಪ್ರಮಾಣ

  ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇದುವರೆಗೆ ಕೊರೊನಾವೈರಸ್ ಸೋಂಕಿ ಸತ್ತವರ ಅಂಕಿ ಅಂಶಗಳನ್ನು ನೋಡಿದಾಗ ಸಾವಿನ ಪ್ರಮಾಣ ಶೇ.3ರಿಂದ 4ರಷ್ಟಿದೆ.


 • ಕೊರೊನಾವೈರಸ್ ಹರಡುವ ರೀತಿ

  ಇದು ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅವರ ಬಾಯಿಯಿಂದ ಹಾರುವ ದ್ರವ ಅಥವಾ ಎಂಜಲು ಮುಖಾಂತರ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದು. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಕೈಗಳನ್ನು ಬಾಯಿಗೆ ಅಡ್ಡ ಹಿಡಿದು ನಂತರ ಆ ಕೈಗಳಿದ ಮುಟ್ಟಿದ ವಸ್ತುಗಳಲ್ಲಿಯೂ ಸೋಂಕಾಣು ಇರುತ್ತದೆ. ಆ ವಸ್ತುಗಳನ್ನು ಆರೋಗ್ಯವಂತ ವ್ಯಕ್ತಿ ಮುಟ್ಟಿದಾಗ ಸೋಂಕು ಹರಡುವುದು. ತಾಮ್ರದ ವಸ್ತುಗಳು, ಕಾರ್ಡ್‌ಬೋರ್ಡ್‌ಗಳಲ್ಲಿ 3 ದಿನಗವರೆಗೆ, ಪ್ಲಾಸ್ಟಿಕ್, ಸ್ಟೀಲ್‌ ವಸ್ತುಗಳಲ್ಲಿ ಒಂದು ದಿನದವರೆಗೆ ಜೀವಿಸಿರುತ್ತವೆ.

  ಆದ್ದರಿಂದಲೇ ಈ ಸೋಂಕು ತಡೆಗಟ್ಟಲು ಆಗಾಗ ಕೈತೊಳೆಯಬೇಕು ಹಾಗೂ ಮುಖವನ್ನು ಆಗಾಗ ಮುಟ್ಟಬಾರದು ಎಂದು ಹೇಳುವುದು.


 • ಕೊರೊನಾವೈರಸ್‌ಗೆ ಚಿಕಿತ್ಸೆ

  ಇದರ ಬಗ್ಗೆ ಅನೇಕ ಪರೀಕ್ಷೆಗಳು ನಡೆಯುತ್ತಿವೆ. ಈಗಾಗಲೇ ಕೊರೊನಾವೈರಸ್‌ಗೆ 20ಕ್ಕೂ ಅಧಿಕ ಮದ್ದುಗಳನ್ನು ಕಂಡು ಹಿಡಿಯಲಾಗಿದ್ದರೂ ಯಾವುದೇ ಔಷಧಿಗೂ ವಿಶ್ವಸಂಸ್ಥೆಯಿಂದ ಮಾನ್ಯತೆ ದೊರೆತಿಲ್ಲ.


 • ಕೊರೊನಾವೈರಸ್‌ ಸೋಂಕು ತಗುಲದಂತೆ ತಡೆಯುವುದು ಹೇಗೆ?

  • ಕೈಗೆ ಸೋಪ್ ಹಚ್ಚಿ 40 ಸೆಕೆಂಡ್‌ ಕೈಗಳನ್ನು ಚೆನ್ನಾಗಿ ತಿಕ್ಕಿ, ತೊಳೆಯಿರಿ
  • ಕೆಮ್ಮುವಾಗ, ಸೀನುವಾಗ ಟಿಶ್ಯೂ ಬಳಸಿ ಹಾಗೂ ಯಾರಾದರೂ ಕೆಮ್ಮುತ್ತಿದ್ದರೆ ಅವರಿಂದ ದೂರವಿರಿ.
  • ಹ್ಯಾಂಡ್‌ ಸ್ಯಾನಿಟೈಸರ್ ಬಳಸಿ.
  • ಮನೆಯಲ್ಲಿಯೇ ಇರಿ. ಹೊರಗಡೆ ತಿರುಗಾಡಿದರೆ ನೀವೇ ಅಪಾಯವನ್ನು ಆಹ್ವಾನ ಮಾಡಿಕೊಳ್ಳುವಿರಿ.

 • ಜ್ವರ ಅಥವಾ ಫ್ಲೂ ಎಂದರೇನು?

  ಫ್ಲೂ ಅನ್ನು ಇನ್‌ಫ್ಲ್ಯೂಂಜಾ ಎಂದು ಕರೆಯಲಾಗುವುದು. ಇನ್‌ಫ್ಲ್ಯೂಂಜಾ ಎ ಮತ್ತು ಬಿ ವೈರಸ್‌ನಿಂದಾಗಿ ಉಸಿರಾಟದ ತೊಂದರೆ ಉಂಟಾಗುವುದು. ಜ್ವರ ಬಂದಾಗ ಮೈಕೈ ನೋವು, ತಲೆ ನೋವು, ಮೈ ಉಷ್ಣತೆ ಹೆಚ್ಚಾಗುವುದು.


 • ಜ್ವರದ ಲಕ್ಷಣಗಳು

  ಜ್ವರ ಬಂದಾಗ ಗಂಟಲು ಕೆರೆತ, ಕೆಮ್ಮು, ತಲೆನೋವು, ಶೀತ, ತಲೆಸುತ್ತು, ಮೈಕೈ ನೋವು ಉಂಟಾಗುವುದು. ಇದು ಇನ್‌ಫ್ಲ್ಯೂಂಜಾ A ಸೋಂಕಿದ 1.4 ದಿನದಲ್ಲಿಯೇ ಈ ಲಕ್ಷಣಗಳು ಕಂಡು ಬರುತ್ತವೆ. ಇನ್ನು ಇನ್‌ಫ್ಲ್ಯೂಂಜಾ ಬಿ ಸೋಂಕಿದರೆ 0.6 ದಿನಲ್ಲಿಯೇ ದೇಹದಲ್ಲಿ ರೋಗ ಲಕ್ಷಣಗಳು ಕಂಡು ಬರುವುದು.

  ಸಾವಿನ ಪ್ರಮಾಣ

  ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಜ್ವರದಿಂದ ಸಾಯುವವರ ಸಂಖ್ಯೆ ಶೇ. 0.1 ಆಗಿದೆ.


 • ಫ್ಲ್ಯೂ ಹೇಗೆ ಹಡುತ್ತದೆ?

  ಜ್ವರ ಇರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ವ್ಯಕ್ತಿಯಿಂದ ವ್ಯಕ್ತಿಗೆ ಹರುತ್ತದೆ. ಇನ್ನು ಜ್ವರದ ಲಕ್ಷಣಗಳು ಕಂಡು ಬರುವ ಒಂದು ದಿನದ ಮುಂದೆ ಹಾಗೂ ಜ್ವರ ಬಂದು 5-6 ದಿನವಾದ ಮೇಲೂ ಕೂಡ ಜ್ವರ ಹರಡುತ್ತದೆ.

  ಚಿಕಿತ್ಸೆ

  ಜ್ವರ ಬಂದಾಗ ಆ್ಯಂಟಿವೈರಲ್ ಔಷಧಿ ಹಾಗೂ ಚುಚ್ಚು ಮದ್ದು ಮೂಲಕ ಗುಣಪಡಿಸಬಹುದು. ಇನ್ನು ಪ್ರತಿವರ್ಷ ಜ್ವರ ವಿರುದ್ಧ ಚುಚ್ಚು ಮದ್ದು ತೆಗೆದುಕೊಂಡರೆ ಜ್ವರ ಬರದಂತೆ ತಡೆಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

  ಸಲಹೆ: ಕೊರೊನಾವೈರಸ್‌ ಸೋಂಕು ತಗುಲಿದಾಗ ಮೊದಲಿಗೆ ಜ್ವರದ ಲಕ್ಷಣಗಳೇ ಕಂಡು ಬರುವುದರಿಂದ ಕೆಮ್ಮು, ಸೀನು ಹೀಗೆ ಯಾವುದೇ ಲಕ್ಷಣಗಳು ಕಾಣಿಸಿದರೆ ಬೇಗನೆ ಇತರರಿಂದ ಪ್ರತ್ಯೇಕವಾಗಿ, ಮಾಸ್ಕ್‌ ಧರಿಸಿ ರೋಗ ಇತರರಿಗೆ ಹರಡದಂತೆ ಎಚ್ಚರವಹಿಸಬೇಕು ಹಾಗೂ ವೈದ್ಯರಿಗೆ ತಿಳಿಸಿ. ಕೋವಿಡ್‌ 19 ಬಗ್ಗೆ ಭಯ ಬೇಡ, ಇದರರಿಂದ ಸತ್ತವರಿಗಿಂತ ಚೇತರಿಸಿಕೊಂಡು ಸಂಪೂರ್ಣ ಗುಣಮುಖರಾದವರ ಸಂಖ್ಯೆ ಅಧಿಕವಿದೆ. ವಯಸ್ಸಾದವರು ಹಾಗೂ ಕಡಿಮೆ ರೋಗ ನಿರೋಧಕ ಶಕ್ತಿ ಇರುವವರು ಈ ಸಂದರ್ಭದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ.
ನೋವೆಲ್ ಕೊರೊನಾವೈರಸ್(ಕೋವಿಡ್ 19) ಮೊದಲಿಗೆ ಚೀನಾದ ವುಹಾನ್‌ ನಗರದಲ್ಲಿ ಡಿಸೆಂಬರ್ 31, 2019ರಲ್ಲಿ ಕಂಡು ಬಂದಿತ್ತು. ಅದಾಗಿ ಮೂರೇ ತಿಂಗಳಿಗೆ ವಿಶ್ವವ್ಯಾಪ್ತಿ ಬಾಧಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಇದುವರೆಗೆ ಕೊರೊನಾವೈರಸ್‌ 468,905 ಜನರಿಗೆ ಬಾಧಿಸಿದ್ದು, ಸಾವಿನ ಸಂಖ್ಯೆ 21, 200 ಆಗಿದ್ದು, 114, 218 ಜನರು ಗುಣ ಮುಖರಾಗಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 500 ತಲುಪಿರುವುದು ಹಾಗೂ ಈಗಾಗಲೇ ಇದಕ್ಕೆ 10 ಬಲಿಯಾಗಿರುವುದು ಆತಂಕವನ್ನು ಉಂಟು ಮಾಡಿದೆ.

ಕೊರೊನಾವೈರಸ್ ಸೋಂಕಿ ಕೋವಿಡ್ 19 ಕಾಯಿಲೆ ಬಂದರೆ ಸಾಮಾನ್ಯ ಸಮಸ್ಯೆಯಿಂದಯಿಂದ ಹಿಡಿದು ತೀವ್ರವಾದ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಇನ್ನು ಸಾಮಾನ್ಯ, ಶೀತ ನೆಗಡಿಯ ಲಕ್ಷಣಗಳೇ ಈ ರೋಗದಲ್ಲಿ ಕಂಡು ಬರುವುದರಿಂದ ಸಾಮಾನ್ಯ ಜ್ವರ ಬಂದರೂ ಇದೀಗ ಜನರು ಭಯಪಡುತ್ತಿದ್ದಾರೆ. ಇಲ್ಲಿ ನಾವುಕೊರೊನಾವೈರಸ್ ಸೋಂಕಿದಾಗ ಹಾಗೂ ಸಾಮಾನ್ಯ ಜ್ವರ ಬಂದಾಗ ದೇಹದಲ್ಲಿ ಕಂಡು ಬರುವ ಲಕ್ಷಣಗಳ ಬಗ್ಗೆ ಹೇಳಿದ್ದೇವೆ.

 
ಹೆಲ್ತ್