Back
Home » ಇತ್ತೀಚಿನ
ಬರಲಿದೆ ಇಂಟೆಲ್‌ ಕಾಮೆಟ್‌ ಲೇಕ್‌-ಹೆಚ್‌ ಪ್ರೊಸೆಸರ್‌ ಒಳಗೊಂಡ ಮೊದಲ ಲ್ಯಾಪ್‌ಟಾಪ್‌!
Gizbot | 26th Mar, 2020 05:00 PM
  • ಹೌದು

    ಹೌದು, ಕ್ಯಾಲಿಪೋನಿರ್ಯಾ ಮೂಲದ ಇಂಟೆಲ್‌ ಕಂಪೆನಿಯ ಹೊಸ ಕಾಮೆಟ್‌ ಲೇಕ್‌ ಹೆಚ್‌ ಪ್ರೊಸೆಸರ್‌ ಹೊಂದಿರುವ ಲ್ಯಾಪ್‌ಟಾಪ್‌ ಹಾಗೂ ಎನ್‌ವಿಡಿಯಾ ಜೀಪೋರ್ಸ್‌ ಸೂಪರ್‌ ಜಿಪಿಯುಗಳು ಇದೇ ಏಪ್ರಿಲ್‌ 2ರಂದು ಬಿಡುಗಡೆ ಆಗಲಿವೆ ಎಂದು ಟೆಕ್‌ವಲಯದಲ್ಲಿ ಸುದ್ದಿ ಆಗಿದೆ. NVIDIA ತನ್ನ ಸೂಪರ್ ಟ್ಯೂರಿಂಗ್ ಸರಣಿಯ ಗ್ರಾಫಿಕ್ಸ್ ಕಾರ್ಡ್‌ಗಳನ್ನು ಏಪ್ರಿಲ್ 2 ರಂದು ಮೆಕ್ರೆವೊ Z 3 ಸರಣಿಯ ಗೇಮಿಂಗ್ ಲ್ಯಾಪ್‌ಟಾಪ್‌ಗಳೊಂದಿಗೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ಅಷ್ಟಕ್ಕೂ ಈ ಹೊಸ ಮಾದರಿಯ ಪ್ರೊಸೆಸರ್‌ ಹಾಗೂ ಗ್ರಾಫಿಕ್ಸ್‌ ಕಾರ್ಡ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.


  • ನೋಟ್‌ಬುಕ್

    ಸದ್ಯ ನೋಟ್‌ಬುಕ್ ತಯಾರಕ ಮೆಕ್ರೆವೊ ಕಂಪೆನಿ ನೀಡಿರುವ ಮಾಹಿತಿ ಪ್ರಕಾರ ಇಂಟೆಲ್‌ ಸಂಸ್ಥೆಯಿಂದ ಏಪ್ರಿಲ್ 2 ರಂದು ಆನ್‌ಲೈನ್ ಸಮ್ಮೇಳನ ನಡೆಯಲಿದ್ದು, ಅಲ್ಲಿ ಹೊಸ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಜೊತೆಗೆ ಇದೇ ಸಮಯದಲ್ಲಿ NVIDIA ಅವರ ಹೊಸ ಗ್ರಾಫಿಕ್ಸ್ ಕಾರ್ಡ್‌ಗಳನ್ನು ಪರಿಚಯಿಸಲಿದೆ. ಅಲ್ಲದೆ ಇಂಟೆಲ್ ಸಂಸ್ಥೆ ತನ್ನ 10 ನೇ ತಲೆಮಾರಿನ ಕಾಮೆಟ್ ಲೇಕ್-ಎಚ್ ಸಿಪಿಯುಗಳನ್ನು ಬಿಡುಗಡೆ ಮಾಡಲಿದೆ ಎಂದು ಹೆಳಲಾಗ್ತಿದೆ.


  • ಮೆಕ್ರೆವೊ

    ಇನ್ನು ಮೆಕ್ರೆವೊ ಸಂಸ್ಥೆ ವೈಬೊ ವೆಬ್‌ಸೈಟ್‌ನಲ್ಲಿ ಈಗಾಗಲೇ NVIDIA ದ ಜೊತೆಗಿನ ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಲು ಕ್ಷಣಗಣನೆ ಎಂದು ಸೂಚಿಸುವ ಬೃಹತ್ '10' ಪೊಸ್ಟರ್‌ ಅನ್ನು ತೋರಿಸಲಾಗಿದೆ. ಈ ಚಿತ್ರದ ಪ್ರಕಾರ ಸದ್ಯದಲ್ಲಿ ಬಿಡುಗಡೆ ಆಗುವುದು Z 3 ಸರಣಿಯ ಗೇಮಿಂಗ್ ಲ್ಯಾಪ್‌ಟಾಪ್‌ಗಳೆಂದು ನಿರೀಕ್ಷಿಸಲಾಗಿದೆ. ಅಲ್ಲದೆ ಇದೇ ಪೋಸ್ಟರ್ನಲ್ಲಿ ಆನ್‌ಲೈನ್ ಸಮ್ಮೇಳನವನ್ನ ಇದೇ ಏಪ್ರಿಲ್ 2 ರ ಸಂಜೆ 7 ಗಂಟೆಗೆ ನಡೆಯಲಿದೆ ಎಂದು ಎಲ್ಲೇಖಿಸಲಾಗಿದೆ.


  • ಇದಲ್ಲದೆ

    ಇದಲ್ಲದೆ ಈ ಹೊಸ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಸೂಪರ್ ಟ್ಯೂರಿಂಗ್ ಸರಣಿಯ ಮೊಬೈಲ್ ಜಿಪಿಯುಗಳನ್ನು ಹೊಂದಿರುತ್ತವೆ ಎಂದು ಎನ್ವಿಡಿಯಾ ಸಹಯೋಗದೊಂದಿಗೆ ಸೂಚಿಸಲಾಗಿದೆ. ಅಲ್ಲದೆ ಪಿಸಿ ಗೇಮರ್‌ನ ವರದಿಯ ಪ್ರಕಾರ, ಜೀಫೋರ್ಸ್ ಆರ್‌ಟಿಎಕ್ಸ್ 2080 ಸೂಪರ್ ಮತ್ತು ಜೀಫೋರ್ಸ್ ಆರ್‌ಟಿಎಕ್ಸ್ 2070 ಸೂಪರ್‌ನ ಮೊಬೈಲ್ ಆವೃತ್ತಿಯು ಸಹ ಇದರ ನಡುವೆಯೆ ಬರಲಿದೆ. ಆದರೆ ಜೀಫೋರ್ಸ್ ಆರ್‌ಟಿಎಕ್ಸ್ 2060 ಸೂಪರ್ ಮೊಬೈಲ್ ನಂತರ ಬರಬಹುದು. ಜೊತೆಗೆ ಇಂಟೆಲ್ ತನ್ನ ಕಮೆಟ್ ಲೇಕ್-ಹೆಚ್ ಪ್ರೊಸೆಸರ್‌ಗಳನ್ನ ಹಾಗೂ ಎನ್ವಿಡಿಯಾ ಎರಡೂ ಕೂಡ ತಮ್ಮ ಹೊಸ ಉತ್ಪನ್ನಗಳನ್ನು ಒಂದೇ ದಿನಾಂಕದಂದು ಬಿಡುಗಡೆ ಮಾಡುತ್ತವೆ ಮತ್ತು ಈ ಉತ್ಪನ್ನಗಳು ಏಪ್ರಿಲ್ 15 ರೊಳಗೆ ಲಭ್ಯವಾಗಲಿದೆ.


  • ಎರಡು

    ಒಟ್ಟಿನಲ್ಲಿ ಈ ಎರಡು ಉತ್ಪನ್ನಗಳು ಒಟ್ಟುಗೂಡಿಸಿ, ಇಂಟೆಲ್ 10 ನೇ ಜನ್ ಕಾಮೆಟ್ ಲೇಕ್-ಹೆಚ್ ಪ್ರೊಸೆಸರ್‌ಗಳು ಮತ್ತು ಎನ್‌ವಿಡಿಯಾದ ಆರ್‌ಟಿಎಕ್ಸ್ 20 ಸೂಪರ್ ನೋಟ್‌ಬುಕ್ ಚಿಪ್‌ಗಳಿಂದ ನಿಯಂತ್ರಿಸಲ್ಪಡುತ್ತದೆ. ಕಾಮೆಟ್ ಲೇಕ್-ಹೆಚ್ ತಂಡವು ಐದು ರೂಪಾಂತರಗಳನ್ನು ಹೊಂದಿರುತ್ತದೆ, ಇವೆಲ್ಲವೂ 45W ಒಳಗೆ ವಿದ್ಯುತ್ ಬಳಕೆಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದ್ದು, ಇವುಗಳ ಇನ್ನಷ್ಟು ವಿಶೇಷತೆ ತಿಳಿಯಬೇಕಾದರೆ ಏಪ್ರಿಲ್‌ 2 ರವರೆಗೆ ನಾವು ನಿವೆಲ್ಲಾ ಕಾಯಲೇಬೇಕಿದೆ.




ಇತ್ತೀಚನ ದಿನಗಳಲ್ಲಿ ಟೆಕ್‌ ವಲಯದಲ್ಲಿ ಭಾರಿ ಬದಲಾವಣೆಗಳು ಆಗುತ್ತಿದ್ದು, ಹೊಸ ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ ಡಿವೈಸ್‌ಗಳು ಎಂಟ್ರಿ ನೀಡುತ್ತಿವೆ. ಹಂತಹಂತವಾಗಿ ಲ್ಯಾಪ್‌ಟಾಪ್‌, ಟ್ಯಾಬ್‌, ಸ್ಮಾರ್ಟ್ ಟಿವಿ, ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಡಿಸ್‌ಪ್ಲೇ ಎಲ್ಲಾ ವಲಯಗಳಲ್ಲೂ ಟೆಕ್ನಾಲಜಿಯಲ್ಲಿ ತುಂಬಾ ಬದಲಾವಣೆ ಆಗುತ್ತಿದೆ. ಪ್ರತಿಯೊಂದರಲ್ಲೂ ಹೊಸತನದ ಪರಿಚಯವನ್ನ ಕಂಪೆನಿಗಳು ಮಾಡಿಕೊಡುತ್ತಿವೆ. ಸದ್ಯ ಇದೀಗ ಪ್ರಸಿದ್ದ ಪ್ರೊಸೆಸಟರ್‌ ಕಂಪೆನಿ ಇಂಟೆಲ್‌ ತನ್ನ ಹೊಸ ಪ್ರೊಸೆಸರ್‌ ಅನ್ನು ಪರಿಚಯಿಸಿದೆ.

   
 
ಹೆಲ್ತ್